ಪ್ರತೀ ದಿನ ನಿದ್ರೆ ಮಾಡುವಾಗ ಯಾವ ರೀತಿ ಮಲಗಬೇಕು? ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಎನ್ನುವುದು ಬಹಳಷ್ಟು ಜನರ ಸಂದೇಹವಾಗಿರತ್ತೆ. ಚಂಡಿ ಪುರಾಣ, ಮತ್ಸ್ಯ ಪುರಾಣ, ವಿಷ್ಣು ಪುರಾಣ ಬ್ರಹ್ಮಾಂಡ ಪುರಾಣ, ವಾಯು ಪುರಾಣ, ಭಾಗವತ ಪುರಾಣ ಹೀಗೆ 18 ಪುರಾಣಗಳಲ್ಲಿ ಮಹರ್ಷಿ ವ್ಯಾಸರು ಒಂದು ಮಾತನ್ನು ಹೇಳಿದ್ದಾರೆ. ಮಲಗುವುದು ಕೂಡಾ ಮನುಷ್ಯನ ಆರೋಗ್ಯದ ಮೇಲೆ ಹಾಗೂ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಇನ್ನು ಮಾರ್ಕಂಡೇಯ ಪುರಾಣದಲ್ಲಿ ವ್ಯಾಸರು ಮದಾಲಸ ಚರಿತ್ರೆ ಎನ್ನುವ ಚರಿತ್ರೆಯಲ್ಲಿ ದತ್ತಾತ್ರೇಯನ ಮಗನಾಗಿ ಮದಾಲಸ ಜನಿಸಿರುತ್ತಾನೆ. ಮದಾಲಸ ಚರಿತ್ರೆಯಲ್ಲಿ ಯಾವ ರೀತಿ ಯಾವ ದಿಕ್ಕಿಗೆ ಮಲಗಿದರೆ ಸದಾಚಾರ ಸಂಪನ್ನನಾಗುತ್ತಾನೆ ಹಾಗೂ ಸಿರಿ ಸಂಪತ್ತು ಬಂದು ಒದಗುತ್ತದೆ ಎನ್ನುವುದನ್ನು ತಿಳಿಸಿದ್ದಾರೆ.
ಎಂತಹದ್ದೇ ಪರಿಸ್ಥಿತಿ ಇದ್ದರೂ ಸಹ ಪಶ್ಚಿಮ ಹಾಗೂ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು. ಇದರಿಂದ ಅನರ್ಥಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿದರೆ ನಿಮ್ಮಲ್ಲಿರುವ ಸಿರಿ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಾರೆ.
ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ನೆನಪಿನ ಶಕ್ತಿ ಕಡಿಮೆ ಆಗುತ್ತದೆ ಅಷ್ಟೇ ಅಲ್ಲದೆ ಇಟ್ಟಿದ್ದುಇಟ್ಟಲ್ಲಿ , ಕೊಟ್ಟಿದ್ದು ಕೊಟ್ಟಲ್ಲಿ ಮರೆತೇ ಹೋಗುತ್ತದೆ ಹಾಗೂ ದೋಷ ಉಂಟಾಗುತ್ತದೆ ಎಂದೂ ಹೇಳುತ್ತಾರೆ. ಹಾಗಾಗಿ ಆದಷ್ಟು ಪೂರ್ವ ದಿಕ್ಕಿನಲ್ಲಿ ತಲೆ ಇಟ್ಟು ಮಲಗುವುದರಿಂದ ಆರೋಗ್ಯ ವೃದ್ಧಿಸುತ್ತದೆ ಹಾಗೂ ದಕ್ಷಿಣ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಸಿರಿ ಸಂಪತ್ತು ಹೆಚ್ಚುತ್ತದೆ ಹಾಗೂ ನೆನಪಿನ ಶಕ್ತಿ ಕೂಡಾ ಹೆಚ್ಚುತ್ತದೆ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಆ ವ್ಯಕ್ತಿಯ ಜ್ಞಾಪಕ ಶಕ್ತಿ ಕಡಿಮೆ ಆಗುತ್ತದೆ ಈ ಮೂಲಕ ಆ ವ್ಯಕ್ತಿ ಕೆಲವು ದಿನಗಳಲ್ಲಿ ಮರೆಗುಳಿ ಆಗುತ್ತಾನೆ ಎಂದು ಹೇಳುತ್ತಾರೆ.
ಇನ್ನು ಪಶ್ಚಿಮ ದಿಕ್ಕಿಗೆ ತಲೆ ಇಟ್ಟು ಮಲಗುವುದರಿಂದ ಸಂಪತ್ತು ಕೂಡಾ ನಿಧಾನಕ್ಕೆ ಕಡಿಮೆ ಆಗುವುದು ಹಾಗೂ ಬಿಡಿಗಾಸು ಕೈಯಲ್ಲಿ ನಿಲ್ಲದಷ್ಟು ಆಗುತ್ತೇ. ನಾವು ಬೇರೆ ಊರಿಗೆ ಎಲ್ಲೇ ಹೋದರೂ ಎಲ್ಲೇ ಇದ್ದರೂ ಪಶ್ಚಿಮ ಹಾಗೂ ಉತ್ತರ ದಿಕ್ಕಿಗೆ ಮಾತ್ರ ತಲೆ ಇಟ್ಟು ಮಲಗಬಾರದು. ಪೂರ್ವ ಮತ್ತು ದಕ್ಷಿಣ ದಿಕ್ಕಿಗೆ ಮಾತ್ರ ತಲೆ ಇಟ್ಟು ಮಲಗಬೇಕು ಇದರಿಂದ ನಮ್ಮ ಸಂಪತ್ತು ಹಾಗೂ ನೆನಪಿನ ಶಕ್ತಿ ಕೂಡಾ ಹೆಚ್ಚಾಗುತ್ತದೆ.