ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತಾರೆ. ಅದರಂತೆ ದ್ವಾದಶ ರಾಶಿಗಳಲ್ಲಿ ಎರಡನೆ ರಾಶಿ ವೃಷಭ ರಾಶಿಯವರ ಗುಣ ಸ್ವಭಾವ, ಅವರ ಸ್ಟ್ರೆಂತ್ ಹಾಗೂ ವೀಕ್ನೆಸ್ ಬಗ್ಗೆ ಈ ಲೇಖನದಲ್ಲಿ ನೋಡೋಣ.

ವೃಷಭ ರಾಶಿ ಇದು ಪ್ರಥ್ವಿ ತತ್ವ ರಾಶಿಯಾಗಿದ್ದು. ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ. ಇವರಿಗೆ ವಸ್ತು ಆಗಿರಬಹುದು, ಹಣ ಆಗಿರಬಹುದು ಕೂಡುಹಾಕುವ ಬುದ್ಧಿ ಇರುತ್ತದೆ. ಇವರ ಈ ಗುಣದಿಂದ ಹಣ ಸಂಗ್ರಹ ಮಾಡುತ್ತಾರೆ. ಇವರು ತಾವು ಸ್ವಚ್ಚವಾಗಿರುತ್ತಾರೆ ಮತ್ತು ತಮ್ಮ ಸುತ್ತಮುತ್ತಲಿನವರು ಸ್ವಚ್ಛವಾಗಿರಬೇಕು ಎಂದು ಬಯಸುತ್ತಾರೆ.

ಈ ರಾಶಿಯವರು ಒಳಗೆ ಹಲವು ವಿಷಯಗಳ ಬಗ್ಗೆ ಯೋಚಿಸುತ್ತಾರೆ ಆದರೆ ಹೊರಗೆ ನೋಡುವವರಿಗೆ ಶಾಂತವಾಗಿ ಇದ್ದಂತೆ ಕಾಣುತ್ತಾರೆ. ಇವರು ಯಾವುದಾದರೂ ಒಂದು ವಿಷಯದ ಬಗ್ಗೆ ಯೋಚನೆ ಮಾಡಲು ಆರಂಭಿಸಿದರು ಎಂದರೆ ಅದೆ ಯೋಚನೆಯಲ್ಲಿ ಮುಳುಗಿರುತ್ತಾರೆ ಆ ವಿಷಯದಿಂದ ಅವರನ್ನು ಹೊರಗೆ ತರಬೇಕು ಎಂದರೆ ಕಷ್ಟಪಡಬೇಕು.

ವೃಷಭ ರಾಶಿಯವರು ಸೋಂಬೇರಿಗಳಾಗಿರುತ್ತಾರೆ, ಇವರಿಗೆ ತಾಳ್ಮೆ ಚೆನ್ನಾಗಿರುತ್ತದೆ. ಇವರು ಒಂದು ಕೆಲಸ ಹಿಡಿದರು ಅಂದರೆ ಅದನ್ನು ಪೂರ್ಣ ಮಾಡುತ್ತಾರೆ. ಏನೆ ಆದರೂ ಹಿಡಿದ ಕೆಲಸವನ್ನು ಬಿಡುವುದಿಲ್ಲ. ಇವರನ್ನು ಯಾವುದೆ ವಿಷಯದಲ್ಲಾದರೂ ನಂಬಬಹುದು. ಇವರು ಬೇರೆಯವರಿಗೆ ಉತ್ತಮ ಸಲಹೆ ನೀಡುತ್ತಾರೆ. ಇವರು ಪ್ರಾಕ್ಟಿಕಲ್ ಆಗಿ ಯೋಚನೆ ಮಾಡುತ್ತಾರೆ.

ಇವರದು ಸ್ವಲ್ಪ ನಾಚಿಕೆ ಸ್ವಭಾವ ಆಗಿರುತ್ತದೆ, ಬೇರೆಯವರೊಂದಿಗೆ ಬೇಗನೆ ಬೆರೆಯುವುದಿಲ್ಲ ಸಮಯ ತೆಗೆದುಕೊಂಡು ಬೆರೆಯುತ್ತಾರೆ. ವೃಷಭ ರಾಶಿಯವರಿಗೆ ಹೊಟ್ಟೆಕಿಚ್ಚಿನ ಸ್ವಭಾವ ಇದೆ, ಹಠದ ಸ್ವಭಾವ ಇರುತ್ತದೆ. ಇವರು ಬೆಳಗಿನಿಂದ ಸಂಜೆಯವರೆಗೆ ಯಾವ ಸಮಯಕ್ಕೆ ಯಾವ ಕೆಲಸ ಮಾಡಬೇಕು ಎಂದು ನಿರ್ಧಾರ ಮಾಡಿರುತ್ತಾರೆ ಅದರಂತೆ ಕೆಲಸ ಮಾಡುತ್ತಾರೆ. ಈ ರಾಶಿಯವರಿಗೆ ಬೇರೆಯವರು ಕೆಲಸ ಮಾಡಿಸಬೇಕು ಎಂದರೆ ಅವರೆ ನಿಂತು ಕೆಲಸ ಮಾಡಿಸಿಕೊಳ್ಳಬೇಕು.

ವೃಷಭ ರಾಶಿಯವರು ತಾವು ಪ್ರೀತಿಸುವವರನ್ನು ಕಾಳಜಿ ಮಾಡುತ್ತಾರೆ, ಪ್ರೊಟೆಕ್ಟ್ ಮಾಡುತ್ತಾರೆ. ಇವರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ವೃಷಭ ರಾಶಿಯವರಿಗೆ ಕಫ, ಕೋಲ್ಡ್, ಥೈರಾಯ್ಡ್ ಸಮಸ್ಯೆಗಳು ಬರುತ್ತವೆ. ಇವರಿಗೆ ಆರ್ಟ್ಸ್ ಫೀಲ್ಡ್, ಮೀಡಿಯಾ, ಎಜುಕೇಷನ್, ಆಕ್ಟಿಂಗ್ ಫೀಲ್ಡ್ ಗಳಲ್ಲಿ ಯಶಸ್ಸು ಸಿಗುತ್ತದೆ. ಇವರು ತಮಗೆ ಮೂಡ್ ಇದ್ದಾಗ ಕೆಲಸ ಮಾಡುತ್ತಾರೆ. ಇವರು ಯಾವುದೆ ಒಂದು ವಿಷಯವನ್ನು ಇಟ್ಟುಕೊಂಡು ಕೊರಗುವುದನ್ನು ಬಿಡಬೇಕು ಇದರಿಂದ ಅವರು ಜೀವನದಲ್ಲಿ ನೆಮ್ಮದಿ ಆಗಿರಲು ಸಾಧ್ಯ. ಈ ಮಾಹಿತಿಯನ್ನು ತಪ್ಪದೆ ವೃಷಭ ರಾಶಿಯವರಿಗೆ ತಿಳಿಸಿ, ತಮ್ಮ ಗುಣ ಲಕ್ಷಣಗಳನ್ನು ತಿಳಿಯಿರಿ. ನೀವು ನಿಮ್ಮ ರಾಶಿ ಯಾವುದು, ಆ ರಾಶಿಯಲ್ಲಿ ಜನಿಸಿದವರ ಗುಣದ ಬಗ್ಗೆ ತಿಳಿಯಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!