ಸ್ಯಾಂಡಲ್ವುಡ್ನ ನಟಿ ಮೇಘನಾ ರಾಜ್ ಅವರು ಈಗೊಂದು ವರ್ಷದ ಹಿಂದನುಭವಿಸಿದ ಕಷ್ಟಗಳು ಒಂದೆರಡಲ್ಲ. ಪತಿ ಚಿರಂಜೀವಿ ಸರ್ಜಾ ಅವರ ನಿಧನದ ನಂತರ ಮೇಘನಾ ಅವರ ಬದುಕಿನಲ್ಲಿ ಕತ್ತಲು ಆವರಿಸಿತ್ತು. ನಂತರ ಇವರ ಪುತ್ರ ಜ್ಯೂನಿಯರ್ ಚಿರುವಿನ ಆಗಮನದ ಬಳಿಕ ಅವರ ಮುಖದಲ್ಲಿ ಮತ್ತೆ ನಗು ಮೂಡಿಸಿತ್ತು. ಆ ನಂತರ ಅವರ ಇಡೀ ಕುಟುಂಬಕ್ಕೆ ಕೊರೊನಾ ವೈರಸ್ ಕಾಟ ಕೊಟ್ಟಿತ್ತು. ಇಷ್ಟೆಲ್ಲ ಸಂಕಷ್ಟಗಳನ್ನು ಎದುರಿಸಿದ ಮೇಘನಾ ಈಗ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿದರೆ ಅವರ ಅಭಿಮಾನಿಗಳು ಖುಷಿ ಆಗುವುದರಲ್ಲಿ ಅನುಮಾನವಿಲ್ಲ. ಮೇಘನಾ ರಾಜ್ ಅವರು ಈಗ ಮತ್ತೆ ಕ್ಯಾಮೆರಾ ಮುಂದೆ ಬರುತ್ತಿದ್ದಾರೆ.

ಸರ್ಜಾ ಕುಟುಂಬದ ಪ್ರೀತಿಯ ಸೊಸೆ, ಚಿರಂಜೀವಿ ಸರ್ಜಾ ಅವರ ಪತ್ನಿ ಹಾಗೂ ಕನ್ನಡ ಚಿತ್ರರಂಗದ ಮುದ್ದು ಚೆಲುವೆ ಮೇಘನಾ ರಾಜ್ ಅವರು ತಮ್ಮ ಹಾಗೂ ಪತಿ ಚಿರಂಜೀವಿ ಸರ್ಜಾ ಅವರ ಪ್ರೀತಿಯ ಫಲವಾಗಿ ಜನಿಸಿರುವ ಜೂನಿಯರ್ ಚಿರುವಿನ ಲಾಲನೆ ಪಾಲನೆ ಹಾಗೂ ಪೋಷಣೆಯಲ್ಲಿ ನಿರತರಾಗಿದ್ದು, ತಮ್ಮ ಸಂತೋಷ ಹಾಗೂ ನಗುವನ್ನು ಪ್ರೀತಿಯ ಮಗವಿನ ಮುಖದಲ್ಲಿ ಕಾಣುತ್ತಿದ್ದಾರೆ. ಈಗಾಗಲೇ ಕಳೆದ ಆರು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ಮಗುವಿನ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಮೇಘನಾ ರಾಜ್ ಅವರು ಈ ಮೂಲಕ ತಮ್ಮ ಅಭಿಮಾನಿಗಳ ಹಾಗೂ ನೋಡುಗರ ಗಮನ ಸೆಳೆಯುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದ ಮೇಘನಾ ರಾಜ್ ಅವರು ಕಳೆದೊಂದು ವರ್ಷದಿಂದ ನಟನೆಯಿಂದ, ಚಿತ್ರರಂಗದಿಂದ ತುಸು ದೂರವೇ ಉಳಿದಿದ್ದರು. ಮದುವೆಯಾದ ನಂತರ ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದರು. ನಂತರ ಬದುಕಿನಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಸುಧಾರಿಸಿಕೊಳ್ಳಲು ಕೂಡ ಸಮಯ ಹಿಡಿಯಿತು. ಈಗ ಆ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಂದಿರುವ ಮೇಘನಾ ರಾಜ್ ಅವರು ಮತ್ತೆ ನಟನೆಗೆ ಮರಳಿದ್ದಾರೆ.
ಈಗಾಗಲೇ ಜೂನಿಯರ್ ಚಿರು ಸ್ಟಾರ್ ಕಿಡ್ ಆಗಿರುವುದು ಇನ್ನೂ ವಿಶೇಷ. ಇದರ ಬೆನ್ನಲ್ಲೇ ಮೇಘನಾ ರಾಜ್ ರವರು ತಮ್ಮ ವೃತ್ತಿ ಜೀವನದ ಹೊಸ ಅದ್ಯಾಯನವನ್ನು ಆರಂಭಿಸಿದ್ದಾರೆ. ಕಳೆದ ವರ್ಷ ಗರ್ಭಿಣಿಯಾದ ಸಂದರ್ಭದಿಂದಲೂ ಕೂಡ ಚಿತ್ರರಂಗದದಿಂದ ದೂರ ಉಳಿದಿರುವ ನಟಿ ಮೇಘನಾ ರಾಜ್, ಈಗಂತೂ ಮಗುವಿನ ಆರೈಕೆಯಲ್ಲಿ ಸಂಪೂರ್ಣವಾಗಿ ನಿರತರಾಗಿದ್ದಾರೆ. ‘ಸಿನಿಮಾವೇ ದೇವರು, ನಮಗೆ ಅದನ್ನು ಬಿಟ್ಟು ಬೇರೆ ದಾರಿಯಿಲ್ಲ. ಮತ್ತೆ ನಾನು ಬಣ್ಣದ ಬದಕನ್ನು ಪ್ರಾರಂಭಿಸುತ್ತೇನೆ” ಎಂಬುದು ಮೇಘನಾರಾಜ್ ರವರ ಮಾತಾಗಿದೆ. ಮೇಘನಾ ರಾಜ್-ಚಿರಂಜೀವಿ ಸರ್ಜಾ ದಂಪತಿಯ ಪುತ್ರ ಜ್ಯೂನಿಯಾರ್ ಚಿರುಗೆ ಈಗ ಒಂಭತ್ತು ತಿಂಗಳು ಕಳೆದಿವೆ. ಈ ಸಂದರ್ಭಕ್ಕೆ ಸರಿಯಾಗಿ ಮೇಘನಾ ರಾಜ್ ಅವರು ತಾವು ಮತ್ತೆ ನಟನೆಗೆ ಹಿಂದಿರುಗುತ್ತಿರುವ ಈ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ಅವರು, ‘ಜ್ಯೂನಿಯರ್ ಚಿರುಗೆ ಈಗ 9 ತಿಂಗಳು ಆಯಿತು ಒಂದು ವರ್ಷದ ಬಳಿಕ ಕ್ಯಾಮೆರಾ ಎದುರಿಸುವ ಮೂಲಕ ಈ ಕ್ಷಣವನ್ನು ನಾನು ಸೆಲೆಬ್ರೇಟ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಇದೀಗ ಇದೆಲ್ಲದರ ನಡುವೆ ಮೇಘನಾ ರಾಜ್ ರವರು ಹೊಸ ಕೆಲಸ ಪ್ರಾರಂಭಿಸಿ ಎಲ್ಲರಲ್ಲಿಯೂ ಒಂದು ರೀತಿಯ ಅಚ್ಚರಿ ಮೂಡಿಸಿದ್ದಾರೆ. ಇದೀಗ ನಟಿ ಮೇಘನಾ ರಾಜ್ ರವರು ಮನೆಯಲ್ಲಿ ಇದ್ದುಕೊಂಡೆ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೂ ಆನ್ಲೈನ್ ಪ್ರಮೋಷನ್ ಕೂಡಾ ಮಾಡುತ್ತಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಲಕ್ಷಗಟ್ಟಲೆ ಹಿಂಬಾಲಕರನ್ನು ಹೊಂದಿರುವ ಮೇಘನಾ ರಾಜ್ ಅನೇಕ ಪ್ರಾಡಕ್ಟ್ ಗಳ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದು, ಇದೀಗ ತಾಯಿಯಾದ ಮೇಲಂತು ಮಕ್ಕಳಿಗೆ ಸಂಬಂಧ ಪಟ್ಟ ಅನೇಕ ಪ್ರಾಡಕ್ಟ್ ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಶೂಟಿಂಗ್ ಸೆಟ್ ಒಂದರಲ್ಲಿ ಡೈಲಾಗ್ ಓದುತ್ತ ನಿಂತಿರುವ ಮೇಘನಾ ಅವರನ್ನು ಕಂಡು ಅಭಿಮಾನಿಗಳು ಖುಷಿ ಆಗಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಅನೇಕರು ಮೇಘನಾಗೆ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ಕಮ್ಬ್ಯಾಕ್ ಮಾಡುತ್ತಿರುವ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಗುತ್ತಿದೆ.

ಒಟ್ಟಾರೆ ಮನೆಯಲ್ಲಿ ಸುಮ್ಮನೇ ಕೂರದ ಮೇಘನಾ ರಾಜ್ ರವರು ಹೊಸ ಉಧ್ಯಮವನ್ನು ಆರಂಭಿಸಿದ್ದು ಮಾತ್ರವಲ್ಲದೆ ಇದರ ಜೊತೆಗೆ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಕೂಡಾ ಪಾದಾರ್ಪಣೆ ಮಾಡುತ್ತಾರೆ. ತಾವು ಕ್ಯಾಮೆರಾ ಎದುರಿಸುತ್ತಿರುವುದು ಯಾವ ಪ್ರಾಜೆಕ್ಟ್ಗಾಗಿ ಎಂಬ ಮಾಹಿತಿಯನ್ನು ಮೇಘನಾ ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲ. ಸಿನಿಮಾ, ಜಾಹೀರಾತು ಅಥವಾ ಫೋಟೋಶೂಟ್ ಈ ಪೈಕಿ ಯಾವುದಕ್ಕಾಗಿ ಶೂಟಿಂಗ್ ಮಾಡುತ್ತಿದ್ದೀರಿ ಎಂದು ಅಭಿಮಾನಿಗಳು ಕೌತುಕದ ಪ್ರಶ್ನೆ ಇಟ್ಟಿದ್ದಾರೆ. ಇನ್ನು ಕಳೆದ ತಿಂಗಳಷ್ಟೆ ಚಿರಂಜೀವಿ ಸರ್ಜಾ ಅವರ ಪುಣ್ಯದ ತಿಥಿ ನಡೆದಿದ್ದು, ಈ ವೇಳೆ ಮೇಘನಾ ಅವರು ಚಿರಂಜೀವಿ ಸರ್ಜಾ ಅವರ ಹೆಸರಿನಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಕೂಡ ಮಾಡಿದ್ದರು. ಇನ್ನು ಚಿರು ಹಾಗೂ ಮೇಘನಾ ಪುತ್ರನನ್ನು ಜೂನಿಯರ್ ಚಿರು ಹಾಗೂ ಚಿಂಟು ಎಂದೇ ಕಲೆಯಲಾಗುತ್ತಿದ್ದು, ಕಂದನ ನಾಮಕರಣ ಶಾಸ್ತ್ರ ಹಾಗೂ ಹೆಸರು ಏನಿಡಲ್ಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466