Womens bank loan: ರಾಜ್ಯ ಸರ್ಕಾರವು ನಮ್ಮ ರಾಜ್ಯದ ಮಹಿಳಾಮಣಿಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅನುಸಾರ ಎಲ್ಲಾ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿಗಳನ್ನು ಡಿಬಿಟಿ ಮೂಲಕ ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಸುಮಾರು 80% ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿದೆ. ಇನ್ನು 20% ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗದ ಕಾರಣ ಅವರಿಗೆ ಈ ತಿಂಗಳು ಹಣ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ.
ಅದರ ನಡುವೆಯೇ ಈಗ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಕೆಲವು ಮಹಿಳೆಯರ ಬ್ಯಾಂಕ್ ಅಕೌಂಟ್ ನಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಅಕೌಂಟ್ ಗೆ ತಲುಪುತ್ತಿದ್ದರು ಸಹ ಆ ಹಣವು ಮಹಿಳೆಯರ ಕೈಸೇರುತ್ತಿಲ್ಲ. ಅದಕ್ಕೆ ಕಾರಣ ಒಂದು ವೇಳೆ ಮಹಿಳೆಯರು ಬ್ಯಾಂಕ್ ಇಂದ ಸಾಲ ಪಡೆದಿದ್ದರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬ್ಯಾಂಕ್ ಅಧಿಕಾರಿಗಳು ಸಾಲಕ್ಕಾಗಿ ಕಟ್ ಮಾಡುತ್ತಿದ್ದಾರೆ..
ಇದೀಗ ಸರ್ಕಾರದ ಗಮನಕ್ಕೆ ಈ ವಿಷಯ ತಲುಪಿದೆ. ಈ ಬಗ್ಗೆ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಧ್ವನಿ ಎತ್ತಿದ್ದು, ಈ ಹಣವನ್ನು ಸರ್ಕಾರ ಕೊಡುತ್ತಿರುವುದು ಮಹಿಳಾ ಸಬಲೀಕರಣಕ್ಕಾಗಿ, ಇದನ್ನು ಸಾಲ ವಸೂಲಿಯಾಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಯಾರೆಲ್ಲಾ ಫಲಾನುಭವಿಗಳ ಖಾತೆಯಿಂದ ತೆಗೆದುಕೊಂಡಿದ್ದಾರೋ, ಅವರ ಖಾತೆಗೆ ವಾಪಸ್ ಹಣ ವರ್ಗಾವಣೆ ಆಗಬೇಕು ಎಂದು ಸೂಚನೆ ನೀಡಿದ್ದಾರೆ.
ಈ ರೀತಿಯಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಸಾಲ ಪಾವತಿಗೆ ಹೋಗಬಾರದು ಎಂದು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆ ಶುರುವಾಗಿ 4 ತಿಂಗಳು ಕಳೆದಿದ್ದು, 4 ತಿಂಗಳ ಕಂತಿನ ಹಣ ಮಹಿಳೆಯರನ್ನು ತಲುಪಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಸಿಗದ ಮಹಿಳೆಯರಿಗೆ ಮುಂದಿನ ತಿಂಗಳು ಶುರು ಆಗುವುದರ ಒಳಗೆ ಸಮಸ್ಯೆಗಳನ್ನು ಪರಿಹರಿಸಿ, ಗೃಹಲಕ್ಷ್ಮೀ ಯೋಜನೆಯ ಹಣ ತಲುಪುವ ಹಾಗೆ ಮಾಡಲಾಗುತ್ತದೆ.