ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಸುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಏಕೆಂದರೆ ಅದರಲ್ಲಿ ಮೂರು ಕೋಟಿ ದೇವರುಗಳು ಇದ್ದಾರೆ ಎನ್ನುವುದು ಭಾರತೀಯರ ನಂಬಿಕೆ. ಹಾಗೆಯೇ ಹಸುಗಳಲ್ಲಿ ಹಲವಾರು ತಳಿಗಳಿವೆ. ಭಾರತೀಯ ಗೋಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿ ಇರುವ ತಳಿಗಳಲ್ಲಿ ಹಳ್ಳಿಕಾರ್ ತಳಿ ಕೂಡ ಒಂದು.ಈ ಹಳ್ಳಿಕಾರ್ ತಳಿಯ ಒಂದು ಆಕಳಿನ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಹಳ್ಳಿಕಾರ್ ತಳಿಯು ಹತ್ತರಿಂದ ಹನ್ನೆರಡು ಗಂಟೆಗಳ ಕಾಲ ಸುಮಾರು ಹತ್ತರಿಂದ ಹನ್ನೆರಡು ಕ್ವಿಂಟಾಲ್ ನಷ್ಟು ಭಾರವನ್ನು ಹೊರಬಲ್ಲದು. ಹಾಗೆಯೇ ಅದಕ್ಕೆ ಎಳೆಯುವ ಅದೃಶ್ಯ ಶಕ್ತಿ ಇದೆ. ಇದು 30 ರಿಂದ 40km ಚಲಿಸುವ ಶಕ್ತಿ ಹೊಂದಿದೆ.ಹಾಗೆಯೇ ವೇಗವಾಗಿ ಉಳುಮೆ ಮಾಡಲು ಹಳ್ಳಿಕಾರ್ ತಳಿಗಳು ಪ್ರಸಿದ್ಧಿ ಪಡೆದಿವೆ. ಕಡಿಮೆ ಆಹಾರ ಸೇರಿಸಿ ಹೆಚ್ಚು ಕೆಲಸ ಮಾಡುವ ತಳಿ ಎಂದರೆ ಅದು ಹಳ್ಳಿಕಾರ್ ತಳಿ ಮಾತ್ರ.ಇವು ಮೈಸೂರು, ಮಂಡ್ಯ, ತುಮಕೂರು ಮತ್ತು ಹಾಸನಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಇಂತಹ ಶ್ರೇಷ್ಠ ತಳಿಯ ಒಂದು ಹೋರಿ ಮಲವಳ್ಳಿಯಲ್ಲಿ ಇದೆ.ಅದರ ಹೆಸರು ಕೃಷ್ಣ. ಅದಕ್ಕೆ 31 ತಿಂಗಳು ಅಂದರೆ 2 ವರೆ ವರ್ಷಗಳು. ಅವನ ಆಕಾರಕ್ಕೆ ಮೈ ಬಣ್ಣಕ್ಕೆ ವಯಸ್ಸಿಗೆ ಮೀರಿ ಬೆಳೆದಿದ್ದಾನೆ. ಇದು ನೋಡಲು ಬಹಳ ಸುಂದರವಾಗಿದೆ.ಇದು ಗೋಧಿ ಬಣ್ಣ ಮತ್ತು ಅಲ್ಲಲ್ಲಿ ಕಪ್ಪು ಬಣ್ಣವನ್ನು ಹೊಂದಿದೆ. ಇದಕ್ಕೆ ದಿನವೂ ಹೊಳೆಯಲ್ಲಿ ಸ್ನಾನ ಮಾಡಿಸಲಾಗುತ್ತದೆ.ಇದು ಫೆಬ್ರವರಿ 27, 2018ರಲ್ಲಿ ಹುಟ್ಟಿದೆ. ಇದನ್ನು ನೋಡಿ ತುಂಬಾ ಜನ ಇಷ್ಟಪಡುತ್ತಾರೆ.

ಹಾಗೆಯೇ ವಾಟ್ಸಾಪ್ ನಲ್ಲಿ ‘ಕೃಷ್ಣನ ಅಭಿಮಾನಿ ಬಳಗ’ ಎಂದು ಗ್ರೂಪ್ ರಚಿಸಲಾಗಿದೆ.ಇದರ ಅಭಿಮಾನಿಗಳು ಬಹಳ ಇದ್ದಾರೆ. ಇದರ ಅಭಿಮಾನಿಗಳು ತಮ್ಮ ಗಾಡಿಗಳಿಗೆ ಅದರ ಚಿತ್ರವನ್ನು ಹಾಕಿಸಿಕೊಂಡಿದ್ದಾರೆ.ಇದನ್ನು ನೋಡಿದವರೆಲ್ಲಾ ತುಂಬಾ ಚೆನ್ನಾಗಿದೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಎಷ್ಟು ದೊಡ್ಡದಾಗಿ ಬೆಳೆದಿದೆ ಇದನ್ನು ನಮಗೆ ಕೊಡಿ ಎಂದು ಹೇಳುತ್ತಾರೆ.ಇದರ ಬೆಲೆ ಈಗ 30ಲಕ್ಷಗಳು ಆಗಿದೆ.ಕೆಲವರು 25ಲಕ್ಷಕ್ಕೆ ಕೇಳುತ್ತಿದ್ದಾರೆ ಆದರೆ ಇದರ ಮಾಲೀಕರು 30ಲಕ್ಷಕ್ಕೆ ಮಾತ್ರ ಕೊಡುವುದಾಗಿ ಹೇಳಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!