ಸರ್ಕಾರ ಜನರ ನಿರುದ್ಯೋಗವನ್ನು ದೂರಮಾಡಲು ಸರ್ಕಾರಿ ಇಲಾಖೆಯಲ್ಲಿ ಕಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸುತ್ತಿದೆ ಅದರಲ್ಲಿ ಇವತ್ತು ನಾವು ಪೊಲೀಸ್ ಇಲಾಖೆಯಲ್ಲಿ ಕಾಲಿ ಇರುವ ಅನುಯಾಯಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರ ಬಗ್ಗೆ ತಿಳಿದುಕೊಳ್ಳೋಣ.
ಈ ಹುದ್ದೆಗೆ ನೀವು ಹತ್ತನೇ ತರಗತಿ ತೇರ್ಗಡೆ ಯಾಗಿದ್ದಾರೆ ಅರ್ಜಿ ಹಾಕಬಹುದು ಈ ಹುದ್ದೆ ಆಯ್ಕೆ ಗೆ ಯಾವುದೇ ತರಹದ ಲಿಖಿತ ಪರೀಕ್ಷೆ ಇರುವುದಿಲ್ಲ. ಇ ಅಧಿಸೂಚನೆಯನ್ನು ಕರ್ನಾಟಕ ಪೊಲೀಸ್ ಇಲಾಖೆ ಹೊರಡಿಸಿದೆ. ಅಧಿಸೂಚನೆ ಸಂಖ್ಯೆ ಸೊನ್ನೆ ಎರಡು/ನೇಮಕಾತಿ – ನಾಲ್ಕು ಎರಡು ಸಾವಿರದ ಇಪ್ಪತ್ತೊಂದು ಇಪ್ಪತ್ತೆರಡು.
ಇನ್ನು ಹುದ್ದೆಗಳ ಬಗ್ಗೆ ನೋಡುವುದಾದರೆ ಒಟ್ಟು ಎರಡು ನೂರಾ ಐವತ್ತು ಹುದ್ದೆಗಳಿರುತ್ತವೇ. ಯಾವ ಯಾವ ಹುದ್ದೆಗಳು ಅನ್ನುವುದನ್ನು ನೋಡುವುದಾದರೆ ಅಡುಗೆಯವರ ಕ್ಷೌರಿಕ ಧೋಬಿ ಕಸ ಗುಡಿಸುವವರು ನೀರು ತರುವವರು ಇ ರೀತಿ ಹುದ್ದೆ ವಿವರಗಳಿವೆ.ಎಲ್ಲೆಲ್ಲಿ ಕೆ ಎಸ್ ಆರ್ ಪಿ ಯೂನಿಟ್ ಗಳು ಇರುತ್ತದೆಯೋ ಅಲ್ಲಿ ನಿಮಗೆ ಹುದ್ದೆಯನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ ಬಗ್ಗೆ ನೋಡುವುದಾದರೆ ಕೆಟಗರಿ ಟುಎ ಟುಬಿ ತ್ರಿಎ ತ್ರಿಬಿ ಜನರಲ್ ಅವರಿಗೆ ಎರಡು ನೂರಾ ಐವತ್ತು ಡಿ ಡಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಕೆಟಗರಿ ಒಂದರವರಿಗೆ ನೂರು ರೂಪಾಯಿ ಡಿ ಡಿ ಇರುತ್ತದೆ. ಈ ನಿಗದಿತ ಶುಲ್ಕವನ್ನು ನಗದು ಅಥವಾ ಆನ್ಲೈನ್ ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಯ ಮೂಲಕ ಅಥವಾ ಎಚ್ ಡಿ ಎಫ್ ಸಿ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಿ ನಂತರ ಚಲನನ ಅಭ್ಯರ್ಥಿ ಪ್ರತಿಯನ್ನು ನಿಮ್ಮಬಳಿ ಇಟ್ಟುಕೊಳ್ಳಬೇಕು.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಮೂವತ್ತು ಜುಲೈ ಎರಡು ಸಾವಿರದ ಇಪ್ಪತ್ತೊಂದು ಬೆಳಿಗ್ಗೆ ಹತ್ತು ಗಂಟೆಯಿಂದ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುವತ್ತು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದು ಸಂಜೆ ಆರು ಗಂಟೆಯ ವರೆಗೆ ಅರ್ಜಿ ಸಲ್ಲಿಸಬಹದಾಗಿದೆ.
ವಯೋಮಿತಿಯನ್ನು ನೋಡುವುದಾದರೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ಹದಿನೆಂಟು ವರ್ಷ ಆಗಿರಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂವತ್ತೈದು ವರ್ಷ ಮೀರಿರಬಾರದು ಮತ್ತು ಇತರ ಅಭ್ಯರ್ತಿ ಗಳಿಗೆ ಮೂವತ್ತು ವರ್ಷ ಮೀರಿರಬಾರದು.
ಇನ್ನು ವಿದ್ಯಾರ್ಹತೆ ನೋಡುವುದಾದರೆ ಅಭ್ಯರ್ಥಿಗಳು ಹತ್ತನೇ ತರಗತಿ ತೇರ್ಗಡೆ ಪ್ರಮಾಣ ಪತ್ರ ಹೊಂದಿರಬೇಕು. ಇನ್ನು ವೇತನ ದ ಬಗ್ಗೆ ತಿಳಿಯುವುದಾದರೆ ಬೇಸಿಕ್ ಹದಿನೆಂಟು ಸಾವಿರದ ಆರುನೂರು ರೂಪಾಯಿ ಗಳಿರುತ್ತದೆ ಅಂದರೆ ರಾಜ್ಯ ಸರ್ಕಾರದ ಡಿ ಎ ದರದಲ್ಲಿ ಇಪ್ಪತ್ನಾಲ್ಕು ಸಾವಿರ ಸಿಗುವ ಸಂಭವವಿರುತ್ತದೆ.ಇನ್ನು ದೇಹ ದಾರ್ಢ್ಯತೆ ಬಗ್ಗೆ ನೋಡುವುದಾದರೆ ಎತ್ತರ ನೂರಾ ಎಪ್ಪತ್ತು ಸೆಂಟಿಮೀಟರ್ ಮತ್ತು ಎದೆಯ ಸುತ್ತಳತೆ ಎಂಬತ್ತಾರು ಸೆಂಟಿಮೀಟರ್ ಇರಬೇಕಾಗುತ್ತದೆ .
ಕ್ಷೌರಿಕ ಹುದ್ದೆ ಅಡುಗೆ ಹುದ್ದೆ ಮತ್ತು ಧೋಬಿ ಹೆದ್ದೆಗೆ ಅರ್ಜಿ ಸಲ್ಲಿಸುವವರಿಗೆ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ನಾಲ್ಕುನೂರು ಮೀಟರ್ ಓಟ ಇರತ್ತೆ ಅದನ್ನು ಒಂದು ನಿಮಿಷ ಮೂವತ್ತು ಸೆಕೆಂಡು ಗಳಲ್ಲಿ ಓಡಬೇಕು ಉದ್ದಾಜಿಗಿತ ಇರುತ್ತದೆ ಅದನ್ನು ಮೂರು. ಎಂಬತ್ತು ಮೀಟರ್ ಗಿಂತ ಜಾಸ್ತಿ ಜಿಗಿಯಬೇಕು.
ಗುಂಡು ಎಸೆತ ಇರುತ್ತದೆ ಅದನ್ನು ಐದು. ಅರವತ್ತು ಮೀಟರ್ ಗಿಂತ ಮೇಲೆ ಎಸೆಯಬೇಕು.ಈ ದೈಹಿಕ ಪರೀಕ್ಷೆಯಲ್ಲಿ ನೀವು ತೆಗೆದುಕೊಂಡ ಸಮಯದ ಆಧಾರದ ಮೇಲೆ ಅಂಕ ನಿರ್ಧಾರವಾಗುತ್ತದೆ. ಕ್ಷೌರಿಕ ಅಡುಗೆ ಮತ್ತು ಧೋಬಿ ಹೆದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಗಳ ಅನುಭವದ ಪರೀಕ್ಷೆ ನಡೆಸಲಾಗುತ್ತದೆ. ಈ ಎಲ್ಲಾ ಪರೀಕ್ಷೆಯಲ್ಲಿ ನೀವು ತೆಗೆದುಕೊಂಡ ಅಂಕದ ಶೇಕಡಾ ಐವತ್ತು ಮತ್ತು ನೀವು ಹತ್ತನೇ ತರಗತಿಯಲ್ಲಿ ತೆಗೆದುಕೊಂಡ ಅಂಕದ ಶೇಕಡಾ ಐವತ್ತರಷ್ಟು ನ್ನು ಪರಿಗಣನೆಗೆ ತೆಗೆದುಕೊಂಡು ಫೈನಲ್ ಕಟ್ ಹಾಫ್ ತೆಗೆಯುತ್ತಾರೆ. ಈ ಹುದ್ದೆಗೆ ಮೊದಲೇ ತಿಳಿಸಿದಂತೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ನಿಮಗೆ ಈ ಹುದ್ದೆಗೆ ಸೇರಲು ಇಷ್ಟ ವಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.