Vijayaraghvendra wife Spandana Last Video Viral: ಚಂದನವನದಲ್ಲಿ ಕಳೆದ ಕೆಲವು ದಿನಗಳಿಂದ ಹಲವು ನೋವಿನ ಸಂಗತಿಗಳು, ಘಟನೆಗಳು ನಡೆಯುತ್ತಲೇ ಇದೆ. ಅದರಿಂದ ಕಲಾವಿದರಿಗೆ ನೋವಾಗಿದೆ. ಅಂಥ ಘಟನೆಗಳಲ್ಲಿ ಒಂದು ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ವಿಧಿವಶರಾಗಿದ್ದು. ಅಷ್ಟು ಚಿಕ್ಕ ವಯಸ್ಸಿಗೆ ಸ್ಪಂದನಾ ಅವರು ವಿಧಿವಶರಾಗುತ್ತಾರೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಈ ದಿಢೀರ್ ಘಟನೆ ಇಡೀ ಸ್ಯಾಂಡಲ್ ವುಡ್ ಗೆ ಶಾಕ್ ಕೊಟ್ಟಿತ್ತು.

ವಿಜಯ್ ರಾಘವೇಂದ್ರ ಅವರು ಬಹಳ ಪ್ರೀತಿಸಿ ಸ್ಪಂದನಾ ಅವರೊಡನೆ ಮದುವೆಯಾಗಿದ್ದರು. ಸುಮಾರು 16 ವರ್ಷಗಳ ಕಾಲ ಇಬ್ಬರು ಬಹಳ ಸುಂದರವಾದ, ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸಿದ್ದರು. ದಂಪತಿಗಳು ಅಂದರೆ ಹೀಗಿರಬೇಕು ಎನ್ನುವ ಹಾಗೆ ಎಲ್ಲರಿಗೂ ಮಾದರಿಯಾಗಿದ್ದರು, ಈ ಜೋಡಿಗೆ ಶೌರ್ಯ ಹೆಸರಿನ ಮುದ್ದಾದ ಮಗ ಕೂಡ ಇದ್ದಾನೆ. ಇವರ ಮಗ ಈಗ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಸ್ಪಂದನಾ ಅವರು ಒಬ್ಬ ತಾಯಿಯಾಗಿ, ಪತ್ನಿಯಾಗಿ, ಸೊಸೆಯಾಗಿ ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಸ್ನೇಹಿತರ ಜೊತೆಗೂ ಅಷ್ಟೇ ಚೆನ್ನಾಗಿರುತ್ತಿದ್ದರು. ಸ್ಪಂದನಾ ಅವರದ್ದು ಬಹಳ ಸೈಲೆಂಟ್ ಆದ ವ್ಯಕ್ತಿತ್ವ, ಎಲ್ಲರೊಡನೆ ಬಹಳ ಚೆನ್ನಾಗಿರುತ್ತಿದ್ದರು ಎಂದು ಅವರ ಸ್ನೇಹಿತರು ಮಾಧ್ಯಮಗಳ ಎದುರು ಹೇಳಿಕೊಂಡಿದ್ದರು. ಸ್ಪಂದನಾ ಅವರು ಹೋದ ನಂತರ ವಿಜಯ್ ರಾಘವೇಂದ್ರ ಅವರು ಎಷ್ಟು ನೋವಿನಲ್ಲಿದ್ದಾರೆ ಎನ್ನುವುದನ್ನು ವರ್ಣಿಸಲು ಪದಗಳು ಸಾಲೋದಿಲ್ಲ.

ವಿಜಯ್ ರಾಘವೇಂದ್ರ ಅವರು ಸ್ಪಂದನಾ ಅವರ ನೆನಪಿನಲ್ಲಿ ನೋವಿನಲ್ಲಿದ್ದರು ಕೂಡ, ಅದನ್ನು ಎಲ್ಲಿಯೂ ವ್ಯಕ್ತಪಡಿಸಿಕೊಳ್ಳದೆ, ನೋವನ್ನು ನುಂಗಿ ಬದುಕುತ್ತಿದ್ದಾರೆ. ಈಗ ಜೀಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಕೂಡ ತಮ್ಮ ಜಡ್ಜ್ ಸ್ಥಾನಕ್ಕೆ ವಾಪಸ್ ಬಂದಿದ್ದಾರೆ. ಸಿನಿಮಾ ಕುರಿತ ಕಾರ್ಯಕ್ರಮಗಳಲ್ಲಿ, ತಮ್ಮ ಸಿನಿಮಾ ಪ್ರಚಾರಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ನೋವು ಇದ್ದರು ಅದನ್ನು ಪಕ್ಕಕ್ಕಿಟ್ಟು ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ ವಿಜಯ್ ರಾಘವೇಂದ್ರ.

Vijayaraghvendra wife Spandana Last Video Viral

ಇದರ ಜೊತೆಗೆ ಈಗ ಸ್ಪಂದನಾ ಅವರ ಕೊನೆಯ ದಿನದ ವಿಡಿಯೋ ಒಂದು ವೈರಲ್ ಆಗಿದೆ. ಸ್ಪಂದನಾ ಅವರು ವಿಧಿವಶರಾದಾಗ ತಮ್ಮ ಕಸಿನ್ಸ್ ಜೊತೆಗೆ ಬ್ಯಾಂಕಾಕ್ ಗೆ ಹೋಗಿದ್ದರು, ಅಲ್ಲಿರುವಾಗಲೇ ಅವರಿಗೆ ಹೃದಯಾಘಾತವಾಗಿದೆ ಎಂದು ಮಾಹಿತಿ ಸಿಕ್ಕಿತ್ತು. ಅಂದು ತಮ್ಮ ಕಸಿನ್ಸ್ ಗಳ ಜೊತೆಗೆ ತಮಾಷೆಯಾಗಿ ಸ್ಪಂದನಾ ಅವರು ಮಾತನಾಡುತ್ತಿರುವ ವಿಡಿಯೋ ಒಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದರೆ, ಸ್ಪಂದನಾ ಅವರು ಈಗ ನಮ್ಮೊಡನೆ ಇಲ್ಲ ಎನ್ನುವುದನ್ನು ನಂಬಲು ಅಸಾಧ್ಯ ಎನ್ನಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!