ಎಲ್ಲರಿಗೂ ನಮ್ಮದೆ ಒಂದು ಸ್ವಂತ ಮನೆಯನ್ನು ನಿರ್ಮಿಸಬೇಕು ಎಂಬ ಆಸೆ ಇರುತ್ತದೆ ಆದರೆ ಈಗಿನ ಬೆಲೆಯಲ್ಲಿ ಕಡಿಮೆ ಬೆಲೆಯಲ್ಲಿ ಒಂದು ಮನೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಆದರೆ ರೋಷನ್ ಭಟ್ ಎನ್ನುವವರು ಕಡಿಮೆ ಬೆಲೆಯಲ್ಲಿ ಮನೆಯನ್ನು ನಿರ್ಮಿಸಿದ್ದಾರೆ. ಆ ಮನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೊ ನೋಡಿ
ಸಾಮಾನ್ಯವಾಗಿ ಒಂದು ಮನೆ ಕಟ್ಟುವಾಗ ಪ್ಲಾನ್ ಮಾಡಿದ ಬಜೆಟ್ ಗಿಂತ ಹೆಚ್ಚಿನ ಹಣ ಖರ್ಚಾಗುತ್ತದೆ. ಆದರೆ ರೋಷನ್ ಭಟ್ ಅವರು ಕಡಿಮೆ ಬೆಲೆಯಲ್ಲಿ ಮನೆಯನ್ನು ನಿರ್ಮಾಣ ಮಾಡುತ್ತಾರೆ. ಅವರು ಒಂದು ಮನೆಯನ್ನು ಕಟ್ಟಲು 9 ಲಕ್ಷ ಪ್ಲಾನ್ ಮಾಡಲಾಗಿತ್ತು ಆದರೆ ಮನೆ ನಿರ್ಮಾಣ ಮಾಡಿದ ನಂತರ 8 ಮುಕ್ಕಾಲು ಲಕ್ಷ ರೂಪಾಯಿ ಖರ್ಚಾಗಿದೆ. 3ರಿಂದ 3 ವರೆ ತಿಂಗಳಿನಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದೆ. 500 ಸ್ಕ್ವೇರ್ ಫೀಟ್ ಮನೆಯ ಸ್ಥಳವಿದೆ, ಪಾರ್ಕಿಂಗ್ ಹೊರಗಿನ ಜಾಗ ಹಿಡಿದು 900 ಸ್ಕ್ವೇರ್ ಫೀಟ್ ವಿಸ್ತಾರವಿದೆ.
ಮನೆ ಹೀಗಾಗಬೇಕು ಎಂದು ಅಂದುಕೊಂಡಿದ್ದರೊ ಹಾಗೆಯೆ ಆಗಿದೆ. ಮನೆಯ ಕನ್ಸಟ್ರಕ್ಷನ್ ಮಾಡುವಾಗ ಕೆಲವರು ನೋಡಲು ಬಂದಿದ್ದರು. ಕಡಿಮೆ ಬಜೆಟ್ ನಲ್ಲಿ ಮನೆ ನಿರ್ಮಾಣವಾಗಿದೆ ಅಂದರೆ ಕಡಿಮೆ ಕ್ವಾಲಿಟಿಯ ಸಾಮಗ್ರಿಗಳನ್ನು ತರಲಿಲ್ಲ. ಒಂದು ಕುಟುಂಬದವರಿಗೆ ನೆಮ್ಮದಿಯಿಂದ ಇರಲು ಬೇಕಾದ ಸೌಲಭ್ಯಗಳೊಂದಿಗೆ ಮನೆ ನಿರ್ಮಾಣವಾಗಿದೆ. ರೋಷನ್ ಭಟ್ ಅವರು 2 ಬಿಎಚ್ ಕೆ ಮನೆ ನಿರ್ಮಿಸಲು 13 ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಾರೆ, ಅಲ್ಲದೆ 16 ಲಕ್ಷ ರೂಪಾಯಿಯಲ್ಲಿ ಡೂಪ್ಲೆಕ್ಸ್ ಮಾಡಿಕೊಡಲಾಗುತ್ತದೆ.
ಇವರು ಕಮರ್ಷಿಯಲ್ ಮನೆಗಳನ್ನು ಸಹ ನಿರ್ಮಾಣ ಮಾಡಿಸುತ್ತಾರೆ. 8 ಮುಕ್ಕಾಲು ಲಕ್ಷ ರೂಪಾಯಿಯಲ್ಲಿ ಹೊರಗಡೆ ಚಪ್ಪಡಿ ಕಲ್ಲನ್ನು ಸಹ ಹಾಕಲಾಗಿದೆ, ಜೊತೆಗೆ 10 ಫೀಟ್ ಗೇಟ್ ಮಾಡಿಕೊಡಲಾಗಿದೆ. ಚೇಂಬರ್ ಕನೆಕ್ಷನ್ ಮಾಡಲಾಗಿದೆ. ಹೊರಗೆ ಅಂದರೆ ಗೇಟ್ ಒಳಗೆ ಟೈಲ್ಸ್ ಹಾಕಿಸಲಾಗಿದೆ. ಬಾಗಿಲ ಮುಂದೆ ಗ್ರಾನೈಟ್ ಹಾಕಿ ಮೆಟ್ಟಿಲುಗಳನ್ನು ಮಾಡಿಸಲಾಗಿದೆ. 9000ಲೀಟರ್ ನೀರು ಹಿಡಿಯುವ ಸಂಪ್ ಕೂಡ ನಿರ್ಮಿಸಲಾಗಿದೆ. ಬಾಗಿಲು ನೋಡಲು ಚೆನ್ನಾಗಿದ್ದು ಪಾಲಿಶ್ ಮಾಡಲಾಗಿದೆ. 15 ಬೈ 12 ಹಾಲ್ ಇದ್ದು, 45 ರೂಪಾಯಿ ಮೌಲ್ಯದ ಟೈಲ್ಸ್ ಹಾಕಿಸಲಾಗಿದೆ.
ಓಪನ್ ಕಿಚನ್ ಸಿಸ್ಟಮ್ ಇದ್ದು, ಗ್ರಾನೈಟ್ ಹಾಕಿಸಲಾಗಿದೆ ಸಿಂಕ್ ಇಡಲಾಗಿದೆ. ಕಿಚನ್ 7 ಬೈ 15 ಇದೆ, ಕಿಚನ್ ನಲ್ಲಿಯೆ ಡೈನಿಂಗ್ ಮಾಡಿಕೊಳ್ಳಬಹುದು ಜಾಗವಿದೆ. ಕಿಚನ್ ಗೆ ಸರಿಯಾಗಿ ವಿಂಡೊ ಇಡಲಾಗಿದೆ. ಇನ್ನೊಂದು ವಿಂಡೊ ತ್ರಿ ಟ್ರ್ಯಾಕ್ ವಿಂಡೊವನ್ನು ಮಾಡಿಸಲಾಗಿದೆ ಅದಕ್ಕೆ ಗ್ರಿಲ್ ಕೂಡ ಹಾಕಿಸಲಾಗಿದೆ. ಒಂದೆ ಬಾತ್ ರೂಂನಲ್ಲಿ ಇಂಡಿಯನ್ ಮತ್ತು ವೆಸ್ಟರ್ನ್ ಟಾಯ್ಲೆಟ್ ಇದೆ, ಅಲ್ಲಿಯೆ ವಾಷ್ ಬೇಸಿನ್, ಶವರ್ ಇದೆ. ಬಾತ್ ರೂಂ ಬಿಟ್ಟು ಹೊರಗೆ ವಾಷ್ ಬೇಸಿನ್ ಹಾಕಿಸಲಾಗಿದೆ. ರೂಮ್ ಮಾಡಲಾಗಿದ್ದು ಕಾರ್ನರ್ ವಿಂಡೊ ದೊಡ್ಡದಾಗಿ ಮಾಡಲಾಗಿದೆ. 12 ಬೈ 10 ರೂಮಿನ ವಿಸ್ತೀರ್ಣವಾಗಿದೆ.
ರೂಮ್ ಗೆ ಡಿಸೈನ್ ಇರುವ ಬಾಗಿಲನ್ನು ಹಾಕಲಾಗಿದೆ. ಬಾತ್ ರೂಮಿಗೆ ಪಿವಿಸಿ ಡೋರ್ ಹಾಕಿಸಲಾಗಿದೆ. ಮೇನ್ ಡೋರ್ ಗೆ ಡಬಲ್ ಲಾಕ್ ಮಾಡುವ ಸಿಸ್ಟಮ್ ಮಾಡಲಾಗಿದೆ. ರೋಷನ್ ಭಟ್ ಅವರು ಅನೇಕ ಪ್ರೊಜೆಕ್ಟ್ ಗಳನ್ನು ಈಗಾಗಲೆ ರನ್ ಮಾಡುತ್ತಿದ್ದಾರೆ. ಅವರನ್ನು ಬೆಳಗ್ಗೆ 8ಗಂಟೆಯಿಂದ 10ಗಂಟೆವರೆಗೂ ಸಂಪರ್ಕಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮನೆ ಕಟ್ಟಿಸುವವರು ಬೆಂಗಳೂರಿನವರಾದರೆ ರೋಷನ್ ಭಟ್ ಅವರನ್ನು ಸಂಪರ್ಕಿಸಿ. 95358 66770 Video Credit For Kannada Kuvara vlog