ಪ್ರಕೃತಿ ಎಷ್ಟೊಂದು ವಿಸ್ಮಯಕಾರಿಯಾಗಿದೆ ಎಂದರೆ ಒಂದರಿಕಿಂತ ಇನ್ನೊಂದು ಅದ್ಭುತ ವಾಗಿದೆ ಪ್ರಕೃತಿಯಲ್ಲಿ ಸಿಗುವ ಹೂ ಹಣ್ಣು ಸಹ ವಿಶೇಷ ಔಷಧಿಯ ಗುಣವನ್ನು ಹೊಂದಿದೆ ಹಾಗೆ ಒಂದ್ಕೊಂದು ವಿಭಿನ್ನ ರುಚಿಯನ್ನು ಹೊಂದಿರುವ ಜೊತೆಗೆ ವಿಶಿಷ್ಟವಾದ ಬಣ್ಣವನ್ನು ಹೊಂದಿರುತ್ತದೆ ಆದರೆ ಇಂದಿನ ದಿನಗಳಲ್ಲಿ ಎಲ್ಲರೂ ಆರೋಗ್ಯಕ್ಕೆ ಸೂಕ್ತವಾದ ಆಹಾರವನ್ನು ತಿನ್ನುವ ಬದಲು ಪಾಸ್ಟ್ ಫುಡ್ ಹಾಗೂಖರೀದ ತಿಂಡಿ ತಿನ್ನುವ ಅಭ್ಯಾಸ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಅಸಾಧ್ಯ ವಾಗಿದೆ
ಆರೋಗ್ಯದ ದೃಷ್ಟಿಯಿಂದ ಹಣ್ಣುಗಳು ದೇಹಕ್ಕೆ ಉತಮ ಪೋಷಕಾಂಶವನ್ನು ದೊರಕಿಸಿಕೊಡುವುದು ಹಾಗೆ ಪ್ರಕೃತಿಯು ನೀಡಿರುವ ಅನೇಕ ಗಿಫ್ಟ್ ಗಳಲ್ಲಿ ಹಣ್ಣುಗಳು ಒಂದು ಹಾಗೆಯೇ ಈ ಹಣ್ಣುಗಳು ಪ್ರಕೃತಿಯು ನೀಡಿರುವ ವಿಸ್ಮಯಗಳಲ್ಲಿ ಇದೊಂದುಔಷಧಿಯಗುಣ ಹೊಂದಿದೆ ಹಾಗೆಯೇ ನಾವು ಈ ಲೇಖನದ ಮೂಲಕ ದಾಳಿಂಬೆಯ ಉಪಯೋಗವನ್ನು ತಿಳಿಯೋಣ.
ದಾಳಿಂಬೆ ಒಂದು ಹಣ್ಣಿನ ರೂಪದಲ್ಲಿನ ಔಷಧಿಯ ಖಜಾನೆಯಾಗಿದೆ ಹಾಗೆ ಇದರಲ್ಲಿ ಹಲವಾರು ರೀತಿಯ ವಿಟಮಿನಗಳನ್ನು ಹೊಂದಿದೆ ದಾಳಿಂಬೆ ಹಣ್ಣನ್ನು ಸೇವನೆ ಮಾಡುವುದರಿಂದ ಪ್ರಾಯೋಜಕಾರಿಯಾಗಿದೆ ಮುತ್ತುಗಳಂತಹ ಬೀಜಗಳನ್ನು ಹೊಂದಿರುವಂತಹ ದಾಳಿಂಬೆಯು ಸೃಷ್ಟಿಯ ಅದ್ಭುತವೆಂದೇ ಹೇಳಬಹುದು.
ಇದು ಹಣ್ಣಿನ ರೂಪದಲ್ಲಿ ಇರುವಂತಹ ದೊಡ್ಡ ಔಷಧೀಯ ಖಜಾನೆ ಯಾಕೆಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳಿದ್ದು ದೇಹದ ಆರೋಗ್ಯಕ್ಕೆ ಇದು ತುಂಬಾ ಒಳ್ಳೆಯದು ಮತ್ತು ಹಲವಾರು ರೀತಿಯ ರೋಗಗಳನ್ನು ಇದು ತಡೆಯುತ್ತದೆ ಬೇರೆಲ್ಲಾ ಹಣ್ಣುಗಳಂತೆ ದಾಳಿಂಬೆ ಹಣ್ಣು ಹೆಚ್ಚಾಗಿ ವರ್ಷಪೂರ್ತಿ ಸಿಗುವ ಕಾರಣ ಅದನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಳ್ಳಬಹುದು ದಾಳಿಂಬೆ ಹಣ್ಣು ಹಾಗೂ ಜ್ಯೂಸ್ ನ್ನು ಬಳಸುವುದರಿಂದ ದೇಹವು ಹಲವಾರು ರೋಗಗಳನ್ನು ತಡೆಯುವುದು ಮಾತ್ರವಲ್ಲದೆ ಇರುವಂತಹ ಕೆಲವೊಂದು ಸಮಸ್ಯೆಗಳನ್ನು ನಿವಾರಿಸುವುದು.
ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಬಳಸುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆಅಷ್ಟೇ ಅಲ್ಲದೆ ಇಂದಿನ ದಿನಮಾನದಲ್ಲಿ ಬಳಸುವ ಸೋಪ್ ಶಾಂಪೂ ಇವುಗಳು ಮೊದಲು ತ್ವಚೆ ಕಾಣಿಸಿಕೊಂಡರು ನಂತರದಲ್ಲಿ ಅದರ ಪರಿಣಾಮ ಬೀರುತ್ತದೆ ಸುಮಾರು ನೋಡಲು ಬೇಗನೆ ವಯಸ್ಸಾದಂತೆ ಕಾಣುತ್ತದೆ ಇದನ್ನು ತಪ್ಪಿಸಲು ದಾಳಿಂಬೆ ಹಣ್ಣನ್ನು ನಿಯಮಿತವಾಗಿ ತೀನ್ನುದರಿಂದ ದೇಹದಲ್ಲಿ ಡೆಶ್ಟ್ರೋಷ್ಟೊಮ್ ಎಂಬ ಹಾರ್ಮೋನು ಉತ್ಪತ್ತಿ ಮಾಡುತ್ತದೆ
ಇದರಿಂದ ಪುರುಷರಿಗೆ ಆಂತರಿಕ ಶಕ್ತಿಯನ್ನು ವೃದ್ಧಿಸುತ್ತದೆ ಅಷ್ಟೇ ಅಲ್ಲದೆ ಹೃದಯ ಸಂಬಂಧಿ ರಕ್ತದ ಒತ್ತಡ ಬಗೆಹರಿಸುವ ಸಾಮರ್ಥ್ಯ ದಾಳಿಂಬೆ ಗೆ ಇದೆ ಹಾಗೆ ನಮ್ಮ ದೇಹದಲ್ಲಿ ಸೇರಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಹೃದಯವನ್ನು ಆರೋಗ್ಯವಾಗಿ ಇಡುತ್ತದೆ ಹಾಗೂ ಕ್ಯಾನ್ಸರ್ ತಡೆಗಟ್ಟುವ ಶಕ್ತಿ ಇರುತ್ತದೆ ಸಂಧಿವಾತ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಹೃದಯದ ಸಮಸ್ಯೆ ಕಡಿಮೆ ಮಾಡುತ್ತದೆ ಮೂತ್ರ ಪಿಂಡವನ್ನು ಸ್ವಚ್ಚ ಗೊಳಿಸುತ್ತದೆ ಕೂದಲಿನ ಬೆಳವಣಿಗೆಗೆ ಸಹಕಾರಿ ದಾಳಿಂಬೆ ಗಿಡದ ಎಲೆಯಿಂದ ಕೆಮ್ಮು ಕಡಿಮೆ ಮಾಡುವ ಶಕ್ತಿಯಿದೆ
ಇಂದಿನ ದಿನಗಳಲ್ಲಿ ಅತಿಯಾದ ಒತ್ತಡದ ಜೀವನದಿಂದಾಗಿ ಪ್ರತಿಯೊಬ್ಬರಲ್ಲೂ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಂಡುಬರುತ್ತಲೇ ಇರುತ್ತದೆ ಆದರೆ ದಾಳಿಂಬೆ ಜ್ಯೂಸ್ ನ್ನು ಪ್ರತಿನಿತ್ಯವೂ ಕುಡಿದರೆ ಅದರಿಂದ ರಕ್ತದೊತ್ತಡ ಕಡಿಮೆ ಆಗುವುದು ಕೊಲೆಸ್ಟ್ರಾಲ್ ಸುಧಾರಿಸುವುದು ಮತ್ತು ರಕ್ತನಾಳಗಳಲ್ಲಿ ಇರುವಂತಹ ಪದರಗಳನ್ನು ಇದು ತೆಗೆದುಹಾಕುವುದು
ಇದೆಲ್ಲವೂ ಹೃದಯಕ್ಕೆ ತುಂಬಾ ಒಳ್ಳೆಯದು ದಾಳಿಂಬೆಯು ತುಂಬಾ ರುಚಿಕರವಾಗಿ ಇರುವ ಕಾರಣದಿಂದಾಗಿ ಇದನ್ನು ಹೃದಯದ ಆರೋಗ್ಯದ ಆಹಾರ ಕ್ರಮದಲ್ಲಿ ಕೂಡ ಸೇರಿಸಿಕೊಳ್ಳಬಹುದು ದಾಳಿಂಬೆಯು ಕೇವಲ ನಮ್ಮ ಒಳಗಿನ ಆರೋಗ್ಯ ಕಾಪಾಡುವುದು ಮಾತ್ರವಲ್ಲದೆ ಚರ್ಮಕ್ಕೂ ಇದು ನೆರವಾಗುವುದು ಚರ್ಮರೋಗ ತಜ್ಞರು ಹೇಳುವ ಪ್ರಕಾರ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ಇದು ತುಂಬಾ ಒಳ್ಳೆಯದು.ವಿಟಮಿನ್ ಸಿ ಕೂಡ ಇದರಲ್ಲಿ ಇರುವ ಕಾರಣದಿಂದಾಗಿ ಮೈಮೇಲೆ ಇದನ್ನು ಹಚ್ಚಿಕೊಂಡರೆ ಅದು ಚರ್ಮವನ್ನು ಕಾಂತಿಯುತವಾಗಿಸುವುದು ಮತ್ತು ಹೊಳಪು ನೀಡುವುತದೆ.
ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ಕೂದಲಿನ ಕಿರುಚೀಲಗಳನ್ನು ಬಲಪಡಿಸುವುದು ಮತ್ತು ರಕ್ತ ಸಂಚಾರವನ್ನು ಸುಧಾರಿಸುತ್ಠಡ್ ಇದರಿಂದ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುವುದು. ಕೂದಲು ಆರೋಗ್ಯವಾಗಿ ಇರಬೇಕಾದರೆ ನೀವು ದಾಳಿಂಬೆ ಜ್ಯೂಸ್ ನ್ನು ಬೆಳಗ್ಗಿನ ಉಪಾಹಾರದಲ್ಲಿ ಸೇವಿಸಿ.
ದೇಹದಲ್ಲಿ ಗಂಟು ನೋವಿನ ಸಮಸ್ಯೆಯು ಇಂದು ಹೆಚ್ಚಾಗಿ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ. ದಾಳಿಂಬೆ ಜ್ಯೂಸ್ ನಿಮ್ಮ ನೆರವಿಗೆ ಬರುವುದು. ಇದರಲ್ಲಿ ಉನ್ನತ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಗಂಟಿನ ಊತ, ನೋವು ಮತ್ತು ಮೆತ್ತಗಾಗುವುದನ್ನು ತಡೆಯುವುದು. ಕೆಲವೊಂದು ಅಧ್ಯಯನಗಳ ಪ್ರಕಾರ ದಾಳಿಂಬೆ ಸಾರವು ಸಂಧಿವಾತವನ್ನು ಹೆಚ್ಚಿಸುವಂತಹ ಕಿಣ್ವದ ಉತ್ಪತ್ತಿಯನ್ನು ತಡೆಯುತ್ತದೆ.