ಜುಲೈ 1, 2021ರಿಂದ ಎಸ್ ಬಿಐ ಬ್ಯಾಂಕ್ ಚೆಕ್ ಬುಕ್, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಕೆಲವು ಬದಲಾವಣೆಗಳಾಗಿವೆ ಅಂದರೆ ಹೊಸ ನಿಯಮಗಳನ್ನು ಅನುಸರಿಸಬೇಕಾಗಿದೆ. ಹಾಗಾದರೆ ಪ್ರಮುಖ ನಿಯಮಗಳು ಯಾವುವು ಈ ನಿಯಮಗಳು ಯಾವುದಕ್ಕೆ ಸಂಬಂಧಿಸಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಜುಲೈ ಒಂದರಿಂದ ಏಳು ನಿರ್ಣಾಯಕ ಬದಲಾವಣೆಗಳಾಗಿವೆ. ಎಸ್ ಬಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಈ ನಿಯಮಗಳು ಅಪ್ಲೈ ಆಗುತ್ತದೆ. ಎಸ್ ಬಿಐ ಬ್ಯಾಂಕ್ ಖಾತೆದಾರರು ತಿಂಗಳಿಗೆ 4 ಬಾರಿ ಮಾತ್ರ ಉಚಿತವಾಗಿ ಕ್ಯಾಶ್ ವಿಥ್ ಡ್ರಾ ಮಾಡಬಹುದು. ಎಸ್ ಬಿಐ ತಂದಿರುವ ನಿಯಮದ ಪ್ರಕಾರ ಯಾವುದೇ ಎಟಿಎಂ ಅಂದರೆ ಎಸ್ ಬಿಐ ಎಟಿಎಂ ಅಥವಾ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ನಾಲ್ಕು ಬಾರಿ ಮಾತ್ರ ಉಚಿತವಾಗಿ ಕ್ಯಾಶ್ ವಿಥ್ ಡ್ರಾ ಮಾಡಿಕೊಳ್ಳಬಹುದು. 5 ನೇ ಬಾರಿ ವಿಥ್ ಡ್ರಾ ಮಾಡುವುದಾದರೆ 15 ರೂಪಾಯಿ ಮತ್ತು ಜಿಎಸ್ ಟಿ ಚಾರ್ಜ್ ಮಾಡುತ್ತಾರೆ. ಎಟಿಎಂ ನಲ್ಲಿ ಹಣ ವಿಥ್ ಡ್ರಾ ಮಾಡುವುದನ್ನು ಕಡಿಮೆ ಮಾಡಿ ಆನ್ಲೈನ್ ಪೇಮೆಂಟ್ ಮಾಡುವುದು ಒಳ್ಳೆಯದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರ ಚೆಕ್ ಯೂಸೇಜ್ ಮೇಲಿನ ಚಾರ್ಜ್ ನಲ್ಲಿ ಬದಲಾವಣೆಯಾಗಿದೆ. ಚೆಕ್ ಲೀಫ್ ಬಳಕೆ ಮಾಡುತ್ತಿದ್ದರೆ ಅದನ್ನು ನಿಯಂತ್ರಣ ಮಾಡಬೇಕಾಗುತ್ತದೆ. ಎಸ್ ಬಿಐ ಖಾತೆದಾರರಾಗಿದ್ದರೆ 10 ಚೆಕ್ ಲೀಫ್ ಗಳನ್ನು ಉಚಿತವಾಗಿ ಪಡೆಯಬಹುದು ಹತ್ತಕ್ಕಿಂತ ಹೆಚ್ಚು ಚೆಕ್ ಲೀಫ್ ಬಳಕೆ ಮಾಡಿದರೆ 40 ರೂಪಾಯಿ ಮತ್ತು ಜಿಎಸ್ ಟಿ ಚಾರ್ಜ್ ಮಾಡುತ್ತಾರೆ ಅಲ್ಲದೆ ನಿಮ್ಮ ಚೆಕ್ ಬುಕ್ ಲಿಮಿಟ್ 25 ಚೆಕ್ ಲೀಫ್ ವರೆಗೆ ಇದ್ದರೆ ಅದಕ್ಕಿಂತ ಹೆಚ್ಚು ಯೂಸ್ ಮಾಡುತ್ತಿದ್ದರೆ ಅದರ ಮೇಲೆ ಕೂಡ 75 ರೂಪಾಯಿ ಮತ್ತು ಜಿಎಸ್ ಟಿ ಚಾರ್ಜ್ ಮಾಡುತ್ತಾರೆ.
ಎಮರ್ಜೆನ್ಸಿ ಸಮಯದಲ್ಲಿ ನೀವು ಹೆಚ್ಚು ಚೆಕ್ ಲೀಫ್ ಬಳಸಿದ್ದರೆ ಅದರ ಮೇಲೆ 50 ರೂಪಾಯಿ ಮತ್ತು ಜಿಎಸ್ ಟಿ ಚಾರ್ಜ್ ಮಾಡುತ್ತಾರೆ. ಎಸ್ ಬಿಐ ಖಾತೆದಾರರಾಗಿದ್ದು ಸೀನಿಯರ್ ಸಿಟಿಜನ್ ಆಗಿದ್ದರೆ ಚೆಕ್ ಲೀಫ್ ಲಿಮಿಟೇಷನ್ ಇರುವುದಿಲ್ಲ. ಎಲ್ ಪಿಜಿ ಸಿಲಿಂಡರ್ ಮೇಲೆ 25 ರೂಪಾಯಿ ದರ ಹೆಚ್ಚಾಗಿದೆ ಏಕೆಂದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಏರಿಕೆಯಾಗಿದೆ ಅಲ್ಲದೆ ಗೂಡ್ಸ್ ಎಂಡ್ ಟ್ರಾನ್ಸಫೋರ್ಟೇಷನ್ ಬೆಲೆ ಹೆಚ್ಚಳವಾಗಿರುವುದರಿಂದ ಎಲ್ ಪಿಜಿ ಸಿಲಿಂಡರ್ ದರ ಹೆಚ್ಚಾಗಿದೆ. ಟಿಡಿಎಸ್ ಮೇಲೆ ಹೆಚ್ಚಳ ಪಾವತಿ ಹಣ ಸರಿಯಾದ ಸಮಯಕ್ಕೆ ಇನ್ ಕಮ್ ರಿಟರ್ನ್ಸ್ ಫೈಲ್ ಮಾಡದೆ ಇದ್ದರೆ, ವಾರ್ಷಿಕವಾಗಿ 50 ಸಾವಿರಕ್ಕಿಂತ ಹೆಚ್ಚು ಟಿಡಿಎಸ್ ಪೇ ಮಾಡುತ್ತಿದ್ದರೆ, ಎರಡು ವರ್ಷದಿಂದ ನಿಮ್ಮ ಇನ್ ಕಮ್ ರಿಟರ್ನ್ಸ್ ಫೈಲ್ ಮಾಡದೆ ಇದ್ದರೆ ಟಿಡಿಎಸ್ ಮೇಲೆ ಹೆಚ್ಚು ಪೆನಾಲ್ಟಿ ಕಟ್ಟಬೇಕಾಗುತ್ತದೆ ಹಾಗಾಗಿ ಸರಿಯಾದ ಸಮಯಕ್ಕೆ ಇನ್ ಕಮ್ ರಿಟರ್ನ್ಸ್ ಪೈಲ್ ಮಾಡುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.
ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ನಲ್ಲಿ ಖಾತೆದಾರರಾಗಿದ್ದರೆ ಕಳೆದ ವರ್ಷ ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಮರ್ಜ್ ಆಗಿದ್ದು ಈಗ ಆ ಬ್ಯಾಂಕ್ ನ ಐಎಫ್ಎಸ್ ಸಿ ಕೋಡ್ ಬದಲಾಗಲಿದೆ. ಕಳೆದ ವರ್ಷ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಸಬ್ ಮರ್ಜ್ ಆಗಿ ಯೂನಿಯನ್ ಬ್ಯಾಂಕ್ ಎಂಬ ಹೆಸರನ್ನು ಪಡೆದುಕೊಂಡಿತು ಇದೀಗ ಯೂನಿಯನ್ ಬ್ಯಾಂಕ್ ಹೊಸ ಚೆಕ್ ಬುಕ್ ವಿತರಣೆ ಮಾಡಲಿದೆ.
ಹಳೆಯ ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ನ ಚೆಕ್ ಬುಕ್ ನೀವು ಬಳಸುತ್ತಿದ್ದರೆ ಅವು ಇನ್ ವ್ಯಾಲಿಡ್ ಆಗಿರುತ್ತದೆ. ಹೀರೋ ಮೋಟಾರ್ ಕಾರ್ಪೋ ನ ಉತ್ಪನ್ನಗಳ ಬೆಲೆ ಹೆಚ್ಚಾಗಲಿದೆ. ಸರಕು ಉತ್ಪಾದನೆಗಳ ಮೇಲೆ ಬೆಲೆ ಹೆಚ್ಚಾಗಿರುವುದರಿಂದ ಹೀರೋ ಮೋಟಾರ್ ಕಾರ್ಪೋ ಅವರು ಉತ್ಪಾದಿಸುವ ಉತ್ಪನ್ನಗಳ ಬೆಲೆ ಹೆಚ್ಚಾಗಿರುತ್ತದೆ. ಹೀಗೆ ಹಣದ ವಿಥ್ ಡ್ರಾ, ಎಲ್ ಪಿಜಿ ಗ್ಯಾಸ್ ಸಿಲಿಂಡರ್, ಬ್ಯಾಂಕ್ ಚೆಕ್ ಬುಕ್ ಈ ರೀತಿಯ ಹಲವು ವಿಷಯಗಳಲ್ಲಿ ಬದಲಾವಣೆಯಾಗಿದೆ ಆದ್ದರಿಂದ ನಿಮ್ಮ ಖರ್ಚು ಹಾಗೂ ಬ್ಯಾಂಕ್ ವ್ಯವಹಾರವನ್ನು ಚೆಕ್ ಮಾಡಿಕೊಳ್ಳಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466