ನಮ್ಮ ಭಾರತದಲ್ಲಿ ಈಗ ಎಲ್ಲರ ಮನೆಗಳಲ್ಲಿ ಬೆಳಗಿನ ತಿಂಡಿ ಸಮಯಕ್ಕೆ ಮಧ್ಯಾಹ್ನದ ಊಟದ ಸಮಯಕ್ಕೆ ಹಾಗೂ ರಾತ್ರಿಯ ಊಟದ ಸಮಯದ ಮುಂಚೆ ಅಡುಗೆ ಮನೆಯಿಂದ ಕುಕ್ಕರ್ ಶಿಳ್ಳೆ ಶಬ್ದಗಳು ಕೇಳಿಬರುತ್ತವೆ. ಕೆಲವರ ಮನೆಗಳಲ್ಲಿ ಈ ಮಧ್ಯೆ ಕೂಡ ಇಂತಹ ಶಬ್ದಗಳು ಮಾಮೂಲಿ. ಇಂದು ನಾವೆಲ್ಲರೂ ನಮ್ಮ ಸಮಯ ಉಳಿತಾಯ ಮಾಡಲು ಮತ್ತು ಕೆಲಸವನ್ನು ಸುಲಭ ಮಾಡಿಕೊಳ್ಳಲು ನಮ್ಮ ಪ್ರತಿಯೊಂದು ಕೆಲಸವನ್ನು ಇದೇ ರೀತಿ ಮಾಡಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದೇವೆ. ಆದ್ದರಿಂದ ನಾವು ಇಲ್ಲಿ ಕುಕ್ಕರ್ ಮಾಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈಗಿನ ಕಾಲದಲ್ಲಿ ಪ್ರತಿಯೊಂದು ಅಡುಗೆಯನ್ನು ಮಾಡಲು ಸುಲಭವಾಗಿ ಕುಕ್ಕರ್ ಅನ್ನು ಬಳಸುವುದು ಸರ್ವೇಸಾಮಾನ್ಯವಾಗಿದೆ. ಅಡುಗೆ ಮಾಡಲು ಇಂದು ಹಿಂದಿನ ಹಾಗೆ ಮಡಿಕೆ ಕುಡಿಕೆಗಳು ಇಲ್ಲ. ಪ್ರತಿಯೊಬ್ಬರ ಮನೆಯಲ್ಲಿ ಅಲ್ಯೂಮಿನಿಯಂ ಕುಕ್ಕರ್ ಸೆಟ್ ಬಂದು ಕುಳಿತಿರುತ್ತದೆ. ಬೇರೆ ಯಾವುದೇ ಅಡುಗೆ ಮಾಡುವ ಪದ್ಧತಿಗಳಿಗೆ ಹೋಲಿಸಿದರೆ ಕುಕ್ಕರ್ನಲ್ಲಿ ಅಡುಗೆ ಮಾಡಿ ತಿನ್ನುವುದು ಆರೋಗ್ಯಕರ ಮತ್ತು ಬಹಳ ಸುಲಭವಾಗಿ ತುಂಬ ಬೇಗನೆ ಆಗುತ್ತದೆ. ಕುಕ್ಕರ್ ನ ತಯಾರಿಸಲು ಮೊದಲು ಅಲ್ಯೂಮಿನಿಯಂ ಅನ್ನು ಬೆಂಕಿಯಲ್ಲಿ ಕಾಸಿ ಅದನ್ನು ಒಂದು ಸೀಟಿನ ಹಾಗೆ ಅದರ ಅಚ್ಚಿನಲ್ಲಿ ಹೊಯ್ಯುತ್ತಾರೆ.

ನಂತರ ಅದನ್ನು ಮಶಿನ್ ಗೆ ಕೊಟ್ಟು ಅದರ ಉದ್ದಗಲವನ್ನು ಹೆಚ್ಚಿಸುತ್ತಾರೆ. ನಂತರ ಅದನ್ನು ತಯಾರಿಸುವ ಆಕಾರಕ್ಕೆ ಮಾಡುತ್ತಾರೆ. ಇದಾದನಂತರ ಗುಂಡಿ ಮಾಡುವ ಮಿಷನ್ ನಲ್ಲಿ ಅಲ್ಯುಮಿನಿಯಂನ ಸೀಟನ್ನು ಹಾಕಿ ಅದರ ಆಕಾರಕ್ಕೆ ತರುತ್ತಾರೆ. ನಂತರ ತಿರುಗುವ ಮಷೀನ್ ಗೆ ಕೊಟ್ಟು ಅದಕ್ಕೆ ಸರಿಯಾದ ಆಕಾರವನ್ನು ನೀಡಿ ಶೈನಿಂಗನ್ನು ನೀಡುತ್ತಾರೆ. ಈ ರೀತಿಯಾಗಿ ಕುಕ್ಕರನ್ನು ತಯಾರಿಸುತ್ತಾರೆ. ಕುಕ್ಕರ್ನಲ್ಲಿ ಅಡುಗೆ ಪದಾರ್ಥಗಳನ್ನು ಬೇಯಿಸಿ ತಿನ್ನುವುದರಿಂದ ದ್ವಂದ್ವ ನಿಲುವುಗಳು ಒಬ್ಬೊಬ್ಬರಿಂದ ಒಂದೊಂದು ರೀತಿ ವ್ಯಕ್ತವಾಗುತ್ತಿವೆ.

ಕೆಲವರು ಕುಕ್ಕರ್ ಒಳಭಾಗದಲ್ಲಿ ಬೇಯುವ ಯಾವುದೇ ಆಹಾರ ಪದಾರ್ಥಗಳು ಅತಿ ಹೆಚ್ಚಿನ ತಾಪಮಾನದಿಂದ ತಮ್ಮಲ್ಲಿನ ಪೌಷ್ಠಿಕ ಸತ್ವಗಳನ್ನು ಕಳೆದುಕೊಳ್ಳುತ್ತವೆ ಎಂದು ಹೇಳುತ್ತಾರೆ. ಇನ್ನು ಕೆಲವರು ಕೇವಲ ಸ್ವಲ್ಪ ಹೊತ್ತು ಮಾತ್ರ ಆಹಾರ ಪದಾರ್ಥಗಳು ಹೆಚ್ಚಿನ ತಾಪಮಾನಕ್ಕೆ ಒಳಪಡುವುದರಿಂದ ಅದರಲ್ಲಿರುವ ಪೌಷ್ಟಿಕಾಂಶ ಹಾಗೆ ಉಳಿಯುತ್ತದೆ ಎಂದು ಹೇಳುತ್ತಾರೆ. ಏನಾದರೂ ಈಗಿನ ದಿನಮಾನದಲ್ಲಿ ಕುಕ್ಕರ್ ನ ಬಳಕೆ ಸರ್ವೇಸಾಮಾನ್ಯವಾಗಿದೆ. ಇದು ಸಮಯವನ್ನು ಉಳಿಸುತ್ತದೆ. ಈಗಿನ ಕೆಲಸದ ಆತುರದಿಂದ ಸಮಯವನ್ನು ಉಳಿಸಿಕೊಳ್ಳಲು ಇದು ಅವಶ್ಯಕತೆಯೇ ಆಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!