ಭಾರತದಲ್ಲಿ ಇರುವ ಕೇರಳ ರಾಜ್ಯದ ರಾಜಧಾನಿಯಾಗಿರುವ ತಿರುವನಂತಪುರಮ್‌ ನಲ್ಲಿರುವ ಪೂರ್ವದ ಕೋಟೆಯ ಒಳಗೆ ಇರುವ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನವು ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಸ್ಥಾನವು ಕೇರಳ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪದ ಸಮ್ಮಿಲನವಾಗಿದೆ. ಇದನ್ನು ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ಎಂದು ನಂಬಲಾಗಿದೆ.

ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಇತಿಹಾಸವು 8ನೇ ಶತಮಾನದ ಕಾಲಕ್ಕೆ ಸೇರಿದೆ. ಇದು ಭಾರತದಲ್ಲಿರುವ ವಿಷ್ಣುವಿಗೆ ಸಮರ್ಪಿಸಲಾದ ದೇವಾಲಯಗಳಲ್ಲಿ ಅಥವಾ ದಿವ್ಯ ದೇಸಮ್‌ಗಳಲ್ಲಿ ಒಂದಾಗಿದೆ. ದಿವ್ಯ ದೇಸಮ್‌ಗಳೆಂದರೆ ವಿಷ್ಣು ದೇವರ ಪವಿತ್ರ ನೆಲೆಬೀಡುಗಳಾಗಿದ್ದು ಅವುಗಳನ್ನು ತಮಿಳು ಸಂತರ ಕೆಲಸಗಳಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನದ ಪ್ರಮುಖ ದೇವತೆ ಸರ್ಪದ ಮೇಲೆ ಒರಗಿದ ಮಲಗಿರುವ ಅನಂತ, ವಿಷ್ಣು ದೇವರಾಗಿದ್ದಾರೆ.

ತಿರುವಾಂಕುರ್ ರಾಜರಲ್ಲಿ ಸುಪ್ರಸಿದ್ಧ ರಾಜರಲ್ಲಿ ಒಬ್ಬನಾಗಿದ್ದ ಮಾರ್ತಾಂಡ ವರ್ಮ, ಈ ದೇವಸ್ಥಾನದ ಪ್ರಮುಖ ನವೀಕರಣ ಕೆಲಸವನ್ನು ಮಾಡಿಸಿದನು ಮತ್ತು ಇದರ ಪರಿಣಾಮವೇ ಇಂದಿನ ಶ್ರೀ ಪದ್ಮನಾಭಸ್ವಾಮಿ ದೇವಾಲಯದ ವಾಸ್ತುಶಿಲ್ಪವಾಗಿದೆ. ದೇವಸ್ಥಾನದಲ್ಲಿ ಮುರಾಜಪಮ್ ಮತ್ತು ಭದ್ರ ದೀಪಮ್ ಎಂಬ ಹಬ್ಬಗಳನ್ನು ಮಾರ್ತಾಂಡ ವರ್ಮನೇ ಪರಿಚಯಿಸಿದನು. ಮುರಾಜಪಮ್ ಇದರ ಅರ್ಥವೇನೆಂದರೆ ನಿರಂತರವಾಗಿ ಪ್ರಾರ್ಥನೆಗಳನ್ನು ಸಲ್ಲಿಸುವುದಾಗಿದೆ, ಇದನ್ನು ಪ್ರತಿ ಆರು ವರ್ಷಗಳಿಗೊಮ್ಮೆ ದೇವಸ್ಥಾನದಲ್ಲಿ ಇಂದಿಗೂ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಒಂಭತ್ತನೇ ಶತಮಾನದ ಕವಿಯೊಬ್ಬ ತನ್ನ ಕವನಗಳಲ್ಲಿ ದೇವಾಲಯಗಳನ್ನು ಹಾಗೂ ಅಲ್ಲಿನ ಹತ್ತಿರದ ಸ್ಥಳಗಳನ್ನು ಅಪ್ಪಟ ಬಂಗಾರದಿಂದ ಮಾಡಿರುವ ಕಾರಣ ಈ ದೇವಾಲಯವನ್ನು ಬಂಗಾರದ ದೇವಾಲಯ ಎಂದೂ ಕರೆಯುತ್ತಾರೆ ಎಂದು ಉಲ್ಲೇಖಿಸಿದ್ದಾನೆ. ತಿರುವಾಂಕೂರು ರಾಜರು ಪೂಜಿಸುತ್ತಿದ್ದ ಈ ದೇವಾಲಯ ೨೦೮ ದಿವ್ಯ ಕ್ಷೇತ್ರಗಳಲ್ಲಿ ಒಂದು. ಆದರೆ ಈ ದೇವಾಲಯದ ಕೆಳಗಿನ ಆರು ಕೊಠಡಿಗಳು ಪ್ರಪಂಚವನ್ನೇ ತನ್ನೆಡೆ ಸೆಳೆಯುವಂತೆ ಮಾಡುತ್ತದೆ.

೨೦೦೬ ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಆ ಆರೂ ಕೊಠಡಿಗಳನ್ನು ತೆರೆಯಲಾಗುತ್ತದೆ. ನಂತರ ಈ ಆರೂ ಕೊಠಡಿಗಳಿಗೆ ಎ ಬಿ ಸಿ ಡಿ ಈ ಎಫ್ ಎಂದು ಹೆಸರಿಡುತ್ತಾರೆ. ಇವುಗಳಲ್ಲಿ ಬಿ ಕೊಠಡಿಯನ್ನು ಮಾತ್ರ ತೆರೆಯದೆ ಇನ್ನುಳಿದ ಐದು ಕೊಠಡಿಗಳನ್ನು ತೆರೆದಾಗ ಅಲ್ಲಿ ದೊರೆತ ಚಿನ್ನದ ಆಭರಣಗಳು ಜಗತ್ತನ್ನೇ ಬೆರಗಾಗುವ ಹಾಗೆ ಮಾಡಿತ್ತು.

ಸಾವಿರಾರು ವಜ್ರ ವೈಢೂರ್ಯ, ಚಿನ್ನದ ನಾಣ್ಯಗಳು, ವಜ್ರದ ಕಿರೀಟಗಳು, ಮುತ್ತು ರತ್ನಗಳು , ಮೂರುವರೆ ಅಡಿ ಎತ್ತರದ ಮಹಾ ವಿಷ್ಣುವಿನ ವಿಗ್ರಹ , ರೋಮನ್ ನೆಪೋಲಿಯನ್ ಕಾಲದ ನಾಣ್ಯಗಳೂ ಸಹ ದೊರೆತಿದ್ದವು. ಇಲ್ಲಿನ ಒಂದು ನಾಣ್ಯ ಎರಡು ಕೋಟಿಗೂ ಅಧಿಕ ಬೆಲೆ ಬಾಳುವಂತದು. ಇನ್ನೂ ಊಹೆಗೂ ನಿಲುಕದ ಅದೆಷ್ಟೋ ಬಂಗಾರಗಳು ಸಿಕ್ಕಿದ್ದು ಇವುಗಳ ಒಟ್ಟೂ ಬೆಲೆ ಒಂದು ಟ್ರಿಲಿಯನ್ ಡಾಲರ್ ಎಂದು ಹೇಳಲಾಗುತ್ತದೆ.

ನಂತರ ಇದು ನಮ್ಮ ದೇಶದಲ್ಲೇ ಅತೀ ಹೆಚ್ಚು ಸಂಪತ್ತು ಇರುವ ದೇವಾಲಯ ಎಂದು ಹೆಸರು ಮಾಡುತ್ತದೆ. ಇನ್ನೂ ಬೀ ಕೊಠಡಿಯ ಬಗ್ಗೆ ಹೇಳಬೇಕು ಅಂದರೆ ಉಳಿದ ಕೊಠಡಿಗಳ ಹಾಗೇ ಇದಕ್ಕೆ ಯಾವುದೇ ಬೀಗದ ವ್ಯವಸ್ಥೆ ಇಲ್ಲ. ಇದನ್ನು ನಗಬಂಧದಿಂದ ಮುಚ್ಚಿ ಇಡಲಾಗಿದೆ ಎಂದು ಹೇಳಲಾಗುತ್ತದೆ.

ನಾಗಬಂದ ಎಂದರೆ, ಯಾವುದೇ ಯಂತ್ರಗಳ ಸಾಹಾಯ ಇಲ್ಲದೆ ಮಂತ್ರಗಳ ಸಹಾಯದಿಂದ ಮುಚ್ಚಿರುವ ಬಂಧ. ಇದು ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ. ಬೀ ಕೊಠಡಿಯ ಬಾಗಿಲಿಗೆ ಇರುವ ನಾಗಗಳು ಸದಾ ಆ ಕೊಠಡಿಯ ಕಾವಲಿಗೆ ಇರುತ್ತವೆ ಎಂದು ಹೇಳಲಾಗುತ್ತದೆ. ಶಕ್ತಿಯುತವಾದ ಗರುಡ ಮಂತ್ರವನ್ನು ಪ್ರಯೋಗ ಮಾಡಿದಾಗ ಈ ನಾಗಬಂಧವನ್ನು ಬಿಡುಗಡೆ ಮಾಡಲು ಸಾಧ್ಯ ಎನ್ನುತ್ತಾರೆ. ಆ ಗರುಡ ಮಂತ್ರ ಸರಿಯಾಗಿ ತಿಳಿದಿರುವ ಮಹಾ ಸಾಧುಗಳಿಗೆ ಮಾತ್ರ ಈ ಬಂಧವನ್ನು ಬಿಡಿಸಲು ಸಾಧ್ಯವಾಗುವುದು ಎಂದೂ ಹೇಳುತ್ತಾರೆ.

ಇದು ಸಾಮಾನ್ಯ ಜನರಿಂದ ಆಗದ ಕೆಲಸ. ಒಂದುವೇಳೆ ಆ ಕೊಠಡಿಯನ್ನು ತೆರೆಯಲು ಪ್ರಯತ್ನಿಸಿದರೆ ಆ ವ್ಯಕ್ತಿಗಳು ಬಹಳ ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಈ ಆಧುನಿಕ ಕಾಲದಲ್ಲಿ ಈ ನಾಗಬಂದವನ್ನು ಹಾಕುವವರೂ ಅಥವಾ ತೆಗೆಯುವವರು ಯಾರೂ ಇಲ್ಲ. ಈ ಒಂದು ಕೊಠಡಿಯಲ್ಲಿ ಮಾತ್ರವೇ ಉಳಿದ ಐದೂ ಕೊಠಡಿಗಳಲ್ಲಿ ಇರುವುದಕ್ಕಿಂತ ಹೆಚ್ಚು ನಿಧಿ ಇದೆ ಎಂದು ಹೇಳಲಾಗುತ್ತದೆ. ಅಥವಾ ಏನೋ ಅಪಾಯ ಇರುವ ಕಾರಣಕ್ಕೆ ಮಂತ್ರಗಳನ್ನು ಹಾಕಿ ನಾಗಬಂಧ ಮಾಡಿ ಬಂಧಿಸಲಾಗಿದೆ ಎಂದು ಇನ್ನೂ ಕೆಲವರು ಹೇಳುತ್ತಾರೆ.

ಈ ಕೊಠಡಿಯನ್ನು ಬಲವಂತವಾಗಿ ತೆಗೆಯುವುದರಿಂದ ಏನಾದರೂ ಒಂದು ಅಪಾಯ ಆಗಿಯೇ ಆಗುತ್ತದೆ ಎಂದು ಸಾಕಷ್ಟು ಜನರು ನಂಬಿದ್ದಾರೆ. ಕೆಲವರ ನಂಬಿಕೆ ಎಂದರೆ ಈ ಕೊಠಡಿಯ ಒಳಗೆ ಇನ್ನೊಂದು ಕೊಠಡಿ ಸಹ ಇದ್ದು ಅದರಲ್ಲಿ ಅಪ್ಪಟ ಬಂಗಾರದ ಕೋಣೆ ಇದೆ ಹಾಗೂ ಅಲ್ಲಿ ಹಲವು ರಹಸ್ಯಗಳು ಅಡಗಿವೆ ಎಂದೂ ಹೇಳುತ್ತಾರೆ.

ಅಲ್ಲಿ ಮಾನವನ ಊಹೆಗೂ ನಿಲುಕದ ಅದ್ಭುತ ಅಡಗಿದೆ ಎಂದು ಹೇಳುತ್ತಾರೆ. ಹಾಗಾಗಿ ಕೇರಳ ಸರ್ಕಾರ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಇದನ್ನು ಸ್ಪೆಷಲ್ ಸೆಕ್ಯುರಿಟಿ ಝೋನ್ ಎಂದು ಪರಿಗಣಿಸಿದೆ. ಇಲ್ಲಿ ಸುಮಾರು ೨೫೦ ಪೊಲೀಸ್ ಪಡೆಗಳು ದೇವಾಲಯದ ರಕ್ಷಣೆಗೆ ಇವೆ. ಆಧುನಿಕ ವಿಜ್ಞಾನ ಅರ್ಥ ಮಾಡಿಕೊಳ್ಳದ ಇನ್ನೂ ಅದೆಷ್ಟೋ ವಿಷಯಗಳು ಇವೆ ಅನ್ನುವುದಕ್ಕೆ ಈ ದೇವಾಲಯ ಒಂದು ಉತ್ತಮ ಉದಾಹರಣೆ ಆಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!