ಇಂದು ವರ್ಷದ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣ ಸಂಭವಿಸುತ್ತಿದ್ದು ದ್ವಾದಶ ರಾಶಿಗಳಲ್ಲಿ ಯಾವ ರಾಶಿಯವರಿಗೆ ಯಾವ ಫಲ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೇಷ; ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ. ತಾಳ್ಮೆಯ ಸಂವಹನ ಮುಖ್ಯವಾಗಿರುತ್ತದೆ. ದೈಹಿಕವಾಗಿ ಫಿಟ್ ಆಗಿರಲು ಪ್ರಯತ್ನಿಸಿ. ವೃಷಭ; ವಿದೇಶದಲ್ಲಿ ಕೆಲಸವನ್ನು ಮಾಡುತ್ತಿರುವವರಿಗೆ ಆರ್ಥಿಕ ಸಧೃಡತೆ ಇರಲಿದೆ.

ನೀವು ಆಧ್ಯಾತ್ಮಿಕವಾಗಿ ಕಾಣಿಸಿಕೊಳ್ಳಲಿದ್ದೀರಿ. ವ್ಯಾಪಾರದಲ್ಲಿ ನಿಮ್ಮ ದೀರ್ಘ ಸಮಯವನ್ನು ಇನ್ವೆಸ್ಟ್ ಮಾಡಲು ಸಿದ್ಧರಾಗಿರಬೇಕು. ಮಿಥುನ; ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಗೆ ಆಸ್ಪದವಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಸಂಪತ್ತು ಪ್ರಾಪ್ತಿಯಾಗಲಿದೆ. ಪ್ರಯಾಣದ ಸಂದರ್ಭದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಜಾಗೃತಿಯಾಗಿರಿ.

ಕರ್ಕ; ಒಂದು ವೇಳೆ ನೀವು ಈಗಾಗಲೇ ಕೆಲಸದಲ್ಲಿದ್ದರೆ ಕೆಲಸದಲ್ಲಿ ಪ್ರಮೋಷನ್ ಹಾಗೂ ಸಂಬಳದ ಹೆಚ್ಚಳ ಇಲ್ಲವೇ ಕೆಲಸವನ್ನು ಹುಡುಕುತ್ತಿದ್ದರೆ ಒಳ್ಳೆಯ ಕೆಲಸ ಸಿಗುತ್ತದೆ. ನಿಮ್ಮ ಕುಟುಂಬದಲ್ಲಿ ಹಿರಿಯರಿದ್ದಾರೆ ಅವರ ಆರೋಗ್ಯದ ಕುರಿತಂತೆ ಕೊಂಚಮಟ್ಟಿಗೆ ಜಾಗರೂಕರಾಗಿರಬೇಕು. ಸಿಂಹ; ಈ ಸಮಯದಲ್ಲಿ ನೀವು ಸಾಮಾಜಿಕ ಕಾರ್ಯಗಳ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತೀರಿ. ವ್ಯಾಪಾರ ಹಾಗು ವ್ಯವಹಾರಗಳ ಉದ್ದೇಶದಿಂದ ದೂರ ಪ್ರಯಾಣ ಮಾಡುವುದಾದರೆ ಉತ್ತಮ ಸಮಯ. ಪ್ರಮುಖವಾಗಿ ವ್ಯಾಪಾರದಲ್ಲಿ ಯಾವುದಾದರೂ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನೂರಾರು ಬಾರಿ ಯೋಚಿಸಿ ಕಾರ್ಯ ಪ್ರವೃತ್ತರಾಗುವುದು ಉತ್ತಮ.

ಕನ್ಯಾ; ಕೆಲಸ ಮಾಡುವ ಸ್ಥಳದಲ್ಲಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಕೆಲಸದ ವಿಚಾರವಾಗಿ ಪ್ರವಾಸ ಮಾಡುವ ಸಂದರ್ಭಗಳು ಬಂದೊದಗಬಹುದು ಆದರೂ ಕೂಡ ಆದಷ್ಟು ತಪ್ಪಿಸಿಕೊಳ್ಳಿ. ಸಾಕಷ್ಟು ಸಮಸ್ಯೆಗಳು ನಿಮ್ಮನ್ನು ಸುತ್ತುವರೆಯಬಹುದು ಆದಷ್ಟು ಮನೆದೇವರನ್ನು ಪೂಜಿಸಿ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ.

ತುಲಾ; ನಿಮ್ಮ ಬಿಸಿನೆಸ್ ಪಾರ್ಟ್ನರ್ ಗಳನ್ನು ಆದಷ್ಟು ನಿಮ್ಮೊಂದಿಗೆ ಚೆನ್ನಾಗಿ ಇಟ್ಟುಕೊಳ್ಳಿ ಹಾಗೂ ನೀವು ರಾಜಕೀಯ ಸೇರುವ ಸಾಧ್ಯತೆ ಕೂಡ ಹೆಚ್ಚಾಗಿ ಕಂಡುಬರುತ್ತದೆ. ನೀವು ಗಳಿಸುವ ಆದಾಯದಲ್ಲಿ ನಿಮ್ಮ ಭವಿಷ್ಯಕ್ಕಾಗಿ ಅಥವಾ ನಿಮ್ಮ ಮನೆಯವರ ಭವಿಷ್ಯಕ್ಕಾಗಿ ಒಂದು ಭಾಗವನ್ನು ಹೂಡಿಕೆ ಮಾಡುವುದನ್ನು ತಪ್ಪದೆ ರೂಡಿಸಿಕೊಳ್ಳಿ.

ವೃಶ್ಚಿಕ; ಗ್ರಹಣದ ಸಂದರ್ಭದಲ್ಲಿ ನಿಮಗೆ ಅದೃಷ್ಟ ಕೈ ಸೇರಲಿದೆ. ಸರ್ಕಾರಿ ಹುದ್ದೆಗಳು ನಿಮ್ಮ ಪಾಲಾಗಲಿವೆ. ಒತ್ತಡದ ಶೆಡ್ಯೂಲ್ ನಿಂದಾಗಿ ನೀವು ನಿಮ್ಮ ಮನೆಯವರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಲು ಸಾಧ್ಯವಾಗುವುದಿಲ್ಲ. ಧನು; ನೀವು ಕೆಲಸ ಮಾಡುವ ಸ್ಥಳದಲ್ಲಿ ನಿಮಗೆ ಗೌರವ ಹಾಗೂ ಸಂಬಳ ಎರಡು ಕೂಡ ಹೆಚ್ಚಾಗಲಿದೆ. ನಿಮ್ಮ ಸಂಗಾತಿಯ ಜೊತೆಗೆ ಲವ್ ಸ್ಟೋರಿ ಕೊಂಚಮಟ್ಟಿಗೆ ದುಃಖವನ್ನು ಹೊಂದುವ ಸಾಧ್ಯತೆ ಇರುತ್ತದೆ ಹೀಗಾಗಿ ಆದಷ್ಟು ಜಾಗರೂಕತೆ ವಹಿಸಿ.

ಮಕರ; ಈ ಸಮಯದಲ್ಲಿ ನೀವು ಹಲವಾರು ಸಂತೋಷದ ಸುದ್ದಿಗಳನ್ನು ಕೇಳಬಹುದು ಹಾಗೂ ವ್ಯಾಪಾರದಲ್ಲಿ ಕೂಡ ಗುಣಮಟ್ಟದ ಲಾಭಾಂಶವನ್ನು ಪಡೆಯಲಿದ್ದೀರಿ. ಆದರೆ ಈ ಸಂದರ್ಭದಲ್ಲಿ ಆರೋಗ್ಯದ ಕುರಿತಂತೆ ಹೆಚ್ಚಿನ ಗಮನವಹಿಸುವುದು ಒಳ್ಳೆಯದು. ಕುಂಭ; ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳು ಕೂಡ ಸಮಯಕ್ಕೆ ಸರಿಯಾಗಿ ಮುಗಿಯುತ್ತವೆ. ಇನ್ವೆಸ್ಟ್ಮೆಂಟ್ ಮಾಡುವ ಮುಖಾಂತರ ಲಾಭವನ್ನು ಹೊಂದುವ ಸಾಧ್ಯತೆ ಹೆಚ್ಚಾಗಿದ್ದು ಈ ಸಮಯದಲ್ಲಿ ನೀವು ತಲೆಕೆಡಿಸಿಕೊಳ್ಳಬೇಕಾಗಿರುವುದು ನಿಮ್ಮ ಆರೋಗ್ಯದ ವಿಚಾರವಾಗಿ ಅದರಲ್ಲಿ ವಿಶೇಷವಾಗಿ ಉಸಿರಾಟದ ಬಗ್ಗೆ.

ಮೀನ; ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ವಿಚಾರಗಳಲ್ಲಿ ನೀವು ಸಂತೋಷದ ಸುದ್ದಿಯನ್ನು ಕೇಳುತ್ತೀರಿ, ಆದರೆ ಆದಾಯಕ್ಕಿಂತ ಹೆಚ್ಚಾಗಿ ಖರ್ಚು ಮಾಡುವ ಮೂಲಕ ನಿಮ್ಮನ್ನು ನೀವು ಸ್ವತಹ ನೀವೇ ಸಮಸ್ಯೆಗೆ ದೂಡಿಕೊಳ್ಳಬೇಡಿ. ಆದಷ್ಟು ಹಣವನ್ನು ಉಳಿತಾಯ ಮಾಡಿ ಹಾಗೂ ನಿಮಗಾಗಿ ಹಾಗೂ ನಿಮ್ಮವರಿಗಾಗಿ ಮುಂದಿನ ದಿನಗಳಲ್ಲಿ ಅದನ್ನು ಬಳಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!