ವೃಶ್ಚಿಕ ರಾಶಿಯ 2 ಮತ್ತು 3 ನೇ ಮನೆಗಳಲ್ಲಿ ಗುರು ಇರಲಿದ್ದಾನೆ. 3 ನೇ ಮನೆಯಲ್ಲಿ ಶನಿ ಮತ್ತು ಗುರು ಪರಿಣಾಮದಿಂದಾಗಿ ಈ ವರ್ಷ ವೃಶ್ಚಿಕರಾಶಿಗೆ ತುಂಬಾ ಒಳ್ಳೆಯದು. ಇವರು ಆರ್ಥಿಕ ಲಾಭಗಳನ್ನು, ಉತ್ತಮ ಹೆಸರು ಮತ್ತು ಖ್ಯಾತಿಯನ್ನು ಹೊಂದುತ್ತಾರೆ.ಹಿಂದೂ ಪಂಚಾಂಗದ 2020-2021ರ ವರ್ಷವು ಶಾರ್ವರಿ ನಾಮ ಸಂವತ್ಸರ. ಇದು ಮಾರ್ಚ್ 25, 2020 ಯುಗಾದಿಯಂದು ಪ್ರಾರಂಭವಾಗಿ, 12 ಏಪ್ರಿಲ್ 2021 ರಂದು ಕೊನೆಗೊಳ್ಳುತ್ತದೆ. ವೃಶ್ಚಿಕ ರಾಶಿ, ಹಿಂದೂ ಜ್ಯೋತಿಷ್ಯದ ಹನ್ನೆರಡು ರಾಶಿ ವ್ಯವಸ್ಥೆಗಳಲ್ಲಿ ಎಂಟನೆಯದು

ಗುರು ಗ್ರಹವು 2020 ರ ಮಾರ್ಚ್ 29 ರಿಂದ 2020 ರ ಜೂನ್ 30 ರವರೆಗೆ 3 ನೇ ಮನೆಯಲ್ಲಿ ಇರಲಿದ್ದಾನೆ. 30 ಜೂನ್ 2020 ರಿಂದ 20 ನವೆಂಬರ್ 2020 ರವರೆಗೆ 2 ನೇ ಮನೆಯಲ್ಲಿ ಇರುತ್ತಾನೆ. ಉಳಿದ ವರ್ಷ, 3 ನೇ ಮನೆಯನ್ನು ಆಳಲಿದ್ದಾನೆ. ವರ್ಷ ಪೂರ್ತಿ ಶನಿ 3 ನೇ ಮನೆಯಲ್ಲಿ ಇರುತ್ತಾನೆ. ರಾಹುವು 8 ಸೆಪ್ಟೆಂಬರ್ 2020 ರಿಂದ ಸೆಪ್ಟೆಂಬರ್ 23 ರವರೆಗೆ ಮತ್ತು ನಂತರ, ವರ್ಷದ ಅಂತ್ಯದವರೆಗೆ 7 ನೇ ಮನೆಯಲ್ಲಿರುತ್ತಾನೆ. ಕೇತು 2020 ರ ಸೆಪ್ಟೆಂಬರ್ 23 ರವರೆಗೆ 2 ನೇ ಮನೆಯಲ್ಲಿ ಮತ್ತು ನಂತರ ವರ್ಷದ ಅಂತ್ಯದವರೆಗೆ 1 ನೇ ಮನೆಯಲ್ಲಿರುತ್ತಾನೆ. ಈ ವರ್ಷ ವೃಶ್ಚಿಕ ರಾಶಿಯ 2 ಮತ್ತು 3 ನೇ ಮನೆಗಳಲ್ಲಿ ಗುರು ಇರಲಿದ್ದಾನೆ. 3 ನೇ ಮನೆಯಲ್ಲಿ ಶನಿ ಮತ್ತು ಗುರು ಪರಿಣಾಮದಿಂದಾಗಿ ಈ ವರ್ಷ ವೃಶ್ಚಿಕರಾಶಿಗೆ ತುಂಬಾ ಒಳ್ಳೆಯದು. ಇವರು ಆರ್ಥಿಕ ಲಾಭಗಳನ್ನು, ಉತ್ತಮ ಹೆಸರು ಮತ್ತು ಖ್ಯಾತಿಯನ್ನು ಹೊಂದುತ್ತಾರೆ. ಹಾಗೆಯೇ ವೃಶ್ಚಿಕ ರಾಶಿಗೆ ರಾಹು 7 ನೇ ಮನೆಯಲ್ಲಿದ್ದು, ಕೇತು 1 ನೇ ಮನೆಯಲ್ಲಿರುವುದರಿಂದ ವೃತ್ತಿ, ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವರ್ಷವು ಉತ್ತಮವಾಗಿದೆ.ಈ ವರ್ಷದಲ್ಲಿ ವೃಶ್ಚಿಕ ರಾಶಿಯವರಿಗೆ ಖರ್ಚು ಕಡಿಮೆ ಇರುತ್ತದೆ. ಗಳಿಕೆಯೂ ಅಷ್ಟಾಗಿರದೇ ಸರಾಸರಿ ಇರುತ್ತದೆ. ಇವರ ಆರ್ಥಿಕ ಸ್ಥಿತಿ, ಸಂಗಾತಿಯೊಂದಿಗೆ ಜೀವನವೂ ಉತ್ತಮವಾಗಿರುತ್ತದೆ. ವೃಶ್ಚಿಕ ರಾಶಿಯವರ ಜಾತಕದ ಪ್ರಕಾರ, ಕೆಲವು ಪ್ರಮುಖ ಕಾರ್ಯಗಳನ್ನು ಪ್ರಾರಂಭಿಸಿ ಪೂರ್ಣಗೊಳಿಸಲು ಈ ವರ್ಷ ಅನುಕೂಲಕರವಾಗಿದೆ. ಕಳೆದ ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಇವರು ಅನುಭವಿಸುತ್ತಿದ್ದ ನೋವಿನಿಂದ ಹೊರಬರಲು ಇದು ಸುಸಮಯ. ಈ ವರ್ಷದಲ್ಲಿ ವೃಶ್ಚಿಕ ರಾಶಿಯವರು ಜೀವನದ ಹೊಸ ಹಂತವನ್ನು ಪ್ರವೇಶಿಸಲಿದ್ದಾರೆ. ಇದು ಅವರ ದುಃಖ ನಿವಾರಿಸಲಿದೆ.

ವೃಶ್ಚಿಕ ರಾಶಿಯವರು ತಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲು ಅನೇಕ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಖರ್ಚು ಮತ್ತು ಉಳಿತಾಯವನ್ನು ಯೋಜಿಸಿ, ಹಣಕಾಸಿನ ಪಾರದರ್ಶಕತೆ ತರಲು ಶ್ರಮಿಸುತ್ತಿದ್ದಾರೆ. ಹಾಗೆಯೇ ಈ ವರ್ಷ ಮಂಗಳನ ಸ್ಥಾನ ಪಲ್ಲಟಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ. ರಾಹು,ಕೇತುಗೆ ಶಾಂತಿ ಪೂಜೆ ಮಾಡಿಸಿ.ಗಣೇಶ ದೇವಾಲಯಗಳಿಗೆ ಭೇಟಿ ನೀಡಿ, ಸಂಕಷ್ಟ ಚತುರ್ಥಿ ವ್ರತವನ್ನು ಶ್ರದ್ಧೆಯಿಂದ ಮಾಡಿ.ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ. ಅವರಿಗೆ ಪುಸ್ತಕಗಳನ್ನು, ಪೆನ್ನುಗಳನ್ನು ಖರೀದಿಸಿ ಕೊಡಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!