ಕರ್ನಾಟಕ ಸೈನಿಕ ವಸತಿ ಶಾಲೆಯಲ್ಲಿ ಖಾಲಿ ಇರುವ ಬೇರೆ ಬೇರೆ ರೀತಿಯ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆಯಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಬಾಲಕಿಯರ ಸೈನಿಕ ಶಾಲೆ ಕಿತ್ತೂರು, ಬೆಳಗಾವಿ ಜಿಲ್ಲೆಯ ವತಿಯಿಂದ ಹೊಸ ನೇಮಕಾತಿ ಸಹ ಪ್ರಕಟಣೆಯಾಗಿದೆ.
ಇಲ್ಲಿ, ವಾರ್ಡನ್, ಟಿಜಿಟಿ (TGT) ಶಿಕ್ಷಕರು, ದೈಹಿಕ ಶಿಕ್ಷಕರು ಸೇರಿದಂತೆ ಬೇರೆ ಬೇರೆ ಹುದ್ದೆಗೆ ಆಫ್ಲೈನ್ ( offline ) ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ. ಅರ್ಹ ಅಭ್ಯರ್ಥಿಗಳು ಮತ್ತು ಆಸಕ್ತಿ ಇರುವ ಜನರು ಅರ್ಜಿ ಸಲ್ಲಿಕೆ ಮಾಡಬಹುದು.
ಹುದ್ದೆಗಳ ವಿವರ :-
ಟಿಜಿಟಿ ( TGT ) ಶಿಕ್ಷಕರು ( ಇಂಗ್ಲೀಷ್, ಗಣಿತ & ಹಿಂದಿ ) :- 3 ಹುದ್ದೆಗಳು ಖಾಲಿ ಇದೇ.
ಮಹಿಳಾ ಸೈಕಾಲಜಿಸ್ಟ್ ಮತ್ತು ಕೌನ್ಸಿಲರ್ :- 1 ಹುದ್ದೆ ಖಾಲಿ ಇದೆ.
ವೆಸ್ಟರ್ನ್ ಮ್ಯೂಸಿಕಲ್ ( western musical ) ಟೀಚರ್ :- 1 ಹುದ್ದೆ ಖಾಲಿ ಇದೆ.
ದೈಹಿಕ ಶಿಕ್ಷಕರು :- 1 ಹುದ್ದೆ ಖಾಲಿ ಇದೆ.
ವಾರ್ಡನ್ :- 1 ಹುದ್ದೆ ಖಾಲಿ ಇದೆ.
ಹಾರ್ಸ್ ಟೀಚರ್ :- 1 ಹುದ್ದೆ ಖಾಲಿ ಇದೆ.
ಮಾಸಿಕ ವೇತನದ ವಿವರಗಳು :-
ಟಿಜಿಟಿ ( TGT ) ಶಿಕ್ಷಕರು ( ಇಂಗ್ಲೀಷ್, ಗಣಿತ & ಹಿಂದಿ ) :- 9,300 – 34,280
ಮಹಿಳಾ ಸೈಕಾಲಜಿಸ್ಟ್ ಮತ್ತು ಕೌನ್ಸಿಲರ್, ವೆಸ್ಟರ್ನ್ ಮ್ಯೂಸಿಕಲ್ ಟೀಚರ್, ದೈಹಿಕ ಶಿಕ್ಷಕರು, ವಾರ್ಡನ್, ಹಾರ್ಸ್ ಟೀಚರ್ :- ವಿದ್ಯಾರ್ಹತೆ ಮತ್ತು ಅನುಭವದ ಮೇಲೆ ವೇತನ ನೀಡಲಾಗುವುದು.
ವಿದ್ಯಾರ್ಹತೆ :-ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮತ್ತು ಬಿ. ಎಡ್. ಮುಗಿಸಿರಬೇಕು ಮತ್ತು ಅನುಭವ ಹೊಂದಿರಬೇಕು.
ವಯಸ್ಸಿನ ಮಿತಿ :– ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಸುವ ಕೊನೆ ದಿನಾಂಕದ ಒಳಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ವಯಸ್ಸಿನವರಾಗಿ ಇರಬೇಕು.
ಆಯ್ಕೆ ಮಾಡುವ ವಿಧಾನ :-ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಮಾಡುವ ಮೂಲಕ ಸೆಲೆಕ್ಟ್ ಮಾಡಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ :- ಅರ್ಜಿ ಸಲ್ಲಿಕೆ ಮಾಡಲು ಇಚ್ಛಿಸುವ ಅಭ್ಯರ್ಥಿಗಳು ಎಲ್ಲಾ ಅಗತ್ಯ ಇರುವ ದಾಖಲೆಗಳು ಹಾಗೂ ಇತ್ತೀಚಿನ ಭಾವ ಚಿತ್ರದ ಜೊತೆ ದಿನಾಂಕ 21/04/2024ರ ಒಳಗೆ ಅಧಿಸೂಚನೆಯಲ್ಲಿ ತಿಳಿಸಿರುವ ವಿಳಾಸಕ್ಕೆ ಅಂಚೆಯ ಮೂಲಕ ಅರ್ಜಿ ಕಳುಹಿಸಬೇಕು. ಇಲ್ಲವೇ, ಸ್ಕ್ಯಾನ್ ಮಾಡಿ ಪಿಡಿಎಫ್ ( PDF ) ರೂಪದಲ್ಲಿ ಕೆಳಗೆ ನೀಡಿರುವ ಇ-ಮೇಲ್ ಐಡಿಗೆ ( E-mail ID ) ಕಳುಹಿಸಿ ಕೊಡಬೇಕು. [email protected] .