ಮೆರೆವು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವ ಸಮಸ್ಯೆಯಾದರೂ ವಿಪರೀತ ಮರೆವು ಅಪಾಯಕಾರಿಯಾದ ಲಕ್ಷಣವಾಗಿದೆ. ಮೆದುಳನ್ನು ಆರೋಗ್ಯಕರವಾಗಿ ಹಾಗೂ ಚುರುಕಾಗಿ ಇಡುವ ಮೂಲಕ ಮರೆವಿನ ಸಮಸ್ಯೆ ಬರದಂತೆ ತಡೆಯಬಹುದು. ಮರೆವು ಎನ್ನುವುದು ಎಲ್ಲಾ ವಯಸ್ಸಿನಲ್ಲಿಯೂ ಕಂಡು ಬರುತ್ತದೆ.
ವಿದ್ಯಾರ್ಥಿಗಳು ರಾತ್ರಿ ಪೂರ್ತಿ ನಿದ್ದೆಗೆಟ್ಟು ಓದಿ ಪರೀಕ್ಷೆಗೆ ಬಂದಿರುತ್ತಾರೆ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಉತ್ತರ ಗೊತ್ತಿರುತ್ತದೆ, ಆದರೆ ಬೆರೆಯಲು ಅದರ ಪಾಯಿಂಟ್ಸ್‌ಗಳು ನೆನಪಾಗುವುದೇ ಇಲ್ಲ. ಇನ್ನು ಇಟ್ಟ ವಸ್ತು ತಕ್ಷಣ ನೆನೆಪಿಗೆ ಬಾರದೇ ಹೋಗುವುದು ಹೀಗೆ ಸಣ್ಣ-ಪುಟ್ಟ ಮರೆವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವೊಮ್ಮೆ ಅಸಡ್ಡೆಯಿಂದಾಗಿ ಮರೆತು ಹೋಗಿರುತ್ತದೆ. ಚಿಕ್ಕ-ಪುಟ್ಟ ಮರೆವಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡು ಬರುವುದರಿಂದ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಈ ಸಮಸ್ಯೆಗೆ ಹಲವಾರು ಸುಲಭ ಮಾರ್ಗಗಳಿವೆ ಅವುಗಳನ್ನು ತಿಳಿಯೋಣ.
ಮಕ್ಕಳ ಬುದ್ಧಿ ಸಾಮರ್ಥ್ಯ ಹೆಚ್ಚಿಸುವಲ್ಲಿ ಈ ಎಲೆ ತುಂಬಾ ಸಹಕಾರಿ. ದಿನಾ ಒಂದು ಬ್ರಾಹ್ಮೀ ಎಲೆ ಸಾಕು ಬುದ್ಧಿ ಶಕ್ತಿ ಹೆಚ್ಚುವುದು, ಮರೆವಿನ ಕಾಯಿಲೆ ಕಡಿಮೆಯಾಗುವುದು. ಬ್ರಾಹ್ಮೀ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಿ ಪ್ರತಿದಿನ ಬೆಳಗ್ಗೆ ಕುಡಿದರೆ ಮರೆವಿನ ಸಮಸ್ಯೆ ಉಂಟಾಗುವುದಿಲ್ಲ.
ಇನ್ನು ಈ ಎಲೆಯನ್ನು ಹಾಲಿನ ಜತೆ ಕುಡಿದರೂ ಒಳ್ಳೆಯದೂ, ಸ್ವಲ್ಪ ಜಾಸ್ತಿ ಎಲೆಯಿದ್ದರೆ ಸಾರಿನಲ್ಲಿಯೂ ಹಾಕಿ ಬಳಸಬಹುದು.ಒಂದು ಕಪ್ ಹಾಲು ಕುದಿಸಿ, ಅದಕ್ಕೆ ಬಾದಾಮಿ, ಕಲ್ಲು ಸಕ್ಕರೆ ಹಾಕಿ ಕುಡಿಯುವುದರಿಂದ ನೆನಪಿನ ಶಕ್ತಿ ಹೆಚ್ಚುವುದು.
ಜನರು ಸಾಮಾನ್ಯವಾಗಿ ಮುಂಜಾನೆ ಎದ್ದಾಗಿನಿಂದ ಅವರು ಎಲ್ಲಾ ಕೆಲಸಗಳನ್ನು ತಮ್ಮ ಎಡಗೈನಿಂದ ಮಾಡಬೇಕು ಏಕೆಂದರೆ ಎಡಗೈ ನರಗಳು ನೇರವಾಗಿ ಮೆದುಳಿಗೆ ಸಂಪರ್ಕವಾಗಿರುತ್ತವೆ ಆದ್ದರಿಂದ ಮೆದುಳಿನ ಶಕ್ತಿಯು ಚುರುಕಾಗಿರುತ್ತದೆ. ಎಷ್ಟು ಪುಸ್ತಕಗಳನ್ನು ಓದುತ್ತೀರೋ, ಎಷ್ಟು ಜ್ಞಾನವರ್ಧಿತ ಕಥೆಗಳನ್ನು ಓದಿ ಬುದ್ಧಿ ವೃದ್ಧಿಸಿಕೊಳ್ಳುತ್ತೀರೋ ಅಷ್ಟು ಮೆದುಳು ಶಕ್ತಿಯುತವಾಗಿರುತ್ತದೆ.
ಕೆಲವು ಕೆಲಸಗಳನ್ನು ಕಣ್ಣು ಮುಚ್ಚಿ ಮಾಡಿದರೆ ಕಣ್ಣಿಗೂ ಹಾಗೂ ಮೆದುಳಿಗೂ ಸುಲಭವಾಗುತ್ತದೆ. ಹಣೆಯ ಮೇಲೆ ಇಂಡೇಕ್ಸ್ ಫೀಂಗರ್ ನಿಂದ ಮಸಾಜ್ ಮಾಡಿಕೊಳ್ಳಬೇಕು. ಚಾಲೆಂಜಿಂಗ್ ಆಟವನ್ನು ಆಡುತ್ತಿರಬೇಕು. ಪ್ರತಿನಿತ್ಯವೂ ಹೊಸ ಹೊಸ ಜನರನ್ನು ನೋಡಬೇಕು ಹಾಗೂ ಹೊಸ ಹೊಸ ವಿಷಯಗಳನ್ನು ಚರ್ಚಿಸುತ್ತಿರಬೇಕು.ಕನಸುಗಳ ಬೆನ್ನತ್ತಬೇಕು ಆ ಕನಸುಗಳ ಬಗೆಗಿನ ಚಿಂತನೆ ಮಾಡಬೇಕು.
ಧ್ಯಾನ ಮಾಡುವುದು ಸಹ ಸಹಜ ಪ್ರಕ್ರಿಯೆ ಇದರಿಂದ ಆರೋಗ್ಯವು ಸಹ ವೃದ್ಧಿಸುತ್ತದೆ ಜೊತೆಗೆ ಯೋಗಾಸನವು ಸಹ ಉತ್ತಮ ಕೆಲಸವಾಗಿದೆ. ಒಳ್ಳೆಯ ಅಂದರೆ ಪೋಷ್ಟಿಕಾಂಶಯುಕ್ತ ಮತ್ತು ಆರೋಗ್ಯಕರ ಆಹಾರ ಸೇವನೆ ಉತ್ತಮ ಮಾರ್ಗವಾಗಿದೆ.