ಈಗಂತೂ ನಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದೇ ಕಷ್ಟಕರವಾಗಿದೆ. ಸ್ವಂತ ಮನೆ, ಕೆಲಸ, ಅಸ್ತಿ ಪಾಸ್ತಿ ಇದ್ದರೂ ಸಹ ಮದುವೆ ಆಗಬೇಕು ಎನ್ನುವ ಹುಡುಗನಿಗೆ ಹೆಣ್ಣು ಸಿಗುತ್ತಿಲ್ಲವೆಂದು ಗೋಳಾಡುವ ಗಂಡು ಮಕ್ಕಳೇ ಹೆಚ್ಚಾಗಿದ್ದಾರೆ. ಇನ್ನು ಮದುವೆ ಆಗಲು ಹೆಣ್ಣು ಸಿಗದೇ ಇರುವ ಕಾರಣಕ್ಕೇ ಎಷ್ಟೋ ಜನರು ಇಂದಿಗೂ ಸಹ ಬ್ರಹ್ಮಚಾರಿಗಳಾಗಿಯೆ ಇದ್ದಾರೆ ಇನ್ನೂ ಎಷ್ಟೋ ಜನರು ಪರಲೋಕ ಯಾತ್ರೆ ಮಾಡಿದವರು ಸಹ ಇದ್ದಾರೆ. ಆದರೆ ಇಲ್ಲೊಬ್ಬ ಕೇವಲ 22 ವರ್ಷ ವಯಸ್ಸಿನ ಖತರ್ನಾಕ್ ಹುಡುಗನ ಕಥೆ ಕೇಳಿದರೆ ಶಾಕ್ ಆಗುವುದು ಖಂಡಿತಾ. ಹಾಗಾದ್ರೆ ಈ ಹುಡುಗ ಮಾಡಿರುವುದಾದರೂ ಏನೂ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತಮ್ಮ ಜೀವನದಲ್ಲಿ ಮದುವೆ ಆಗಬೇಕು ಎಂದುಕೊಂಡವರು ಯಾರೇ ಆದರೂ ಸಹ ಅವರು ಅವರವರ ಜೀವನ ನಡೆಸಲು ಒಂದು ಹಂತ ಸೆಟಲ್ ಆಗಿಯೇ ಮದುವೆ ಆಗುತ್ತಾರೆ. ಒಂದು ಹಂತದ ವಿಧ್ಯಾಭ್ಯಾಸ ಎಲ್ಲಾ ಮುಗಿಸಿ ಕೈಯ್ಯಲ್ಲಿ ಏನಾದರೂ ಒಂದು ಕೆಲಸ ಇದ್ದುಕೊಂಡು ಮದುವೆ ಆಗುತ್ತಾರೆ ಆದರೆ ಒಬ್ಬ ಹುಡುಗ ಇಷ್ಟು ಚಿಕ್ಕ ವಯಸ್ಸಿಗೇ ಅಂದರೆ ತನ್ನ 22 ವರ್ಷ ವಯಸ್ಸಿಗೆ ಇವನಾಗಿರುವ ಮದುವೆ ಸಂಖ್ಯೆಗಳನ್ನ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತಾ. ಈ ಗಣೇಶ್ ಎಂಬ ಹೆಸರಿನ ಹುಡುಗ ತಮಿಳುನಾಡಿನ ಚನ್ನೈನವನು. ಬರೋಬ್ಬರಿ ಹನ್ನೊಂದು ಮದ್ವೆಯಾಗಿರುವ ಈ ಹುಡುಗ ಇಲ್ಲಿವರೆಗೂ ಯಾರೊಬ್ಬರಿಗೂ ತಿಳಿಯದಂತೆ ಸಂಸಾರ ಮಾಡುತ್ತಿದ್ದ. ಆದರೆ ಈಗ ಈ ಭೂಪನ ಅಸಲಿ ಸತ್ಯ ಅವನ ಹೆಂಡತಿಯಿಂದಲೇ ಬಹಿರಂಗವಾಗಿದೆ. ಹಾಗಾದ್ರೆ ಈ ಹುಡುಗ ಆಗಿರುವ ಮದುವೆಗಳೆಷ್ಟು? ಎಂದು ಇವನ ವಿಷಯ ತಿಳಿಯೋಣ.
ಚೆನ್ನೈನಲ್ಲಿ ವಾಸ ಮಾಡುತ್ತಿರುವ 23 ವರ್ಷದ ಈ ಗಣೇಶ ಇಲ್ಲಿವರೆಗೂ ಏನಿಲ್ಲಾ ಅಂದರೂ 11 ಮದುವೆಯಾಗಿದ್ದಾನೆ. ಇನ್ನು ಈ ಹುಡುಗ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಯುವತಿಯೊಬ್ಬಳನ್ನ ಪ್ರೀತಿಸಿ, ಇಬ್ಬರು ಓಡಿಹೋಗಿ ಹೋಗಿ ಮದುವೆ ಆಗಿದ್ದಾರೆ. ಇನ್ನು ಆ ಯುವತಿಯ ಕುಟುಂಬದವರು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದರು. ಆದರೆ 22ನೇ ವಯಸ್ಸಿಗೇ 11ಜನರನ್ನ ಮದ್ವೆಯಾಗಿರುವ ಹುಡುಗ ಸಾಮಾನ್ಯನಾ!? ನೀವೇ ಹೇಳಿ. ಆ ಖತರ್ನಾಕ್ ಹುಡುಗ ಮೊದಲೇ ಠಾಣೆಗೆ ಹೋಗಿ ತನಗೆ ಮತ್ತು ತನ್ನ ಹೆಂಡತಿಗೆ ತೊಂದರೆಯಾಗುವ ಭಯ ಇದೆ, ನಮಗೆ ರಕ್ಷಣೆ ಕೊಡಬೇಕೆಂದು ಪೊಲೀಸರಿಗೆ ಹೇಳಿರುತ್ತಾನೆ. ಚಾಲಾಕಿ ಹುಡುಗನ ಮಾತನ್ನ ನಂಬಿದ ಪೋಲಿಸರು ಯುವತಿಯ ಪೋಷಕರನ್ನ ಕರೆಯಿಸಿ ವಿಚಾರಣೆ ಮಾಡಿ, ಯುವತಿಯ ತಂದೆ ತಾಯಿಯನ್ನ ಮನೆಗೆ ಕಳುಹಿಸಿ, ಯುವತಿಯನ್ನ ಗಣೇಶನ ಜೊತೆಯೇ ಕಳುಹಿಸಿದರು.
ಮದ್ವೆಯಾಗಿ ಕೆಲವೇ ದಿನಗಳು ಕಳೆದಿದ್ದವು. ಆದರೆ ಈ ಭೂಪ ರಸಿಕ ಹುಡುಗನ ಆಟ ಇನ್ನು ಮುಗಿದಿರಲಿಲ್ಲ. ಮನೆ ಕೆಲಸಕ್ಕೊಬ್ಬಳು ಬೇಕು ಎಂಬ ನೆಪದಲ್ಲಿ ಹದಿನೇಳು ವರ್ಷದ ಹುಡುಗಿಯೊಬ್ಬಳನ್ನ ಮನೆಗೆ ಕರೆತಂದ. ಆಕೆಯನ್ನು ಸಹ ಮರಳು ಮಾಡಿ ದಿನ ಕಳೆದಂತೆ ಆಕೆಯೂ ಜೊತೆ ಕೂಡಾ ಸಲುಗೆ ಸಂಬಂಧ ಬೆಳೆಸಿಕೊಂಡ. ಇನ್ನು ತನ್ನ ಪತಿ ಪುರುಷೋತ್ತಮನ ಬಗ್ಗೆ ನಿಜ ಅರಿತ ಪತ್ನಿ ಅವನ ಸಂಬಂಧದಿಂದ ದೂರ ಇರಲು ಪ್ರಯತ್ನಿಸಿದಳು. ಇದರಿಂದ ಹೆಂಡತಿ ಅಂತ ನೋಡದೆ ಹಿಂಸೆ ಕೊಡಲು ಶುರು ಹಚ್ಚಿಕೊಂಡ. ಅವನು ಕೊಡುತ್ತಿದ್ದ ಕಷ್ಟಗಳಿಂದ ಕಂಗೆಟ್ಟ ಪತ್ನಿ ತನ್ನ ಪೋಷಕರಿಗೆ ಕರೆ ಮಾಡಿ ತನಗಾಗುತ್ತಿರುವ ನೋವಿನ ಬಗ್ಗೆ ಹೇಳಿಕೊಂಡು ಮನೆಗೆ ಕರೆದೊಯ್ಯುವಂತೆ ಕೇಳಿಕೊಳ್ಳುತ್ತಾಳೆ.
ನಂತರ ಯುವತಿಯ ಪೋಷಕರು ಆ ಹುಡುಗನ ಮೇಲೆ ಪ್ರಕರಣ ದಾಖಲು ಮಾಡಿದ್ದು, ರಸಿಕ ಗಣೇಶನನ್ನ ಠಾಣೆಗೆ ಕರೆದುಕೊಂಡು ಹೋದ ಪೋಲಿಸರು, ಅವನ ನಿಜ ಬಣ್ಣದ ಬಗ್ಗೆ ತಿಳಿದು ಶಾಕ್ ಆಗಿದ್ದಾರೆ. ಅವನಿಗೇ ಅದಾಗಲೇ ಹನ್ನೊಂದು ಮದುವೆಗಳಾಗಿದ್ದು, ತನ್ನ ರಹಸ್ಯ ಯಾರಿಗೂ ತಿಳಿಯದಂತೆ ಪ್ರತಿಯೊಬ್ಬರ ಜೊತೆ ಸಂಸಾರ ಮಾಡುತ್ತಿದ್ದ. ೧೧ ಹೆಂಡತಿಯರು ಸಾಲದೆಂಬಂತೆ ಬೇರೆಯವರ ಜೊತೆ ಕೂಡ ಸಂಬಂಧ ಇಟ್ಟುಕೊಂಡಿರುವ ವಿಚಾರ ಬೆಳೆಕಿಗೆ ಬಂದಿದೆ. ನೋಡಿ ಕೆಲ ಹೆಣ್ಣು ಮಕ್ಕಳು ಹಿಂದೂ ಮುಂದು ನೋಡದೆ ಇಂತಹ ಕೆಟ್ಟ ಹುಳುಗಳ ಜೊತೆ ಪ್ರೀತಿ ಎಂಬ ಜೇಡರ ಬಲೆಯಲ್ಲಿ ಬಿದ್ದು ಅದರಿಂದ ಹೊರಗೆ ಬರಲಾರದೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.ಈ ಘಟನೆಯನ್ನ ನೋಡಿದ ಮೇಲೆ ಅರ್ಥವಾಗದೇ ಇರೋ ಪ್ರಶ್ನೆ ಒಂದೇ ಒಬ್ಬ ಪತ್ನಿಯನ್ನ ಕಟ್ಟಿಕೊಂಡು ನಿಭಾಯಿಸಲು ಕಷ್ಟಪಡುವ ಈ ಕಾಲದಲ್ಲಿ, ಇಷ್ಟು ಚಿಕ್ಕ ವಯಸ್ಸಿನ ಈ ಭೂಪ ಅದು ಹೇಗೆ 11 ಜನರ ಜೊತೆ ಸಂಸಾರ ಸಾಗಿಸುತ್ತಿದ್ದ!!! ಎಂಬುದೇ ಅಚ್ಚರಿಗೆ ಕಾರಣವಾಗಿದೆ.