ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಲ್ಲಿ ಮಂಡಿ ಕೀಲುನೋವು ಸಮಸ್ಯೆ ಕಾಣಿಸುತ್ತದೆ, ಆದ್ರೆ ಇದಕ್ಕೆ ಇಂತಹ ಮುಖ್ಯ ಕಾರಣ ಎಂಬುದಾಗಿ ಹೇಳಲು ಆಗೋದಿಲ್ಲ. ನಾವುಗಳು ಸೇವಿಸುವಂತ ಆಹಾರ ಪದ್ಧತಿ ಅಥವಾ ಗಾಳಿ ನೀರು ಅಥವಾ ವಯಸ್ಸಾದಂತೆ ಪ್ರೊಟೀನ್ ವಿಟಮಿನಗಳ ಕೊರತೆ ಹೆಚ್ಚಾಗುವುದು ಇದೆಲ್ಲ ಕಾರಣಗಳಿಂದ ಕೂಡ ಮಂಡಿ ಕೀಲುನೋವು ಬರಬಹುದು ಆದ್ರೆ, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಉತ್ತಮ.
ಮುಖ್ಯವಾಗಿ ವಿಷಯಕ್ಕೆ ಬರೋಣ ಮಂಡಿ ಕೀಲುನೋವಿಗೆ ಮನೆಯಲ್ಲೇ ಒಂದಿಷ್ಟು ಮನೆಮದ್ದುಗಳನ್ನು ಹೇಗೆ ಮಾಡಿಕೊಳ್ಳಬಹುದು ಹಾಗು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ಈ ಮೂಲಕ ತಿಳಿಯೋಣ ಬನ್ನಿ.
ಈ ಪದಾರ್ಥವನ್ನು ಸೇವಿಸುವುದರಿಂದ ಮೂಳೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯಾಗಲಿ ನಿವಾರಣೆ ಆಗುತ್ತದೆ ಮತ್ತು ನಾನಾ ರೀತಿಯ ಆರೋಗ್ಯ ಪ್ರಯೋಜನಗಳನ್ನು ಇದು ನೀಡುತ್ತದೆ. ಈ ಪದಾರ್ಥವನ್ನು ಪ್ರತಿದಿನ ಎರಡರಂತೆ ಸೇವಿಸುತ್ತಾ ಬಂದರೆ ನಿಮ್ಮ ಆರೋಗ್ಯದಲ್ಲಿ ತುಂಬಾ ಬದಲಾವಣೆಗಳನ್ನು ನೀವು ಕಾಣಬಹುದು. ಈ ಪದಾರ್ಥದ ಯಾವುದೆಂದರೆ ಒಣ ಖರ್ಜೂರ. ಇವನ ಖರ್ಜೂರವನ್ನು ಪ್ರತಿದಿನ ಸೇವಿಸುವುದರಿಂದ ಕೀಲು ನೋವು,ಮಂಡಿ ನೋವು, ರಕ್ತ ಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಒಣ ಖರ್ಜೂರದಲ್ಲಿ ಎರಡು ವಿಧ ಇರುತ್ತದೆ. ಅದರ ಒಣಗಿದ ಖರ್ಜೂರವನ್ನು ಸೇವಿಸುವುದರಿಂದ ತುಂಬಾನೇ ಉತ್ತಮ ಯಾಕೆಂದರೆ ಈ ಖರ್ಜೂರದಲ್ಲಿ ನೀರು ಹೋಗಿ ಆ ನೀರಿನಲ್ಲಿ ಇರುವಂತಹ ಉತ್ತಮವಾದ ಅಂಶ ಖರ್ಜೂರದಲ್ಲಿ ಉಳಿದಿರುತ್ತದೆ. ಆದ್ದರಿಂದ ಒಣಗಿದ ಖರ್ಜೂರವನ್ನು ಸೇವಿಸಿದರೆ ತುಂಬಾ ಉತ್ತಮ ಪ್ರಯೋಜನಗಳು ನಿಮಗೆ ಸಿಗುತ್ತದೆ. ಇದರ ಕಾರಣದಿಂದಾಗಿ ಪ್ರತಿ ವೈದ್ಯರು ಹೆಚ್ಚಾಗಿ ಹೇಳುವುದು ಒಣ ಖರ್ಜೂರವನ್ನು ಪ್ರತಿನಿತ್ಯ ಸೇವಿಸಿ ಅಂತ. ಮಂಡಿ ನೋವು, ಕೀಲು ನೋವು, ಬೆನ್ನು ನೋವು ಇಂತಹ ಯಾವುದೇ ಸಮಸ್ಯೆ ಇರಲಿ ಅದನ್ನು ಪರಿಹರಿಸುತ್ತದೆ.ಒಣ ಖರ್ಜೂರವನ್ನು ಪ್ರತಿದಿನ ಎರಡರಂತೆ ಸೇವಿಸುತ್ತ ಬರಬೇಕು ಇದರಿಂದ ಮೂಳೆಗಳು ಬಲವಾಗುತ್ತದೆ. ಇದರ ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಸಾಗುತ್ತದೆ.
ಒಣ ಖರ್ಜೂರ ಮಂಡಿ ನೋವಿನ ಸಮಸ್ಯೆ ಮತ್ತು ಮೂಳೆಗಳಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಯಾಗಲಿ ಪರಿಹಾರ ನೀಡುತ್ತದೆ. ಇನ್ನು ಗರ್ಭಿಣಿ ಸ್ತ್ರೀಯರು ತಪ್ಪದೇ ಈ ಖರ್ಜೂರವನ್ನು ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಡೆಲಿವರಿ ಸಮಯದಲ್ಲಿ ನಾರ್ಮಲ್ ಡೆಲಿವರಿ ಆಗೋದಕ್ಕೆ ಇದು ಸಹಾಯ ಮಾಡುತ್ತದೆ. ಯಾರು ರಕ್ತದ ಒತ್ತಡ ಸಮಸ್ಯೆ ಮತ್ತು ಅನಿಮಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಪ್ರತಿದಿನ ಎರಡರಂತೆ ಒಣ ಖರ್ಜೂರವನ್ನು ನೆನೆಸಿಟ್ಟು ಮಾರನೇ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ. ಒಣ ಖರ್ಜೂರದಲ್ಲಿ ವಿಟಮಿನ್-ಎ, ವಿಟಮಿನ್ ಸಿ,ಐರನ್ ಅಂಶ ಹೇರಳವಾಗಿರುತ್ತದೆ. ಇದು ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುವುದಕ್ಕೆ ಸಹಾಯಮಾಡುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಇದು ನಿವಾರಣೆ ಮಾಡುತ್ತದೆ. ಅನಗತ್ಯ ಕೊಬ್ಬನ್ನು ಕರಗಿಸುವುದಕ್ಕೆ ಇದು ಸಹಾಯ ಮಾಡುತ್ತದೆ. ಒಣ ಖರ್ಜೂರದಲ್ಲಿ ಇಷ್ಟೆಲ್ಲಾ ಪೋಷಕಾಂಶಗಳು ಇರುತ್ತದೆ. ಪ್ರತಿದಿನ ಸೇವಿಸುತ್ತಾ ಬಂದರೆ ಉತ್ತಮ ಆರೋಗ್ಯವನ್ನು ನೀವು ಪಡೆಯಬಹುದು. ಪ್ರತಿದಿನ 2 ಖರ್ಜೂರವನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದು ಒಳ್ಳೆಯದು.