ಆತ್ಮೀಯ ಓದುಗರೇ ನೀವು ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಈ ಚಿಕ್ಕ ಕೆಲಸ ಮಾಡಿದ್ರೆ ಖಂಡಿತ ನಿಮ್ಮ ಅರೋಗ್ಯ ವೃದ್ದಿಯಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ನೀವು ತೂಕವನ್ನು ಕಡಿಮೆ ಮಾಡಿಕೊಳ್ಳಲು ನಿಂಬೆ ಮತ್ತು ಜೇನು ತುಪ್ಪದ ಫಾರ್ಮುಲಾ ಖಂಡಿತ ಬಳಸಿರುತ್ತೀರಿ ಹಾಗೆ ಗ್ರೀನ್ ಟೀ ಯನ್ನು ಕೂಡ ಬಳಸಿರಬಹುದು ಆದರೆ ನೀವು ಯಾವತ್ತಾದ್ರೂ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದ್ದೀರಾ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ತುಂಬಾ ಲಾಭಗಳಿವೆ ಆದರೆ ಇದರ ಬಗ್ಗೆ ತುಂಬಾ ಕಡಿಮೆ ಜನರಿಗೆ ತಿಳಿದಿದೆ.ಬೆಳ್ಳುಳ್ಳಿ ಒಂದು ಚಮತ್ಕಾರದ ವಸ್ತುವಾಗಿದೆ..ಇದರಲ್ಲಿ ಹಲವು ರೀತಿಯ ಔಷಧಿ ಗುಣಗಳು ಇವೆ.ಒಂದು ವೇಳೆ ನೀವು ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುತ್ತಿದ್ದರೆ ನೀವು ಇದರ ಎಲ್ಲ ಲಾಭವನ್ನು ಪಡೆಯುವಿರಿ
ಬೆಳ್ಳುಳ್ಳಿ ಒಂದು ನ್ಯಾಚುರಲ್ ಆ್ಯಂಟಿ ಬಯಾಟಿಕ್ ಆಗಿದೆ.ಇದು ಹಲವು ರೀತಿಯ ರೋಗಗಳನ್ನು ದೂರ ಮಾಡಲು ಸಹಕಾರಿಯಾಗಿದೆ ಜೊತೆಗೆ ಇದರ ಹೀಲಿಂಗ್ ಗುಣವು ತುಂಬಾ ಪ್ರಭಾವಶಾಲಿಯಾಗಿದೆ. ಹೀಗಿರುವಾಗ ನೀವು ಒಂದು ಕಪ್ ಟೀ ಜೊತೆ ದಿನದ ಪ್ರಾರಂಭ ಮಾಡುತ್ತಿದ್ದರೆ ನೀವು ಈ ಹ್ಯಾಬಿಟ್ ಅನ್ನು ಬಿಟ್ಟು ಬೆಳ್ಳುಳ್ಳಿ ಬಳಸಿ.ಮುಂಜಾನೆ ಸಮಯ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ತುಂಬ ಲಾಭಗಳಿವೆ .
6 )ಹೈ ಬಿಪಿಯಿಂದ ಮುಕ್ತಿ:ಬೆಳ್ಳುಳಿ ತಿನ್ನುವುದರಿಂದ ಹೈ ಬೀಪಿಯಿಂದ ಮುಕ್ತಿ ಸಿಗುತ್ತದೆ. ಸಾಮಾನ್ಯವಾಗಿ ಬೆಳ್ಳುಳ್ಳಿ ಬ್ಲಡ್ ಸರ್ಕುಲೇಶನ್ ಕಂಟ್ರೋಲ್ ಮಾಡುವುದರಲ್ಲಿ ತುಂಬಾ ಸಹಕಾರಿಯಾಗಿದೆ.ಹೈ ಬಿಪಿ ಸಮಸ್ಯೆಯಿಂದ ಮುಕ್ತಿ ಹೊಂದಲು ದಿನವೂ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು.ವೈದ್ಯರ ಪ್ರಕಾರ ಯಾರಿಗೆ ಅಧಿಕ ರಕ್ತದ ಒತ್ತಡ ಸಮಸ್ಯೆ ಇದೆಯೋ ಅವರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದು ತುಂಬಾ ಒಳ್ಳೆಯದು.
5)ಹೃದಯದ ಆರೋಗ್ಯ:ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬೆಳ್ಳುಳ್ಳಿ ದೂರ ಮಾಡುತ್ತದೆ .ಬೆಳ್ಳುಳ್ಳಿ ತಿನ್ನುವುದರಿಂದ ರಕ್ತದೊತ್ತಡ ಆಗುವುದಿಲ್ಲ ಮತ್ತು ಹಾರ್ಟ್ ಅಟ್ಯಾಕ್ ನ ಅಪಾಯ ಕಡಿಮೆಯಾಗುತ್ತದೆ.ಬೆಳ್ಳುಳ್ಳಿ ಮತ್ತು ಜೇನು ತುಪ್ಪದ ಮಿಶ್ರಣ ತಿನ್ನುವುದರಿಂದ ಹೃದಯದ ತನಕ ಹೋಗುವ ದಮನಿಯಲ್ಲಿ ಸೇರಿದ ಅಂಶ ಕ್ಲೀನ್ ಆಗುತ್ತದೆ.ಇದರಿಂದ ಬ್ಲಡ್ ಸರ್ಕುಲೇಶನ್ ಚೆನ್ನಾಗಿ ಆಗುತ್ತದೆ.
4)ಹೊಟ್ಟೆಗೆ ಸಂಬಂಧಿಸಿದ ರೋಗಕ್ಕೆ ಮುಕ್ತಿ .ಹೊಟ್ಟೆಗೆ ಸಂಬಂಧಿಸಿದ ಡಯೇರಿಯಾದಂತ ರೋಗಿಗಳಿಗೆ ಈ ಬೆಳ್ಳುಳ್ಳಿ ತುಂಬಾ ಸಹಕಾರಿಯಾಗಿದೆ.ಬಿಸಿ ನೀರಿನಲ್ಲಿ ಬೆಳ್ಳುಳ್ಳಿ ಕುದಿಸಿ ಕುಡಿಯುವುದರಿಂದ ಡಯೇರಿಯಾ ದಂತಹ ರೋಗದಿಂದ ಮುಕ್ತಿ ಸಿಗುತ್ತದೆ.ಅಲ್ಲದೆ ಬೆಳ್ಳುಳ್ಳಿ ಶರೀರದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರತೆಗೆಯುವ ಕೆಲಸ ಮಾಡುತ್ತದೆ.
3)ಹಲ್ಲು ನೋವಿಗೆ ಮುಕ್ತಿ ಸಿಗುತ್ತದೆ.:ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ನೋವು ನಿವಾರಕ ಗುಣಗಳು ತುಂಬಾ ಇರುತ್ತವೆ.ಒಂದು ವೇಳೆ ನಿಮ್ಮ ಹಲ್ಲುಗಳಲ್ಲಿ ನೋವಿದ್ದರೆ ಬೆಳ್ಳುಳ್ಳಿಯ ಒಂದು ಪೀಸನ್ನು ನೋವು ಇರುವ ಜಾಗದಲ್ಲಿ ಇಟ್ಟುಕೊಳ್ಳಿ
ಕೆಲವೇ ಕ್ಷಣಗಳಲ್ಲಿ ನಿಮ್ಮ ಹಲ್ಲು ನೋವು ಸುಧಾರಿಸುತ್ತದೆ.ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ನರಗಳ ನೋವಿಗೂ ಮುಕ್ತಿ ಸಿಗುತ್ತದೆ.
2)ಟೆನ್ಷನ್ನಿಂದ ಮುಕ್ತಿ:ಬೆಳ್ಳುಳ್ಳಿ ಟೆನ್ಷನ್ ಓಡಿಸಲು ಸಹಾಯಕಾರಿಯಾಗಿದೆ.ಕೆಲವು ಬಾರಿ ನಮ್ಮ ಹೊಟ್ಟೆಯಲ್ಲಿ ಕೆಲವು ಆಸಿಡ್ ರೆಡಿಯಾಗುತ್ತದೆ ,ಇದರಿಂದ ನಮಗೆ ಭಯ ಆಗುತ್ತದೆ .ಬೆಳ್ಳುಳ್ಳಿ ಇದನ್ನು ತಡೆಯುತ್ತದೆ.ಬೆಳ್ಳುಳ್ಳಿ ತಿನ್ನುವುದರಿಂದ ತಲೆನೋವು ಕೂಡ ಕಡಿಮೆಯಾಗುತ್ತದೆ.
1)ಡೈಜೆಷನ್ ಸರಳವಾಗುತ್ತದೆ.:ಬೆಳ್ಳುಳ್ಳಿಯು ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುತ್ತದೆ ಮತ್ತು ನಿಮಗೆ ಚೆನ್ನಾಗಿ ಹಸಿವು ಕೂಡ ಆಗುವಂತೆ ಮಾಡುತ್ತದೆ.ಇದರಲ್ಲಿ ಹಲವು ರೀತಿಯ ಔಷಧಿ ಗುಣಗಳು ಇವೆ.ಒಂದು ವೇಳೆ ನೀವು ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವನೆ ಮಾಡುತ್ತಿದ್ದರೆ ನೀವು ಇದರ ಎಲ್ಲ ಲಾಭವನ್ನು ಪಡೆಯುವಿರಿ .