ಹೊಸದಾಗಿ ಉದ್ಯಮ ಪ್ರಾರಂಭಿಸಬೇಕು ಎಂದರೆ ಹೆಚ್ಚು ಬಂಡವಾಳ ಬೇಕಾಗುತ್ತದೆ ಎಂಬುದು ತುಂಬಾ ಜನರ ಅಭಿಪ್ರಾಯವಾಗಿದೆ. ಆದರೆ ತುಂಬಾ ಉದ್ಯಮಗಳನ್ನು ಕಡಿಮೆ ಬಂಡವಾಳ ಅಥವಾ ಬಂಡವಾಳ ಇಲ್ಲದೆ ಮಾಡಬಹುದಾಗಿದೆ. ಕೆಲವರಿಗೆ ಸ್ವಂತ ಉದ್ಯಮ ಪ್ರಾರಂಭಿಸಿ ಸ್ವತಂತ್ರ ಜೀವಿಯಾಗಿ ಒಬ್ಬ ಉದ್ಯಮಿಯಾಗಿ ಬೆಳೆಯಬೇಕು ಎಂಬ ಆಸೆ ಇರುತ್ತದೆ.
ನಾವಿಂದು ಒಂದು ಉದ್ಯಮದ ಬಗ್ಗೆ ತಿಳಿಸುತ್ತೇವೆ ಈ ಉದ್ಯಮದಲ್ಲಿ ಒಂದುಸಾರಿ ಜನರು ನಿಮ್ಮ ಗ್ರಹಕರಾದರೆ ಸಾಕು ಮುಂದೆ ಅವರು ನಿಮ್ಮನು ಬಿಟ್ಟು ಹೋಗುವುದಿಲ್ಲ ಪ್ರತಿದಿನ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ ಎಂಬತ್ತು ಸಾವಿರದಿಂದ ಒಂದು ಲಕ್ಷ ಇದ್ರೆ ಪ್ರತಿದಿನ ಎರಡೂವರೆ ಸಾವಿರ ಸಂಪಾದನೆ ಮಾಡಬಹುದು.
ಹಾಗಾದರೆ ಆ ಉದ್ಯಮ ಯಾವುದು ಎನ್ನುವುದಾದರೆ ಅದು ಮೊಟ್ಟೆ ಉದ್ಯಮ. ಇನ್ನು ಈ ಉದ್ಯಮಕ್ಕೆ ಬಂಡವಾಳ ಎಷ್ಟು ಬೇಕು ಜಾಗ ಎಷ್ಟಿರಬೇಕು ಲಾಭ ಎಷ್ಟು ಸಿಗುತ್ತದೆ ಮಾರ್ಕೆಟಿಂಗ್ ಹೇಗೆ ಮಾಡುವುದು ಮೊಟ್ಟೆ ಸಾಗಾಟ ಹೇಗೆ ಮಾಡುವುದು ಎಲ್ಲಿ ಮೊಟ್ಟೆ ಕಡಿಮೆ ಬೆಲೆಗೆ ಸಿಗುತ್ತದೆ ಈ ಮೊಟ್ಟೆ ಉದ್ಯಮ ಮಾಡುವುದಕ್ಕೆ ಲೈಸೆನ್ಸ್ ಬೇಕಾ ಬೇಡವಾ ಈ ಎಲ್ಲ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ
ಮೊದಲಿಗೆ ಈ ಮೊಟ್ಟೆ ಉದ್ಯಮವನ್ನು ಪ್ರಾರಂಭಿಸಲು ಯಾವುದೇ ರೀತಿಯ ಲೈಸೆನ್ಸ್ ನ ಅಗತ್ಯವಿಲ್ಲ. ಅತಿ ಕಡಿಮೆ ಜಾಗದಲ್ಲಿ ಅಂದರೆ ಹತ್ತು ಇಂಟು ಹತ್ತು ಜಾಗದಲ್ಲಿ ಈ ಉದ್ಯಮವನ್ನು ಆರಾಮವಾಗಿ ಮಾಡಬಹುದು ಇಷ್ಟೇ ಜಾಗದಲ್ಲಿ ತುಂಬಾ ಮೊಟ್ಟೆಯನ್ನಿಟ್ಟು ಕೊಳ್ಳಬಹುದು. ಹಾಗೆ ಅಂಗಡಿಯ ಒಳಗೆ ಒಂದು ಕ್ಯಾಶ್ ಕೌಂಟರ್ ಮತ್ತು ಗ್ರಾಹಕರಿಗೆ ಮೊಟ್ಟೆಯ ಬೆಲೆ ತಿಳಿಸುವುದಕ್ಕೆ ಅಂಗಡಿಯ ಮುಂದೆ ಒಂದು ಬೋರ್ಡ್ ಇದ್ದರೆ ಸಾಕು.
ಹಾಗೆ ಮೊಟ್ಟೆ ಟ್ರೆ ಗಳು ಯಾಕೆಂದರೆ ನೀವು ಮೊಟ್ಟೆಯನ್ನು ಆದಲು ಬದಲು ಮಾಡಿಕೊಳ್ಳಲು ಟ್ರೆ ಬೇಕಾಗುತ್ತದೆ. ಮತ್ತು ಮೊಟ್ಟೆಯನ್ನು ಸಾಗಾಟ ಮಾಡಲು ಒಂದು ಸಣ್ಣಗಾಡಿಯ ಅವಶ್ಯಕತೆ ಇರುತ್ತದೆ ನಂತರ ದೊಡ್ಡ ವ್ಯಾನ್ ತೆಗೆದುಕೊಳ್ಳುವ ಸಾಮರ್ಥ್ಯ ನಿಮಗೆ ಬಂದೆ ಬರುತ್ತದೆ ಏಕೆಂದರೆ ಅಷ್ಟು ದೊಡ್ಡ ಮಟ್ಟದಲ್ಲಿ ಈ ಒಂದು ಉದ್ಯೋಗವನ್ನು ನೀವು ಬೆಳೆಸಬಹುದು.
ಒಂದು ಬಾರಿ ನಿಮಗೆ ಗ್ರಾಹಕರು ಸಿಕ್ಕರೆ ಅವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ ಹೊರತು ಕಡಿಮೆ ಆಗುವುದಿಲ್ಲ. ಹಾಗಾದರೆ ಮೊಟ್ಟೆ ಎಲ್ಲಿ ಸಿಗುತ್ತದೆ ಎಂಬುದನ್ನು ನೋಡುವುದಾದರೆ ಅಂಗಡಿಗೆ ಮೊಟ್ಟೆಯನ್ನು ತಂದು ಹಾಕುವುದಕ್ಕೆ ತುಂಬಾ ಜನ ಪೂರೈಕೆದಾರರು ಇರುತ್ತಾರೆ ಅವರ ಬಳಿ ನೀವು ಖರೀದಿ ಮಾಡಬಹುದು ಆದರೆ ಅವರ ಬಳಿ ಹತ್ತು ಹದಿನೈದು ಪೈಸೆ ಹೆಚ್ಚಿರುತ್ತದೆ ಹಾಗಾಗಿ ನಿಮ್ಮ ಅಕ್ಕ ಪಕ್ಕದಲ್ಲಿರುವ ಕೋಳಿ ಫಾರಂನಲ್ಲಿ ಖರಿಧಿ ಮಾಡಿದರೆ ನಿಮಗೆ ಕಡಿಮೆ ದರದಲ್ಲಿ ಮೊಟ್ಟೆ ಸಿಗುತ್ತದೆ.ನೀವು ಹೊಲ್ ಸೆಲ್ ನಲ್ಲಿ ತೆಗೆದು ಕೊಂಡಾಗ ಪೈಸೆ ಪೈಸೆಯು ದೊಡ್ಡಮಟ್ಟದ ಲೆಕ್ಕದ್ದಾಗಿರುತ್ತದೆ ಇದನ್ನು ಮರೆಯಬೇಡಿ.
ಇನ್ನು ಮೊಟ್ಟೆಯನ್ನು ಎಲ್ಲಿ ಮಾರುವುದು ಎನ್ನುವುದಾದರೆ ಮೊದಲು ಒಂದು ಐದುಸಾವಿರ ಮೊಟ್ಟೆ ಟಾರ್ಗೆಟ್ ಇಟ್ಟುಕೊಳ್ಳಬೇಕು ಮೊಟ್ಟೆಯನ್ನು ಎಲ್ಲೆಲ್ಲಿ ಮಾರಾಟ ಮಾಡಬಹುದು ಎಂದರೆ ನಿಮ್ಮ ಅಂಗಡಿಯಲ್ಲಿ ಬೇಕರಿಯಲ್ಲಿ ಬೇರೆ ಬೇರೆ ಅಂಗಡಿಗಳಿಗೆ ಹೋಟೆಲ್ ಗಳಿಗೆ ರಸ್ತೆ ಪಕ್ಕದ ಎಗ್ಗರೈಸ್ ಗಾಡಿಗಳಿಗೆ ಯಾಕೆ ಈ ಎಗ್ಗರೈಸ್ ಗಾಡಿಗಳಿಗೆ ಹೆಚ್ಚು ಟಾರ್ಗೆಟ್ ಮಾಡಬೇಕೆಂದರೆ ಹೆಚ್ಚು ಮೊಟ್ಟೆಯನ್ನು ಮಾರಬಹುದು ಹೇಗೆಂದರೆ ಒಂದು ಗಾಡಿಯವರು ನೂರು ಮೊಟ್ಟೆ ತೆಗೆದುಕೊಂಡರು ಇಪ್ಪತ್ತೈದು ಗಾಡಿಗಳಿಗೆ ನಿವು ಪ್ರತಿದಿನ ಕೊಡುತ್ತಾ ಹೋದರೆ ಎರಡೂವರೆ ಸಾವಿರ ಮೊಟ್ಟೆಯನ್ನು ಪ್ರತಿದಿನ ನಿವು ಮಾರಬಹುದು.
ಮೊದಲಿಗೆ ಕಷ್ಟ ಅನಿಸಬಹುದು ಆದರೆ ಶ್ರಮವಹಿಸಿ ದುಡಿದರೆ ಫಲ ಸಿಕ್ಕೆಸಿಗುತ್ತದೆ. ನಿವು ಗ್ರಾಹಕರು ಸಿಗುತ್ತಾರೋ ಇಲ್ಲವೋ ಎಂದು ಯೋಚನೆ ಮಾಡಬಾರದು ಪ್ರತಿದಿನ ಹೊಸ ಹೊಸ ಅಂಗಡಿ ಹೋಟೆಲ್ ಎಗ್ಗರೈಸ್ ಅಂಗಡಿ ತೆರೆದುಕೊಳ್ಳುತ್ತವೆ ನಿವು ಐವತ್ತು ಜನ ಒಳ್ಳೆ ಗ್ರಾಹಕರನ್ನು ನೋಡಿಕೊಂಡರೆ ಸಾಕು ಮುಂದೆ ದೊಡ್ಡ ಮಟ್ಟಕ್ಕೆ ಬೆಳೆಯಬಹುದು. ಮೊದಲಿಗೆ ನೀವು ಕಡಿಮೆ ಮೊಟ್ಟೆಯನ್ನು ಹಾಕಿಸಿಕೊಳ್ಳಿ ಒಂದೆಸಲ ಐದುಸಾವಿರ ಮೊಟ್ಟೆಯನ್ನು ವ್ಯಾಪಾರ ಮಾಡಲು ಕಷ್ಟ ಅನಿಸಬಹುದು.
ಈ ಉದ್ಯಮವನ್ನು ಪ್ರಾರಂಭಿಸುವ ದರಿಂದ ಏನು ಲಾಭ ಎಂಬುದನ್ನು ನೋಡುವುದಾದರೆ ಒಂದು ಮೊಟ್ಟೆಗೆ ಐವತ್ತು ಪೈಸೆ ಸಿಕ್ಕೆ ಸಿಗುತ್ತದೆ ನೀವು ಫಾರ್ಮ್ ನಲ್ಲಿ ಮೊಟ್ಟೆ ಪಡೆದರೆ ಇನ್ನು ಹೆಚ್ಚಿನ ಲಾಭ ಸಿಗುತ್ತದೆ. ದಿನಕ್ಕೆ ಐದುಸಾವಿರ ಮೊಟ್ಟೆಯನ್ನು ಮಾರಿದರೆ ಎರಡೂವರೆ ಸಾವಿರ ರೂಪಾಯಿ ಲಾಭ ಸಿಕ್ಕೆ ಸಿಗುತ್ತದೆ. ತಿಂಗಳಿಗೆ ಇಪ್ಪತ್ತೈದು ಸಾವಿರ ಗಳಿಸಬಹುದು. ಮೊಟ್ಟೆಯನ್ನು ಪ್ರತಿದಿನ ಬಳಸುತ್ತಾರೆ ನೀವು ಮೊಟ್ಟೆಯನ್ನು ಕಾಲಿಮಾಡೆ ಮಾಡಬಹುದು.
ಇನ್ನು ಬಂಡವಾಳದ ಬಗ್ಗೆ ನೋಡುವುದಾದರೆ, ಮುಂಗಡ ನೀವು ಯಾವ ಜಾಗದಲ್ಲಿಅಂಗಡಿ ಹಾಕುತ್ತಿರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ ಆದರೂ ಮುಖ್ಯ ರಸ್ತೆಯಿಂದ ಒಳಗೆ ಮಾಡಿಕೊಂಡರೆ ಮುಂಗಡ ಮತ್ತು ಬಾಡಿಗೆ ಕಡಿಮೆಯಾಗುತ್ತದೆ. ಇನ್ನು ಮೊಟ್ಟೆ ಟ್ರೆ ಒಂದಕ್ಕೆ ಇಪ್ಪತ್ತು ರೂಪಾಯಿ ನೀವು ಐದುಸಾವಿರ ಮೊಟ್ಟೆಯನ್ನು ಮಾರುವ ಟಾರ್ಗೆಟ್ ಇರುವುದರಿಂದ ಮುನ್ನೂರು ಟ್ರೆ ಬೇಕಾಗುತ್ತದೆ ಅಂದರೆ ನಿಮಗೆ ಆರು ಸಾವಿರ ರೂಪಾಯಿ ಬೇಕಾಗುತ್ತದೆ.
ಇನ್ನುಮೊಟ್ಟೆಯ ಬೆಲೆ ಇವತ್ತಿನ ದಿನ ಮೊಟ್ಟೆಯ ಬೆಲೆ ಐದು ರೂಪಾಯಿ ಇದೆ ಇದು ಹೆಚ್ಚು ಕಡಿಮೆ ಆಗುತ್ತಿರುತ್ತದೆ ನೀವು ಐದುಸಾವಿರ ಮೊಟ್ಟೆ ಹಾಕಿಕೊಂಡರೆ ಇಪ್ಪತ್ತೈದು ಸಾವಿರರೂಪಾಯಿ ಬೇಕಾಗುತ್ತದೆ. ಹತ್ತುಸಾವಿರ ರೂಪಾಯಿ ಒಂದು ಗಾಡಿ ನಂತರ ಎರಡುಸಾವಿರರೂಪಾಯಿಯ ಒಂದು ಕ್ಯಾಶ್ ಟೇಬಲ್ ಹೀಗೆ ಒಟ್ಟು ನಲವತ್ತಮೂರುಸಾವಿರ ರೂಪಾಯಿ ಆಗುತ್ತದೆ. ಪ್ರಾರಂಭದಲ್ಲಿ ಎಂಬತ್ತು ಸಾವಿರ ದಿಂದ ಒಂದು ಲಕ್ಷ ಎಂದು ತಿಳಿಸಲಾಗಿತ್ತು ಇನ್ನು ನೀವು ಮುಂಗಡ ಎಷ್ಟು ಕೊಡುತ್ತೀರಿ ಎಂಬುದರ ಮೇಲೆ ನಿಮಗೆ ಬಂಡವಾಳ ಲೆಕ್ಕ ಸಿಗುತ್ತದೆ.
ಈ ರೀತಿಯಾಗಿ ಕಡಿಮೆ ಬಂಡವಾಳದಲ್ಲಿ ಉದ್ಯಮವನ್ನು ಪ್ರಾರಂಭಿಸಿ ಹೆಚ್ಚಿನ ಲಾಭವನ್ನು ಪಡೆಯಬಹುದು ಮುಂದೆ ಉದ್ಯಮವನ್ನು ವಿಸ್ತರಿಸಬಹುದು.ನಿಮ್ಮಲ್ಲಿ ಸಾಧಿಸಬೇಕೆಂಬ ಛಲ ಇದ್ದರೆ ಯಾವುದು ಅಸಾಧ್ಯವಲ್ಲ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.