ಓಡುತ್ತಿರುವ ಕುದುರೆಯ ಚಿತ್ರವನ್ನು ಮನೆಯಲ್ಲಿ ಹಾಕಿಸುವುದನ್ನು ಎಲ್ಲಾದರೂ ನೋಡಿರುತ್ತೇವೆ. ಇಂತಹ ಚಿತ್ರವನ್ನು ಯಾಕೆ ಹಾಕಿರುತ್ತಾರೆ ಎಂಬ ಪ್ರಶ್ನೆ ಸಾಮನ್ಯವಾಗಿ ಮೂಡುತ್ತದೆ. ಓಡುತ್ತಿರುವ ಕುದುರೆಯ ಚಿತ್ರವನ್ನು ಮನೆಯಲ್ಲಿ ಹಾಕುವುದರಿಂದ ಒಳ್ಳೆಯದಾಗುತ್ತದೆ, ಶುಭ ಸುದ್ದಿಯನ್ನು ತರುತ್ತದೆ. ಹಾಗಾದರೆ ಈ ಓಡುತ್ತಿರುವ ಕುದುರೆಯ ಚಿತ್ರವನ್ನು ಹಾಕುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಹಾಗೂ ಹಾಕುವ ನಿಯಮಗಳನ್ನು ಈ ಲೇಖನದಲ್ಲಿ ನೋಡೋಣ.
ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕುವುದರಿಂದ ಶುಭಕರ ಅಲ್ಲದೆ ಮನೆಗೆ ಬರುವ ವಿಪತ್ತನ್ನು ಈ ಚಿತ್ರ ತಡೆಯುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ನಂಬಲಾಗಿದೆ. ಓಡುತ್ತಿರುವ ಕುದುರೆ ಚಿತ್ರವನ್ನು ಮನೆಯಲ್ಲಿ ಹಾಕುವುದರಿಂದ ಶುಭವಾಗುತ್ತದೆ ಆದರೆ ಕೆಲವು ನಿಯಮಗಳಿವೆ. ಚಿತ್ರದಲ್ಲಿ ಓಡುತ್ತಿರುವ ಕುದುರೆಗಳ ಸಂಖ್ಯೆ ಏಳಕ್ಕಿಂತ ಹೆಚ್ಚಿರಬಾರದು ಇಂಧ್ರಧನಸ್ಸಿನ ಸಂಖ್ಯೆ ಏಳು ಇರುತ್ತದೆ, ಸಪ್ತ ಋಷಿ, ಸಪ್ತಪದಿ, ಸಪ್ತ ಜನ್ಮ ಇವೆಲ್ಲವೂ ಏಳು ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅತಿಯಾದ ಸಾಲ ಮಾಡುವವರು ಮನೆಯಲ್ಲಿ ಅಥವಾ ತಾವು ಕೆಲಸ ಮಾಡುತ್ತಿರುವ ಕಛೇರಿಯಲ್ಲಿ ವಾಯುವ್ಯ ದಿಕ್ಕಿನಲ್ಲಿ ಓಡುತ್ತಿರುವ ಕುದುರೆ ಚಿತ್ರವನ್ನು ಹಾಕಬೇಕು ಅದರಲ್ಲೂ ಜೋಡಿ ಕುದುರೆ ಚಿತ್ರ ಹಾಕುವುದರಿಂದ ಶ್ರೇಯಸ್ಕರವಾಗುತ್ತದೆ.
ಕೆಲಸ ಮಾಡುವ ಕಛೇರಿಯ ಕ್ಯಾಬಿನ್ ನಲ್ಲಿ ಓಡುತ್ತಿರುವ ಏಳು ಕುದುರೆಯ ಚಿತ್ರವನ್ನು ಹಾಕಬೇಕು. ಚಿತ್ರದಲ್ಲಿ ಕುದುರೆಯ ಮುಖ ಆಫೀಸ್ ಕಡೆಗೆ ಇರಬೇಕು ದಕ್ಷಿಣ ದಿಕ್ಕಿಗೆ ಇರುವ ಗೋಡೆಯ ಮೇಲೆ ಕುದುರೆ ಚಿತ್ರ ಹಾಕಬೇಕು ಇದರಿಂದ ನಾವು ಮಾಡುವ ಕೆಲಸ ವೇಗವಾಗಿ ಸಾಗುತ್ತದೆ. ಏಳು ಕುದುರೆಗಳ ಚಿತ್ರವನ್ನು ಮನೆಯಲ್ಲಿ ಹಾಕುವುದರಿಂದ ನಮ್ಮ ಜೀವನದಲ್ಲಿ ಏರಿಳಿತ ಆಗುವುದಿಲ್ಲ. ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ವಾಸವಾಗುತ್ತಾಳೆ. ಮನೆಯ ಮುಖ್ಯವಾದ ಹಾಲ್ ನಲ್ಲಿ ಮನೆಗೆ ಬರುತ್ತಿರುವಂತಹ ರೀತಿಯ ಕುದುರೆಯ ಚಿತ್ರವನ್ನು ಹಾಕಬೇಕು.
ಓಡುತ್ತಿರುವ ಕುದುರೆ ಚಿತ್ರವನ್ನು ಗೋಡೆಗೆ ಹಾಕುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಆ ಮನೆಯವರಿಗೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಚಿತ್ರದಲ್ಲಿ ಓಡುತ್ತಿರುವ ಕುದುರೆಯ ಬಣ್ಣವನ್ನು ನೋಡಿ ಆಯ್ಕೆ ಮಾಡಬೇಕು. ಓಡುತ್ತಿರುವ ಕುದುರೆ ಬಿಳಿ ಬಣ್ಣದ್ದಾದರೆ ಮನೆಗೆ ಶುಭ ತರುತ್ತದೆ. ಇಂದೆ ಓಡುತ್ತಿರುವ ಕುದುರೆಯ ಚಿತ್ರವನ್ನು ಗೋಡೆಗೆ ಹಾಕಿ ಹಾಗೂ ನಿಮ್ಮ ಸ್ನೇಹಿತರಿಗೂ, ಸಂಬಂಧಿಕರಿಗೂ ತಿಳಿಸಿ.