Yashwanth Guruji Prediction: ಕಾಲಜ್ಞಾನಿಗಳಾಗಿರುವ ಯಶವಂತ್ ಗುರೂಜಿ ಇದೀಗ ಭವಿಷ್ಯ ನುಡಿದಿದ್ದು, ಸೂರ್ಯಗ್ರಹಣ ಮತ್ತು ಮಹಾಲಯ ಅಮಾವಸ್ಯೆಯ ಎಫೆಕ್ಟ್ ಕಾರಣ ನಮ್ಮ ರಾಜ್ಯದ 8 ರಾಜಕಾರಣಿಗಳು ಜೈಲು ಪಾಲಾಗುತ್ತಾರೆ ಎಂದು ತಿಳಿಸಿದ್ದಾರೆ. ಈ ಶಾಕಿಂಗ್ ಭವಿಷ್ಯ ಈಗ ಚರ್ಚೆಗಳು ಶುರುವಾಗಿದೆ. ಈ ಭವಿಷ್ಯ ವಾಣಿಯ ಹಿಂದಿನ ಅರ್ಥವೇನು? ಯಾವ ರಾಜಕಾರಣಿಗಳಿಗೆ ಕಂಟಕ ಕಾದಿದೆ ಎನ್ನುವ ಚರ್ಚೆ ಶುರುವಾಗಿದೆ.
ಯಶವಂತ್ ಗುರೂಜಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ನೋಣವಿನಕೆರೆ ರಂಗಾಪುರಕ್ಕೆ ಸೇರಿದವರು. ವಿಧಾನಸಭಾ ಎಲೆಕ್ಷನ್ ನಡೆಯುವ ಮೊದಲು ಭವಿಷ್ಯ ನುಡಿದಿದ್ದರು, ಎಲೆಕ್ಷನ್ ನಲ್ಲಿ ಗೆಲ್ಲುವುದು ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದಿದ್ದರು. ಅದೇ ರೀತಿ ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ವಿಧಾನಸಭಾ ಎಲೆಕ್ಷನ್ ವೇಳೆ ಮತ್ತು ಎಲೆಕ್ಷನ್ ಫಲಿತಾಂಶ ಬಂದ ಬಳಿಕ ಇವರು ನುಡಿದ ಭವಿಷ್ಯ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
Yashwanth Guruji Prediction
ಈ ಗುರೂಜಿ ಈಗ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಆಕ್ಟೊಬರ್ 14ರಂದು ಮಹಲಯ ಅಮಾವಾಸ್ಯೆ ಇದೆ, ಅದೇ ದಿನ ಸೂರ್ಯಗ್ರಹಣ ಕೂಡ ಸಂಭವಿಸಲಿದೆ. ಈ ಕಾರಣದಿಂದ ಕೆಲವು ರಾಶಿಗಳಿಗೆ ಅಶುಭ ಫಲ ಇರಲಿದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಹೆಚ್ಚಿನ ತೊಂದರೆ ಅನುಭವಿಸುವುದು ರಾಜಕಾರಣಿಗಳು ಎಂದು ಹೇಳಿದ್ದಾರೆ. ಈ ಗ್ರಹಣದ ಪ್ರಭಾವ ಗ್ರಹಣ ಸಂಭವಿಸುವ ಮೂರು ತಿಂಗಳಿಗಿಂತ ಮೊದಲು ಮತ್ತು ಮೂರು ತಿಂಗಳ ನಂತರ ಈ ಎಫೆಕ್ಟ್ ನಡೆಯಲಿದೆ.
ಕೆಲವು ರಾಜಕಾರಣಿಗಳ ಭವಿಷ್ಯಕ್ಕೆ ಇದರಿಂದ ತೊಂದರೆಯಾದರೆ, ಇನ್ನು ಕೆಲವರಿಗೆ ಒಳ್ಳೆಯ ಯೋಗವಿದೆ ಎಂದು ಭವಿಷ್ಯದಲ್ಲಿ ಯಶವಂತ್ ಗುರೂಜಿ ತಿಳಿಸಿದ್ದಾರೆ. ಎಲ್ಲಾ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲೆ ಗ್ರಹಣದ ಎಫೆಕ್ಟ್ ಇರಲಿದೆ. ಈ ಸೂರ್ಯಗ್ರಹಣ ಮೇಷ, ಕರ್ಕಾಟಕ, ವೃಶ್ಚಿಕ ಮತ್ತು ಮಕರ ರಾಶಿಯವರಿಗೆ ಸೂರ್ಯಗ್ರಹಣದ ವಿಶೇಷ ಫಲ ಸಿಗಲಿದೆ ಎಂದು ಭವಿಷ್ಯದಲ್ಲಿ ತಿಳಿಸಿದ್ದಾರೆ.
ಗುರುಜಿ ಹೇಳುವ ಪ್ರಕಾರ ನಮ್ಮ ರಾಜ್ಯದಲ್ಲಿ ವೃಷಭ ರಾಶಿ, ಕೃತಿಕಾ ನಕ್ಷತ್ರಕ್ಕೆ ಸೇರಿದ ರಾಜಕಾರಣಿಗಳು ಜೈಲು ಪಾಲಾಗುತ್ತಾರೆ ಎಂದು ತಿಳಿಸಿದ್ದಾರೆ. ಈ ತೊಂದರೆ ಆಗಬಾರದು ಎಂದರೆ ಈ ರಾಶಿ ನಕ್ಷತ್ರದವರು ಶಾಂತಿ ಕರ್ಮ ಮಾಡಿಕೊಂಡರೆ ಒಳ್ಳೆಯದು, ಇಲ್ಲದಿದ್ದರೆ ಗ್ರಹಗಳಿಂದ ಕಂಟಕಕ್ಕೆ ಗುರಿಯಾಗುತ್ತಾರೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ವೃಷಭ ರಾಶಿ ಕೃತಿಕಾ ನಕ್ಷತ್ರ, ಅವರು ಜೈಲು ಸೇರ್ತಾರೆ ಅಂತ ಎಚ್ಚರಿಕೆ ನೀಡಿದ್ದೆ.
ಇದೀಗ ನಮ್ಮ ರಾಜ್ಯದ ವೃಷಭ ರಾಶಿಯ ರಾಜಕಾರಣಿಗಳಿಗೆ ಕೂಡ ಕಂಟಕವಿದೆ. ಜೈಲು ಸೇರುವ ಯೋಗ ಕೂಡ ಇದೆ. ಹಾಗಾಗಿ ವೃಷಭ ರಾಶಿಯವರಿಗೆ ದೇವರ ಪೂಜೆ ಮಾಡಿ, ಶಾಂತಿ ಮಾಡಿಕೊಳ್ಳುವುದು ಒಳ್ಳೆಯದು ಎಂದು ಯಶವಂತ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಇದೀಗ ಈ ಮಾತುಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನೂ ಓದಿ.. Kodi Mutt Swamiji: ವಿಶ್ವದಲ್ಲಿ ಒಂದು ದೇಶವೇ ಕಣ್ಮರೆ ಆಗಿಹೋಗಲಿದೆ, ಕೋಡಿಶ್ರೀಗಳ ಭವಿಷ್ಯ ಮತ್ತೊಮ್ಮೆ ನಿಜವಾಯ್ತಾ?