ಹೃದಯಾಘಾತ ಇವತ್ತು ಸರಿಸುಮಾರು 40% ರಷ್ಟು ಜನರಲ್ಲಿ ಕಾಡುತ್ತಿರುವ ಸಮಸ್ಯೆಮಾಗಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಪ್ರತಿ ಸೆಕೆಂಡ್ ಗೆ ಒಬ್ಬರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಅಮೇರಿಕಾ ದೇಶದಲ್ಲಂತೂ ಸುಮಾರು 14 ಮಿಲಿಯನ್ ಹೃದ್ರೋಗಿಗಳಿದಾರಂತೆ.
ಅಷ್ಟಕ್ಕೂ ಹೃದಯಾಘಾತ ಹೇಗೆ ಆಗುತ್ತೆ. ನಮಗೆ ಕೊಡೋ ಸೂಚನೆಗಳೇನು.ಹೃದಯಾಘಾತದಿಂದ ನಮ್ಮ ಹೃದಯ ಕಾಪಾಡಿಕೊಳ್ಳೋದು ಹೇಗೆ ಇದರ ಬಗ್ಗೆ ತಿಳಿಯೋಣ. ನಮಗೆ ಆಗುವ ಪ್ರತಿ ಅಘಾತವು ಕೆಲವು ಸೂಚನೆಗಳನ್ನು ನೀಡುತ್ತದೆ. ಹಾಗೇ ಹೃದಯಕ್ಕೊ ಕೂಡ ಸೂಚನೆಗಳು ಬರುತ್ತವೆ. ನಮ್ಮ ಸುಂದರ ಹೃದಯ ಬಲಿ ತೆಗೆದುಕೊಳ್ಳುವ ಮೊದಲು ಕೆಲವು ಸೂಚನೆಗಳು ಬರುತ್ತವೆ.ಅವುಗಳೆಂದರೆ ಹೃದಯ ಭಾಗದಲ್ಲಿ ಅಸ್ವಸ್ಥತೆ ಕಾಣಿಸಿಕೊಳ್ಳಲು ಶುರುವಾಗುತ್ತದೆ, ಎದೆಯಲ್ಲಿ ಉರಿ, ಹಿಡಿದಂತಹ ಅನುಭವ ಆದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ. ಇದಲ್ಲದೆ ಎಡಭಾಗದ ತೊಳಲ್ಲಿ ನೋವಿದ್ದರೆ ನಿಮ್ಮ ಕುಟುಂಬ ವೈದ್ಯರನ್ನ ಸಂಪರ್ಕಿಸಿ.
ಉಸಿರಾಟ ಸರಾಗವಾಗಿ ಆಗದೇ ಇದ್ದರೆ ತಡಮಾಡದೇ ನಿಮ್ಮ ಹೃದಯ ಕಾಪಾಡಿಕೊಳ್ಳಲು ಹೊರಟು ಬಿಡಿ. ಬೆನ್ನಿನ ನೋವು ಕೊಡುವುದರ ಮೂಲಕವು ಹೃದಯ ತನಗೆ ಬರಬಹುದಾದ ಆಪತ್ತಿನ ಸೂಚನೆ ನೀಡುತ್ತದೆ.
ಕೆಲವರು ಹೃದಯಾಘಾತ ಆದಾಗ ಹೃದಯದ ಸುತ್ತಮುತ್ತ ಮಾತ್ರ ನೋವು ಕಾಣಿಸುತ್ತದೆ ಅಂತ ಅದುಕೊಂಡಿರುತ್ತಾರೆ. ಆದ್ರೆ ನಿಮಗೆ ಕಾಡುವ ಗಂಟಲು ನೋವು, ಬೆನ್ನು ನೋವು ಕೂಡ ಹೃದಯಾಘಾತಕ್ಕೆ ನೀಡುವ ಸೂಚನೆಗಳಾಗಿವೆ ಅಂತಾ ಹೇಳಲಾಗುತ್ತದೆ. ಹೃದಯಾಘಾತ ಬರೋದಕ್ಕೂ ಮೊದಲು ಲಿಂಗ ಭೇದ ಮಾಡುತ್ತದೆ ಎಂದು ಹೇಳಲಾಗುತ್ತದೆ. ಗಂಡಸರು ಹಾಗೂ ಹೆಂಗಸರಿಗೆ ಬೇರೆ ಬೇರೆ ರೀತಿಯಾದ ಹೃದಯಾಘಾತ ಸೂಚನೆಗಳು ಸಿಗುತ್ತವೆ.
ಗಂಡಸರಿಗೆ ಹೃದಯಾಘಾತವಾಗುವ ಮುನ್ನ ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಳ್ಳುತ್ತದೆ, ತಲೆಸುತ್ತುವುದು, ಅಧಿಕ ಉಸಿರಾಟ, ವಾಕರಿಕೆ, ಹೊಟ್ಟೆ ಯಲ್ಲಿ ತೀವ್ರ ಅಸ್ವಸ್ಥತೆ ಕಾಣಿಸಿಕೊಳ್ಳುವುದು, ಇಂತಹ ಲಕ್ಷಣಗಳು ಗೋಚರವಾಗುತ್ತದೆ.ಇನ್ನು ಹೆಂಗಸರಿಗೆ ಬೆನ್ನು, ತೋಳು,ಭುಜ,ಕತ್ತು , ಗಂಟಲು ನೋವಿನ ಲಕ್ಷಣಗಳು ಕಾಣಿಸಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಈ ತೆರನಾಗಿ ಹೃದಯಾಘಾತಕ್ಕೂ ಮುನ್ನ ಬರುವ ಸೂಚನೆಗಳಾಗಿವೆ.