ಪ್ರತಿ ದಿನ ಭಾರತದಲ್ಲಿ ಅತ್ಯಾಧುನಿಕ, ಹೊಸ ತಂತ್ರಜ್ಞಾನ, ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಬಹುತೇಕ ಎಲ್ಲಾ ನಗರಗಳಲ್ಲಿ ಸ್ಟಾರ್ಟ್ ಅಪ್ ಕಂಪನಿಗಳು ಒಂದರ ಮೇಲೊಂದರಂತೆ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ಪ್ಯೂರ್ EV ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. 120 KM ಮೈಲೇಜ್, ಕೈಗೆಟುಕುವ ದರದಲ್ಲಿ ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜಾಗಿದೆ. ಇದರ ಬೆಲೆ ಇಷ್ಟು ಯಾವಾಗ ಬಿಡುಗಡೆ ಆಗಲಿದೆ ಈ ಎಲ್ಲದರ ಬಗ್ಗೆ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
IIT ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿ ಪ್ಯೂರ್ EV ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಜೆ ಮಾಡಲು ಸಜ್ಜಾಗಿದೆ. ಡಿಸೆಂಬರ್ 1 ರಂದು ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳ ಈ ಸ್ಕೂಟರ್ ಭಾರತದ ಎಲೆಕ್ಟ್ರಿಕ್ ಸ್ಕೂಟರ್ ಪಟ್ಟಿಗೆ ಶೀಘ್ರದಲ್ಲೇ ಸೇರಿಕೊಳ್ಳುಲಿದೆ. ಸ್ಟಾರ್ಟ್ಅಪ್ ಕಂಪನಿ ಪ್ಯೂರ್ ಇವಿ ಡಿಸೆಂಬರ್ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ನ (Electric Scooter) ಹೆಸರನ್ನು ಎಟ್ರಾನ್ಸ್ ನಿಯೋ (Etrance Neo) ಎಂದು ಘೋಷಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ನ ಶೋರೂಂ ಬೆಲೆ 75,999 ರೂ. ಈ ಹಿಂದೆ Pure EV ತನ್ನ ಹೊಸ ಸ್ಕೂಟರ್ ಮಾದರಿ ‘ಎಟ್ರಾನ್ಸ್ ಪ್ಲಸ್’ (ETrance+) ಅನ್ನು ಪರಿಚಯಿಸಿತು, ಇದರ ಶೋ ರೂಂ ಬೆಲೆ 56,999 ರೂ. ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ಮೈಲೇಜ್ ನೀಡಲಿದೆ. 1.5 KW ಬ್ಯಾಟರಿ ಹಾಗೂ 2.2 KW ಪೀಕ್ BLDC ಮೋಟಾರ್ ಹೊಂದಿರುವ ಪ್ಯೂರ್ EV ಗರಿಷ್ಠ ಪವರ್ ಹೊಂದಿದೆ. ಇದರ ವೇಗ ನೋಡುವುದಾದರೆ ETRO ನಿಯೋ ಐದು ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದು 2,500 WH ನ ಪೇಟೆಂಟ್ ಬ್ಯಾಟರಿಯನ್ನು ಹೊಂದಿದೆ.
ಇದರಲ್ಲಿ ಪೇಟೆಂಟ್ ಪಡೆದ ಬ್ಯಾಟರಿಯನ್ನು ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. Pure EV ಸಿಇಒ ರೋಹಿತ್ ವಾಡೆರಾ ಅವರ ಪ್ರಕಾರ ಹೊಸ ಮಾದರಿಯು ಉತ್ತಮ ಏರೋಡೈನಮಿಕ್ಸ್ ವೈಶಿಷ್ಟ್ಯವನ್ನು ಹೊಂದಿದೆ, ಇದು ಪವರ್ಟ್ರೇನ್ನ ದಕ್ಷತೆಯನ್ನು ಸುಧಾರಿಸುತ್ತದೆ. ಇದಲ್ಲದೆ ಈ ವಾಹನವು ಹೆಚ್ಚಿನ ವೇಗವನ್ನು ಪಡೆಯಲು ಮತ್ತು ಹೆಚ್ಚು ಪ್ರಯಾಣಿಸಲು ಸಾಧ್ಯವಾಗುತ್ತದೆ. ಹೈದರಾಬಾದ್ ಉತ್ಪದನಾ ಘಟಕದಲ್ಲಿ ಪ್ರತಿ ತಿಂಗಳು 20,000 ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಿಸಲು ಸಜ್ಜಾಗಿದೆ. ಡಿಸೆಂಬರ್ 1 ರಿಂದ ದೇಶದ 20 ರಾಜ್ಯದ 100 ವಿವಿದ ನಗರ, ಪಟ್ಟಣಗಳಲ್ಲಿ ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿದೆ. 2021ರಲ್ಲಿ ಪ್ಯೂರ್ EV ಬರೋಬ್ಬರಿ 1 ಲಕ್ಷ ಸ್ಕೂಟರ್ ವಿತರಣೆ ಮಾಡುವ ಗುರಿ ಇಟ್ಟುಕೊಂಡಿದೆ. ಬಿಡುಗಡೆಗೂ ಮೊದಲೇ ಪ್ಯೂರ್ EV ಎಲೆಕ್ಟ್ರಿಕ್ ಸ್ಕೂಟರ್ಗೆ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ ಪ್ಯೂರ್ EV ಭಾರತದಲ್ಲಿ ಹೊಸ ಅಧ್ಯಾಯ ಆರಂಭಿಸುವ ವಿಶ್ವಾಸದಲ್ಲಿದೆ.