ಬೆಂಗಳೂರು ಜಲಮಂಡಳಿಯಲ್ಲಿ ಖಾಲಿ ಇರುವ 4 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ

0 13

ಬೆಂಗಳೂರು ಜಲಮಂಡಳಿ ಬಿಡಬ್ಲ್ಯೂಎಸ್ಎಸ್ ಬಿ ಇಲಾಖೆಯಲ್ಲಿ ಖಾಲಿ ಇರುವ 4,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ವಿದ್ಯಾರ್ಹತೆಯ ಬಗ್ಗೆ ಹಾಗೂ ಇನ್ನಿತರ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಿಡಬ್ಲ್ಯೂಎಸ್ಎಸ್ ಬಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯಾ ಶಿಕ್ಷಣ ಅರ್ಹತೆಯನ್ನು ಕೊಡಲಾಗಿದೆ. ಎಸೆಸೆಲ್ಸಿ, ಪಿಯುಸಿ, ಐಟಿಐ ಡಿಪ್ಲೋಮಾ, ಡಿಗ್ರಿ, ಎಂಜಿನಿಯರಿಂಗ್ ಓದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜಲಮಂಡಳಿ ಇಲಾಖೆಯು 4,000ಕ್ಕಿಂತ ಅಧಿಕ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ ಎಂದು ಹೇಳಿದ್ದಾರೆ. ಡ್ರೈವರ್ ಹುದ್ದೆಗೆ 74 ಪೋಸ್ಟ್ ಖಾಲಿ ಇದೆ. 35-40 ಸಾವಿರ ರೂಪಾಯಿ ಸಂಬಳ ಸಿಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ಪಾಸಾಗಿರಬೇಕು, ಅರ್ಜಿ ಸಲ್ಲಿಸುವವರ ಬಳಿ ಹೆವಿ ವೆಹಿಕಲ್ ಲೈಸೆನ್ಸ್ ಇರಬೇಕು, ಫಸ್ಟ್ ಎಡ್ ಟ್ರೈನಿಂಗ್ ಸರ್ಟಿಫಿಕೇಟ್ ಹೊಂದಿರಬೇಕು ಅಲ್ಲದೆ ಎರಡು ವರ್ಷದ ಅನುಭವ ಹೊಂದಿರಬೇಕು. ಜ್ಯೂನಿಯರ್ ಹೆಲ್ಪರ್ ಎಂಬ ಹುದ್ದೆ 75 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಏಳನೇ ತರಗತಿ ಪಾಸಾಗಿರಬೇಕು. ಇವರಿಗೆ 25 ಸಾವಿರ ರೂಪಾಯಿ ಸಂಬಳ ಇರುತ್ತದೆ.

ವಾಲ್ವಮ್ಯಾನ್ ಎಂಬ ಹುದ್ದೆಗೆ 150 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ಉತ್ತೀರ್ಣರಾಗಿರಬೇಕು, ಫಿಸಿಕಲ್ ಫಿಟ್ನೆಸ್ ಹೊಂದಿರಬೇಕು. ಈ ಹುದ್ದೆಗೆ 27 ಸಾವಿರ ರೂಪಾಯಿ ಸಂಬಳ ಇರುತ್ತದೆ. ಹೆಲ್ಪರ್ 500 ಪೋಸ್ಟ್ ಖಾಲಿ ಇದೆ ಅವುಗಳಲ್ಲಿ 345 ಹುದ್ದೆಗೆ ನೇರವಾಗಿ ನೇಮಕಾತಿ ಮಾಡಿಕೊಳ್ಳುತ್ತಾರೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ಪಾಸಾಗಿರಬೇಕು, ಕನ್ನಡ ಭಾಷಾ ಸರ್ಟಿಫಿಕೇಟ್ ಹೊಂದಿರಬೇಕು ಮತ್ತು ಫಿಸಿಕಲ್ ಫಿಟ್ನೆಸ್ ಹೊಂದಿರಬೇಕು.

ಮೀಟರ್ ರೀಡರ್ ಎಂಬ ಹುದ್ದೆಗೆ 540 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು. ಆಪರೇಟರ್ ಹುದ್ದೆಗೆ 65 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಐಟಿಐ ಓದಿರಬೇಕು ಮತ್ತು ಎರಡು ವರ್ಷದ ಅನುಭವ ಹೊಂದಿರಬೇಕು. ಸ್ಯಾನಿಟರಿ ವರ್ಕರ್ ಹುದ್ದೆಗೆ 500 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ಪಾಸಾಗಿರಬೇಕು ಮತ್ತು ಫಿಸಿಕಲ್ ಫಿಟ್ನೆಸ್ ಹೊಂದಿರಬೇಕು.

ಜ್ಯೂನಿಯರ್ ಎಂಜಿನಿಯರ್ ಹುದ್ದೆಗೆ 135 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಮೂರು ವರ್ಷದ ಡಿಪ್ಲೋಮಾ ಓದಿರಬೇಕು ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು. ಈ ಹುದ್ದೆಗೆ 39,000 ರೂಪಾಯಿ ಸಂಬಳ ಇರುತ್ತದೆ. ಅಸಿಸ್ಟೆಂಟ್ ಎಂಜಿನಿಯರ್ ಈ ಹುದ್ದೆಗೆ 285 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಜಿನಿಯರಿಂಗ್ ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು.

ಜ್ಯೂನಿಯರ್ ಅಟೆಂಡರ್ ಹುದ್ದೆಗೆ 105 ಪೋಸ್ಟ್ ಖಾಲಿ ಇದೆ. ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಎಸ್ಎಲ್ ಸಿ ಪಾಸಾಗಿರಬೇಕು, ಕನ್ನಡ ಭಾಷೆಯಲ್ಲಿ ಓದಲು ಬರೆಯಲು ಗೊತ್ತಿರಬೇಕು. ಜ್ಯೂನಿಯರ್ ಅಸಿಸ್ಟೆಂಟ್ ಹುದ್ದೆಗೆ 324 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು. ಅಸಿಸ್ಟೆಂಟ್ ಹುದ್ದೆಗೆ 24 ಪೋಸ್ಟ್ ಖಾಲಿ ಇದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದಾದರು ಪದವಿ ಓದಿರಬೇಕು ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್ ಹೊಂದಿರಬೇಕು.

ಅರ್ಜಿ ಸಲ್ಲಿಸುವಾಗ ಡಿಡಿ ಹಣ ತುಂಬಬೇಕಾಗುತ್ತದೆ. ಬಿ ಗ್ರೂಪ್ ಅಂದರೆ ಡಿಗ್ರಿ, ಎಂಜಿನಿಯರಿಂಗ್ ಶಿಕ್ಷಣದ ಮೇಲೆ ಅರ್ಜಿ ಸಲ್ಲಿಸುವವರು 600 ರೂಪಾಯಿ ಹಣ ತುಂಬಬೇಕಾಗುತ್ತದೆ. ಸಿ ಗ್ರೂಪ್ ಅಂದರೆ ಪಿಯುಸಿ, ಐಟಿಐ ಶಿಕ್ಷಣದ ಮೇಲೆ ಅರ್ಜಿ ಸಲ್ಲಿಸುವವರು 400 ರೂಪಾಯಿ ಹಣ ತುಂಬಬೇಕಾಗುತ್ತದೆ. ಡಿ-ಗ್ರೂಪ್ ಅಂದರೆ ಎಸೆಸೆಲ್ಸಿ ಆಧಾರದ ಮೇಲೆ ಅರ್ಜಿ ಸಲ್ಲಿಸುವವರು 300 ರೂಪಾಯಿ ಹಣ ತುಂಬಬೇಕಾಗುತ್ತದೆ. ಬೆಂಗಳೂರು ಜಲಮಂಡಳಿ ಇಲಾಖೆಯಿಂದ ಎರಡು ತಿಂಗಳಲ್ಲಿ ಅಪ್ಲಿಕೇಷನ್ ಸಲ್ಲಿಸುವ ಪ್ರಾರಂಭದ ದಿನಾಂಕ, ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ನೋಟಿಫಿಕೇಷನ್ ಬಿಡುತ್ತಾರೆ. ಐಟಿಐ, ಎಸ್ಎಸ್ಎಲ್ಸಿ, ಪಿಯುಸಿ, ಎಂಜಿನಿಯರಿಂಗ್, ಡಿಗ್ರಿ ಓದಿದವರು ಬೆಂಗಳೂರು ಜಲಮಂಡಳಿ ವೆಬ್ ಸೈಟ್ ಅನ್ನು ಚೆಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.