ಕೂದಲು ಉದುರುವುದು ಬಹಳಷ್ಟು ಜನರ ಸಮಸ್ಯೆಯಾಗಿದೆ. ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲಿ ಸಿಗುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಮನೆಮದ್ದನ್ನು ತಯಾರಿಸಬಹುದು. ಹಾಗಾದರೆ ಮನೆಮದ್ದನ್ನು ತಯಾರಿಸುವ ವಿಧಾನವನ್ನು ಹಾಗೂ ಅದರ ಉಪಯೋಗವನ್ನು ಈ ಲೇಖನದಲ್ಲಿ ನೋಡೋಣ.
ಕೂದಲಿನ ಸಮಸ್ಯೆಗೆ ಇರುವ ಮನೆಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ನೀರು, ಮೆಂತೆ ಕಾಳು, ಕಾಫಿ ಪೌಡರ್, ಶಾಂಪೂ. ಮಾಡುವ ವಿಧಾನ ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ಹಾಕಿ ಒಂದು ಟೇಬಲ್ ಸ್ಪೂನ್ ಮೆಂತೆ ಕಾಳನ್ನು ಹಾಕಿ 2 ನಿಮಿಷಗಳವರೆಗೆ ಚೆನ್ನಾಗಿ ಕುದಿಸಬೇಕು. ನಂತರ ತಣ್ಣಗಾಗಬೇಕು ತಣ್ಣಗಾದ ನಂತರ ಒಂದು ಪಾತ್ರೆಗೆ ಸೋಸಿ ಅದಕ್ಕೆ ಕಾಲು ಚಮಚ ಕಾಫಿ ಪೌಡರ್ ಅನ್ನು ಸೇರಿಸಬೇಕು. ಇನ್ಸ್ಟಂಟ್ ಕಾಫಿ ಪೌಡರ್ ಅಥವಾ ಫಿಲ್ಟರ್ ಕಾಫಿ ಪೌಡರ್ ಹಾಕಬಹುದು.
ನಂತರ ಅದಕ್ಕೆ ಎರಡು ಸ್ಪೂನ್ ಶಾಂಪೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಪುರುಷರಿಗೆ ಒಂದು ಸ್ಪೂನ್ ಸಾಕಾಗುತ್ತದೆ, ಆದಷ್ಟು ಹರ್ಬಲ್ ಶಾಂಪೂವನ್ನು ಬಳಸಿ. ಶಾಂಪೂ ಹಾಕದೆ ಶಿಗೇಕಾಯಿ ಪೌಡರ್, ಅಂಟಲ್ ಕಾಯಿಯನ್ನು ಹಾಕಬಹುದು. ನಂತರ ಇದನ್ನು ತಲೆಗೆ ಅಪ್ಲೈ ಮಾಡಬೇಕು 2 ಗಂಟೆ ನಂತರ ತಲೆ ಸ್ನಾನ ಮಾಡಬೇಕು. ತಣ್ಣೀರಿನಲ್ಲಿ ತಲೆ ಸ್ನಾನ ಮಾಡುವುದು ಒಳ್ಳೆಯದು, ಉಗುರು ಬೆಚ್ಚನೆಯ ನೀರಿನಲ್ಲಿ ತಲೆ ಸ್ನಾನ ಮಾಡಬಹುದು.
ಮೆಂತೆ ಕಾಳಿನಲ್ಲಿ ಐರನ್, ಪ್ರೊಟೀನ್ ಅಂಶ ಇರುವುದರಿಂದ ಕೂದಲು ಬೆಳವಣಿಗೆಗೆ ಬಹಳ ಉಪಯುಕ್ತ. ಕೂದಲಿನ ಬುಡವನ್ನು ಗಟ್ಟಿ ಮಾಡುವ ಅಂಶ ಮೆಂತೆ ಕಾಳಿಗಿರುತ್ತದೆ. ಚಿಕ್ಕ ವಯಸ್ಸಿನಿಂದಲೆ ಮೆಂತೆ ಕಾಳನ್ನು ಉಪಯೋಗಿಸುವುದರಿಂದ ಪುರುಷರಿಗೆ ಬೊಕ್ಕುತಲೆ ಆಗುವುದನ್ನು ತಪ್ಪಿಸಬಹುದು. ಕೂದಲಿಗೆ ಕಾಫಿ ಪೌಡರ್ ಒಳ್ಳೆಯದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
ಕಾಫಿಯಲ್ಲಿ ಕೂದಲು ಉದುರುವುದನ್ನು ತಕ್ಷಣ ನಿಲ್ಲಿಸುವ ಅಂಶ ಇದೆ. ಪುರುಷರು ತಪ್ಪದೆ ಕಾಫಿ ಪೌಡರ್ ಬಳಸುವುದರಿಂದ ಬೊಕ್ಕು ತಲೆ ಆಗುವುದು ಕಡಿಮೆ ಆಗುತ್ತದೆ. ಈ ಮನೆಮದ್ದಿನಿಂದ ಕೂದಲು ವೇಗವಾಗಿ ಬೆಳೆಯುತ್ತದೆ, ಕಪ್ಪಾಗಾಗುತ್ತದೆ, ಶೈನ್ ಆಗಿ ಬೆಳೆಯುತ್ತದೆ ಮತ್ತು ಕೂದಲು ಸ್ಟ್ರಾಂಗ್ ಆಗುತ್ತದೆ.
ಬೊಕ್ಕು ತಲೆ ಆದವರು ಈ ಮನೆ ಮದ್ದನ್ನು ಬಳಸಿದರೆ ಕೂದಲು ಬೆಳೆಯುತ್ತದೆ. ಪುರುಷರು, ಸ್ತ್ರೀಯರು, ಮಕ್ಕಳು ಯಾರು ಬೇಕಾದರೂ ಈ ಮನೆ ಮದ್ದನ್ನು ಬಳಸಬಹುದು ಇದಕ್ಕೆ ಯಾವುದೆ ಕೆಮಿಕಲ್ ಸೇರಿಸುವುದಿಲ್ಲ. ಹಾರ್ಮೋನ್ ಇಮ್ ಬ್ಯಾಲೆನ್ಸ್ ಹಾಗೂ ರಕ್ತ ಕಡಿಮೆಯಾದರೂ ಕೂದಲು ಉದುರುತ್ತದೆ. ಕರಿಬೇವಿನ ಚಟ್ನಿ, ಚಟ್ನಿ ಪುಡಿ, ಅಡುಗೆಯಲ್ಲಿ ನುಗ್ಗೆಸೊಪ್ಪನ್ನು ಬಳಸಬೇಕು. ಪ್ರತಿದಿನ ಬೆಳಗ್ಗೆ ಸೋರೆಕಾಯಿ ಜ್ಯೂಸ್ ಕುಡಿಯಬೇಕು. ಪ್ರೊಟೀನ್ ಯುಕ್ತ, ಪೋಷಕಾಂಶಯುಕ್ತ ಆಹಾರವನ್ನು ಸೇವಿಸಬೇಕು.