ದಕ್ಷಿಣ ಭಾರತದಲ್ಲಿ ಹಲವಾರು ನಟರು ತಮ್ಮ ಅಮೋಘ ನಟನೆಯಿಂದ ಅಭಿಮಾನಿಗಳ ಮನಸ್ಸಿಗೆ ಇಷ್ಟವಾಗಿದ್ದಾರೆ. ಹಾಗೆಯೇ ಎಷ್ಟೋ ನಟರು ಸಿನೆಮಾ ರಂಗದಿಂದಲೇ ಯಶಸ್ಸನ್ನು ಕಂಡಿದ್ದಾರೆ. ತಮ್ಮ ನಟನೆಯ ಆಸಕ್ತಿಯಿಂದ ಒದನ್ನೇ ಬಿಟ್ಟವರು ಕೂಡ ಇದ್ದಾರೆ. ಆದರೆ ಎಲ್ಲರ ಓದಿನ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಆದ್ದರಿಂದ ನಾವು ಇಲ್ಲಿ ದಕ್ಷಿಣ ಭಾರತದ ಎಲ್ಲಾ ನಟರು ಯಾರು ಯಾರು ಎಷ್ಟು ಓದಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ತೆಲುಗು ನಟ ಮಹೇಶ್ ಬಾಬು ಅವರು ಬಿಕಾಂ ಮುಗಿಸಿದ್ದಾರೆ. ಅಲ್ಲು ಅರ್ಜುನ್ ಅವರು ಬಿಬಿಎ ಮುಗಿಸಿದ್ದಾರೆ. ಪ್ರಭಾಸ್ ಅವರು ಬಿ.ಟೆಕ್ ಮುಗಿಸಿದ್ದಾರೆ. ಧನುಷ್ ಅವರು ಬ್ಬಿಸಿಎ ಮಾಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸೂರ್ಯ ಅವರು ಬಿಕಾಂ ಮಾಡಿದ್ದಾರೆ. ಜೂನಿಯರ್ ಎನ್ಟಿಆರ್ ಅವರು ಹತ್ತನೇ ತರಗತಿ ಮುಗಿಸಿದ್ದಾರೆ. ಸಿದ್ಧಾರ್ಥ್ ಅವರು ಎಂಬಿಎ ಓದಿದ್ದಾರೆ. ಅಕ್ಕಿನೇನಿ ನಾಗಾರ್ಜುನ ಆಟೋಮೊಬೈಲ್ ಇಂಜಿನಿಯರ್ ಓದಿದ್ದಾರೆ. ರಾಮ್ ಚರಣ್ ಅವರು ಬಿಕಾಂ ಓದಿದ್ದಾರೆ. ವಿಕ್ರಂ ಎಂ.ಬಿ.ಎ.ಯನ್ನು ಇಂಗ್ಲಿಷ್ ಲಿಟರೇಚರ್ ನಲ್ಲಿ ಮಾಡಿದ್ದಾರೆ.
ದಳಪತಿ ವಿಜಯ್ ವಿಸುಲ್ ಕಮ್ಮನಿಕೇಷನ್ ಓದಿದ್ದಾರೆ. ಆರ್ಯಾ ಅವರು ಬಿ.ಇ. ಓದಿದ್ದಾರೆ. ಪವನ್ ಕಲ್ಯಾಣ್ ಅವರು ಹತ್ತನೇ ತರಗತಿ ಓದಿದ್ದಾರೆ. ನಾಗಚೈತನ್ಯ ಅವರು ಕೂಡ ಬಿಕಾಂ ಓದಿದ್ದಾರೆ. ಹಾಗೆಯೇ ದಿಗಂತ್ ಇವರು ಕನ್ನಡ ನಟ ಆಗಿದ್ದಾರೆ. ಪಂಚರಂಗಿ ಎಂಬ ಸಿನೆಮಾದ ಮೂಲಕ ಹೆಚ್ಚು ಹೆಸರನ್ನು ಗಳಿಸಿದ್ದಾರೆ. ಇವರೂ ಸಹ ಬಿಕಾಂ ಪದವಿಯನ್ನು ಮುಗಿಸಿದ್ದಾರೆ. ಮುಂಗಾರು ಮಳೆ ಗಣೇಶ್ ಅವರು ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ನಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಉಪೇಂದ್ರ ಅವರು ಬಿಕಾಂ ಓದಿದ್ದಾರೆ. ಧ್ರುವ ಸರ್ಜಾ ಅವರು ಹತ್ತನೇ ತರಗತಿ ಪಾಸಾಗಿದ್ದಾರೆ.
ಯಶ್ ಅವರು ಪಿಯುಸಿ ಓದಿದ್ದಾರೆ. ಸುದೀಪ್ ಅವರು ಮೆಕಾನಿಕಲ್ ಇಂಜಿನಿಯರಿಂಗ್ ನ್ನು ಬಿಟೆಕ್ ನಲ್ಲಿ ಮಾಡಿದ್ದಾರೆ. ಶಿವರಾಜ್ ಕುಮಾರ್ ಬಿಎಸ್ಸಿ ಓದಿದ್ದಾರೆ. ಅರ್ಜುನ್ ಸರ್ಜಾ ಅವರು ಕೂಡ ಬಿಎಸ್ಸಿ ಓದಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಬಿಬಿಎ ಓದಿದ್ದಾರೆ. ಪುನೀತ್ ರಾಜ್ ಕುಮಾರ್ ಡಿಪ್ಲೊಮಾ ಓದಿದ್ದಾರೆ. ರವಿತೇಜ ಅವರು ಬಿಎ ಓದಿದ್ದಾರೆ. ಹಾಗೆಯೇ ಧನಂಜಯ್ ಅವರು ಕೂಡ ಬಿಎ ಓದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಿಯುಸಿ ಓದಿದ್ದಾರೆ. ಹಾಗೆಯೇ ಅಜಿತ್ ಅವರು ಹತ್ತನೇ ತರಗತಿ ಓದಿದ್ದಾರೆ. ಚಿರಂಜೀವಿ ಸರ್ಜಾ ಅವರು ಬಿಕಾಂ ಓದಿದ್ದಾರೆ.