ಈಗ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಸ್ಸಿನಲ್ಲಿ, ರೈಲಿನಲ್ಲಿ, ವಿಮಾನದಲ್ಲಿ, ಹಡಗಿನಲ್ಲಿಯೂ ಪ್ರಯಾಣಿಸಬಹುದು. ಹೆಚ್ಚು ಜನರು ಪ್ರಯಾಣಿಸುವುದು ರೋಡ್ ಮೇಲೆ. ಬಹಳಷ್ಟು ಜನರಿಗೆ ಬೈಕ್ ಅಥವಾ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಲು ಇಷ್ಟ. ನಮ್ಮ ದೇಶದಲ್ಲಿ ಕಾರು, ಬೈಕ್, ಬಸ್ ಗಳಲ್ಲಿ ಪ್ರಯಾಣಿಸಲು ಭಯ ಪಡುವ ರೋಡ್ ಗಳಿವೆ. ಹಾಗಾದರೆ ಜಗತ್ತಿನ ಡೇಂಜರಸ್ ರೋಡ್ಸ್ ಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಅಟ್ಲಾಂಟಿಕ್ ಓಶನ್ ರೋಡ್ ಈ ರೋಡ್ ಇರುವುದು ನಾರ್ವೆಯಲ್ಲಿ. ಈ ರೊಡ್ ಕಾರ್ವೇಜ್ ಸಿಟಿಯಿಂದ ಹಿಡಿದು ವಿವಾಂಗ್ ಐಲೆಂಡ್ ವರೆಗೆ ಇದ್ದು, ಈ ರೋಡ್ ನ ಉದ್ದ 8.3 ಕಿ.ಮೀ. ಪ್ರಾರಂಭದಲ್ಲಿ ಐಲೆಂಡ್ ಗೆ ಕಾರಿನಲ್ಲಿ ಹೋಗಬೇಕೆಂದರೆ ಶಿಪ್ಸ್ ಗಳ ಸಹಾಯದಿಂದ ಹೋಗಬೇಕಾಗಿತ್ತು ಇದಕ್ಕೆ ಬಹಳ ಸಮಯ ಬೇಕಾಗಿರುವುದರಿಂದ 1984ರಲ್ಲಿ ಈ ರೋಡ್ ಅನ್ನು ನಿರ್ಮಾಣ ಮಾಡುತ್ತಾರೆ ಆದರೆ ಈ ರೋಡ್ ನಿರ್ಮಾಣದ ಸಮಯದಲ್ಲಿ 12 ಚಂಡಮಾರುತಗಳು ತಾಕಿದೆ ಅಲ್ಲದೆ ಸಮುದ್ರದ ಅಲೆಗಳಿಂದ ರೋಡ್ ನಿರ್ಮಾಣ ನಾಶವಾಗುತ್ತದೆ. ಈ ರೀತಿ 20ವರ್ಷಗಳ ಕಾಲ ಈ ರೋಡ್ ನಿರ್ಮಾಣ ನಡೆಯುತ್ತದೆ. ವರ್ಷದ ಎಂಟು ತಿಂಗಳು ಕೆಲಸ ಮಾಡಲು ಆಗದೆ ಕೇವಲ ನಾಲ್ಕು ತಿಂಗಳು ಮಾತ್ರ ರೋಡ್ ನಿರ್ಮಾಣ ಮಾಡುತ್ತಾರೆ. ಈ ರೋಡ್ ನಲ್ಲಿ ಬೈಕ್ ನಲ್ಲಿ ಹೋಗುವುದು ಬಹಳ ಅಪಾಯ ಏಕೆಂದರೆ ಇಲ್ಲಿ ಬರುವ ಅಲೆಗಳು ರೋಡ್ ಅನ್ನು ದಾಟಿ ಹೋಗುತ್ತದೆ.
ದ ಪ್ಯಾಸೇಜ್ ಡು ಗೋಯ್ಸ್ ಎಂಬ ರೋಡ್ ಇರುವುದು ಫ್ರಾನ್ಸ್ ನಲ್ಲಿ, ಈ ರೋಡ್ ನ ಉದ್ದ 4.1 ಕಿಮೀ. ಈ ರೋಡ್ ನಲ್ಲಿ ದಿನಕ್ಕೆ 2-3 ಗಂಟೆ ಮಾತ್ರ ಪ್ರಯಾಣಿಸಲು ಸಾಧ್ಯ ಉಳಿದ ಸಮಯ ಈ ರೋಡ್ ಮೇಲೆ ಸಮುದ್ರದ ನೀರು ಆವರಿಸುತ್ತದೆ. ಈ ರೋಡ್ ನಲ್ಲಿ ಜನರು ಯಾವಾಗ ಪ್ರಯಾಣಿಸಬಹುದು ಎಂಬುದನ್ನು ತಿಳಿಯಲು ಫ್ರಾನ್ಸ್ ಸರ್ಕಾರ ಒಂದು ವೆಬ್ ಸೈಟ್ ಅನ್ನು ಓಪನ್ ಮಾಡಿದೆ ಅದರ ಮೂಲಕ ಈ ರೋಡಿನಲ್ಲಿ ಯಾವ ಸಮಯ ಪ್ರಯಾಣಿಸಬಹುದು ಎಂಬುದನ್ನು ತಿಳಿದು ಪ್ರಯಾಣಿಸಬಹುದು. ಕೆಲವೊಮ್ಮೆ ವಾತಾವರಣದ ಬದಲಾವಣೆಯನ್ನು ಮೊದಲೇ ಹೇಳಲು ಬರುವುದಿಲ್ಲ ಪ್ರತಿ ವರ್ಷ ಇಲ್ಲಿ 10 ಕಾರುಗಳು ನೀರಿನಲ್ಲಿ ಮುಳುಗಿ ಹೋಗುತ್ತದೆ.
ಕಿಲ್ಲರ್ ಕಿಶ್ಟ್ವಾರ್ ರೋಡ್ ಈ ರೋಡ್ ನ ಉದ್ದ 30 ಕಿಮೀ ಅಲ್ಲದೆ 700 ಅಡಿ ಎತ್ತರದಲ್ಲಿದೆ. ಈ ರೋಡ್ ಭಾರತದ ಜಮ್ಮು ಕಾಶ್ಮೀರನಲ್ಲಿದೆ. 2018ರಲ್ಲಿ 38 ಜನ ಇರುವ ಒಂದು ಟೂರಿಸ್ಟ್ ಬಸ್ ಈ ರೋಡ್ ನ ಕೆಳಗೆ ಬಿದ್ದು ಅದರಲ್ಲಿ ಇದ್ದ 32 ಜನ ಸಾವನ್ನಪ್ಪಿದ್ದಾರೆ. ಪ್ರತಿವರ್ಷ ಈ ರೋಡ್ ನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಬೆಟ್ಟದ ಮೇಲಿನಿಂದ ಈ ರೋಡ್ ನಲ್ಲಿ ಕಲ್ಲುಗಳು ಯಾವಾಗ ಬೀಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ ಅಲ್ಲದೆ ಆಗಾಗ ಮಳೆ, ಮಂಜು ಬೀಳುತ್ತದೆ.
ಸೆಲ್ವಿಯೋ ಪಾಸ್ ರೋಡ್ ಈ ರೋಡ್ ಇರುವುದು ಇಟಲಿಯಲ್ಲಿ, ಈ ರೋಡ್ ನ ಉದ್ದ 40 ಕಿಮೀ. ಈ ರೋಡ್ ನಲ್ಲಿ ಅಪಾಯಕಾರಿಯಾದ 75 ತಿರುವುಗಳಿವೆ. ಇಟಲಿಯಲ್ಲಿ ನಡೆಯುವ ಅತಿದೊಡ್ಡ ಸೈಕಲ್ ರೇಸ್ ಈ ರೋಡ್ ನಲ್ಲಿ ನಡೆಯುತ್ತದೆ. ಈ ರೋಡ್ ನಲ್ಲಿ ವಾಹನಗಳು ಚಲಿಸುವುದು ಕಷ್ಟ ಸ್ವಲ್ಪ ಯಾಮಾರಿದರೆ ವಾಹನ ಕೆಳಗೆ ಬೀಳುತ್ತದೆ. ಸಿಚುವಾನ್ ಟಿಬೇಟ್ ಹೈವೆ ರೋಡ್ ಈ ರೋಡ್ ಇರುವುದು ಚೈನಾದಲ್ಲಿ. ಈ ರೋಡ್ ನ ಉದ್ದ 115 ಕಿಮೀ. ಈ ರೋಡ್ ಚೈನಾ ಮತ್ತು ನೇಪಾಳ ಬಾರ್ಡರ್ ನಲ್ಲಿ ಇದೆ. ಇಲ್ಲಿ ಅತ್ಯಂತ ಎತ್ತರವಾಗಿರುವ 14 ಪರ್ವತಗಳಿವೆ, ಈ ಪರ್ವತಗಳಲ್ಲಿ ಪ್ರಯಾಣಿಸಬೇಕು, ಅದೇ ರೀತಿ ಭಯಾನಕ ಬ್ರಿಡ್ಜ್ ಗಳೂ ಇವೆ. ಒಂದು ವೇಳೆ ಪರ್ವತಗಳ ಮೇಲಿನಿಂದ ಕಲ್ಲುಗಳು ಬಿದ್ದರೆ ಅವುಗಳನ್ನು ಕ್ಲೀನ್ ಮಾಡಲು ವಾರದ ಸಮಯ ಬೇಕಾಗುತ್ತದೆ ಆದ್ದರಿಂದ ಕೆಲವು ದಿನಗಳ ಕಾಲ ಟ್ರಾಫಿಕ್ ಜಾಮ್ ಆಗಿರುತ್ತದೆ.
ಬೊಲಿವಿಯಾ ಡೆತ್ ರೋಡ್ ಈ ರೋಡ್ ಇರುವುದು ಬೋಲೆವಿಯಾದಲ್ಲಿ. ಈ ರೋಡ್ ನ ಉದ್ದ 70 ಕಿಮೀ. ಈ ರೋಡ್ ನಲ್ಲಿ ಒಂದು ವರ್ಷಕ್ಕೆ ಸುಮಾರು 100 ಕ್ಕಿಂತ ಹೆಚ್ಚು ಜನರು ಸಾಯುತ್ತಿರುವುದರಿಂದ ಅಲ್ಲಿನ ಜನರು ಈ ರೋಡ್ ಗೆ ಡೆತ್ ರೋಡ್ ಎಂದು ಹೆಸರಿಟ್ಟಿದ್ದಾರೆ. ಇದು ಪ್ರಪಂಚದಲ್ಲೇ ಅತಿ ಭಯಾನಕ ರೋಡ್ ಆಗಿದೆ. ಇಲ್ಲಿ ಆಗಾಗ ಮಳೆ ಬೀಳುತ್ತದೆ, ಅದೇ ರೀತಿ ಬೆಟ್ಟಗಳಿಂದ ಕಲ್ಲುಗಳು ಸಹ ಬೀಳುತ್ತದೆ. ಇಲ್ಲಿ ಸ್ವಲ್ಪ ಮೈ ಮರೆತರೂ ಕೆಳಗೆ ಬೀಳುವುದು ಗ್ಯಾರೆಂಟಿ. ಸ್ನೇಲ್ ಪಾಸ್ ರೋಡ್ ಈ ರೋಡ್ ಇರುವುದು ಅರ್ಜೆಂಟೀನಾದಲ್ಲಿ. ಈ ರೋಡ್ ವರ್ಷದಲ್ಲಿ 4 ತಿಂಗಳುಗಳ ಕಾಲ ಮಂಜಿನಿಂದ ಮುಚ್ಚಿರುತ್ತದೆ.

8 ತಿಂಗಳುಗಳು ಮಾತ್ರ ಈ ರೋಡ್ ನಲ್ಲಿ ಪ್ರಯಾಣಿಸಲು ಸಾಧ್ಯ. ಈ ರೋಡ್ ನಲ್ಲಿ 20 ಕ್ಕಿಂತ ಹೆಚ್ಚು ಭಯಾನಕ ತಿರುವುಗಳಿವೆ. ಅರ್ಜೆಂಟೀನಾದಲ್ಲಿ ಅತಿ ಹೆಚ್ಚು ಅಪಘಾತವಾಗುವ ರೋಡ್ ಕೂಡ ಇದೆ. ಗೋಲಿಯಾಂಗ್ ಟನ್ನಲ್ ರೋಡ್ ಈ ರೋಡ್ ಇರುವುದು ಚೈನಾದಲ್ಲಿ. ಈ ರೋಡ್ ಅನ್ನು ಚೈನಾದಲ್ಲಿ ಒಂದು ಮೌಂಟೇನ್ ಅನ್ನು ಕೊರೆದು ನಿರ್ಮಾಣ ಮಾಡಿದ್ದಾರೆ. ಈ ರೋಡ್ ಅನ್ನು ಚೈನಾದ ಸರ್ಕಾರ ನಿರ್ಮಾಣ ಮಾಡಲಿಲ್ಲ ಇಲ್ಲಿಯ ಪರ್ವತದ ಮೇಲಿರುವ ಗೌಲಿಯಾನ ಎಂಬ ಹಳ್ಳಿಯ ಜನರು 6 ವರ್ಷಗಳ ಕಾಲ ಕೇವಲ ಉಳಿ, ಸುತ್ತಿಗೆಯ ಮೂಲಕ ಈ ರೋಡ್ ಅನ್ನು ನಿರ್ಮಿಸಿದ್ದಾರೆ ಆದರೆ ಈ ರೋಡ್ ಇದುವರೆಗೂ ಸ್ಟ್ರಾಂಗ್ ಆಗಿದೆ ಆದರೂ ಇಲ್ಲಿ ಅಪಘಾತಗಳು ನಡೆಯುತ್ತಲೇ ಇರುತ್ತದೆ. ಈ ರೋಡ್ ನೋಡಲು ಬಹಳ ಜನರು ಪ್ರವಾಸಿಗರು ಬರುತ್ತಾರೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466