ಇಂದು ಜಗತ್ತು ವೈಜ್ಞಾನಿಕ ದೃಷ್ಟಿಯಿಂದ ಎಷ್ಟೇ ಎತ್ತರದಲ್ಲಿ ಇದ್ದರೂ ಕೆಲವೊಂದು ಕಾಯಿಲೆಯ ವಿಷಯ ಬಂದಾಗ ಇಂತಹ ವಿಶೇಷ ಸತ್ವ ಉಳ್ಳಂತಹ ನಿಸರ್ಗದ ಪ್ರತಿಫಲದ ಮುಂದೆ ತಲೆ ಬಾಗಲೇಬೇಕು ಇದು ಕೇವಲ ಒಂದು ಉದಾಹರಣೆ ಅಷ್ಟೇ ಇದರಲ್ಲಿರುವ ವಿಶೇಷ ರೀತಿಯ ಔಷಧೀಯ ಗುಣಗಳಿಂದ ನುಗ್ಗೆ ಸೊಪ್ಪನ್ನು ಮಾಂತ್ರಿಕ ಸೊಪ್ಪು ಎಂದು ಕೆಲವರು ಬಲವಾಗಿ ನಂಬಿದ್ದರು

ನುಗ್ಗೆ ಸೊಪ್ಪನ್ನು ಇತರ ಸೊಪ್ಪಿಗೆ ಹೋಲಿಸಿದರೆ ಒಂದು ಬಗೆಯ ವಿಶೇಷ ಗುಣ ಹೊಂದಿರುವ ಸೊಪ್ಪು ನುಗ್ಗೆ ಮರದ ಎಲೆಗಳನ್ನು ನಮ್ಮ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಆಯುರ್ವೇದ ಔಷಧಿಗಳಿಗೆ ಸಂಬಂಧಿಸಿದಂತೆ ಉಪಯೋಗಿಸಲಾಗುತ್ತಿತ್ತು ನಂತರ ಇದರ ಮಹತ್ವ ವಿಶ್ವದ ಅನೇಕ ರಾಷ್ಟ್ರಗಳಿಗೂ ಹರಡಿದೆ ನುಗ್ಗೆ ಮರದ ಎಲೆಗಳನ್ನು ತರಕಾರಿಯ ರೂಪದಲ್ಲಿ ತಮ್ಮ ಪ್ರತಿದಿನದ ಆಹಾರದಲ್ಲಿ ಬಳಸುತ್ತಾರೆ ನಾವು ಈ ಲೇಖನದ ಮೂಲಕ ನುಗ್ಗೆಸೊಪ್ಪಿನ ಲಾಭವನ್ನು ತಿಳಿದು ಕೊಳ್ಳೋಣ.

ನುಗ್ಗೆಕಾಯಿ ತುಂಬಾ ರುಚಿಕರವಾದ ತರಕಾರಿ ಹಾಗೂ ಎಲ್ಲರಿಗೂ ಇಷ್ಟವಾದ ತರಕಾರಿಯಾಗಿದೆ ನುಗ್ಗೆಕಾಯಿಯೂ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗೂ ನುಗ್ಗೆ ಸೊಪ್ಪು ಸಹ ಪ್ರಯೋಜನಕಾರಿಯಾಗಿದೆ ನುಗ್ಗೆ ಸೊಪ್ಪುನ್ನೂ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಹಾಗೂ ಪುಡಿಮಾಡಿ ತಿನುದುದರಿಂದ ಒಳ್ಳೆಯದು ಹಾಗೂ ನುಗ್ಗೆ ಸೊಪ್ಪು9ನಲ್ಲಿ ಹಾಲಿಗಿಂತ ಹದಿನೇಳು ಪಟ್ಟು ಕ್ಯಾಸಿಯಂ ಇರುತ್ತದೆ ಇದರಿಂದ ಮೂಳೆಗಳು ದೃಢವಾಗುತ್ತದೆ ಮತ್ತು ದಂತ ಗಳು ಸಹ ಸದೃಢವಾಗುತ್ತದೆ

ನುಗ್ಗೆ ಸೊಪ್ಪಿನಲ್ಲಿ ಪ್ರೋಟೀನ್ ಹೆಚ್ಚು ಇರುತ್ತದೆ ಹಾಗೂ ದೇಹಕ್ಕೆ ಪೋಷಣೆಯನ್ನು ಒದಗಿಸುತ್ತದೆ ಮತ್ತು ಹೃದಯ ಸಂಬಂಧಿ ಖಾಯಿಲೆಯನ್ನ ಹೋಗಲಾಡಿಸುವ ಶಕ್ತಿ ಇರುತ್ತದೆ ಹಾಗೂ ನಿತ್ಯವೂ ನುಗ್ಗೆ ಸೊಪ್ಪಿನ ಪುಡಿಯನ್ನು ಸೇವನೆ ಮಾಡಿದರೆ ಶುಗರ್ ಲೆವೆಲ್ ಕಡಿಮೆಯಾಗುತ್ತದೆ ಹಾಗೂ ಮಧುಮೇಹ ಇರುವರಿಗೆ ಇದೊಂದು ಪ್ರಯೋಜನಕಾರಿಯಾಗಿದೆ ಇದು ಐದು ರೀತಿಯ ಕ್ಯಾನ್ಸರ್ ಗೆ ಓಷಧ್ ಅವುಗಳೆಂದರೆ ಲಿವರ್ ಲಂಗ್ಸ್ ಥೈರಾಯ್ಡ್ ಅನ್ನು ಸಮತೋಲನದಲ್ಲಿ ಇರಿಸುತ್ತದೆ

ನುಗ್ಗೆಸೊಪ್ಪಿನಲ್ಲಿ ವಿಟಮಿನ್ ಎ ಮತ್ತು ಸಿ ಇರುತ್ತದೆ ನುಗ್ಗೆ ಸೊಪ್ಪಿನ ರಸವನ್ನು ನಿತ್ಯಕುಡಿದರೆ ಕುರುಡುತನ ಕಡಿಮೆಯಾಗುತ್ತದೆ ಸೊಪ್ಪಿನಲ್ಲಿ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ ಗಳು ವಿಟಮಿನ್ ಸಿ ಜಿಂಕ್ ಮತ್ತು ಇತರ ಸಕ್ರಿಯ ವಸ್ತುಗಳಿಂದ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುವಂತಹ ಫ್ರೀ ರ್ಯಾಡಿಕಲ್ ಗಳ ವಿರುದ್ಧ ಹೋರಾಡಿ ದೇಹದ ಕೋಶಗಳ ಒಳಗೆ ಡಿ ಎನ್ ಎ ಗಳ ನಾಶಕ್ಕೆ ಕಾರಣವಾಗುವುದನ್ನು ತಪ್ಪಿಸುತ್ತದೆ

ನಮ್ಮ ದೇಹದಲ್ಲಿ ಲಿವರ್ ನ ಅತಿ ಮುಖ್ಯ ಕೆಲಸವೆಂದರೆ ಜೀರ್ಣಾಂಗದಿಂದ ದೇಹದ ಇತರ ಅಂಗಗಳಿಗೆ ರಕ್ತವನ್ನು ಹರಿಸುವ ಮೊದಲು ಅದನ್ನು ಶೋಧಿಸಿ ಅದರಲ್ಲಿರುವ ರಾಸಾಯನಿಕಗಳನ್ನು ನಿರ್ವಿಷಗೊಳಿಸಿ ಔಷಧಿಗಳನ್ನು ಚಯಾಪಚಯಗೊಳಿಸುತ್ತದೆ

ಒಂದು ವೇಳೆ ಪಿತ್ತಜನಕಾಂಗಕ್ಕೆ ಸಮಸ್ಯೆ ಉಂಟಾದಲ್ಲಿ ಈ ಎಲ್ಲಾ ಕೆಲಸಗಳು ಸ್ಥಗಿತಗೊಳ್ಳುತ್ತವೆ ಆದ್ದರಿಂದಲೇ ನಮ್ಮ ದೇಹದ ಆರೋಗ್ಯದ ಜೊತೆಗೆ ನಮ್ಮ ದೇಹದ ಒಳಗಿರುವ ಅಂಗಾಂಶಗಳ ಆರೋಗ್ಯದ ಕಡೆಗೆ ಕೂಡ ನಾವು ಒತ್ತು ಕೊಡಬೇಕು ನಮ್ಮ ದೇಹದಲ್ಲಿ ಲಿವರ್ ನ ಆರೋಗ್ಯ ಚೆನ್ನಾಗಿರಬೇಕಾದರೆ ನುಗ್ಗೆ ಸೊಪ್ಪನ್ನು ಆಗಾಗ ತಿನ್ನುತ್ತಿರಬೇಕು.

ಮನುಷ್ಯನಿಗೆ ಕಣ್ಣು ಕಿವಿ ಮೂಗು ಬಾಯಿ ಆರೋಗ್ಯವಾಗಿದ್ದರೆ ಆತನೂ ಸಹ ಒಂದರ್ಥದಲ್ಲಿ ಆರೋಗ್ಯವಾಗಿದ್ದಾನೆ ಎಂದು ಹೇಳಬಹುದು ಆದರೆ ಸಾಮಾನ್ಯವಾಗಿ ಹಿಂದಿನ ದಿನಗಳಲ್ಲಿ ಕೇವಲ ವಯಸ್ಸಾದವರು ಮಾತ್ರ ದೃಷ್ಟಿದೋಷದ ಸಮಸ್ಯೆ ಎದುರಿಸುತ್ತಿದ್ದರು ಆದರೆ ಈಗಿನ ಕಾಲಮಾನದಲ್ಲಿ ವಯಸ್ಸಾದ ವೃದ್ಧರಿಗಿಂತ ಯುವಜನರೇ ಹೆಚ್ಚಾಗಿ ಕನ್ನಡಕಗಳನ್ನು ಧರಿಸುತ್ತಾರೆ ಇದಕ್ಕೆ ಪೋಷಕಾಂಶಗಳ ಕೊರತೆಯೂ ಅಥವಾ ಇನ್ನಾವುದೇ ಕಾರಣಗಳಿರಬಹುದು

ಸಂಶೋಧನೆಗಳ ಪ್ರಕಾರ ಈ ಸಮಸ್ಯೆಗೆ ಪರಿಹಾರ ಎಂದರೆ ಹಸಿರು ಎಲೆ-ತರಕಾರಿಗಳನ್ನು ನಿರಂತರವಾಗಿ ಸೇವಿಸುತ್ತಿದ್ದರೆ ಅದರಲ್ಲಿರುವ ವಿಟಮಿನ್ ‘ ಎ ‘ ಮತ್ತು ಬೀಟಾ – ಕ್ಯಾರೋಟಿನ್ ಅಂಶ ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಬಹಳ ಸಹಕಾರಿಯಾಗಿದೆ ನುಗ್ಗೆ ಸೊಪ್ಪು ಕೂಡ ಹಸಿರು ಎಲೆ-ತರಕಾರಿಗಳ ಗುಂಪಿಗೆ ಸೇರುತ್ತದೆ. ಹೀಗೆ ನುಗ್ಗೆ ಸೊಪ್ಪು ಪ್ರಯೋಜನಕಾರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!