ನಮ್ಮ ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ. ಬಹಳಷ್ಟು ಜನರು ಸರಿಯಾದ ಜ್ಞಾನದ ಕೊರತೆಯಿಂದ ಉದ್ಯೋಗ ಆಯ್ಕೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್ ಬಂಕ್ ಬಿಸಿನೆಸ್ ಪ್ರಾರಂಭಿಸುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಹಾಗಾದರೆ ಪೆಟ್ರೋಲ್ ಬಂಕ್ ಬಿಸಿನೆಸ್ ಹೇಗೆ ಪ್ರಾರಂಭಿಸಬೇಕು, ಬಂಡವಾಳ ಎಷ್ಟು ಬೇಕು ಹಾಗೂ ಎಷ್ಟು ಆದಾಯ ಗಳಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಪೆಟ್ರೋಲ್ ಬಂಕ್ ಬಿಸಿನೆಸ್ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಪೆಟ್ರೋಲ್ ಬಂಕ್ ಬಿಸಿನೆಸ್ ನಲ್ಲಿ ಎರಡು ರೀತಿ ಇರುತ್ತದೆ. ಗೌರ್ಮೆಂಟ್ ಪೆಟ್ರೋಲ್ ಬಂಕ್ ಇಂಡಿಯನ್ ಆಯಿಲ್, ಹಿಂದೂಸ್ಥಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ. ಖಾಸಗಿ ಪೆಟ್ರೋಲ್ ಬಂಕ್ ರಿಲಯನ್ಸ್ ಪೆಟ್ರೊಲ್ ಬಂಕ್. ಸ್ಟೇಟ್ ಹೈವೆ, ನ್ಯಾಷನಲ್ ಹೈವೆ ಹತ್ತಿರದಲ್ಲಿ ಪೆಟ್ರೋಲ್ ಬಂಕ್ ಇಡಬಹುದು, ಸ್ಟೇಟ್ ಹೈವೆ ಪಕ್ಕದಲ್ಲೂ ಇಡಬಹುದು. ಪೆಟ್ರೋಲ್ ಬಂಕ್ ಬಿಸಿನೆಸ್ ಮಾಡುವ ಸ್ಥಳ ಟೋಲ್ ಗೇಟ್ ಇಂದ ಒಂದು ಕಿಲೋಮೀಟರ್ ದೂರದಲ್ಲಿ ಇರಬೇಕು. ಪೆಟ್ರೋಲ್ ಬಂಕ್ ಇಡುವ ಜಾಗ ಥರ್ಟೀನ್ ಹಂಡ್ರೆಡ್ ಸ್ಕ್ವೇರ್ ಫೀಟ್ ಇರಬೇಕು.
ಒಂದು ವೇಳೆ ಹೈವೆಯಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸುವುದಾದರೆ ಫೈವ್ ಥೌಸಂಡ್ ಸ್ಕ್ವೇರ್ ಫೀಟ್ ಜಾಗ ಇರಬೇಕು. ಪೆಟ್ರೋಲ್ ಬಂಕ್ ಬಿಸಿನೆಸ್ ಪ್ರಾರಂಭಿಸುವ ಮೊದಲು ಯಾವ ಪೆಟ್ರೋಲ್ ಬಂಕ್ ಪ್ರಾರಂಭಿಸಬೇಕು ಅಂದುಕೊಂಡಿರುತ್ತೀರೊ ಅದರ ಬಗ್ಗೆ ವೆಬ್ಸೈಟ್ ನಲ್ಲಿ ಮಾಹಿತಿ ಪಡೆದಿರಬೇಕು. ಟೆಂಡರ್ ಕೂಡ ಪಡೆಯಬಹುದು. ಆಯಿಲ್ ಕಂಪನಿಯವರು ಆಗಾಗ ನ್ಯೂಸ್ ಪೇಪರ್ ಗಳಲ್ಲಿ ಜಾಹೀರಾತು ಕೊಡುತ್ತಾರೆ.
ಅವರು ಕೊಟ್ಟಿರುವ ವೆಬ್ಸೈಟ್ ಗೆ ಹೋಗಿ ಅಪ್ಲಿಕೇಷನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಂಡು ಫಾರ್ಮ್ ಭರ್ತಿ ಮಾಡಿ ಅವರು ಹೇಳಿರುವ ಕೊನೆಯ ದಿನಾಂಕದ ಒಳಗೆ ಬೇಕಾಗಿರುವ ಎಲ್ಲಾ ದಾಖಲಾತಿಗಳೊಂದಿಗೆ ಕಳುಹಿಸಿಕೊಡಬೇಕು. ಬಹಳಷ್ಟು ಜನರು ಅಪ್ಲಿಕೇಷನ್ ಕಳುಹಿಸುವುದರಿಂದ ಆಯಿಲ್ ಕಂಪನಿಯವರು ಲಾಟರಿ ಮಾದರಿಯ ಮೂಲಕ ಲೈಸೆನ್ಸ್ ಕೊಡುತ್ತಾರೆ.
ಆಯಿಲ್ ಕಂಪನಿಗೆ ಪೆಟ್ರೋಲ್ ಬಂಕ್ ಪ್ರಾರಂಭಿಸುವ ಸ್ಥಳ ಇಷ್ಟವಾಗಬೇಕು. ಪೆಟ್ರೋಲ್ ಟ್ಯಾಂಕ್ ಮತ್ತು ಮಷೀನ್ ಗಳನ್ನು ಅವರು ಹೇಳುವ ಜಾಗದಲ್ಲಿ ಫಿಕ್ಸ್ ಮಾಡಬೇಕು. ಕಂಪನಿಯಿಂದ ಅಪ್ರೂವಲ್ ಆದ ನಂತರ ಜಿಎಸ್ ಟಿ ನಂಬರ್ ಗೆ ಅಪ್ಲೈ ಮಾಡಬೇಕಾಗುತ್ತದೆ. ನಂತರ ಕರೆಂಟ್ ಅಕೌಂಟ್ ಓಪನ್ ಮಾಡಿಸಬೇಕಾಗುತ್ತದೆ. ಪೆಟ್ರೋಲ್ ಬಂಕ್ ಬಿಸಿನೆಸ್ ಮಾಡಲು 21 ವಯಸ್ಸಿನಿಂದ 55 ವರ್ಷದ ಒಳಗಿರುವವರು ಲೈಸೆನ್ಸ್ ಗೆ ಅಪ್ಲೈ ಮಾಡಬಹುದು. ಲೈಸೆನ್ಸ್ ಗೆ ಅಪ್ಲೈ ಮಾಡುವಾಗ ಹತ್ತನೇ ತರಗತಿ ಉತ್ತೀರ್ಣನಾಗಿರಬೇಕು.
ನಗರಗಳಲ್ಲಿ ಪೆಟ್ರೋಲ್ ಬಂಕ್ ಓಪನ್ ಮಾಡುವುದಾದರೆ ಡಿಗ್ರಿ ಓದಿರಬೇಕು. ಗ್ರಾಮೀಣ ಭಾಗದಲ್ಲಿ ಪೆಟ್ರೋಲ್ ಬಂಕ್ ಬಿಸಿನೆಸ್ ಪ್ರಾರಂಭಿಸಲು 18 ರಿಂದ 20 ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ. ನಗರಗಳಲ್ಲಿ ಪೆಟ್ರೋಲ್ ಬಂಕ್ ಬಿಸಿನೆಸ್ ಪ್ರಾರಂಭಿಸಲು 30ರಿಂದ 35 ಲಕ್ಷ ಬಂಡವಾಳ ಹಾಕಬೇಕಾಗುತ್ತದೆ. ನಗರಗಳಲ್ಲಿ ಮೆಟ್ರೊ ಸಿಟಿಯಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸುವುದಾದರೆ ಕೋಟಿಗಟ್ಟಲೆ ಹಣವನ್ನು ಇನ್ವೆಸ್ಟ್ ಮಾಡಬೇಕಾಗುತ್ತದೆ. ಸ್ವಂತ ಜಾಗದಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸಿದರೆ ಖರ್ಚು ಕಡಿಮೆಯಾಗುತ್ತದೆ.
ಪೆಟ್ರೋಲ್ ಬಂಕ್ ಬಿಸಿನೆಸ್ ಗೆ ಲೈಸೆನ್ಸ್ ಅಪ್ಲಿಕೇಷನ್ ಹಾಕುವಾಗ ಅಪ್ಲಿಕೇಷನ್ ಫೀಸ್ ಇರುತ್ತದೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 50% ರಿಯಾಯಿತಿ ಇರುತ್ತದೆ. ಪೆಟ್ರೋಲ್ ಬಂಕ್ ಬಿಸಿನೆಸ್ ಪ್ರಾರಂಭಿಸಲು ಕೆಲವು ದಾಖಲಾತಿಗಳು ಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸುವುದಾದರೆ ಪಂಚಾಯತ್ ನಿಂದ ಅಪ್ರೂವಲ್ ಬೇಕಾಗುತ್ತದೆ.
ಮಂಡಲ್ ಭಾಗದಲ್ಲಾದರೆ ಎಮ್ ಆರ್ ಓ ಸರ್ಟಿಫಿಕೇಟ್ ಬೇಕಾಗುತ್ತದೆ. ಹತ್ತಿರದ ವಿದ್ಯುತ್ ಅಧಿಕಾರಿಗಳಿಂದ ಮತ್ತು ಪೊಲೀಸ್ ಸ್ಟೇಷನ್ ನಿಂದ ಅನುಮತಿ ಪಡೆಯಬೇಕು. ನಂತರ ಡಿಸ್ಟ್ರಿಕ್ಟ್ ಕಲೆಕ್ಟರ್ ಆಫೀಸರ್ ನಿಂದ ಅನುಮತಿ ಬೇಕಾಗುತ್ತದೆ. ನಗರಗಳಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸುವುದಾದರೆ ಅಗ್ನಿಶಾಮಕ ದಳದಿಂದ ಎನ್ಓಸಿ ಪಡೆದಿರಬೇಕು.
ಶಾಲಾ-ಕಾಲೇಜು, ಯೂನಿವರ್ಸಿಟಿಗಳ ಹತ್ತಿರ ಪೆಟ್ರೋಲ್ ಬಂಕ್ ಪ್ರಾರಂಭಿಸುವಂತಿಲ್ಲ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಲು 6-8 ಜನರು ಬೇಕಾಗುತ್ತದೆ. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವವರು ಕನಿಷ್ಠ ಹತ್ತನೇ ತರಗತಿಯನ್ನು ಓದಿರಬೇಕು. ಪೆಟ್ರೋಲ್ ಬಂಕ್ ಬಿಸಿನೆಸ್ ನಿಂದ ಹೆಚ್ಚು ಆದಾಯ ಗಳಿಸಬಹುದು. ಒಂದು ಲೀಟರ್ ಡೀಸೆಲ್ ಮೇಲೆ ಎರಡು ರೂಪಾಯಿ ಲಾಭ ಗಳಿಸಬಹುದು. ಒಂದು ಲೀಟರ್ ಪೆಟ್ರೋಲ್ ಮೇಲೆ ಮೂರು ರೂಪಾಯಿ ಲಾಭ ಗಳಿಸಬಹುದು.
ಒಂದು ದಿನಕ್ಕೆ ಒಂದು ಟ್ಯಾಂಕ್ ಪೆಟ್ರೋಲ್ ಸೇಲಾದರೆ 3,000 ರೂಪಾಯಿ ಲಾಭ ಗಳಿಸಬಹುದು. ಒಂದು ತಿಂಗಳಿಗೆ ಪೆಟ್ರೋಲ್ ನಿಂದ 90 ಸಾವಿರ ರೂಪಾಯಿ ಆದಾಯ ಗಳಿಸಬಹುದು. ಡೀಸೆಲ್ ಇಂದಲೂ 90,000 ರೂಪಾಯಿ ಆದಾಯ ಗಳಿಸಬಹುದು. ಒಟ್ಟಾರೆ 1,80,000 ರೂಪಾಯಿ ಆದಾಯ ಗಳಿಸಬಹುದು. ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಹತ್ತು ಸಾವಿರ ಸಂಬಳ ಇರುತ್ತದೆ.
ಸ್ವಂತ ಜಾಗ ಇಲ್ಲದಿದ್ದರೆ ಜಾಗಕ್ಕೆ ಬಾಡಿಗೆ ಕೊಡಬೇಕಾಗುತ್ತದೆ. ಮೆಂಟೆನೆನ್ಸ್ ಗೆ ಒಂದಷ್ಟು ಹಣ ಖರ್ಚಾಗುತ್ತದೆ. ಒಂದು ತಿಂಗಳಿಗೆ ಒಂದು ಲಕ್ಷ ರೂಪಾಯಿ ಖರ್ಚಾದರೂ 80,000 ರೂಪಾಯಿ ಉಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ನಿರುದ್ಯೋಗ ಯುವಕರಿಗೆ ತಿಳಿಸಿ, ಪೆಟ್ರೋಲ್ ಬಂಕ್ ಬಿಸಿನೆಸ್ ಪ್ರಾರಂಭಿಸಿ ಲಕ್ಷ ಲಕ್ಷ ಆದಾಯ ಗಳಿಸಿ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.