ಜ್ಯೋತಿಷ್ಯದಲ್ಲಿ ದೇವಗುರು ಬೃಹಸ್ಪತಿಯ ರಾಶಿಚಕ್ರದ ಬದಲಾವಣೆ ಬಹಳ ಮುಖ್ಯವಾಗಿರುತ್ತದೆ. ಗುರು ಧನು ರಾಶಿ ಮತ್ತು ಮೀನರಾಶಿಯ ಅಧಿಪತಿ. ಗುರುವನ್ನು ಅದೃಷ್ಟ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗುತ್ತದೆ. ಸೂರ್ಯ, ಚಂದ್ರ ಮತ್ತು ಮಂಗಳವು ಗುರುವಿನ ಸ್ನೇಹ ಗ್ರಹಗಳಾಗಿವೆ ಮತ್ತು ಇದು ಶನಿಯ ಕಡೆಗೆ ತಟಸ್ಥವಾಗಿ ಇರುವುದು ಆದರೆ ಬುಧ ಮತ್ತು ಶುಕ್ರವನ್ನು ಅದರ ಶತ್ರು ಗ್ರಹಗಳೆಂದು ಪರಿಗಣಿಸಲಾಗಿದೆ.

ಕರ್ಕಟದಲ್ಲಿ ಗುರುವು ಉನ್ನತವಾಗಿದ್ದರೆ ಮಕರ ರಾಶಿಯಲ್ಲಿ ದುರ್ಬಲವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರವು ಗುರು ಗ್ರಹವನ್ನು ಅತ್ಯಂತ ಲಾಭದಾಯಕ ಗ್ರಹವೆಂದು ಪರಿಗಣಿಸಲಾಗಿದೆ ಮತ್ತು ಅದೃಷ್ಟ ಮತ್ತು ಗೌರವದ ಮುಖ್ಯ ಅಂಶವೆಂದು ಪರಿಗಣಿಸಲಾಗಿದೆ. ಹೀಗಾಗಿ 2022 ರಲ್ಲಿ ಇತರ ಗ್ರಹಗಳಂತೆ ಗುರು ಗ್ರಹವು ತನ್ನ ಸ್ಥಾನಪಲ್ಲಟ ಮಾಡಲಿದೆ.

ಗುರು ಗ್ರಹ ತನ್ನ ಸ್ಥಾನ ಬದಲಾವಣೆ ಮಾಡುವುದರಿಂದ ಹಲವು ರಾಶಿಗಳಿಗೆ ಅದೃಷ್ಟ ಒಲಿದು ಬಂದರೆ ಮತ್ತೆ ಕೆಲವು ರಾಶಿಗಳಿಗೆ ದುರಾದೃಷ್ಟ ಒಲಿದು ಬರಲಿದೆ. ಗುರು ಗ್ರಹದ ಸ್ಥಾನ ಪಲ್ಲಟದಿಂದ ನಾಲ್ಕು ರಾಶಿಗಳಿಗೆ ರಾಜಯೋಗ ಹಾಗೂ ಧನಲಾಭ ಆಗಲಿದ್ದು ಆ ನಾಲ್ಕು ರಾಶಿಗಳು ಯಾವವು? ಹಾಗೂ ಏನೆಲ್ಲಾ ಲಾಭ ಆಗಲಿದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಏಪ್ರಿಲ್ 12, 2022 ರಂದು, ಗುರು ತನ್ನದೇ ಆದ ರಾಶಿಯನ್ನು ಪ್ರವೇಶಿಸಲಿದ್ದಾನೆ. 2022 ರಲ್ಲಿ ಗುರುವಿನ ಸ್ಥಾನಪಲ್ಲಟವು ನಾಲ್ಕು ರಾಶಿಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇನ್ನು ಗ್ರಹದ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ನೇರ ಪರಿಣಾಮ ಬೀರಿದ್ರು, ಈ ನಾಲ್ಕು ರಾಶಿಯವರಿಗೆ ಮಾತ್ರ ಹೊಸವರ್ಷದಲ್ಲಿ ಅದೃಷ್ಟ ತರಲಿದೆ. ಆ ಅದೃಷ್ಟವಂತ ರಾಶಿಗಳಲ್ಲಿ

ಮೊದಲಿನದು ಕನ್ಯಾ ರಾಶಿ: ಗುರುಗ್ರಹದ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರ ಮೇಲೆ ಅಧಿಕ ಪರಿಣಾಮ ಬೀರಲಿದೆ. ಹೊಸವರ್ಷದ ಆರಂಭದಲ್ಲಿ ಹೊಸತನ ನಿರೀಕ್ಷೆ ಮಾಡುತ್ತಿರುವ ಕನ್ಯಾರಾಶಿಯವರಿಗೆ, ಗುರುಗ್ರಹದ ರಾಶಿ ಪರಿವರ್ತನೆ ಅಧಿಕ ಲಾಭ ತಂದುಕೊಡಲಿದೆ. ವೃತ್ತಿಜೀವನದಲ್ಲಿ ಕನ್ಯಾರಾಶಿಯವರು ಹೊಸ ವರ್ಷದಲ್ಲಿ ಸಾಕಷ್ಟು ಯಶಸ್ಸು ಪಡೆಯಲಿದ್ದು ಇವರ ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗಲಿದೆ, ಹೂಡಿಕೆಯ ಮೇಲೆ ಇವರು ಬಂಡವಾಳ ಹಾಕುವುದರಿಂದ ಬಹುದೊಡ್ಡ ಲಾಭ ಪಡೆಯಲಿದ್ದಾರೆ. ಜೊತೆಗೆ ಭೂಮಿಯಿಂದ ಕೂಡ ಕನ್ಯಾರಾಶಿಯವರು ಅಧಿಕ ಲಾಭ ಪಡೆದುಕೊಳ್ಳಲಿದ್ದಾರೆ.

ಎರಡನೆಯದು ವೃಶ್ಚಿಕ ರಾಶಿ: ಹೊಸವರ್ಷದಲ್ಲಿ ಗುರುಗ್ರಹದ ಸ್ಥಾನಪಲ್ಲಟ ವೃಶ್ಚಿಕ ರಾಶಿಯವರಿಗೆ ವರದಾನವಾಗಿ ಬರಲಿದೆ. ಗುರುಗ್ರಹದ ಬದಲಾವಣೆಯಿಂದ ಇವರ ಜೀವನವು ಅದ್ಭುತ ಮತ್ತು ಅಗಾಧವಾಗಿರುತ್ತದೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯ ಜನರಿಗೆ ಹಣ ಸಂಪಾದಿಸಲು ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. 2022 ಉದ್ಯೋಗ ಪ್ರಗತಿಗೆ ಉತ್ತಮ ವರ್ಷವಾಗಿರುತ್ತದೆ. ಅನೇಕ ಉತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ. ಇದರ ಹೊರತಾಗಿ, ಆರ್ಥಿಕ ಲಾಭವು ಉತ್ತಮವಾಗಿರುತ್ತದೆ. ಒಟ್ಟಿನಲ್ಲಿ ಈ ವರ್ಷ ಗುರುವಿನ ಆಶೀರ್ವಾದದಿಂದ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಯೋಗವಿದೆ.

ಮೂರನೆಯದಾಗಿ ಧನು ರಾಶಿ: ಹೊಸವರ್ಷದ ಆರಂಭದಲ್ಲಿ ಗುರುಗ್ರಹವು ಮೀನಾ ರಾಶಿಗೆ ಪ್ರವೇಶ ಮಾಡುವುದರಿಂದ ಧನುರಾಶಿಯವರಿಗೆ ಧನಾತ್ಮಕ ಲಾಭಗಳು ಉಂಟಾಗಲಿದೆ. ಆರ್ಥಿಕ ಸಂಕಷ್ಟದಿಂದ ಇಷ್ಟು ದಿನ ಕಂಗೆಟ್ಟಿದ್ದ ಧನುರಾಶಿಯವರಿಗೆ ಹೊಸವರ್ಷದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ಧನು ರಾಶಿಯವರ ಹಣಕಾಸಿನ ಪರಿಸ್ಥಿತಿ ಸುಧಾರಣೆಯಲ್ಲಿದ್ದು ಹಲವು ಮೂಲಗಳಿಂದ ಆದಾಯ ಹರಿದು ಬರಲಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಲಾಭದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿವೆ.

ನಾಲ್ಕನೆಯದಾಗಿ ಕುಂಭ ರಾಶಿ: ಮೀನ ರಾಶಿಗೆ ಗುರು ಗ್ರಹ ಪ್ರವೇಶ ಮಾಡುವುದರಿಂದ ಕುಂಭ ರಾಶಿಯವರಿಗೆ ಬಹಳ ಅನುಕೂಲಕರವಾದ ಸ್ಥಿತಿ 2022 ರಲ್ಲಿ ಇರಲಿದೆ. ಕೆಲಸದಲ್ಲಿ ಭಡ್ತಿ ನಿರೀಕ್ಷೆ ಮಾಡುತ್ತಿರುವವರು, ವ್ಯವಹಾರದಲ್ಲಿ ಪ್ರಗತಿ ಕಾಣಬೇಕು ಎಂದು ಬಯಸುತ್ತಿರುವವರು ಆಸೆಗಳು ಈಡೇರಲಿವೆ. ಇಷ್ಟು ದಿನ ಅವಿವಾಹಿತರಾಗಿ ಉಳಿದುಕೊಂಡವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಕುಂಭ ರಾಶಿಯವರ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಗಳು ಗುರು ಗ್ರಹದ ಸ್ಥಾನ ಪಲ್ಲಟದಿಂದ ಬದಲಾವಣೆಯಾಗಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!