ಇಡೀ ಫ್ಯಾಮಿಲಿ ಜೊತೆಯಾಗಿ ಹೋಗುವುದಕ್ಕೆ ಒಂದು 7 ಸೀಟರ್ ಕಾರ್ ಬೇಕು ಎಂದುಕೊಂಡಿದ್ದರೆ ಅದಕ್ಕೆ ಉತ್ತಮ ಆಯ್ಕೆ ಮಾರುತಿ ಎರ್ಟಿಗಾ ಕಾರ್ ಆಗಿದೆ. ಈ ಕಾರ್ ತನ್ನ ಕಾರ್ಯಕ್ಷಮತೆಯಿಂದ ಕುಟುಂಬಗಳನ್ನು ಆಕರ್ಷಿಸಿದೆ. ಮಾರುತಿ ಎರ್ಟಿಗಾ ಕಾರ್ ನ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರ್ ನಲ್ಲಿ 1462 cc ಪೆಟ್ರೋಲ್ ಹೊಂದಿದೆ. 6000 rpm ನಲ್ಲಿ 101.6 bhp ಹಾಗು 4000 rpm ನಲ್ಲಿ 136.8 nm ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ ದೂರದ ಪ್ರಯಾಣಕ್ಕೆ ಉತ್ತಮವಾದ ಆಯ್ಕೆ ಆಗಿದೆ.
ಮಾರುತಿ ಎರ್ಟಿಗಾ ಕಾರ್ ನಲ್ಲಿ 209 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಮಾರ್ಕೆಟ್ ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ಮಾರುತಿ ಎರ್ಟಿಗಾ ಕಾರ್ ನ ಬೆಲೆ 8.69 ಲಕ್ಷದಿಂದ ಶುರುವಾಗಿ, 13.03 ಲಕ್ಷದ ವರೆಗೂ ಇರುತ್ತದೆ. ಈ ಕಾರ್ ನ ಬಗ್ಗೆ ಮತ್ತೊಂದು ವಿಚಾರ ಏನು ಎಂದರೆ, ಒಮ್ಮೆ ಬಳಸಿರುವ ಮಾರುತಿ ಎರ್ಟಿಗಾ ಕಾರ್ ಅನ್ನು ಸಹ ಖರೀದಿ ಮಾಡಬಹುದು. ಇದು ಕಡಿಮೆ ಬೆಲೆಗೆ ಸಿಗುತ್ತದೆ. 59,000 ಕಿಮೀ ಪ್ರಯಾಣ ಮಾಡಿರುವ 2013ರ ಮಾಡೆಲ್ 4.85 ಲಕ್ಷಕ್ಕೆ ಸಿಗುತ್ತದೆ.
52,770 ಕಿಮೀ ಓಡಿರುವ 2012 ಮಾಡೆಲ್ ಕಾರ್ 4.88 ಲಕ್ಷಕ್ಕೆ ಸಿಗುತ್ತದೆ. ಈ ರೀತಿಯಲ್ಲಿ ಮಾರುತಿ ಎರ್ಟಿಗಾ ಕಾರ್ 5 ಲಕ್ಷದ ಒಳಗೆ ಸಿಗುತ್ತದೆ. ಮಾರುತಿ ಎರ್ಟಿಗಾ ಕಾರ್ ಅನ್ನು ಈ ರೀತಿಯಾಗಿ ಖರೀದಿ ಮಾಡಿ, ನಿಮ್ಮ ಮನೆಯವರನ್ನು ಸಂತೋಷವಾಗಿ ಹೊರಗಡೆ ಕರೆದುಕೊಂಡು ಹೋಗಬಹುದು. ಎಲ್ಲರೂ ಸುಖಕರ ಪ್ರಯಾಣ ಮಾಡಬಹುದು.