ಆದಾಯ ಹಾಗೂ ಜಾತಿ ಪ್ರಮಾಣಪತ್ರದಂತೆ ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ ಕೂಡ ಮುಖ್ಯವಾಗಿ ಬೇಕಾಗುತ್ತದೆ. ಆಸ್ತಿ ವಿಭಾಗ ಇನ್ನಿತರ ಹಲವು ಉದ್ದೇಶಗಳಿಗೆ ಈ ಪ್ರಮಾಣಪತ್ರ ಬೇಕಾಗುತ್ತದೆ. ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು ಅಥವಾ ಕಂಪ್ಯೂಟರ್ ನಲ್ಲಿ ಆನ್ ಲೈನ್ ಅಪ್ಲಿಕೇಷನ್ ಸಲ್ಲಿಸುವುದರಿಂದ ಮನೆಯಲ್ಲಿ ಕುಳಿತುಕೊಂಡು ನೀವು ಅರ್ಜಿ ಸಲ್ಲಿಸಬಹುದು. ಹಾಗಾದರೆ ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಆನ್ಲೈನ್ ಅಪ್ಲಿಕೇಷನ್ ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಆಸ್ತಿ ಭಾಗ ಮಾಡಿಕೊಳ್ಳಲು ಮುಂತಾದ ಅನೇಕ ಕೆಲಸಗಳಿಗೆ ವಂಶವೃಕ್ಷ ಪ್ರಮಾಣ ಪತ್ರ ಅವಶ್ಯಕವಾಗಿ ಬೇಕಾಗುತ್ತದೆ. ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಅಥವಾ ವೋಟರ್ ಕಾರ್ಡ್, ರೇಷನ್ ಕಾರ್ಡ್ ಬೇಕಾಗುತ್ತದೆ ಅದರೊಂದಿಗೆ 20 ರೂಪಾಯಿ ಬೆಲೆಯ ಒಂದು ಬಾಂಡ್ ಬರೆಸಿಕೊಳ್ಳಬೇಕಾಗುತ್ತದೆ. ಹತ್ತಿರದ ಟೈಪಿಂಗ್ ಸೆಂಟರ್ ನಲ್ಲಿ 20 ರೂಪಾಯಿನ ಬಾಂಡ್ ಸಿಗುತ್ತದೆ. ನಂತರ ಟೈಪ್ ಮಾಡಿದ ಬಾಂಡ್ ಪೇಪರ್ ಅನ್ನು ಕೋರ್ಟ್ ನಲ್ಲಿ ನೋಟರಿ ಲಾಯರ್ ಹತ್ತಿರ ನೋಟರಿ ಮಾಡಿಸಿಕೊಳ್ಳಬೇಕು. ವಂಶವೃಕ್ಷ ಪ್ರಮಾಣ ಪತ್ರ ಮಾಡಿಸಲು ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ನೆಮ್ಮದಿ ಕೇಂದ್ರಕ್ಕೆ ಭೇಟಿ ನೀಡಬೇಕು.
ನಿಮ್ಮ ಕಂಪ್ಯೂಟರ್ ನಲ್ಲಿ ಕೂಡ ನೆಮ್ಮದಿ ಕೇಂದ್ರಕ್ಕೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ನಲ್ಲಿ ಗೂಗಲ್ ಗೆ ಹೋಗಿ ಸರ್ಚ್ ಬಾರ್ ನಲ್ಲಿ ನಾಡಕಛೇರಿ ವೆಬ್ ಸೈಟ್ ಹಾಕಿದರೆ ವೆಬ್ ಸೈಟ್ ಓಪನ್ ಆಗುತ್ತದೆ. ನಾಡಕಛೇರಿ ವೆಬ್ ಸೈಟ್ ನಾಡಕಛೇರಿ ಡಾಟ್ ಕರ್ನಾಟಕ ಡಾಟ್ ಗೌರ್ಮೆಂಟ್ ಡಾಟ್ ಇನ್. ವೆಬ್ ಸೈಟ್ ನ ಮೇಲ್ಗಡೆ ಆನ್ಲೈನ್ ಅಪ್ಲಿಕೇಷನ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದರೆ ಅಪ್ಲೈ ಆನ್ಲೈನ್ ಎಂಬ ಆಪ್ಷನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ ನಂಬರ್ ಎಂಟ್ರಿ ಮಾಡಿ ಗೆಟ್ ಓಟಿಪಿ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಎಂಟ್ರಿ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಎಡಗಡೆ ನ್ಯೂ ರಿಕ್ವೆಸ್ಟ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಅಟೆಸ್ಟೇಷನ್ ಆಫ್ ಫ್ಯಾಮಿಲಿ ಟ್ರೀ ಎಂಬ ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಒಂದು ಫಾರ್ಮ್ ಓಪನ್ ಆಗುತ್ತದೆ ಅದರಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಅರ್ಜಿದಾರನ ಹೆಸರು, ತಂದೆಯ ಹೆಸರು ಇನ್ನಿತರ ಎಲ್ಲಾ ಮಾಹಿತಿಯನ್ನು ಹಾಕಬೇಕು.
ಕೆಳಗಡೆ ಆಡ್ ಮೆಂಬರ್ಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡುತ್ತಾ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಹಾಕಬೇಕು. ನಂತರ ಆಧಾರ್ ಕಾರ್ಡ್, ಬಾಂಡ್, ಕುಟುಂಬದಲ್ಲಿ ಯಾರಾದರೂ ಮರಣ ಹೊಂದಿದ್ದರೆ ಡೆತ್ ಸರ್ಟಿಫಿಕೇಟ್ ಅನ್ನು ಕೂಡ ಅಪ್ಲೋಡ್ ಮಾಡಬೇಕು. ನಂತರ ಕ್ಯಾಪ್ಚರ್ ಕೋಡ್ ಅನ್ನು ಸರಿಯಾಗಿ ಎಂಟ್ರಿ ಮಾಡಿದ ನಂತರ ಸೇವ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಒಂದು ಆರ್ ಡಿ ನಂಬರ್ ಜನರೇಟ್ ಆಗುತ್ತದೆ ಆ ನಂಬರ್ ಅನ್ನು ಸೇವ್ ಮಾಡಬೇಕು ಅಥವಾ ಬರೆದಿಟ್ಟುಕೊಳ್ಳಬೇಕು. ನಂತರ ನ್ಯೂ ರಿಕ್ವೆಸ್ಟ್ ಆಪ್ಷನ್ ಪಕ್ಕದಲ್ಲಿ ಫೇಲ್ ಟ್ರಾನ್ಸಾಕ್ಷನ್ಸ್ ಎಂಬ ಆಪ್ಶನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಆರ್ ಡಿ ನಂಬರ್ ಅನ್ನು ಎಂಟ್ರಿ ಮಾಡಿ 25 ರೂಪಾಯಿಯನ್ನು ಆನ್ಲೈನ್ ಪೇಮೆಂಟ್ ಮಾಡಬೇಕಾಗುತ್ತದೆ ಆಗ ನಿಮ್ಮ ಅಪ್ಲಿಕೇಷನ್ ಸಬ್ಮಿಟ್ ಆಗುತ್ತದೆ.
ನಂತರ ಎಲ್ಲಾ ದಾಖಲಾತಿಗಳನ್ನು ಹಾಗೂ ಅಪ್ಲಿಕೇಷನ್ ಹಾಕಿದ ಪ್ರಿಂಟ್ ತೆಗೆದುಕೊಂಡು ವಿಲೇಜ್ ಅಕೌಂಟೆಂಟ್ ಅವರಿಗೆ ಕೊಡಬೇಕು. ಏಳು ದಿನಗಳ ನಂತರ ನಿಮ್ಮ ಕುಟುಂಬದ ವಂಶವೃಕ್ಷ ಪ್ರಮಾಣ ಪತ್ರ ನಿಮಗೆ ಸಿಗುತ್ತದೆ. ನೆಮ್ಮದಿ ಕೇಂದ್ರಕ್ಕೆ ಅಲೆದಾಡುವ ಬದಲು ಆನ್ಲೈನ್ ಮೂಲಕ ಅಪ್ಲಿಕೇಷನ್ ಸಲ್ಲಿಸಿ ವಿಲೇಜ್ ಅಕೌಂಟೆಂಟ್ ಅವರನ್ನು ಭೇಟಿ ಮಾಡಿದರೆ ನಿಮಗೆ ಸುಲಭವಾಗಿ ಕುಟುಂಬ ವಂಶವೃಕ್ಷ ಪ್ರಮಾಣ ಪತ್ರ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ನಿಮ್ಮ ಸಮಯ ಹಾಗೂ ಹಣವನ್ನು ಉಳಿಸಿಕೊಳ್ಳಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466