ದಿನನಿತ್ಯದ ನಮ್ಮ ಜೀವನದಲ್ಲಿ ಕೆಲವು ಪ್ರಶ್ನೆಗಳು ಕಾಡುತ್ತವೆ ಅವುಗಳೆಂದರೆ ನಿದ್ದೆಯಲ್ಲಿ ಕೆಲವೊಮ್ಮೆ ಯಾರೊ ನಮಗೆ ಎಬ್ಬಿಸಿದಂತೆ ಆಗುತ್ತದೆ ಇದಕ್ಕೆ ಕಾರಣ, ರಾತ್ರಿ ಮಲಗಿದಾಗ ನಮ್ಮ ಬಾಯಿಯಿಂದ ಲಾಲಾರಸ ಅಥವಾ ಜೊಲ್ಲು ಸೋರುತ್ತದೆ ಏಕೆ ಮತ್ತು ಇದು ಒಳ್ಳೆಯದಾ ಕೆಟ್ಟದ್ದಾ, ಕೆಲವೊಮ್ಮೆ ನಗುವಾಗ ಕಣ್ಣೀರು ಬರುತ್ತದೆ ಏಕೆ, ನಮ್ಮ ಮೊಣಕೈಗೆ ಏನಾದರೂ ತಾಗಿದಾಗ ಶಾಕ್ ಹೊಡೆದಂತಾಗುತ್ತದೆ ಏಕೆ ಇಂತಹ ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ.
ನಾವು ನಗುವಾಗ ಕಣ್ಣಿನಲ್ಲಿ ನೀರು ಬರುತ್ತದೆ. ಸೈಕಾಲಜಿ ಪ್ರಕಾರ ನಾವು ನಗುವಾಗ ಮೆದುಳಿನಲ್ಲಿ ಲಿಂಬಿಂಗ್ ಸಿಸ್ಟಮ್ ಆಕ್ಟಿವೇಟ್ ಆಗುತ್ತದೆ. ನಮ್ಮ ಎಮೊಷ್ನಲ್ಸ್ ಗೆ ಸಂಬಂಧಿಸಿದ ಒಂದು ಭಾಗ ಲಿಂಬಿಂಗ್ ಸಿಸ್ಟಮ್. ಈ ಸಿಸ್ಟಮ್ ನಲ್ಲಿ ಹೈಪೋಥಲಮಸ್ ಎಂಬುದು ನಮ್ಮ ನಗುವಿಗೆ ಕಾರಣ. ಹೈಪೋಥಲಮಸ್ ಎನ್ನುವುದು ಕೇವಲ ನಗು ಮಾತ್ರವಲ್ಲದೆ ಅಳುವುದನ್ನು ಕಂಟ್ರೋಲ್ ಮಾಡುತ್ತದೆ ಆದ್ದರಿಂದ ನಾವು ಜೋರಾಗಿ ನಕ್ಕಾಗ ಹೈಪೋಥಲಮಸ್ ಬೇರೆ ಎಮೋಷನಲ್ ಅನ್ನು ಬಿಡುಗಡೆ ಮಾಡುತ್ತದೆ ಇದರಿಂದ ಕಣ್ಣಿನಲ್ಲಿ ನೀರು ಬರುತ್ತದೆ.
ನ್ಯೂರೋಲಜಿ ಪ್ರಕಾರ ನಾವು ನಕ್ಕಾಗ ನಮ್ಮ ಮುಖ ಹಿಗ್ಗುತ್ತದೆ ಇದರಿಂದ ಕಣ್ಣೀರಿನ ನಾಳದ ಮೇಲೆ ಪ್ರೆಷರ್ ಬಿದ್ದು ಕಣ್ಣಿನಲ್ಲಿ ನೀರು ಬರುತ್ತದೆ. ಇದೊಂದು ಡಿಸಾರ್ಡರ್ ಆಗಿದ್ದು ನಮ್ಮ ಮೆದುಳಿನಲ್ಲಿರುವ ಸೆರೆಬ್ರಲ್ ಕಾರ್ಟೆಕ್ಸ್ ನಿಂದ ಕಣ್ಣಿಗೆ ಇರುವ ಕನೆಕ್ಷನ್ ನಲ್ಲಿ ಡ್ಯಾಮೇಜ್ ಆದರೆ ಈ ಡಿಸಾರ್ಡರ್ ಬರುತ್ತದೆ. ಈ ರೀತಿ ಆಗುವುದರಿಂದ ನಮ್ಮ ದೇಹದ ಮೇಲೆ ಯಾವುದೆ ರೀತಿಯ ಕೆಟ್ಟ ಪರಿಣಾಮ ಬೀರುವುದಿಲ್ಲ. ಅಳುವುದರಿಂದ ಮತ್ತು ನಗುವುದರಿಂದ ನಮ್ಮ ಸ್ಟ್ರೆಸ್ ಕಡಿಮೆಯಾಗುತ್ತದೆ.
ಮೊಣಕೈಗೆ ಏನಾದರೂ ತಾಗಿದಾಗ ಅಥವಾ ಯಾರಾದರೂ ಹೊಡೆದರೆ ಜುಮ್ ಎನಿಸಿ ಕರೆಂಟ್ ಶಾಕ್ ಹೊಡೆದಂತೆ ಆಗುತ್ತದೆ. ಮೊಣಕೈ ಕೆಳಗಿರುವ ಮೂಳೆಯನ್ನು ಫನ್ನಿ ಬೋನ್ ಎಂದು ಕರೆಯುತ್ತಾರೆ ಆದರೆ ಇದು ಬೋನ್ ಅಲ್ಲ ನರ. ಇದು ಉದ್ದವಾದ ನರವಾಗಿದೆ. ಮೊಣಕೈಗೆ ಏನಾದರೂ ತಾಗಿದಾಗ ಅಥವಾ ಹೊಡೆದಾಗ ಈ ನರ ವೈಬ್ರೇಟ್ ಆಗುತ್ತದೆ ಆದ್ದರಿಂದ ನಮಗೆ ಶಾಕ್ ಹೊಡೆದಂತೆ ಆಗುತ್ತದೆ. ಕೆಲವು ಕಪಲ್ಸ್ ಗೆ ಅವಳಿ ಮಕ್ಕಳನ್ನು ಪಡೆಯುವ ಕನಸಿರುತ್ತದೆ.
ಒಂದೇ ತಾಯಿಯ ಗರ್ಭದಲ್ಲಿ ಕೆಲವು ಸೆಕೆಂಡುಗಳ ಅಂತರದಲ್ಲಿ ಹುಟ್ಟುವ ಎರಡು ಮಕ್ಕಳನ್ನು ಟ್ವಿನ್ಸ್ ಎಂದು ಕರೆಯುತ್ತಾರೆ. ಕೆಲವು ಟ್ವಿನ್ಸ್ ಮಕ್ಕಳು ಒಂದೇ ರೀತಿ ಇರುತ್ತವೆ ಇನ್ನು ಕೆಲವು ಸ್ವಲ್ಪ ಬೇರೆಬೇರೆ ರೀತಿಯಲ್ಲಿ ಇರುತ್ತವೆ. ಪುರುಷನಲ್ಲಿರುವ ವೀರ್ಯ ಕಣಗಳು ಮಹಿಳೆಯಲ್ಲಿರುವ ಅಂಡಾಣುವಿನೊಂದಿಗೆ ಸೇರಿ ಪಿಂಡ ಉತ್ಪತ್ತಿಯಾಗುತ್ತದೆ ಆದರೆ ಕೆಲವು ಬಾರಿ ಮಹಿಳೆಯಲ್ಲಿ ಎರಡು ಅಂಡಾಶಯದಿಂದ ಎರಡು ಅಂಡಾಣುಗಳು ಬಿಡುಗಡೆಯಾಗುತ್ತದೆ. ಅಂಡಾಶಯದಲ್ಲಿ ಎರಡು ವೀರ್ಯ ಕಣಗಳು ಸೇರಿದರೆ 2 ಫರ್ಟಿಲೈಸೇಷನ್ ಆಗುತ್ತದೆ ಇದರಿಂದ ಎರಡು ಪಿಂಡಗಳು ಸೃಷ್ಟಿಯಾಗಿ ಟ್ವಿನ್ಸ್ ಹುಟ್ಟುತ್ತವೆ.
ಕೆಲವೊಮ್ಮೆ ನಾವು ಮಲಗಿದಾಗ ಯಾರೊ ಎಬ್ಬಿಸಿದಂತೆ, ಮೇಲಿನಿಂದ ಬಿದ್ದಂತೆ ಅನುಭವವಾಗುತ್ತದೆ. ಈ ಅನುಭವವನ್ನು ಹಿಪ್ನಿಜರ್ಕ್ ಎಂದು ಕರೆಯುತ್ತಾರೆ. ಈ ಅನುಭವ ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲ ಒಂದು ಸಾರಿ ಆಗಿರುತ್ತದೆ. ಅಘಾತಕಾರಿ ಪ್ರಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗದಲ್ಲಿ ಮಿಸ್ ಫೈರ್ ಆಗುವುದರಿಂದ ಈ ಅನುಭವ ಆಗುತ್ತದೆ ಎಂದು ರಿಸರ್ಚ್ ನಿಂದ ತಿಳಿದಿದೆ. ನಾವು ಮಲಗಿದ್ದಾಗ ಬಾಯಿಯಿಂದ ಲಾಲಾರಸ ಅಥವಾ ಜೊಲ್ಲು ಹೊರಗೆ ಬಿದ್ದಿರುತ್ತದೆ.
ನಮ್ಮ ದೇಹ ದಿನಕ್ಕೆ ಒಂದು ಲೀಟರ್ ಗಿಂತ ಹೆಚ್ಚು ಲಾಲಾರಸವನ್ನು ಉತ್ಪತ್ತಿ ಮಾಡುತ್ತದೆ. ಲಾಲಾರಸವನ್ನು ನಾವು ನುಂಗದೆ ಇದ್ದಾಗ ತುಟಿಗಳ ಹಿಂದೆ ಸಂಗ್ರಹವಾಗಿರುತ್ತದೆ ರಾತ್ರಿ ಮಲಗಿದಾಗ ಬಾಯಿ ತೆರೆದುಕೊಂಡಿರುತ್ತದೆ ಇದರಿಂದ ಲಾಲಾರಸ ಹೊರಗೆ ಹೋಗುತ್ತದೆ. ಇದಕ್ಕೆ ಭಯ ಬೀಳುವ ಅವಶ್ಯಕತೆ ಇರುವುದಿಲ್ಲ ಇದು ಎಲ್ಲರಲ್ಲಿಯೂ ಸಾಮಾನ್ಯವಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466