ಶ್ರಿಯಾ ಪಿಲ್ಗೌಕರ್ ಈಕೆ ಒಬ್ಬ ಭಾರತೀಯ ಚಿತ್ರನಟಿ , ನಿರ್ಮಾಪಕಿ ಹಾಗೂ ನಿರ್ದೇಶಕಿ. ಈಕೆ ಮರಾಠಿ ಭಾಷೆಯ ಖ್ಯಾತ ನಟ ಸಚಿನ್ ಹಾಗೂ ಸುಪ್ರಿಯಾ ದಂಪತಿಯ ಪುತ್ರಿ. ಶ್ರಿಯಾ ತಂದೆ ಸಚಿನ್ ಕೂಡಾ ಸಾಕಷ್ಟು ಸಿನಿಮಾಗಳಲ್ಲಿ ಹಾಗೂ ಟಿವಿ ಶೋ ಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಸುಮಾರು ಅರವತ್ತೈದು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಶ್ರಿಯಾ ತಂದೆ ಅಭಿನಯಿಸಿದ ಮೊದಲ ಚಿತ್ರ ಅಂದರೆ ಅದು ಮರಾಠಿ ಭಾಷೆಯ ‘ಹ ಮಾಜ್ಹ ಮಾರ್ಗ್ ಎಕ್ಲಾ’ ಎನ್ನುವ ಸಿನಿಮಾ. ನಂತರ ಹಿಂದಿ, ಮರಾಠಿ ಹಾಗೂ ಕೆಲವು ಭೋಜಪುರಿ ಸಿನಿಮಾಗಳಲ್ಲಿ ಕೂಡಾ ನಟನೆ ಮಾಡಿದ್ದಾರೆ. ಇನ್ನು ಇವರ ಮಗಳು ಶ್ರಿಯಾ ಕೂಡಾ ತಂದೆಯ ಹಾಗೆ ನಟನೆಯನ್ನು ಆರಂಭಿಸಿದ್ದು , ಈಗ ಇವರಿಗೆ ಮೂವತ್ತೆರಡು ವರ್ಷ. ಶ್ರಿಯಾ ಬಾಲ್ಯದಲ್ಲಿಯೇ ಪ್ರೊಫೆಷನಲಿ ಸ್ವಿಮ್ಮಿಂಗ್ ಕಲಿತಿದ್ದರು ಅಷ್ಟೇ ಅಲ್ಲದೆ ಸಾಕಷ್ಟು ಅವಾರ್ಡ್ ಕೂಡಾ ಪಡೆದಿದ್ದರು ಹಾಗೆ ಕಥಕ್ ಕೂಡಾ ಅಭ್ಯಾಸ ಮಾಡಿದ್ದಾರೆ. ಶ್ರಿಯಾ ಮುಂಬೈನ St. xavier’s ಕಾಲೇಜಿನಲ್ಲಿ ಸೋಷಿಯಾಲಜಿ ವಿಷಯದಲ್ಲಿ ತಮ್ಮ ಡಿಗ್ರೀ ಮುಗಿಸಿದ್ದಾರೆ.
ಈ ರೀತಿಯ ಸಿನಿಮಾ ಬ್ಯಾಗ್ರೌಂಡ್ ಇರುವ ಶ್ರಿಯಾ ಪಿಲ್ಗೌಕರ್ ಈಕೆಯ ಅಜ್ಜ ಅರುಣ್ ನಾರಾಯಣ್ ಸಬ್ನಿಸ್ ಎಂಬವರು ತನ್ನ 83 ರ ಇಳಿವಯಸ್ಸಿನಲ್ಲಿ ೯೦ ದೇಶಗಳನ್ನು ಸುತ್ತುವರೆದು ಸಂಚಾರ ಮಾಡಿಬಂದು ತನ್ನೀ ವಿಶ್ವ ಪರ್ಯಾಟನೆಯ ಅನುಭವವನ್ನು ವಿವರಿಸಿದ್ದಾರೆ. ಅದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಉತ್ತರದ ಭಾಗದದಂದ ತನ್ನ ವಿಶ್ವ ಪರ್ಯಾಟನೆಯನ್ನು ಆರಂಭಿಸಿದ ಅರುಣ್ ನಾರಾಯಣ್ ಸಬ್ನಿಸ್ ಎಂಬ ೮೨ ವರ್ಷದ ವ್ಯಕ್ತಿ ತನ್ನೆಲ್ಲಾ ಅನುಭವಗಳನ್ನು ಒಂದು ಡೈರಿಯಲ್ಲಿ ದಾಖಲು ಮಾಡಿದ್ದಾರೆ ಈ ವಿಶ್ವಸಂಚಾರಿ. ಭಾರತದ ಉದ್ದಗಲಕ್ಕೂ ಹಾಗೂ ಇನ್ನೂ ೯೦ ದೇಶಗಳಲ್ಲಿ ಸಂಚಾರ ಮಾಡಿದ ಇವರು, ತಮ್ಮ ಸಂಚಾರಿ ಕಥೆಯನ್ನು ಸೂಕ್ಷ್ಮವಾಗಿ ಈ ರೀತಿಯಾಗಿ ವಿವರಿಸಿದ್ದಾರೆ. ಸೈಬೀರಿಯಾ , ಮಂಗೋಲಿಯಾ , ತಜಕಿಸ್ತಾನ್, ತುರ್ಕಮೆನಿಸ್ತಾನ್, ಕಝಾಕಿಸ್ತಾನ್ ಹಾಗೂ ಉಗಾಂಡ ಈ ಸ್ಥಳಗಳಿಗೆ ಗೊರಿಲ್ಲಾಗಳ ಬಗ್ಗೆ ತಿಳಿಯಲು ಅವರ ನೈಸರ್ಗಿಕ ವಾಸಸ್ಥಾನ ಇವುಗಳ ವೀಕ್ಷಣೆಗೆ ಹೋಗಿದ್ದರು. ಹಾಗೆ ಟಾಂಜಾನಿಯ ಎಂಬ ಪ್ರದೇಶದಲ್ಲಿ ವನ್ಯ ಜೀವಿಗಳ ಸಫಾರಿ ಮಾಡಿದ್ದರು. ಉಕ್ರೇನ್ ನಲ್ಲಿ ರಷ್ಯಾಗೆ ಸಂಬಂಧಿಸಿದ ಹಳೆಯ ಸ್ಥಳಗಳನ್ನು , ಕೊಲಂಬಿಯಾದಲ್ಲಿ ಈಕ್ವೆಡಾರ್ ಹಾಗೂ ಗ್ಯಾಲಪಗೋಸ್ ದ್ವೀಪಗಳು ಇವುಗಳನ್ನು ವೀಕ್ಷಣೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಇದರ ನಡುವೆ ಇಡೀ ಭೂಮಿಯ ಮೇಲೆ ತಮಗೆ ಅತ್ಯಂತ ಇಷ್ಟವಾದ ಎರಡು ಪ್ರದೇಶ ಆಸ್ಟ್ರೇಲಿಯಾ ಹಾಗೂ ಸ್ವಿಟ್ಜರ್ಲ್ಯಾಂಡ್ ಇಲ್ಲಿಯೂ ಕೂಡಾ ಭೇಟಿ ನೀಡಿದ್ದಾರೆ. ಹೀಗೆ ಮಾತನಾಡುತ್ತ ಮಾತಿನ ಮಧ್ಯೆ ತನ್ನ ಬಾಲ್ಯವನ್ನು ನೆನಪಿಸಿಕೊಂಡ ಅರುಣ್ ನಾರಾಯಣ್ ಸಬ್ನಿಸ್ ಅವರು ತಾನು ಓದಿದ ಶಾಲೆಯ ಬಗ್ಗೆ ಮಾತನಾಡುತ್ತಾರೆ. ಅವರು ಬಾಲ್ಯದಲ್ಲಿ ಶಿಕ್ಷಣ ಮುಗಿಸಿದ್ದು ಬೆಳಗಾವಿಯಲ್ಲಿ. ಅವರಿಗೆ ಜಿಯೋಗ್ರಫಿ ಅಂದ್ರೆ ಭೂಗೋಳ ಶಾಸ್ತ್ರ ಕಲಿಸಲು ಬರುತ್ತಿದ್ದ ಶಿಕ್ಷಕರು ಯಾವಾಗಲೂ ಧೋತಿ ಮತ್ತು ಕಪ್ಪು ಟೋಪಿಯನ್ನು ಧರಿಸಿಯೇ ಬರುತ್ತಿದ್ದರು ಹಾಗೂ ನಮ್ಮ ಹಳ್ಳಿಯನ್ನು, ಅದರ ಪರಿಧಿ ಮೀರಿ ಅವರು ಹೋಗಿರಲಿಲ್ಲ. ಆದರೂ ಸಹ ಅವರು ಕಲಿಸುವ ಪಾಠ ಅವರು ಇಡೀ ಭೂಮಿಯನ್ನು ಸುತ್ತುವರೆದು ಬಂದವರ ಹಾಗೆ ಕಲಿಸುತ್ತಿದ್ದರು. ಆ ಅನುಭವ ಸ್ವತಃ ತನಗೆ ಆಯಿತು ಎಂದು ಹೇಳುತ್ತಾರೆ.
ಹಾಗಿದ್ದರೆ ಇವರ ಈ ಸಂಚಾರದಲ್ಲಿ ಬಹಳ ಸ್ವಾರಸ್ಯಕರ ಎನಿಸಿದ್ದು ಯಾವುದು ಬ ಪ್ರಶ್ನೆಗೆ ಅರುಣ್ ನಾರಾಯಣ್ ಸಬ್ನಿಸ್ ಅವರು ನೀಡುವ ಉತ್ತರ ಈ ರೀತಿಯಾಗಿದೆ, ತನ್ನ ಹುಟ್ಟುಹಬ್ಬದ ದಿನ ಮೊಮ್ಮಗಳು ಶ್ರಿಯಾ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡು Around the world with Ajoba’ ಎಂದು ಹೆಸರಿಟ್ಟಿದ್ದಳು. ಕೆಲವು ವರ್ಷಗಳ ಹಿಂದೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿಸಿದಾಗ ತನ್ನ ಅಜ್ಜ ಈ ಬಗ್ಗೆ ಹೇಳಿಕೊಂಡಿದ್ದರು ಹಾಗೂ ಅವರಿಗೆ ಇಟಲಿಗೆ ಕೂಡಾ ಭೇಟಿ ನೀಡುವ ಕನಸಿತ್ತು ಎಂದು ಎಂದು ಶ್ರಿಯಾ ಹೇಳಿದ್ದಾರೆ.
2015 ರಲ್ಲಿ ಶ್ರಿಯಾ ತನ್ನ ಅಜ್ಜನನ್ನು ಕರೆದುಕೊಂಡು ಪೊಂಪಿ (ಇಟಲಿ) ಗೆ ಕರೆದುಕೊಂಡು ಹೋಗುವ ಶಪಥ ಮಾಡಿದ್ದಳು. ನಂತರ ಅವರು ನೋಡಬೇಕು ಎಂದುಕೊಂಡಿದ್ದ ಸ್ಥಳಗಳಿಗೆ ಕರೆದುಕೊಂಡು ಹೋಗಿ, ನೇಪಾಳದಿಂದ ಆರಂಭಿಸಿ , ಇಟಲಿಯ ಪೊಂಪಿ , ಸ್ಪೇನ್ ನ ಬಾರ್ಸಿಲೋನಾ ಹಾಗೂ ಮಾಲ್ಟಾ ಪ್ರದೇಶಗಳನ್ನು ಸುತ್ತಾಡಿಕೊಂಡು ಬಂದಿದ್ದರು. ಶ್ರಿಯಾ ತನ್ನ ಅಜ್ಜನ ತಾನು ವಿಶ್ವ ಸಂಚಾರ ಮಾಡಬೇಕು ಎನ್ನುವ ನಿರಂತರವಾಗಿ ಹರಿಯುತ್ತಿರುವ ಭಾವನೆಗಳಿಗೆ ಬೆಲೆಕೊಟ್ಟಳು. ಆಕೆಯ ಅಜ್ಜನಿಗೆ ಜನರನ್ನು ಅತಿಯಾಗಿ ಹಚ್ಚಿಕೊಳ್ಳುವ ಮನೋಭಾವ ಇದ್ದಿತ್ತು ಅದೇ ರೀತಿ ಬೇರೆ ಬೇರೆ ಸ್ಥಳಗಳ ಜನರ ಪರಿಚಯ ಹಾಗೂ ಅವರ ಸಂಸ್ಕೃತಿ ಸಂಪ್ರದಾಯಗಳ ಪರಿಚಯ ಕೂಡಾ ಮಾಡಿಕೊಂಡರು. ತನ್ನ ಅಜ್ಜನನ್ನು ನೋಡುತ್ತಾ ಬೆಳೆದ ಶ್ರೀಯಾಳಿಗೆ ಅವಳ ಅಜ್ಜನೆ ಒಂದು ರೀತಿ ಅವಳಿಗೆ ಸ್ಪೂರ್ತಿ ಆಗಿದ್ದರಂತೆ. ತನ್ನನ್ನು ತಾನು ಟ್ರಾವೆಲ್ ಏಜೆಂಟ್ ಎಂದು ಕರೆದುಕೊಳ್ಳುತ್ತಾಳೆ.
ವಯಸ್ಸು ಇದು ಬರೀ ದೇಹಕ್ಕೆ ಅಥವಾ ಲೆಕ್ಕಕ್ಕೆ ಮಾತ್ರವೇ ಹೊರತು ಮನಸ್ಸಿಗೆ ಅಲ್ಲಾ ಹಾಗಾಗಿ ತನ್ನ ಅಜ್ಜ ಎಲ್ಲಿ ಸಂಚಾರ ಮಾಡಲು ಹೋಗುವುದಿದ್ದರೂ ಚೆನ್ನಾಗಿ ಪ್ಲಾನ್ ಮಾಡಿಕೊಂಡೆ ಹೋಗುತ್ತಾರೆ ಎಂದು ಹೇಳುತ್ತಾರೆ ಶ್ರಿಯಾ. ಹಾಗೇ ಅವಳ ಅಜ್ಜ ಹೇಳುವಂತೆ ಶ್ರಿಯಾ ಮೊಬೈಲ್ ಹಾಗೂ ಕಂಪ್ಯೂಟರ್ ಬಗ್ಗೆ ಬಹಳ ತಿಳುವಳಿಕೆ ಹೊಂದಿದ್ದಾಳೆ ಹಾಗಾಗಿ ತನಗೆ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಬಗ್ಗೆ ಅದನ್ನು ಬಳಕೆ ಮಾಡುವುದರ ಬಗ್ಗೆಯೂ ಸಹ ಚೆನ್ನಾಗಿ ತಿಳಿದಿದೆ ಎಂದು ಹೇಳುತ್ತಾರೆ. ಜಗತ್ತಿನಲ್ಲಿ ಸಂಚಾರ ಮಾಡುವಾಗ ಜನರೆಲ್ಲ ಅಜ್ಜ ಹಾಗೂ ತನ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡು ಗುರುತಿಸುವುದು ಬಹಳ ಸಂತೋಷ ಕೊಡುತ್ತದೆ ಎಂದು ಹೇಳುತ್ತಾರೆ.
ಕೆಲವೊಮ್ಮೆ ಜೀವನ ಸಾಕಷ್ಟು ದುರ್ಬಲ ಆಗುತ್ತದೆ. ಕಳೆದ ಒಂದು ವರ್ಷದಿಂದ ಕೋರೋನ ಲಾಕ್ ಡೌನ್ ಆಗಿರುವ ಕಾರಣ ಇವರ ಪ್ರಯಾಣ ಅರ್ಧಕ್ಕೆ ನಿಂತಿದೆ ಹಾಗಾಗಿ ಹಿಂದಿನ ಎಲ್ಲಾ ಪಯಣದ ನೆನಪುಗಳನ್ನು ಮರುಕಳಿಸಲು ಶ್ರಿಯಾ ಪ್ರಯತ್ನ ಮಾಡಿದ್ದು ಅದರ ನೆನಪುಗಳ ಉಡುಗೊರೆ ನೀಡಿದ್ದಾರೆ. ಹಾಗೆ ಈಗಲೂ ಲಾಕ್ ಡೌನ್ ಇರುವ ಕಾರಣ ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡಲಿ ನಿರ್ಭಂಧ ಇರುವ ಕಾರಣಕ್ಕೆ ಇವರ ಜರ್ನಿ ಅರ್ಧಕ್ಕೆ ನಿಂತಿದೆ ಹಾಗೂ ಲಾಕ್ ಡೌನ್ ಮುಗಿದ ಮೇಲೆ ತನ್ನ ಅಜ್ಜನ ವಿಶ್ವ ಪರ್ಯಟನೆ ಕಾರ್ಯ ಮುಂದುವರೆದು ನೂರು ದೇಶಗಳನ್ನು ಸುತ್ತುವ ಹಾಗೆ ಆಗಲಿ ಎಂದು ಶ್ರಿಯಾ ಹೇಳುತ್ತಾರೆ. ಹಾಗೆ ಇವುಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆದು ಪಬ್ಲಿಷ್ ಮಾಡಲಿದ್ದಾರೆ ಶ್ರಿಯಾ.