ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಡಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ವಾಹನ ಚಾಲಕರು ಶೀಘ್ರ ಲಿಪಿಕಾರರು ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ನಾವಿಂದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಯಾವಾಗ ಕೊನೆಯ ದಿನಾಂಕ ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಕರ್ನಾಟಕ ಮಾನವ ಹಕ್ಕುಗಳ ಆಯೋಗದಿಂದ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಹಾಗಾದರೆ ಯಾವ ಯಾವ ಹುದ್ದೆಗಳು ಕಾಲಿ ಇವೆ ಎಂಬುದನ್ನು ನೋಡುವುದಾದರೆ, ಮಂಜೂರಾದ ಅಪರ ನಿಬಂಧಕರು ಒಂದು ಹುದ್ದೆ, ಸಹಾಯಕ ನಿಬಂಧಕರು ಒಂದು ಹುದ್ದೆ, ಕೋರ್ಟ್ ಅಧಿಕಾರಿ ಒಂದು ಹುದ್ದೆ, ತೀರ್ಪು ಬರಹಗಾರರು ಒಂದು ಹುದ್ದೆ, ಕಾನೂನು ಸಹಾಯಕಾರಿ ಅಥವಾ ಸಂಶೋಧನಾ ಸಹಾಯಕರು ಎರಡು ಹುದ್ದೆ, ಶೀಘ್ರಲಿಪಿಗಾರರು ಎರಡು ಹುದ್ದೆ, ಸಹಾಯಕರು ಒಂದು ಹುದ್ದೆ ಮತ್ತು ವಾಹನ ಚಾಲಕರು ಒಂದು ಹುದ್ದೆ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಆರು ತಿಂಗಳ ಅವಧಿಗೆ ಹುದ್ದೆ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಆಯೋಗದ ವೆಬ್ ಸೈಟ್ ನಲ್ಲಿ ಅಧಿಸೂಚನೆ ಹಾಗೂ ಅರ್ಜಿ ವಿವರಗಳನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಾಲ್ಕು ಸೆಪ್ಟೆಂಬರ್ ಎರಡುಸಾವಿರದಇಪ್ಪತ್ತೊಂದು. ಅಷ್ಟರಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು.
ಇದರ ನೋಟಿಫಿಕೇಶನ್ ಅಲ್ಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಳ ಮತ್ತು ವಿದ್ಯಾರ್ಹತೆ ಬಗ್ಗೆ ಮಾಹಿತಿ ನೀಡಿದ್ದಾರೆ ಅವು ಹಿಗಿವೆ ಮಂಜೂರಾದ ಅಪರ ನಿಬಂಧಕರ ಹುದ್ದೆ ಇವರಿಗೆ ಐವತ್ತೊಂದು ಸಾವಿರ ಸಂಬಳವಿರುತ್ತದೆ ಮತ್ತು ಇವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲಾ ಪದವಿಯನ್ನು ಪಡೆದಿರಬೇಕು. ಸಹಾಯಕ ನಿಬಂಧಕರು ಈ ಹುದ್ದೆಗೆ ಪ್ರತಿ ತಿಂಗಳು ಐವತ್ತೆರಡು ಸಾವಿರ ಸಂಬಳ ಇರುತ್ತದೆ ಇವರು ಕೂಡ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲಾ ಪದವಿಯನ್ನು ಪಡೆದಿರಬೇಕು
ಕೋರ್ಟ್ ಅಧಿಕಾರಿ ಇವರಿಗೆ ನಲವತ್ಮೂರುಸಾವಿರ ಸಂಬಳವೀರುತ್ತದೆ ಇವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲಾ ಪದವಿಯನ್ನು ಪಡೆದಿರಬೇಕು. ತೀರ್ಪು ಬರಹಗಾರರು ಇವರಿಗೆ ಮೂವತ್ತೇಳು ಸಾವಿರದ ಒಂಬೈನೂರು ರುಪಾಯಿಪ್ರತಿ ತಿಂಗಳು ಸಂಬಳವಿರುತ್ತದೆ ಇವರು ಕೂಡ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲಾ ಪದವಿಯನ್ನು ಪಡೆದಿರಬೇಕು ಕಾನೂನು ಸಹಾಯಕರು ಅಥವಾ ಸಂಶೋಧನಾ ಸಹಾಯಕರು ಇವರಿಗೆ ಮೂವತ್ಮೂರು ಸಾವಿರದ ನಾಲ್ಕು ನೂರಾ ಐವತ್ತು ರುಪಾಯಿ ಸಂಬಳವಿರುತ್ತದೆ
ಇವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲಾ ಪದವಿಯನ್ನು ಪಡೆದಿರಬೇಕು ಶೀಘ್ರಲಿಪಿಗಾರರು ಇವರಿಗೆ ಇಪ್ಪತ್ತೇಳು ಸಾವಿರದ ಆರುನೂರು ರೂಪಾಯಿ ಸಂಬಳವಿರುತ್ತದೆ. ಇವರು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು ಮತ್ತು ಇವರು ಟೈಪ್ ರೈಟಿಂಗ್ ಶಾರ್ಟ್ ಹ್ಯಾಂಡ್ ರೈಟಿಂಗ್ ಪರೀಕ್ಷೆಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಪಾಸಾದವರಾಗಿರಬೇಕು.
ಸಹಾಯಕರು ಇವರಿಗೆ ಮೂವತ್ತು ಸಾವಿರದ ಮೂನ್ನುರೈವತ್ತು ರುಪಾಯಿ ಸಂಬಳವಿರುತ್ತದೆ ಇವರು ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿಯನ್ನು ಪಡೆದಿರಬೇಕು. ವಾಹನ ಚಾಲಕರು ಇವರಿಗೆ ಇಪ್ಪತ್ತೊಂದು ಸಾವಿರದ ನಾಲ್ಕುನೂರು ರೂಪಾಯಿ ಸಂಬಳವೀರುತ್ತದೆ ಇವರು ಹತ್ತನೇ ತರಗತಿ ಪಾಸಾಗಿರಬೇಕು ಮತ್ತು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಈ ಹುದ್ದೆಯಲ್ಲಿ ಆಸಕ್ತಿ ಇರುವವರು ತಮ್ಮ ಅರ್ಜಿಯನ್ನು ಪೋಸ್ಟ್ ಅಥವಾ ಇ ಮೇಲ್ ಮುಖಾಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಲಾ ಪದವಿಯನ್ನು ಪಡೆದಿರುವವರು ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ.