ಸಾಮಾಜಿಕ ಜಾಲತಾಣಗಳು ಎಲ್ಲರ ಮೊಬೈಲ್ ಗಳಲ್ಲಿ ಇರುವುದು ಸಹಜ. ನಾವು ಇದನ್ನು ಮನೋರಂಜನೆಗಾಗಿ ಬಳಸುತ್ತೇವೆ. ಹಾಗೆಯೇ ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಇಷ್ಟವಾದ ಭಾವಚಿತ್ರಗಳನ್ನು ಹಾಕುತ್ತೇವೆ. ಹಾಗೆಯೇ ಸಿನಿಮಾ ಕ್ಷೇತ್ರದ ನಟ ಮತ್ತು ನಟಿಯರು ಕೂಡ ತಮ್ಮ ಭಾವಚಿತ್ರಗಳನ್ನು ಹಾಕುತ್ತಾರೆ. ಆಗ ಅವರವರ ಅಭಿಮಾನಿಗಳು ಲೈಕ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ನಕಾರಾತ್ಮಕವಾಗಿ ಕಮೆಂಟ್ ಮಾಡುತ್ತಾರೆ. ಆದ್ದರಿಂದ ನಾವು ಇಲ್ಲಿ ನಟಿ ಪ್ರಿಯಾಮಣಿ ಅವರ ಬಗ್ಗೆ ಮಾತನಾಡಿದ್ದಕ್ಕೆ ಪ್ರಿಯಾಮಣಿ ಅವರು ಮಾತನಾಡಿದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸಾಮಾಜಿಕ ಜಾಲತಾಣಗಳು ಬಹಳ ಇವೆ. ಅವುಗಳೆಂದರೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ವಾಟ್ಸಾಪ್ ಇನ್ನೂ ಮುಂತಾದವುಗಳು. ಇವೆಲ್ಲವನ್ನು ಯಾರು ಬೇಕಾದರೂ ಬಳಸಬಹುದು. ಇದೊಂದು ಎಲ್ಲರಿಗೂ ಮುಕ್ತ ವೇದಿಕೆ ಎಂದು ಹೇಳಬಹುದು. ಕೆಲವರು ತಮ್ಮ ಇಷ್ಟವಾದ ನಟ ನಟಿಯರಿಗೆ ಸಕಾರಾತ್ಮಕವಾಗಿ ಕಮೆಂಟ್ ಮಾಡಿತ್ತಾರೆ. ಆದರೆ ಇನ್ನು ಕೆಲವರು ನಕಾರಾತ್ಮಕವಾಗಿ ಕಮೆಂಟ್ ಮಾಡುತ್ತಾರೆ. ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದಾದರೆ ಕೇವಲ ಅಂದ ಮತ್ತು ಚಂದ ಇದ್ದರೆ ಸಾಲುವುದಿಲ್ಲ. ಪ್ರತಿಭೆ ಕೂಡ ಬಹಳ ಮುಖ್ಯ ಆಗಿರುತ್ತದೆ. ಹಾಗೆಯೇ ನಟಿ ಪ್ರಿಯಾಮಣಿ ಪಂಚಭಾಷಾ ತಾರೆ ಆಗಿದ್ದಾರೆ.
ಇವರು ಸರಿ ಸುಮಾರು ಐದು ಭಾಷೆಗಳಲ್ಲಿ ನಟನೆ ಮಾಡಿದ್ದಾರೆ. ಈಗ ಅವರಿಗೆ ಮದುವೆ ಆಗಿದೆ. ಒಬ್ಬ ಮುಸ್ಲಿಂ ಹುಡುಗನನ್ನು ಇವರು ವಿವಾಹವಾಗಿದ್ದಾರೆ. ಹಾಗೆಯೇ ಕನ್ನಡದಲ್ಲೂ ಸಹ ಹಲವಾರು ಸಿನೆಮಾಗಳನ್ನು ಮಾಡಿದ್ದಾರೆ. ಇತ್ತೀಚೆಗೆ ತೆರೆ ಕಂಡ ಫಾಮಿಲಿ ಮೆನ್ ವೆಬ್ ಸಿರೀಸ್ ನಲ್ಲಿ ಇವರ ಪ್ರತಿಭೆಗೆ ಮೆಚ್ಚಿಗೆಯ ಮಹಾಪೂರವೇ ಹರಿದು ಬಂದಿದೆ. ಆದರೆ ಕೆಲವರು ನೀವು ಕಪ್ಪಾಗಿದ್ದೀರಿ ಮುಖ ಕಪ್ಪಾಗಿದ್ದರೆ ನಿಮ್ಮ ಕಾಲುಗಳು ಬಿಳಿಯಾಗಿ ಇವೆ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಸರಿಯಾಗಿ ನಟಿ ಪ್ರಿಯಾಮಣಿ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ.
ಅದೇನೆಂದರೆ ನಾನು ಅವರನ್ನು ಒಂದು ಮಾತು ಕೇಳುತ್ತೇನೆ ನಾನು ಕಪ್ಪಾಗಿದ್ದರೆ ನಿಮಗಾಗುವ ನಷ್ಟವೇನು ನಾನು ಬೆಳ್ಳಗಿದ್ದೇನೆ ಎಂದು ಅಂದುಕೊಳ್ಳುವುದೇ ಇಲ್ಲ. ನನ್ನದು ಗೋಧಿ ಬಣ್ಣ. ಆಗ ದಪ್ಪ ಆಗಿ ವಯಸ್ಸಾದವರಂತೆ ಕಾಣುತ್ತೀರ ಎಂದು ಹೇಳುತ್ತಿದ್ದರು. ಈಗ ತೆಳ್ಳಗಿದ್ದೇನೆ ಅದಕ್ಕೂ ಕೆಟ್ಟ ಕಮೆಂಟ್ ಹಾಕುತ್ತಾರೆ. ನಿಜವಾಗಿಯೂ ನೀವು ನನ್ನನ್ನು ಇಷ್ಟಪಡುತ್ತಿದ್ದರೆ ನಾನು ಹೇಗೆ ಇದ್ದರೂ ಇಷ್ಟಪಡುತ್ತೀರಿ. ನನ್ನ ಬಣ್ಣ ಕಪ್ಪು ಇದ್ದರೆ ಏನು ತಪ್ಪು ಶ್ರೀ ಕೃಷ್ಣನ ಬಣ್ಣ ಸಹ ಕಪ್ಪು ಆದರೂ ಆತ ಅಷ್ಟು ಸುಂದರವಾಗಿ ಇದ್ದ. ಇಂತಹ ನಕಾರಾತ್ಮಕ ವಿಷಯ ಹಂಚಲು ಕೆಟ್ಟ ಪದಗಳನ್ನು ಬಳಸಬೇಡಿ ಎಂದು ಹೇಳಿದ್ದಾರೆ.