ಸಾಮಾನ್ಯವಾಗಿ ವಾಜೀಕರಣ ಎನ್ನುವುದು ಪುರುಷ ಮತ್ತು ಮಹಿಳೆಯರ ಜೀವನದಲ್ಲಿ ಒಂದು ಪ್ರಮುಖ ಭಾಗವಾಗಿದೆ. ಮುಖ್ಯವಾಗಿ ಪುರುಷರಲ್ಲಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ವಾಜೀಕರಣ ಚಿಕಿತ್ಸೆಯಲ್ಲಿ ಬಳಸುವ ಪ್ರಮುಖ ಔಷಧಿ ಎಂದರೆ ಅಶ್ವಗಂಧ. ಅಶ್ವಗಂಧವನ್ನು ಹೇಗೆ ಉಪಯೋಗಿಸಬೇಕು ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ವಾಜೀಕರಣ ದ್ರವ್ಯ ಎಂದು ಕರೆಯಲ್ಪಡುವ ಅಶ್ವಗಂಧವನ್ನು ವಾಜೀಕರಣ ಚಿಕಿತ್ಸೆಯಲ್ಲಿ ಬಳಸುತ್ತಾರೆ. ಆಧ್ಯಾತ್ಮದಲ್ಲಿಯೂ ಸಹ ಲೈಂ ಗಿಕತೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಲೈಂ ಗಿಕತೆಯು ಒಂದು ಪ್ರಮುಖ ಭಾಗವಾಗಿದೆ. ಅಶ್ವಗಂಧದ ಗಿಡಗಳು ಬೆಳೆಯುತ್ತವೆ, ಗಿಡವನ್ನು ಕಿತ್ತು ಅದರ ಬೇರುಗಳನ್ನು ನೆರಳಿನಲ್ಲಿ ಒಣಗಿಸಿ ಚೂರ್ಣಗಳನ್ನು ಸಿದ್ಧಮಾಡಿ ಆ ಚೂರ್ಣಗಳನ್ನು ಬಳಸುತ್ತಾರೆ. ಲೈಂ ಗಿ ಕ ಶಕ್ತಿಯನ್ನು ಪಡೆಯಲು ಅಶ್ವಗಂಧ ಪ್ರಮುಖ ಔಷಧಿ ಆಗಿದೆ ಎಂದು ಚರಕ ಸಂಹಿತೆಯಲ್ಲಿ ಉಲ್ಲೇಖವಾಗಿದೆ. ಅಶ್ವಗಂಧ ಸೇವಿಸುವುದರಿಂದ ಹಲವು ಆರೋಗ್ಯಕರ ಪ್ರಯೋಜನಗಳಿವೆ. ಪುರುಷರು ತಮ್ಮ ಪೌರುಷ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಶ್ವಗಂಧವನ್ನು ಉಪಯೋಗಿಸಬಹುದು. ಅಶ್ವಗಂಧ ಚೂರ್ಣ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುತ್ತದೆ.
ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಅರ್ಧ ಅಥವಾ ಒಂದು ಚಮಚ ಅಶ್ವಗಂಧ ಚೂರ್ಣವನ್ನು ಒಂದು ಲೋಟ ಹಾಲು ಅಥವಾ ನೀರಿನೊಂದಿಗೆ ಸೇವಿಸಬೇಕು ಹೀಗೆ ಸತತವಾಗಿ ಮೂರು ತಿಂಗಳು ಮಾಡಬೇಕು. ಹೀಗೆ ಮಾಡುವುದರಿಂದ ಮದುವೆಯಾದ ಪುರುಷರು ತಮ್ಮ ಪೌರುಷ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ನೂರುಕಾಲ ಜೀವನದಲ್ಲಿ ಸಂತೋಷವನ್ನು ಪಡೆಯಬಹುದು. ಅಶ್ವಗಂಧವು ಪುರುಷರಲ್ಲಿ ಕುದುರೆಯಂತಹ ಶಕ್ತಿಯನ್ನು ಕೊಡುತ್ತದೆ. ಇದರಿಂದ ಸಾಂಸಾರಿಕ ಜೀವನವನ್ನು ಸುಂದರವಾಗಿ, ವೈಭವೋಪೇತವಾಗಿ ನಡೆಸಿಕೊಂಡು ಹೋಗಬಹುದು.
ಅಶ್ವಗಂಧ ಸೇವನೆಯಿಂದ ಲೈಂ ಗಿಕ ಶಕ್ತಿಯ ಜೊತೆಗೆ ನರಗಳ ದೌರ್ಬಲ್ಯಕ್ಕೂ ಸಹ ಪರಿಹಾರ ನೀಡುತ್ತದೆ. ನರಗಳ ದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವವರು ಅಶ್ವಗಂಧ ಚೂರ್ಣವನ್ನು ಹಾಲು ಅಥವಾ ತುಪ್ಪದೊಂದಿಗೆ ಸೇರಿಸಿ ಸೇವಿಸಬೇಕು. ಪ್ಯಾರಾಲಿಸಿಸ್ ಅಟ್ಯಾಕ್ ಆದವರು ಸಹ ಅಶ್ವಗಂಧ ಚೂರ್ಣವನ್ನು, ತುಪ್ಪ ಹಾಗೂ ಹಾಲನ್ನು ಸೇರಿಸಿ ಮಿಕ್ಸ್ ಮಾಡಿ ಬೆಳಗ್ಗೆ ಮತ್ತು ಸಾಯಂಕಾಲ ಸೇವಿಸಬೇಕು. ಅಶ್ವಗಂಧ ಚೂರ್ಣವನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ವಯೋಸಹಜವಾದ ಹಲವು ಖಾಯಿಲೆಗಳಿಗೆ ಅಶ್ವಗಂಧವು ಔಷಧಿಯಾಗಿದೆ. ಗಿಡಮೂಲಿಕೆಯನ್ನು ಉಪಯೋಗಿಸುವುದರಿಂದ ಯಾವುದೇ ಅಡ್ಡಪರಿಣಾಮವಾಗುವುದಿಲ್ಲ.