ಮನೆ, ಸೈಟ್ ನ ಪತ್ರ ಮಾಡಿಸುವ ಫಾರ್ಮ್ 9 ಹಾಗೂ ಫಾರ್ಮ್ 11 ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ ನೋಡಿ.. ಗ್ರಾಮೀಣ ಪ್ರದೇಶದ ಜನರಿಗೆ ಇನ್ನು ಕೂಡ ತಮ್ಮ ಹೆಸರಿಗೆ ಆಸ್ತಿಯನ್ನು ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಅರಿವು ಇಲ್ಲ. ಈಗಲೂ ಕೂಡ ಮರಣ ಹೊಂದಿರುವ ತಮ್ಮ ತಾತ ಅಥವಾ ತಂದೆಯ ಹೆಸರಿನಲ್ಲೇ ಆಸ್ತಿಯನ್ನು ಬಿಟ್ಟಿರುತ್ತಾರೆ. ಹೀಗಿದ್ದಾಗ ಸರ್ಕಾರದ ಯಾವುದೇ ಯೋಜನೆಯ ಮೂಲಕ ಹಣ ಪಡೆಯಬೇಕು ಎಂದರೆ ಆಸ್ತಿ ನಿಮ್ಮ ಹೆಸರಿಗೆ ಇರಬೇಕಾಗುತ್ತದೆ. ಹಾಗಾಗಿ ಎಲ್ಲರೂ ಕೂಡ ಮನೆ ಅಥವಾ ಸೈಟ್ ನ ಕಾಗದ ಪತ್ರ ಮಾಡಿಸುವ ಬಗ್ಗೆ ತಿಳಿದುಕೊಂಡಿದ್ದರೆ ನಿಮಗೆ ಅನುಕೂಲ ಆಗುತ್ತದೆ.
ಇದರ ಬಗ್ಗೆ ಹೇಳುವುದಾದರೆ, ಹಳ್ಳಿಯ ಜನರ ಮನೆ, ಸೈಟು, ಜಮೀನು ಇದೆಲ್ಲವೂ ಕೂಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಒಂದು ಗ್ರಾಮದ ಠಾಣೆಯ ಒಳಗೆ ಬರುವ ಪೂರ್ತಿ ಆಸ್ತಿ GPS ನಲ್ಲಿ ಕವರ್ ಆಗುತ್ತದೆ. ಈ ಆಸ್ತಿಗಳಿಗೆ ನೀವು ಫಾರ್ಮ್ 9 ಹಾಗೂ ಫಾರ್ಮ್ 11 ಆಸ್ತಿಪತ್ರವನ್ನು ಪಡೆಯಬೇಕು. ಇದು ಹೇಗೆ ಎಂದು ತಿಳಿಯೋಣ..
ಮೊದಲಿಗೆ ಆಸ್ತಿಯ ಅಳತೆ ಮಾಡಿಸಬೇಕು, ಮೊದಲು ಈ ವಿಷಯವನ್ನು ಗ್ರಾಮ ಪಂಚಾಯಿತಿಗೆ ತಿಳಿಸಿದರೆ, ಅವರಿಂದ ನಿಮಗೆ ಒಂದು ಫಾರ್ಮೇಟ್ ಸಿಗುತ್ತದೆ, ಅದನ್ನು ಹೋಬಳಿಗೆ ಸೇರುವ R.0 ಕಚೇರಿಗೆ ತೆಗೆದುಕೊಂಡು ಹೋಗಬೇಕು, ಅಲ್ಲಿ ಮೋಜಣಿ ಮಾಡಲು ಪರ್ಮಿಶನ್ ಸಿಗುತ್ತದೆ. ಬಳಿಕ ಸಂಬಂಧಪಟ್ಟವರು ಬಂದು ಆಸ್ತಿಯನ್ನು ಸರ್ವೇ ಮಾಡಿ, ಅಳತೆ ಮಾಡುತ್ತಾರೆ. ಇಲ್ಲಿ ನೀವು ಗ್ರಾಮೀಣ ಕಛೇರಿಗೆ ಕೊಟ್ಟಿರುವ ಮಾಹಿತಿ ಸರಿ ಇದೆಯಾ ಎಂದು ಚೆಕ್ ಮಾಡಲಾಗುತ್ತದೆ. ಸರಿ ಇದೆ ಎಂದರೆ ಸ್ಕೆಚ್ ಕೊಡುತ್ತಾರೆ..
ಇಲ್ಲದೇ ಹೋದರೆ ಅಮೆನ್ಡ್ ಮಾಡುತ್ತಾರೆ. ಇದೆಲ್ಲವೂ ನಡೆದ ಬಳಿಕ ಗ್ರಾಮ ಪಂಚಾಯಿತಿಯವರು ಕೊಟ್ಟ ದಾಖಲೆ, ಮತ್ತು ಸರ್ವೇ ಮೂಲಕ ನೀಡುವ ದಾಖಲೆ ಇದೆಲ್ಲವನ್ನು ತೆಗೆದುಕೊಂಡು PDO ಆಫೀಸ್ ಗೆ ಹೋಗಿ ಅರ್ಜಿ ಸಲ್ಲಿಸಿ. ಈ ಎಲ್ಲಾ ದಾಖಲೆ ಚೆಕ್ ಮಾಡಿ, ಕಂದಾಯ ಪಾವತಿ ಮಾಡಿದ್ದೀರಿ ಎಂದರೆ, ಫಾರ್ಮ್ 9 ಹಾಗು ಫಾರ್ಮ್ 11 ಬಗ್ಗೆ ಮಾಹಿತಿಯನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕುತ್ತಾರೆ. ಇದಾದ 30 ದಿನಗಳ ಒಳಗೆ ನಿಮ್ಮ ಕೈಗೆ ಫಾರ್ಮ್ 9 ಹಾಗು ಫಾರ್ಮ್ 11 ಸಿಗುತ್ತದೆ.
ಫಾರ್ಮ್ 9 ಹಾಗೂ ಫಾರ್ಮ್ 11 ಈ ಎರಡು ನಿಮ್ಮ ಕೈಗೆ ಸಿಕ್ಕಿದ ಬಳಿಕ ರಿಜಿಸ್ಟ್ರೇಷನ್ ಹಾಗೂ ಇನ್ನಿತರ ಕೆಲಸಗಳಲ್ಲಿ ಮುಂದುವರೆಸಬಹುದು. ತಂದೆ ಹೆಸರಿಗೆ ಆಸ್ತಿ ರಿಜಿಸ್ಟರ್ ಆಗಿದ್ದರೆ, ಹೆಂಡತಿ ಅಥವಾ ಮಕ್ಕಳ ಹೆಸರಿಗೆ ದಾನಪತ್ರ ಅಥವಾ ಕ್ರಯಪತ್ರದ ಮೂಲಕ ಹಕ್ಕು ಪತ್ರ ಬದಲಾವಣೆ ಮಾಡಿಕೊಳ್ಳಬಹುದು.