ಸ್ನೇಹಿತರೆ ನೀವು ಉದ್ಯೋಗಕ್ಕಾಗಿ ಹುಡುಕಾಟವನ್ನು ನಡೆಸುತ್ತಿದ್ದರೆ ನಾವಿಂದು ನಿಮಗೆ ಯಾವೆಲ್ಲ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನಾವು ನಿಮಗೆ ತಿಳಿಸುವ ಉದ್ಯೋಗದಲ್ಲಿ ನಿಮಗೆ ಆಸಕ್ತಿ ಇದ್ದರೆ ನೀವು ಕೂಡ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗಾದರೆ ನಾವು ನಿಮಗೆ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಮೊದಲನೆಯದಾಗಿ ನಾವಿಂದು ನಿಮಗೆ ವಾರ್ಡನ್ ಹುದ್ದೆಯ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ವಿಜಯಪುರ ಇಲ್ಲಿ ವಾರ್ಡನ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವ ವಿದ್ಯಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ, ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಗೌರವಧನ ತಾತ್ಕಾಲಿಕ ಆಧಾರದ ಮೇಲೆ ನಿಲಯ ಪಾಲಕರಾಗಿ ಕಾರ್ಯನಿರ್ವಹಿಸಲು ದಿನಾಂಕ ಇಪ್ಪತ್ತು ಸೆಪ್ಟಂಬರ್ ಎರಡು ಸಾವಿರದ ಇಪ್ಪತ್ತೊಂದು ಬೆಳಿಗ್ಗೆ ಹನ್ನೊಂದು ಮೂವತ್ತಕ್ಕೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಲಿನಲ್ಲಿ ನೇರ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಹ್ವಾನ ಮಾಡಲಾಗಿದೆ.

ಹುದ್ದೆಗಳು ಎಷ್ಟಿವೆ ಎಂದು ನೋಡುವುದಾದರೆ ನಿಲಯಪಾಲಕರ ನಾಲ್ಕು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳ ವಿದ್ಯಾರ್ಹತೆ ಎಷ್ಟು ಇರಬೇಕೆಂದರೆ ಯಾವುದೇ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಆಗಿರಬೇಕು ಹಾಗೂ ಸ್ನಾತಕೋತ್ತರ ಸಮಾಜ ಕಾರ್ಯ ಸಮಾಜಶಾಸ್ತ್ರ ಮತ್ತು ಶಿಕ್ಷಣ ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಯಾರೆಲ್ಲ ಈ ವಿದ್ಯಾರ್ಹತೆಯನ್ನು ಹೊಂದಿದ್ದೀರಿ ಅವರು ನೇರವಾಗಿ ಹುದ್ದೆಹಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು.

ಇಂದು ನಾವು ನಿಮಗೆ ತಿಳಿಸುತ್ತಿರುವ ಎರಡನೆಯ ಹುದ್ದೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆಯುತ್ತಿರುವ ನೇಮಕಾತಿ. ಇಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ. ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿಯ ಯೋಜನೆ ಅಡಿಯಲ್ಲಿ ನೇಮಕಾತಿ ನಡೆಯುತ್ತಿದೆ. ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಸರ್ಕಾರ ಶ್ರೀರಾಂಪುರ ಕ್ರಾಸ್. ಜಕ್ಕೂರು ಬೆಂಗಳೂರು. ಇದರಡಿಯಲ್ಲಿ ತಾತ್ಕಾಲಿಕ ಗುತ್ತಿಗೆ ನೇಮಕಾತಿ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದರನ್ವಯ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಗೆ ಮೂರುವರ್ಷದ ತಾತ್ಕಾಲಿಕ ಆಧಾರದ ಮೇಲೆ ಸಮಾಲೋಚಕ ಬೋಧಕರು ಬಯೋ ಎನರ್ಜಿ ಘನ ತ್ಯಾಜ್ಯ ನಿರ್ವಹಣೆ. ಈ ಒಂದು ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅಭ್ಯರ್ಥಿಗಳು ಸಂಸ್ಥೆಯ ವೆಬ್ ಸೈಟ್ ನೋಡಿ ದಿನಾಂಕ ಇಪ್ಪತ್ತಾರು ಸೆಪ್ಟಂಬರ್ ಎರಡು ಸಾವಿರದ ಇಪ್ಪತ್ತೊಂದು ಸಂಜೆ ಆರು ಗಂಟೆಯ ಒಳಗೆ ಮೇಲೆ ತಿಳಿಸಿರುವ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಇಂದು ನಾವು ನಿಮಗೆ ತಿಳಿಸುತ್ತಿರುವ ಮೂರನೇ ಹುದ್ದೆ ಕರ್ನಾಟಕ ರಾಜ್ಯ ಸರ್ಕಾರದಿಂದ ಕಾಯಂ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಹುದ್ದೆಗೆ ಅರ್ಜಿ ಸಲ್ಲಿಸುವವರು ದಿನಾಂಕ ಹದಿನಾಲ್ಕು ಸೆಪ್ಟಂಬರ್ ಎರಡು ಸಾವಿರದ ಇಪ್ಪತ್ತೊಂದರಿಂದ ಹದಿನಾರು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದರವರೆಗೆ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕವನ್ನು ತುಂಬಲು ಕೊನೆಯ ದಿನಾಂಕ ಇಪ್ಪತ್ತೊಂದು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದು. 2ಎ 3ಎ 2 ಬಿ 3ಬಿ ಅಭ್ಯರ್ಥಿಗಳಿಗೆ 3 ವರ್ಷ ಏಜ್ ರಿಲ್ಯಾಕ್ಸೇಶನ್ ಮತ್ತು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಏಜ್ ರಿಲ್ಯಾಕ್ಸೇಶನ್ ಎಂದು ತಿಳಿಸಿದ್ದಾರೆ. ಇನ್ನು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವವರಿಗೆ ಅರ್ಜಿ ಶುಲ್ಕ ಎಷ್ಟಿದೆ ಎಂಬುದನ್ನು ನೋಡುವುದಾದರೆ ಒಬಿಸಿ ಅಭ್ಯರ್ಥಿಗಳಿಗೆ ಐದು ನೂರು ರೂಪಾಯಿ ಇದೆ ಮತ್ತು ಎಸ್ಸಿ ಎಸ್ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಎರಡುನೂರೈವತ್ತು ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗಿದೆ.

ಈ ಒಂದು ಹುದ್ದೆಗೆ ನೇಮಕಾತಿಯನ್ನು ಲಿಖಿತ ಪರೀಕ್ಷೆ ಮತ್ತು ವಿವೋ ವಾಯ್ಸ್ ಟೆಸ್ಟ್ ಮೂಲಕ ಮಾಡಿಕೊಳ್ಳಲಾಗುವುದು. ಈ ಹುದ್ದೆಗೆ ಹದಿನೆಂಟರಿಂದ ಮೂವತ್ತೈದು ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೇಕೆನ್ಸಿ ಡೀಟೇಲ್ಸ್ ನೋಡುವುದಾದರೆ ಜನರಲ್ ಮೆರಿಟ್ ಒಂದು ಪೋಸ್ಟ್ ಇದೆ. ಹಾಗೆ ಶೆಡ್ಯೂಲ್ಡ್ ಕಾಸ್ಟ್ ಒಂದು ಪೋಸ್ಟ್ ಇದೆ ಹಾಗೆ ಶೆಡ್ಯೂಲ್ ಟ್ರೈಬ್ ಒಂದು ಪೋಸ್ಟ್ ಇದೆ.

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿ ಸಲ್ಲಿಸುವವರ ವಿದ್ಯಾರ್ಹತೆ ಎಷ್ಟಿರಬೇಕು ಎಂಬುದನ್ನು ಗಮನಿಸುವುದಾದರೆ ಮಾಸ್ಟರ್ ಡಿಗ್ರಿಯನ್ನು ಮುಗಿಸಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಲ್ಲಿ ಒಟ್ಟು ಮೂರು ಹುದ್ದೆಗಳಿಗೆ ಕರ್ನಾಟಕದಲ್ಲಿ ನೇಮಕಾತಿ ನಡೆಯುತ್ತಿದೆ. ಯಾವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಟ್ರಾನ್ಸ್ಲೇಟರ್ ಹುದ್ದೆಗೆ ನೇಮಕಾತಿ ನಡೆಸಲಾಗುತ್ತಿದೆ

ಈ ಹುದ್ದೆಗೆ ವೇತನ ಎಷ್ಟು ಇರುತ್ತದೆ ಎಂಬುದನ್ನು ನೋಡುವುದಾದರೆ ನಾಲವತ್ನಾಲ್ಕು ಸಾವಿರದಿಂದ ಒಂದು ಲಕ್ಷದ ನಲವತ್ತೆರಡು ಸಾವಿರದ ವರೆಗೆ ಮಾಸಿಕ ವೇತನ ಇರುತ್ತದೆ. ಸೆಪ್ಟೆಂಬರ್ ಎರದುಸಾವಿರದ ಇಪ್ಪತ್ತೊಂದರ ಅಧಿಕೃತ ಅಧಿಸೂಚನೆಯ ಮೂಲಕ ಅನುವಾದಕರ ಹುದ್ದೆಯನ್ನು ಭರ್ತಿ ಮಾಡಲು ಕರ್ನಾಟಕದ ಹೈಕೋರ್ಟ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಹದಿನಾರು ಅಕ್ಟೋಬರ್ ಎರದುಸಾವಿರದ ಇಪ್ಪತ್ತೊಂದರ ಒಳಗಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೋಡಿದಿರಲ್ಲ ಸ್ನೇಹಿತರೆ ನೀವು ಕೂಡ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ನಿಮಗೆ ಆಸಕ್ತಿ ಇದ್ದಲ್ಲಿ ನಾವು ಮೇಲೆ ತಿಳಿಸಿರುವ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆಯಾ ಹುದ್ದೆಗಳಿಗೆ ಸಂಬಂಧಿಸಿದ ಸಂದರ್ಶನ ಪರೀಕ್ಷೆಗಳಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳ ಬಹುದಾಗಿದೆ. ನೀವು ಕೂಡ ಈ ಮೇಲೆ ತಿಳಿಸಿರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ಸ್ನೇಹಿತರಿಗೂ ಈ ಹುದ್ದೆಯ ನೇಮಕಾತಿಯ ಬಗ್ಗೆ ಮಾಹಿತಿಯನ್ನು ತಿಳಿಸಿರಿ.

ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!