ದೇಶದ ಆರ್ಥಿಕ ಪ್ರಗತಿಗೆ ಅನೇಕ ಜನರು ತಮ್ಮ ಕೊಡುಗೆಯನ್ನು ನೀಡಿದ್ದಾರೆ ಜೀರೋ ದಿಂದಾ ಹೀರೋ ಆದ ಪ್ರತಿಯೊಬ್ಬ ದೊಡ್ಡ ಮನುಷ್ಯ ತಾನು ಹೇಗೆ ಬೆಳೆದು ಬಂದೆ ಎಂದು ತನ್ನ ಹಿಂದಿನ ದಾರಿಯನ್ನು ನೆನಪಿಸಿಕೊಳ್ಳುತ್ತಾನೆ ಅದೇ ರೀತಿ ಒಬ್ಬ ಎತ್ತರ ಸ್ಥಾನದಲ್ಲಿರುವ ಉದ್ಯಮಿ ಮೊದಲು ಏನಾಗಿದ್ದ ಅವನು ಎಷ್ಟು ಕಷ್ಟಪಟ್ಟು ಮುಂದೆ ಬಂದಿರುತ್ತಾನೆ ಎನ್ನುವುದನ್ನು ತಿಳಿದುಕೊಳ್ಳಬೇಕು ಆ ಸ್ಪೂರ್ತಿದಾಯಕ ಕಥೆಯನ್ನು ಓದಿ ನಾವು ಅದೇ ರೀತಿಯ ಕೆಲಸಗಳನ್ನು ಮಾಡಬೇಕು. ಇಂದು ನಾವು ಅಂತಹ ಮಹಾನ ಉದ್ಯಮಿಗಳಲ್ಲಿ ಒಬ್ಬರಾದ ಧಿರುಬಾಯ್ ಅಂಬಾನಿಯವರಬಗ್ಗೆ ತಿಳಿದುಕೊಳ್ಳೋಣ.
ಧಿರುಬಾಯ್ ಅಂಬಾನಿಯವರ ಬಗ್ಗೆ ಯಾರಿಗೆ ಗೊತ್ತಿಲ್ಲ. ರಿಲಯನ್ಸ್ ನ ಸ್ಥಾಪಕ ಅಂಬಾನಿಯವರು. ಆದರೆ ಬಹಳಷ್ಟು ಜನಕ್ಕೆ ಗೊತ್ತಿಲ್ಲ ಧೀರು ಬಾಯ್ ಅಂಬಾನಿ ಅವರ ನಿಜವಾದ ಹೆಸರು ಹೆಸರು ಧೀರಜ್ ಲಾಲ್ ಗೋವರ್ಧನ ದಾಸ್ ಅಂಬಾನಿ ಅಂತ. ಇವರ ತಂದೆ ಒಬ್ಬ ಶಾಲಾ ಶಿಕ್ಷಕರಾಗಿದ್ದರು ಇವರ ತಾಯಿ ಮನೆಯಲ್ಲಿರುತ್ತಿದ್ದರು ಇವರು ಫ್ರೌಡ ಶಾಲೆಯಲ್ಲಿ ಓದುತ್ತಿರುವಾಗ ಶಾಲೆಯನ್ನು ಅರ್ಧದಲ್ಲೇ ನಿಲ್ಲಿಸಿ ಪಕೋಡವನ್ನು ಮಾರಲು ಹೋಗುತ್ತಿದ್ದರು ಇದೆ ರೀತಿ ಹಲವಾರು ವರ್ಷ ಮಾಡಿದರು ಇವರ ಆಲೋಚನೆ ಬೇರೆಯದೇ ಆಗಿತ್ತು ಕೇವಲ ವಿದ್ಯಾವಂತನಾಗಿದ್ದರೆ ಮಾತ್ರ ಹಣವನ್ನು ಗಳಿಸುತ್ತಿನಿ ಎಂದರೆ ಅದು ಮೂರ್ಖತನ ಓದದೇ ಇದ್ದರೂ ಸಹ ಹಲವಾರು ರೀತಿಯಿಂದ ನಾವು ಶ್ರೀಮಂತನಾಗಬಹುದು ಅಂತ ಇವರ ನಿಲುವು.ಆ ನಿಲುವನ್ನು ಸಾಧಿಸಿ ತೋರಿಸಿದ್ದಾರೆ.
ಸಾವಿರದ ಒಂಬೈನೂರಾ ಮೂವತ್ತೆರಡು ಡಿಸೆಂಬರ್ ಇಪ್ಪತ್ತೆಂಟು ಚೋರವಾಡ ಎಂಬ ಗ್ರಾಮದಲ್ಲಿ ಇವರು ಜನಿಸಿದರು. ಹಲವಾರು ವರ್ಷಗಳ ಕಾಲ ಪಕೋಡ ಮಾರಿದ ಅನುಭವ ಇರುವ ಇವರು ನಂತರ ಇವರ ಸ್ನೇಹಿತನೊಂದಿಗೆ ಸೇರಿ ಇಡಿನ್ ಗೆ ಹೋಗುತ್ತಾರೆ ಅಲ್ಲಿ ಒಂದು ಪೆಟ್ರೋಲಿಯಂ ಬಂಕಲ್ಲಿ ಸಾಮಾನ್ಯ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಾರೆ. ಕೆಲಸ ಮುಗಿದ ನಂತರ ಇನ್ನು ಹಲವಾರು ಪಾರ್ಟ್ ಟೈಮ್ ಕೆಲಸಗಳನ್ನು ಮಾಡಿ ಹಣವನ್ನು ಸಂಪಾದಿಸಿದ್ದಾರೆ ಆದ್ದರಿಂದ ಇವರ ಜೊತೆಯಲ್ಲಿದ್ದ ಎಲ್ಲ ಸ್ನೇಹಿತರಿಗಿಂತ ಇವರ ಬಳಿ ಹೆಚ್ಚು ಹಣ ಇರುತ್ತದೆ.
ಆದರೆ ಇದರಿಂದ ತೃಪ್ತಿಗೊಳ್ಳದ ಧೀರು ಬಾಯ್ ಅಂಬಾನಿ ಅವರು ಬೇರೆಯೇ ಯೋಚನೆ ಮಾಡುತ್ತಿದ್ದರು ಅವರು ಎಷ್ಟು ಕಡೆ ಕೆಲಸ ಮಾಡಿದರು ಸಹ ಎಲ್ಲ ಕಡೆ ಕೆಲಸಗಳನ್ನು ಶ್ರದ್ಧೆಯಿಂದ ನಿಷ್ಠೆಯಿಂದ ಮಾಡುತ್ತಿದ್ದರು. ಇದನ್ನು ಗಮನಿಸಿದ ಅವರ ಮಾಲೀಕ ಆದಷ್ಟು ಬೇಗ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡುತ್ತಾರೆ. ಆದರೆ ಈ ಮ್ಯಾನೇಜರ್ ಹುದ್ದೆಗೆ ಬಂದ ನಂತರ ಸ್ವಲ್ಪ ದಿನಗಳ ನಂತರ ಆ ಹುದ್ದೆಗೆ ರಾಜೀನಾಮೆ ನೀಡಿ ಅವರು ಮತ್ತೆ ಭಾರತಕ್ಕೆ ಬರುತ್ತಾರೆ.
ಭಾರತಕ್ಕೆ ಬಂದ ನಂತರ ಅವರ ಸ್ನೇಹಿತ ಚಂಪಕ್ ಲಾಲ್ ಜೊತೆಗೂಡಿ ರಿಲಯನ್ಸ್ ಕಮರ್ಶಿಯಲ್ ಕೋರ್ಪರೇಶನ್ ಅಂತ ಒಂದು ಉದ್ಯಮವನ್ನು ಸ್ಥಾಪನೆ ಮಾಡುತ್ತಾರೆ. ಅದರ ಕಾರ್ಯ ಇಲ್ಲಿನ ಮಸಾಲೆ ವಸ್ತುಗಳನ್ನು ರಪ್ತು ಮಾಡುವುದು ಮತ್ತು ಪಾಲಿಯೆಷ್ಟರ್ ಗಳನ್ನೂ ಆಮದು ಮಾಡಿಕೊಳ್ಳುವುದು ಹಾಗೆ ಇದು ಬಹಳಷ್ಟು ಲಾಭದಾಯಕ ಅಂತ ಇವರು ತಿಳಿದುಕೊಳ್ಳುತ್ತಾರೆ . ಯಾಕೆ ಅಂದರೆ ಈ ಪಾಲಿಯೆಷ್ಟರ್ ಬಟ್ಟೆಗಳು ಬಹಳಷ್ಟು ಕಮ್ಮಿ ಬೆಲೆಗೆ ಸಿಗುತ್ತಿರುತ್ತದೆ ಮತ್ತು ಅದರ ಗುಣಮಟ್ಟ ಉತ್ತಮವಾಗಿರುತ್ತದೆ. ಎಷ್ಟೇ ದಿನ ಬಳಸಿದರು ಅದು ತನ್ನ ಕಳೆ ಕಳೆದುಕೊಳ್ಳುತ್ತಿರಲಿಲ್ಲ ಆದ್ದರಿಂದ ಜನರಿಗೆ ಇಷ್ಟವಾಗುತ್ತಿತ್ತು.
ಇದೆ ರೀತಿ ಅವರು ಕಷ್ಟ ಪಡುತ್ತಾ ಕೇವಲ ಎರಡು ಜನರೊಂದಿಗೆ ಮತ್ತು ನೂರೈವತ್ತು ಸ್ಕ್ವಾರ್ ಫಿಟ್ ನೊಂಡಿಗೆ ಆರಂಭವಾದ ರಿಲಯನ್ಸ್ ಕಮರ್ಶಿಯಲ್ ಕೋರ್ಪರೇಶನ್ ಆದಷ್ಟು ಬೇಗ ದೊಡ್ಡಮಟ್ಟದಲ್ಲಿ ಬೆಳೆದು ಹತ್ತುಲಕ್ಷಕ್ಕು ಹುಚ್ಚು ಹಣವನ್ನು ವಹಿವಾಟು ಮಾಡುವ ಮೂಲಕ ತನ್ನ ಛಾಪನ್ನು ಮೂಡಿಸುತ್ತದೆ. ಇದೇ ರೀತಿ ಅವರ ಆದಾಯ ವರ್ಷ ದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತದೆ.
ಇದರ ನಡುವೆ ಸಾವಿರದ ಒಂಬೈನೂರಾ ಅರವತ್ತೈದರಲ್ಲಿ ಧೀರು ಬಾಯ್ ಮತ್ತು ಚಂಪಕ್ ಲಾಲ್ ಅವರು ಪಾರ್ಟನರ್ ಶಿಫ ಅನ್ನು ಮುರಿದುಕೊಳ್ಳುತ್ತಾರೆ ಯಾಕೆಂದರೆ ಇವರಿಬ್ಬರ ಕೆಲಸ ಬಹಳಷ್ಟು ವಿಶಿಷ್ಟ ವಾಗಿರುತ್ತದೆ ಧಿರು.ಬಾಯ್ಅಂಬಾನಿಯವರು ಸದಾಕಾಲ ತೊಂದರೆಗಳನ್ನು ತೆಗೆದುಕೊಂಡು ಕೆಲಸ ಮಾಡುವುದಕ್ಕೆ ನೋಡುತ್ತಾರೆ ಯಾಕೆಂದರೆ ನಾವು ತೊಂದರೆಗಳನ್ನು ತೆಗೆದುಕೊಂಡು ಕೆಲಸ ಮಾಡಿದರೆ ಹೆಚ್ಚು ಲಾಭವನ್ನು ಪಡೆಯಲು ಸಾಧ್ಯ ಎಂದು ಧಿರಃ ಬಾಯ್ ಅಂಬಾನಿ ಅವರಿಗೆ ಗೊತ್ತಿರುತ್ತದೆ. ಆದರೆ ಇದನ್ನು ಒಪ್ಪಿಕೊಳ್ಳದ ಚಂಪಾಕ್ ಲಾಲ್ ಅವರು ತಮ್ಮ ಪಾರ್ಟನರ್ ಶಿಪ್ ಕಡಿದುಕೊಳ್ಳುತ್ತಿರೆ. ಇದಾದ ನಂತರ ಧೀರೂ ಬಾಯ್ ಅಂಬಾನಿ ಅವರು ತಮ್ಮ ಕೆಲಸವನ್ನು ಒಬ್ಬರೇ ಮಾಡುತ್ತಾ ಇನ್ನೂ ಹಲವಾರು ಕಡೆಗೆ ವಿಸ್ತರಿಸುತ್ತಾರೆ.
ಕೇವಲ ಬಟ್ಟೆಯಲ್ಲಿ ಅಷ್ಟೇ ಅಲ್ಲದೆ ಟೆಲಿಕಾಂ ಎನರ್ಜಿ ಎಲೆಕ್ಟ್ರಿಸಿಟಿ ಪೆಟ್ರೋಲಿಯಂ ಇನ್ನು ಸಹ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹಾಗೆ ಶುರುವಾದ ಇವರ ಕಂಪನಿ ಇಗ ಲಕ್ಷಾಂತರ ಜನಕ್ಕೆ ಕೆಲಸವನ್ನು ನೀಡುತ್ತಿದೆ. ಈಗಲೂ ಸಹ ಧೀರು ಭಾಯ್ ಅವರ ರಿಲಾಯನ್ಸ್ ಇಂಡಿಯಾದ ಟಾಪ್ ಕಂಪನಿ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಧೀರು ಬಾಯ್ ಅಂಬಾನಿ ಅವರು ಎರಡುಸಾವಿರದ ಎರಡು ಜುಲೈ ಆರರಂದು ನಿಧನರಾಗುತ್ತಾರೆ.
ಆದರೆ ಅವರು ಹೇಳುವುದು ಏನು ಎಂದರೆ ಯಾವ ಒಬ್ಬ ವ್ಯಕ್ತಿ ಕನಸನ್ನು ಕಾಣುತ್ತಾನೊ ಆ ಒಬ್ಬ ವ್ಯಕ್ತಿಯು ಕನಸನ್ನು ನನಸು ಮಾಡುತ್ತಾನೆ ಮತ್ತು ಜಗತ್ತಿಗೆ ತೋರಿಸುತ್ತಾನೆ ಅಂತ ನಂಬಿಕೆಯನ್ನು ಇಟ್ಟಿದ್ದರು.ಇದನ್ನು ಪ್ರತಿಯೊಬ್ಬ ಜನರು ಅನುಸರಿಸ ಬೇಕು ಅದೇ ರೀತಿ ಕಷ್ಟ ಪಟ್ಟು ಮುಂದೆ ಬರಬೇಕು ಯಾವುದೇ ರೀತಿ ಓದು ಪದವಿಯನ್ನು ಪಡೆಯದೆ ಹಲವಾರು ಲಕ್ಷಾಂತರ ಜನರಿಗೆ ಕೆಲಸವನ್ನು ನೀಡಿದ ಧೀರು ಬಾಯ್ ಅಂಬಾನಿ ಒಬ್ಬ ಶ್ರೇಷ್ಠ ವ್ಯಕ್ತಿ