ಹಿಂದೂ ಪುರಾಣದಲ್ಲಿ, ಸಂಜೀವಿನಿಯು ಗಂಭೀರ ನರಮಂಡಲ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯಿರುವ ಒಂದು ಮಾಯಾಶಕ್ತಿಯುಳ್ಳ ಮೂಲಿಕೆ. ಈ ಮೂಲಿಕೆಯಿಂದ ತಯಾರಿಸಿದ ಔಷಧಿಗಳು ಮರಣವು ಬಹುತೇಕ ನಿಶ್ಚಿತವಾದ ಪರಿಸ್ಥಿತಿಗಳಿಂದ ಪುನಶ್ಚೇತನಗೊಳಿಸಬಲ್ಲವು ಎಂದು ನಂಬಲಾಗಿತ್ತು. ಈ ಮೂಲಿಕೆಯನ್ನು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಆ ಉಲ್ಲೇಖನಗಳ ಹಿನ್ನೆಲೆಯಲ್ಲಿ ಈ ಲೇಖನದಲ್ಲಿ ತಿಳಿಯೋಣ.

ಲಂಕೆಯಲ್ಲಿ ರಾವಣನ ಮಗ ಮೇಘನಾಥನ ದಾಳಿಗೆ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ ಆಗ ವಿಭಿಷಿಣನ ಸಲಹೆಯಂತೆ ಲಂಕೆಯ ವೈದ್ಯ ಸುಷೆಣನನ್ನು ಕರೆಯಲಾಗುತ್ತದೆ ಸುಷೇನಾಗೆ ಲಕ್ಷ್ಮಣ ಕಂಡ ಕೂಡಲೇ ಜೀವ ಉಳಿಯಬೇಕಾದರೆ ನಾಲ್ಕು ಮೂಲಿಕೆಗಳು ಅನಿವಾರ್ಯ ಎಂದು ಗೊತ್ತಾಗುತ್ತದೆ ಮೃತ ಸಂಜೀವಿನಿ ವಿಶಾಲ ಯಾಕರಣಿ,ಸುವರ್ಣ ಕರ್ಣಿ ಮತ್ತು ಸಂಭಾನಿ ಗಿಡ ಮೂಲಿಕೆಗಳನ್ನು ತರಬೇಕು ಆದರೆ ಅದು ಹಿಮಾಲಯದ ದ್ರೋಣಗಿರಿ ಪರ್ವತದಲ್ಲಿ ಮಾತ್ರ ಲಭ್ಯ ಎಂದು ಹೇಳುತ್ತಾರೆ. 

ಹಿಮಾಲಯದಲ್ಲಿನ ದ್ರೋಣಗಿರಿ ಪರ್ವತದಿಂದ ಈ ಮೂಲಿಕೆಯನ್ನು ತರಲು ಹನುಮಂತನಿಗೆ ಹೇಳಲಾಗುತ್ತದೆ. ಆಗ ಹನುಮಂತ ಗಿಡ ಮೂಲಿಕೆ ತರಲು ಹಿಮಾಲಯಕ್ಕೆ ಹಾರುತ್ತಾರೆ ಆದರೆ ಅಲ್ಲಿ ಹೋಗಿ ನೋಡಿದಾಗ ತುಂಬಾ ಗಿಡ ಮೂಲಿಕೆಗಳು ಇದ್ದವು ಲಕ್ಷ್ಮಣ ಚಿಕಿತ್ಸೆಗೆ ಬೇಕಾದ ಗಿಡ ಮೂಲಿಕೆಗಳು ಹೊಳಿಯುತ್ತ ಇರುತ್ತದೆ ಎಂದು ಹನುಮಂತನಿಗೆ ಸುಷೇನ ಹೇಳಿದರು.

ಆದರೆ ಅಲ್ಲಿ ಹೋಗಿ ನೋಡಿದರೆ ಬೆಟ್ಟದಲ್ಲಿದ್ದ ಎಲ್ಲಾ ಗಿಡ ಮೂಲಿಕೆಗಳು ಹೊಳೆಯುತ್ತ ಇದ್ದವು ಹೀಗಾಗಿ ಹನುಮಂತ ಇಡಿ ಪರ್ವತವನ್ನೇ ಹೊತ್ತು ಲಂಕೆಗೆ ಹಾರಿದರು ಲಕ್ಷ್ಮಣನಿಗೆ ಚಿಕಿತ್ಸೆ ನೀಡಿದ ನಂತರ ಈ ಪರ್ವತವನ್ನು ಶ್ರೀ ಲಂಕದಲ್ಲಿ ಇಡಲಾಯಿತು ಅಲ್ಲದೆ ಹನುಮ ಪರ್ವತದೊಂದಿಗೆ ಲಂಕಾಗೆ ಬಂದಾಗ ಹಲವು ಭಾಗಗಳಲ್ಲಿ ಈ ಪರ್ವತದಲ್ಲಿ ತುಂಡುಗಳು ಬಿದ್ದಿದ್ದವು ಅವುಗಳು ಎಲ್ಲವೂ ಇಂದಿಗೂ ರಾಮಾಯಣಕ್ಕೆ ಸಾಕ್ಷಿ ಆಗಿ ಶ್ರೀ ಲಂಕಾದಲ್ಲಿ ಇದೆ.

ಹನುಮಂತ ಹಿಮಾಲಯ ಪರ್ವತದಿಂದ ಹೊತ್ತು ತಂದ ಸಂಜೀವಿನಿ ಪರ್ವತವನ್ನು ಶ್ರೀ ಲಂಕದಲ್ಲೆ ಇಡಲಾಯಿತು ಅದನ್ನೇ ಈಗ ಶ್ರೀ ಪಾದದಲ್ಲಿ ಇರುವ ರೆಹಾಮಾಲಶಾ ಕಾಂಡ ಪರ್ವತ ಎಂದು ಕರೆಯಲಾಗುತ್ತದೆ . ಈಗ ಈ ಮೂಲಿಕೆಗಳ ಸಂಶೋಧನೆಯನ್ನು ವಿಜ್ಞಾನಿಗಳು ಆ ಪರ್ವತಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಹಾಗೂ ಈ ಪರ್ವತದಲ್ಲಿ ಕಂಡುಬರುವ ಮೂಲಿಕೆಗಳು ಬೇರೆ ಯಾವುದೇ ಸ್ಥಳದಲ್ಲಿ ಕಾಣಸಿಗುವುದಿಲ್ಲ.

ಆದರೆ ಈ ಮೂಲಿಕೆಗಳು ಹಿಮಾಲಯದಲ್ಲಿ ಕಾಣ ಸಿಗುತ್ತದೆ ಎಂದು ನಂಬಲಾಗುತ್ತದೆ. ಏಕೆಂದರೆ ಹನುಮಂತ ಸಂಜೀವಿನಿ ಪರ್ವತವನ್ನು ತೆಗೆದುಕೊಂಡು ಬರಬೇಕಾದರೆ ಅದರ ಸಣ್ಣ ತುಣುಕುಗಳು ಅಲ್ಲಲ್ಲಿ ಬಿದ್ದಿರುತ್ತವೆ ಸಣ್ಣ ಸಣ್ಣ ಮೂಲಿಕೆಗಳು ಅಲ್ಲಲ್ಲಿ ಹುಟ್ಟಿಕೊಂಡಿರುತ್ತದೆ ಹೀಗೆ ಹಿಮಾಲಯದಲ್ಲಿ ಕೂಡ ಹುಟ್ಟಿದೆ ಎಂಬ ಪ್ರತೀತಿ ಇದೆ.

ಹನುಮಂತನ ಈ ಕೆಲಸದಿಂದ ಲೋಕೋ ದಾರಣೆ ಆಗುತ್ತಿರುವುದು ಸತ್ಯ ಹಾಗೂ ಈ ರೀತಿಯ ಗಿಡಮೂಲಿಕೆಗಳ ಸಂಶೋಧನೆ ಮಾಡಲು ಉತ್ತರಕಾಂಡ್ ೧೫೦ ಕೋಟಿ ವೆಚ್ಚವನ್ನು ಬರಿಸಲು ಸಿದ್ಧವಾಗಿದೆ ಏಕೆಂದರೆ ಸಂಜೀವಿನಿಯಂತಹ ಇನ್ನೂ ಅನೇಕ ಗಿಡಮೂಲಿಕೆಗಳನ್ನು ಹೊರತೆಗೆಯುವ ಉದ್ದೇಶದಿಂದ. ಇದೇ ಕಾರಣಕ್ಕೆ ಭಾರತ ಆಯುರ್ವೇದದಲ್ಲಿ ವಿಶ್ವದಾದ್ಯಂತ ಮೊದಲನೇ ಸ್ಥಾನದಲ್ಲಿದೆ ಉದಾಹರಣೆಗೆ ಪತಂಜಲಿ ಇದರ ಮುಖ್ಯ ಸ್ಥಾನ ಉತ್ತರಾಖಾಂಡನಲ್ಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!