ಕೆಲವೊಂದು ನಮ್ಮ ಸುತ್ತ ಮುತ್ತ ನಡೆಯುವ ಘಟನೆ ಅಥವಾ ವಿಷಯವನ್ನು ಕೇಳಿದರೆ ನಮಗೆ ಆಶರ್ಯವಾಗುತ್ತದೆ. ಕೆಲವು ಘಟನೆಗೆ ಕಾರಣ ಇರುತ್ತದೆ ಆದರೆ ನಮಗೆ ಕಾರಣ ಗೊತ್ತಿರುವುದಿಲ್ಲ. ನಮ್ಮ ಸುತ್ತ ಮುತ್ತ ನಡೆಯುವ ಅಥವಾ ದೇಶ ವಿದೇಶದ ಇಂಟರೆಸ್ಟಿಂಗ್ ಘಟನೆ ಅಥವಾ ವಿಷಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಈಗಿನ ಕಾಲದಲ್ಲಿ ಹಣವನ್ನು ಬಯಸದೆ ಸಹಾಯ ಮಾಡುವವರು ಬಹಳ ಕಡಿಮೆ ಆದರೆ ಕಲ್ಬುರ್ಗಿಯ ಮಲ್ಲಿಕಾರ್ಜುನ್ ಎಂಬುವವರು ಕಳೆದ ಆರು ವರ್ಷಗಳಿಂದ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ತಮ್ಮ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಗರ್ಭಿಣಿ ಸ್ತ್ರೀಯರು ಇವರಿಗೆ ಫೋನ್ ಮಾಡಿದರೆ ಅವರ ಮನೆಗೆ ಬರುತ್ತಾರೆ. ಇಲ್ಲಿಯವರೆಗೆ ಅವರು ನೂರಕ್ಕಿಂತ ಹೆಚ್ಚು ಗರ್ಭಿಣಿ ಸ್ತ್ರೀಯರಿಗೆ ಸಹಾಯ ಮಾಡಿದ್ದಾರೆ. ಐದು ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಅವರ ತಂಗಿ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಗೆ ಹೋಗಲು ಆಂಬುಲೆನ್ಸ್ ಸಿಗದೆ ಪರದಾಡಿದ್ದರು ಆದ್ದರಿಂದ ತಮ್ಮ ತಂಗಿಗೆ ಬಂದ ಕಷ್ಟ ಬೇರೆ ಯಾರಿಗೂ ಬರಬಾರದೆಂದು ತಮ್ಮ ಬಳಿಯಿರುವ 4 ಆಟೋವನ್ನು ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಟ್ರಾನ್ಸಫೋರ್ಟ್ ಫೆಸಿಲಿಟಿ ಕೊಡುತ್ತಾರೆ. ಸಾಮಾನ್ಯವಾಗಿ ಮ್ಯೂಸಿಯಂನಲ್ಲಿ ಅಪರೂಪದ ವಸ್ತುಗಳು, ರಾಜರು ಬಳಸುವ ವಸ್ತುಗಳು ಇರುತ್ತವೆ ಆದರೆ ಆರ್ಮ್ ಸ್ಟ್ರಾಮ್ ನಲ್ಲಿರುವ ಮೈಕ್ರೊಪೀಯಾ ಎಂಬ ಮ್ಯೂಸಿಯಂನಲ್ಲಿ ಇದುವರೆಗೂ ಮನುಷ್ಯರು ಗುರುತಿಸಿದ ಬ್ಯಾಕ್ಟೀರಿಯಾಗಳು, ಫಂಗಸ್, ಸೂಕ್ಷ್ಮಜೀವಿಗಳನ್ನು ಮುನ್ನೆಚ್ಚರಿಕಾ ಕ್ರಮದೊಂದಿಗೆ ಶೇಖರಿಸಿ ಇಟ್ಟಿದ್ದಾರೆ. ಈ ಮ್ಯೂಸಿಯಂ ಅನ್ನು ಬ್ಯಾಕ್ಟೀರಿಯಾ ಮ್ಯೂಸಿಯಂ ಎಂತಲೂ ಕರೆಯುತ್ತಾರೆ.
ಕೆಲವರು ಬೆಳಗ್ಗೆ ಅಲರಾಂ ಆದ ತಕ್ಷಣ ಎದ್ದು ಅಲರಾಂ ಆಫ್ ಮಾಡಿ ಮತ್ತೆ ಮಲಗುತ್ತಾರೆ. ವಿನ್ಸಮ್ ಟೋಮ್ ಎಂಬುವವರು ರೆಗ್ಗಿ ಎಂಬ ಕಾರ್ಪೇಟ್ ಅಲರಾಂ ಅನ್ನು ತಯಾರಿಸಿದ್ದಾರೆ. ಇದು ಕಾರ್ಪೆಟ್ ಶೇಪ್ ನಲ್ಲಿ ಇದ್ದು ಟೈಮ್ ಸೆಟ್ ಮಾಡಿದರೆ ಬೆಳಗ್ಗೆ ಇದರ ಮೇಲೆ ಕಾಲಿಟ್ಟಾಗ ಮಾತ್ರ ಆಫ್ ಆಗುತ್ತದೆ. ಈ ಅಲರಾಂ ಅನ್ನು ಆಫ್ ಮಾಡಬೇಕೆಂದರೆ ಏಳಲೇಬೇಕು. ಕ್ರಿಕೆಟ್ ಕ್ಷೇತ್ರದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು ಹೆಸರು ಮಾಡಿದ್ದಾರೆ. ಥಾಮಸ್ ಎಂಬ ವ್ಯಕ್ತಿ ಖರಗಪುರ ರೇಲ್ವೆ ಸ್ಟೇಷನ್ ನಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದರು. ಧೋನಿ ಅವರು ಇಂಟರ್ನ್ಯಾಷನಲ್ ಕ್ರಿಕೆಟರ್ ಆಗುವ ಮೊದಲು ರೇಲ್ವೆ ಸ್ಟೇಷನ್ ನಲ್ಲಿ ಟಿಕೆಟ್ ಕಲೆಕ್ಟರ್ ಆಗಿದ್ದರು ಆಗ ಥಾಮಸ್ ಅವರ ಟೀ ಸ್ಟಾಲ್ ನಲ್ಲಿ ಹೆಚ್ಚಾಗಿ ಟೀ ಕುಡಿಯುತ್ತಿದ್ದರು. ಕೆಲವು ವರ್ಷಗಳ ನಂತರ ಥಾಮಸ್ ಒಂದು ಕ್ರಿಕೆಟ್ ಸ್ಟೇಡಿಯಂನಲ್ಲಿ ಕ್ರಿಕೆಟರ್ಸ್ ಆಟೋಗ್ರಾಫ್ ಸಲುವಾಗಿ ವೇಟ್ ಮಾಡುವಾಗ ಧೋನಿ ಥಾಮಸ್ ಅವರನ್ನು ಗುರುತಿಸಿ ಹಗ್ ಮಾಡಿಕೊಂಡು ಆತನನ್ನು ಇಂಡಿಯನ್ ಕ್ರಿಕೆಟರ್ಸ್ ಜೊತೆ ಡಿನ್ನರ್ ಗೆ ಕರೆದುಕೊಂಡು ಹೋಗುತ್ತಾರೆ.
ಹೋಟೆಲ್ ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ ತೊಂಡಾ ಎಂಬ ಯುವತಿಗೆ ಹತ್ತು ಮಿಲಿಯನ್ ಡಾಲರ್ ಟಿಪ್ ಬರುತ್ತದೆ ಹೇಗೆಂದರೆ ಎಡ್ವರ್ಡ್ ಎಂಬ ವ್ಯಕ್ತಿಗೆ ಲಾಟರಿ ಟಿಕೆಟ್ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ ಆದರೆ ಆತನು ಎಷ್ಟು ಟಿಕೆಟ್ ಕೊಂಡುಕೊಂಡರು ಲಾಭ ಬರುವುದಿಲ್ಲ. ಇದರಿಂದ ಆತ ತನಗೆ ಊಟ ಸರ್ವ್ ಮಾಡಿದ ತೊಂಡಾ ಯುವತಿಗೆ ಟಿಕೆಟ್ ಗಳನ್ನು ಟಿಪ್ ಆಗಿ ಕೊಡುತ್ತಾನೆ. ಕೆಲವು ದಿನಗಳ ನಂತರ ತೊಂಡಾ ಲಾಟರಿ ಟಿಕೆಟ್ ಗೆಲ್ಲುತ್ತಾಳೆ. ಇದರಿಂದ ಆಕೆಗೆ 70ಕೋಟಿ ರೂಪಾಯಿ ಬರುತ್ತದೆ. ಆಗ ಅವಳ ಸಂಬಂಧಿಕರು, ಮಕ್ಕಳು, ಎಡ್ವರ್ಡ್ ಬಂದು ಭಾಗ ಕೇಳುತ್ತಾರೆ ಅವಳು ಕೋರ್ಟ್ ಮೊರೆ ಹೋಗಿ ಮೂರು ವರ್ಷಗಳ ನಂತರ ಗೆಲ್ಲುತ್ತಾಳೆ. ನಂತರ ಈಕೆಯ ಎಕ್ಸ್ ಹಸ್ಬೆಂಡ್ ಈಕೆಯನ್ನು ಕಿಡ್ನಾಪ್ ಮಾಡಿ ಹಣ ಕೊಡುವಂತೆ ಹೆದರಿಸುತ್ತಾನೆ ಆಗ ತೊಂಡಾ ತನ್ನ ಮೊದಲ ಗಂಡನನ್ನು ಶೂಟ್ ಮಾಡಿ ಸಾಯಿಸುತ್ತಾಳೆ. ಕೆಲವು ವರ್ಷಗಳ ನಂತರ ತೊಂಡಾ ಒಂದು ಹೊಟೇಲ್ ಅನ್ನು ಆರಂಭಿಸುತ್ತಾಳೆ. ಶ್ರೀನಿವಾಸ್ ಗುಪ್ತಾ ಎಂಬ ಬಿಸಿನೆಸ್ ಮ್ಯಾನ್ 2017ರಲ್ಲಿ ಕಾರ್ ಆಕ್ಸಿಡೆಂಟ್ ನಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಳ್ಳುತ್ತಾರೆ. 2019ರಲ್ಲಿ ಇವರು ಒಂದು ಹೊಸ ಮನೆಯನ್ನು ಕಟ್ಟುತ್ತಾರೆ. ಆ ಮನೆ ಗೃಹಪ್ರವೇಶದಲ್ಲಿ ತಮ್ಮ ಹೆಂಡತಿ ತಮ್ಮ ಜೊತೆ ಇದ್ದರೆ ಚೆನ್ನಾಗಿರುತ್ತದೆ ಎಂದು ಭಾವಿಸಿ, ಶ್ರೀಧರ್ ಎಂಬ ಸ್ಟಾಚ್ಯು ಆರ್ಟಿಸ್ಟ್ ಅವರನ್ನು ಬೆಂಗಳೂರಿನಿಂದ ಕರೆಯಿಸಿ ತಮ್ಮ ಹೆಂಡತಿಯ ಸಿಲಿಕಾನ್ ಸ್ಟಾಚ್ಯು ತಯಾರಿಸುತ್ತಾರೆ. ಶ್ರೀಧರ್ ಅವರಿಗೆ ಸ್ಟಾಚ್ಯು ನಿರ್ಮಿಸಲು ಒಂದು ವರ್ಷ ಸಮಯ ಬೇಕಾಗುತ್ತದೆ. ಸ್ಟಾಚ್ಯು ನೋಡಲು ಜೀವಂತ ಇರುವಂತೆ ಕಾಣಿಸುತ್ತದೆ. ಶ್ರೀನಿವಾಸ್ ಅವರ ಮನೆ ಗೃಹಪ್ರವೇಶಕ್ಕೆ ಬಂದವರು ಸತ್ತವರು ಹೇಗೆ ಬಂದರು ಎಂದು ಶಾಕ್ ಆಗುತ್ತಾರೆ.
ನಿಂತುಕೊಂಡು ನೀರನ್ನು ಕುಡಿದರೆ ನೀರು ನಮ್ಮ ದೇಹದಲ್ಲಿ ಫಾಸ್ಟ್ ಹೋಗಿ ಲಂಗ್ ಮತ್ತು ಹಾರ್ಟ್ ಡ್ಯಾಮೇಜ್ ಆಗುವ ಸಾಧ್ಯತೆ ಇರುತ್ತದೆ ಅಲ್ಲದೆ ನಮ್ಮ ದೇಹದಲ್ಲಿ ಆಕ್ಸಿಜನ್ ಲೇವೆಲ್ ಡಿಸ್ಟರ್ಬ್ ಆಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ಮುಸಲ್ಮಾನರು ಕುಳಿತುಕೊಂಡೆ ನೀರನ್ನು ಕುಡಿಯುತ್ತಾರೆ. ಪಾನಿಪುರಿಯನ್ನು ಇಂಗ್ಲಿಷ್ ನಲ್ಲಿ ವಾಟರ್ ಬಾಲ್ಸ್ ಎಂದು ಕರೆಯುತ್ತಾರೆ, ಸಮೋಸವನ್ನು ಇಂಗ್ಲಿಷ್ ನಲ್ಲಿ ರಿಸೊಲ್ ಎಂದು, ಜಿಲೇಬಿಯನ್ನು ಫನ್ನಲ್ ಕೇಕ್ ಎಂದು ಕರೆಯುತ್ತಾರೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ರೋಡ್ ನಿರ್ಮಾಣ ಮಾಡಬೇಕಾದರೆ ಅದರ ಖರ್ಚನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ರೋಡ್ ನಿರ್ಮಾಣ ಮಾಡಬೇಕಾದರೆ ಅದರ ಖರ್ಚನ್ನು ರಾಜ್ಯಸರ್ಕಾರ ಭರಿಸುತ್ತದೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ರೋಡ್ ನಿರ್ಮಾಣ ಮಾಡಬೇಕಾದರೆ ಅದರ ಖರ್ಚನ್ನು ಮುನ್ಸಿಪಾಲಿಟಿ ಭರಿಸುತ್ತದೆ. ಗ್ರಾಮಗಳಿಗೆ ಸಂಬಂಧಿಸಿದ ರೋಡ್ ನಿರ್ಮಾಣ ಗ್ರಾಮ ಪಂಚಾಯಿತಿಗೆ ಸಂಬಂಧಿಸಿರುತ್ತದೆ. ರೋಡ್ ಪಕ್ಕದಲ್ಲಿ ಹಳದಿ ಮತ್ತು ಬಿಳಿ ಬಣ್ಣದ ಕಲ್ಲು ಕಂಡರೆ ಅದು ನ್ಯಾಷನಲ್ ಹೈವೇ ಆಗಿರುತ್ತದೆ. ಹಸಿರು ಮತ್ತು ಬಿಳಿ ಬಣ್ಣದ ಕಲ್ಲು ಇರುವ ರೋಡ್ ಸ್ಟೇಟ್ ಹೈವೇ ಆಗಿರುತ್ತದೆ. ಕಪ್ಪು ಅಥವಾ ನೀಲಿ ಮತ್ತು ಬಿಳಿ ಬಣ್ಣದ ಕಲ್ಲು ಇದ್ದರೆ ನಗರ ಅಥವಾ ಜಿಲ್ಲಾ ರೋಡ್ ಆಗಿರುತ್ತದೆ. ರೋಡ್ ಪಕ್ಕದಲ್ಲಿ ಕಿತ್ತಳೆ ಮತ್ತು ಬಿಳಿ ಬಣ್ಣದ ಕಲ್ಲು ಇದ್ದರೆ ಅದು ಗ್ರಾಮೀಣ ರಸ್ತೆಗಳಾಗಿರುತ್ತದೆ. ರಷ್ಯಾದಲ್ಲಿ ಮರೀನಾ ಎಂಬ ತಾಯಿ ತನ್ನ ಮಗನನ್ನೇ ಮದುವೆಯಾಗುತ್ತಾಳೆ. ಆದರೆ ಮರೀನಾಳ ಸ್ವಂತ ಮಗನಾಗಿರುವುದಿಲ್ಲ. ಮರೀನಾ ಅಲೆಕ್ಸಿ ಶಾವರಿನ್ ಎಂಬುವವರೊಂದಿಗೆ ಮದುವೆಯಾಗುತ್ತಾಳೆ, ಹತ್ತು ವರ್ಷಗಳವರೆಗೆ ಜೊತೆಯಾಗಿರುತ್ತಾರೆ. ಕಾಲಕಳೆದಂತೆ ಮರೀನಾಳಿಗೆ ಅಲೆಕ್ಸಿ ಶಾವರಿನ್ ಅವರಿಗಿಂತ ಅವರ ಮೊದಲ ಹೆಂಡತಿಯ ಮಗನಾದ ವ್ಲಾದಮಿಯರ್ ಇಷ್ಟವಾಗುತ್ತಾನೆ ಹಾಗೆಯೇ ವ್ಲಾದಮಿಯರ್ ನಿಗೂ ಮರೀನಾ ಇಷ್ಟವಾಗುತ್ತಾಳೆ. ಆಗ ಮರೀನಾ ತನ್ನ ಗಂಡನಿಗೆ ಡೈವೋರ್ಸ್ ಕೊಟ್ಟು ಮಗನೊಂದಿಗೆ ಮದುವೆಯಾಗುತ್ತಾಳೆ ನಂತರ ಮರೀನಾ ಮಗುವಿಗೆ ಜನ್ಮ ನೀಡುತ್ತಾಳೆ.