ಈ ಹಿಂದೆ ಆಗಸ್ಟ್ ತಿಂಗಳ ಆರಂಭದ ಮೊದಲ ದಿನವೆ, ಜನಸಾಮಾನ್ಯರ ಜೇಬಿಗೆ ಭಾರಿ ಹೊಡೆತಬಿದ್ದಿತ್ತು. LPG ಗ್ಯಾಸ್ ಸಿಲಿಂಡರ್ ಬೆಲೆಗಳು ಮತ್ತೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 73.5 ರೂಪಾಯಿಯಂತೆ ಹೆಚ್ಚಿಸಿದ ವಿಷಯ ನಮಗೆಲ್ಲ ತಿಳಿದಿದೆ. ಆದರೆ ಆಗ ಕೇವಲ ವಾಣಿಜ್ಯ ಅಡುಗೆ ಅನಿಲ ಬೆಲೆಗಳನ್ನು ಮಾತ್ರ ಹೆಚ್ಚಿಸಲಾಗಿದ್ದು ಮನೆಗಳಲ್ಲಿ ಬಳಕೆಯಾಗುವ ಅಡುಗೆ ಅನಿಲ ಸಿಲಿಂಡರ್ ಬೆಲೆಗಳು ಹಾಗೆಯೇ ಇರುತ್ತವೆ.

ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 1500 ರಿಂದ 1623 ರುಪಾಯಿಯವರೆಗೂ ಏರಿಕೆಯಾಗಿತ್ತು ಅದೇ ರೀತಿ ಇನ್ನೂ ಮನೆಗಳಲ್ಲಿ ದಿನನಿತ್ಯ ಬಳಕೆ ಮಾಡುವ ಅಡುಗೆ ಅನಿಲ ಸಿಲಿಂಡರ್ ಬೆಲೆಗಳು ಕೂಡಾ ಹೆಚ್ಚಾಗಲಿವೆಯಂತೆ ಗ್ಯಾಸ್ ಸಿಲಿಂಡರ್ ಬೆಲೆ ಮುಂದಿನ 3 ತಿಂಗಳಲ್ಲಿ ಒಂದು ಸಾವಿರ ರೂಪಾಯಿಯ ಗಡಿ ದಾಟುತ್ತದೆ ಎಂಬ ಮಾಹಿತಿ ಇದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

 ಕೊರೊನಾ ಮಹಾಮಾರಿಯ ಹೊಡೆತದಿಂದ ಜನರು ಇನ್ನೂ ಸುಧಾರಿಸಿಕೊಂಡಿಲ್ಲ. ಈಗಾಗಲೇ ಮೂರನೇ ಅಲೆಯ ಭೀತಿಯನ್ನು ಸಹ ಎದುರಿಸುತ್ತಿದ್ದಾರೆ. ಹೀಗಿದ್ದಾಗ ಇದರ ನಡುವೆ ದಿನೇ ದಿನೇ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಸಿಲಿಂಡರ್ ಬೆಲೆ ಬರೋಬ್ಬರಿ 25 ರೂಪಾಯಿ ಏರಿಕೆಯಾಗಿತ್ತು. ಈಗ LPG ಸಿಲಿಂಡರ್ ದರ ಒಂದು ಸಾವಿರ ರೂಪಾಯಿ ಗಡಿ ದಾಟಲಿದೆ. ಇನ್ನು 3 ತಿಂಗಳಲ್ಲಿ ಸಿಲಿಂಡರ್ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸಿಲಿಂಡರ್ ಬೆಲೆ ಏರಿಕೆಯ ಬಗ್ಗೆ ಆಲ್ ಇಂಡಿಯಾ LPG ಫೆಡರೇಷನ್‌ ನ ರಾಜ್ಯ ಕಾರ್ಯದರ್ಶಿ ರಮೇಶ್‌ಕುಮಾರ್ ಅವರು ಸುಳಿವು ನೀಡಿದ್ದಾರೆ. ಚಳಿಗಾಲದಲ್ಲಿ ಯರೋಪ್ ದೇಶಗಳಲ್ಲಿ ಗ್ಯಾಸ್ ಬೇಡಿಕೆ ಹೆಚ್ಚಾಗುತ್ತೆ. ಹೀಗಾಗಿ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಾಗುತ್ತೆ.

ಚಳಿಗಾಲದಲ್ಲಿ ಸಿಲಿಂಡರ್ ದರ ಮತ್ತಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ. ಇನ್ನು ಈ ರೀತಿಯ ಏಕಾಏಕಿ ಬೆಲೆ ಏರಿಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು ಸಿಲೆಂಡರ್ ಗ್ಯಾಸ್ ಹಾಗೂ ತೈಲ ಬೆಲೆ ಏರಿಕೆ ಅಂತರಾಷ್ಟ್ರೀಯ ಮಾರುಕಟ್ಟೆ ಮೇಲೆ ನಿರ್ಧಾರವಾಗಿರುತ್ತದೆ. ಕಾಂಗ್ರೆಸ್ ನವರಿಗೆ ಗೊತ್ತಿದೆ ಹಿಂದೆ ಏನೂ ಮಾಡಿದ್ದಾರೆಂದು. ಆಯಿಲ್ ಬಾಂಡ್ ವಿಚಾರ ಏನಾಗಿತ್ತು? ಅದೇನೆ ಇರಲಿ ಸೆಪ್ಟೆಂಬರ್5 ರಂದು ಕೇಂದ್ರ ಹಣಕಾಸು ಸಚಿವರು ಬಂದಾಗ ಅವರ ಜೊತೆ ತೈಲ ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಹೇಳಿದ್ದಾರೆ.

ಇನ್ನೂ ರಾಜ್ಯ ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ಅವರು ಪೆಟ್ರೋಲ್​, ಡೀಸೆಲ್​ ಹಾಗೂ ಗ್ಯಾಸ್​ ಬೆಲೆ ಏರಿಕೆ ಇವುಗಳ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಕೇಳಬೇಡಿ, ಒಟ್ಟಾರೆಯಾಗಿ ಹಣದುಬ್ಬರ ಸರ್ಕಾರದ ನಿಯಂತ್ರಣದಲ್ಲಿದೆ. ಬೆಲೆ ಏರಿಕೆ ಬಗ್ಗೆ ನೀವು ಅರ್ಥಶಾಸ್ತ್ರಜ್ಞರ ಬಳಿ ಕೇಳಿಕೊಳ್ಳಿ. ಬೆಲೆ ಏರಿಕೆ ಬಗ್ಗೆ ಆರ್​​ಬಿಐ ಗವರ್ನರ್ ಮಾತಾಡುತ್ತಾರೆ ಎಂದು ಬೆಲೆ ಏರಿಕೆ ವಿಚಾರವನ್ನು ಅರುಣ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಎಲ್​ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದ್ಯಾಕೆ?
ಕೋಟಿ ಕೋಟಿ ಕುಟುಂಬಗಳು ಬಳಸೋ LPG ಸಿಲಿಂಡರ್ ಬೆಲೆಯೂ ತಾರಕಕ್ಕೇರ್ತಿದೆ.

ಅದಕ್ಕೆ ತಜ್ಞರು ಕೊಡೋ ಕಾರಣ ಏನೆಂದು ನನೋಡುವುದಾದರೆ, ತೈಲ ಬೆಲೆ ಹೆಚ್ಚಾದಾಗ LPG ಸಿಲಿಂಡರ್ ಗಳ ಬೆಲೆಯೂ ಸಹ ಹೆಚ್ಚಳವಾಗುತ್ತೆ. ಇನ್ನು LPGಯಲ್ಲಿ ಶೇಕಡಾ 60ರಷ್ಟು ಬೂತೇನ್ ಅನ್ನು ಮಿಶ್ರಣ ಮಾಡಲಾಗುತ್ತೆ. ಶೇಕಡಾ 4ರಷ್ಟು ಪ್ರೊಪೇನ್ ಎಲ್ಪಿಜಿಯಲ್ಲಿ ಬಳಸಲಾಗುತ್ತೆ.

ಇವರೆಡನ್ನೂ ಭಾರತ ವಿದೇಶದಿಂದ ಆಮದು ಮಾಡಿಕೊಳ್ಳಬೇಕು. ಈಗ ಬೂತೇನ್ ಮತ್ತು ಪ್ರೊಪೇನ್ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಳವಾಗಿದೆ. ಸಾಲದ್ದಕ್ಕೆ ಸುಂಕ ಕಡಿಮೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ. ಹೀಗಾಗಿ ಎಲ್ಪಿಜಿ ಬೆಲೆ ಹೆಚ್ಚಾಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಮುಂಬರುವ ದಿನಗಳಲ್ಲಿ ನಾವು ನೀವೆಲ್ಲ ಪ್ರತೀದಿನ ಬಳಕೆ ಮಾಡುವ LPG ಸಿಲಿಂಡರ್ ಬೆಲೆ ಎಷ್ಟರ ಮಟ್ಟಿಗೆ ಏರಿಕೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ ಅಷ್ಟೇ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *