ನಾವಿಂದು ಕರ್ನಾಟಕದಲ್ಲಿರುವ ಒಂದು ಅದ್ಭುತವಾದ ಪುಣ್ಯಕ್ಷೇತ್ರದ ಕುರಿತು ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಅಲ್ಲಿನ ಭೂತಳದಲ್ಲಿ ಸಾವಿರಾರು ಶಿವಲಿಂಗಗಳು ಅಡಗಿವೆ ಅದರಲ್ಲಿ ಒಂದು ಲಿಂಗ ನದಿಯ ಮರಳಿನ ಮಧ್ಯೆ ಇದ್ದು ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ದರ್ಶನ ಕೊಡುತ್ತದೆ. ಈ ಸನ್ನಿಧಿಯಲ್ಲಿ ಭಕ್ತಿ ಮತ್ತು ಮುಕ್ತಿ ಎರಡು ಪ್ರಾಪ್ತವಾಗುತ್ತದೆ ಇದು ಅಪರಕರ್ಮಾಧಿಗಳಿಗೆ ಪ್ರಶಸ್ತವಾದ ಸ್ಥಾನವಾಗಿದೆ ಇಂತಹ ಪುಣ್ಯಕ್ಷೇತ್ರ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ. ದೇವಸ್ಥಾನದಲ್ಲಿ ಯಾವ ದೇವಾನುದೇವತೆಗಳು ನೆಲೆನಿಂತಿದ್ದಾರೆ ಈ ಕ್ಷೇತ್ರದ ವಿಶೇಷತೆ ಏನು ಇಲ್ಲಿ ನಡೆಯುವ ಪವಾಡಗಳು ಏನು ಎಂಬುದರ ಕುರಿತಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಉಪ್ಪಿನಂಗಡಿಯಲ್ಲಿರುವ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ಪ್ರಾಚೀನ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮತೀರದಲ್ಲಿ ನೆಲೆಗೊಂಡಿರುವ ಪರಮ ಸಾನಿಧ್ಯ ಇದಾಗಿದೆ. ಉತ್ತರದಲ್ಲಿ ಕಾಶಿ ವಿಶ್ವನಾಥ ಮಹಾಕಾಳಿ ವೀರಭದ್ರ ಸನ್ನಿಧಿ ಇದ್ದು ಅದು ಉತ್ತರಕಾಶಿಯಲ್ಲಿ ಪ್ರಸಿದ್ಧಿಯಾದರೆ ಅದೇ ರೀತಿ ದಕ್ಷಿಣ ಭಾರತದಲ್ಲಿ ಸಹಸ್ರಲಿಂಗೇಶ್ವರ ಮಹಾಕಾಳಿ ಕಾಲಭೈರವರ ಸನ್ನಿಧಿ ಇದೆ ಆದ್ದರಿಂದಲೇ ಇದನ್ನು ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ. ಗಂಗಾ ಯಮುನಾ ಸಂಗಮದಿಂದಾಗಿ ಕಾಶಿ ಪ್ರಯಾಗವಾದರೆ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮದಿಂದ ಇದು ಗಯಾಪದ ಎಂದು ಪ್ರಸಿದ್ಧಿಯಾಗಿದೆ. ಉತ್ತರಕಾಶಿ ಹಾಗೂ ದಕ್ಷಿಣ ಕಾಶಿಯಲ್ಲಿ ಸರಸ್ವತಿ ನದಿಯು ಗುಪ್ತಗಾಮಿನಿಯಾಗಿ ಹರಿಯುತ್ತಾಳೆ ಎಂಬುವ ನಂಬಿಕೆ ಕೂಡ ಇದೆ.

ಆದ್ದರಿಂದ ಸದ್ಗತಿದಾಯಕ ಕಾರ್ಯಗಳಿಗೆ ಉತ್ತರಕಾಶಿ ಹೆಸರು ಇಲ್ಲಿರುವ ದಕ್ಷಿಣ ಕಾಶಿ ಅಷ್ಟೇ ಪವಿತ್ರವಾದದ್ದು. ಸಂಗಮಕಾಶಿ ಆದ ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ಸನ್ನಿಧಿಯು ಸದ್ಗತಿ ಕಾರ್ಯಗಳನ್ನು ಮಾಡುವ ಮೂಲಕ ಮೋಕ್ಷಧಾಮ ಎನಿಸಿದೆ. ಈ ಕ್ಷೇತ್ರವನ್ನು ಗಯಾಪದ ಕ್ಷೇತ್ರ ಎಂದು ಕೂಡ ಕರೆಯಲಾಗುತ್ತದೆ ಈ ಕ್ಷೇತ್ರದಲ್ಲಿ ಮಹಾಕಾಳಿ ದೇವಿ ದೇವಸ್ಥಾನ ಹಾಗೂ ನೇತ್ರಾವತಿಯ ಇನ್ನೊಂದು ಬದಿಯಲ್ಲಿ ಕಲ್ಕುಡ ದೇವಸ್ಥಾನವಿದೆ ಈ ನದಿಯ ಗರ್ಭದಲ್ಲಿ ಈಗಲೂ ಕೂಡ ಸಹಸ್ರಲಿಂಗ ಗಳು ಇದೆ ಎಂಬ ಪ್ರತೀತಿ ಇದೆ ಅದರಲ್ಲಿ ಒಂದು ಲಿಂಗ ನದಿಯ ಮರಳಿನ ಮಧ್ಯೆ ಇದ್ದು ಫೆಬ್ರವರಿ ತಿಂಗಳಿನಲ್ಲಿ ದರ್ಶನ ಕೊಡುತ್ತದೆ. ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಒಂದಾದ ಈ ಸನ್ನಿಧಿಯಲ್ಲಿ ಭಕ್ತಿ ಹಾಗೂ ಮುಕ್ತಿ ಎರಡು ಪ್ರಾಪ್ತವಾಗುತ್ತದೆ ಎಂದು ನಂಬಲಾಗಿದೆ. ಅಪರಕರ್ಮಾಧಿಗಳಿಗೆ ಇದು ಪ್ರಶಸ್ತ ಸ್ಥಾನವಾಗಿದೆ.

ಇದೇ ಕಾರಣ ಸಾವಿರಾರು ಭಕ್ತರು ಭಕ್ತಿಯಿಂದ ಮುಕ್ತಿಯನ್ನು ಪಡೆಯಲು ಇಲ್ಲಿ ಬರುತ್ತಾರೆ ಕರಾವಳಿ ಕರ್ನಾಟಕದ ಜನತೆ ಇಲ್ಲಿ ಕಾಳಿಯನ್ನು ಪೂಜಿಸುತ್ತಾರೆ ನೇತ್ರಾವತಿ ನದಿಯ ದಂಡೆಯ ಮೇಲೆ ಮಹಾಕಾಳಿಯ ಪ್ರತ್ಯೇಕ ದೇವಸ್ಥಾನವೂ ಇದೆ. ಮಹಾಕಾಳಿ ತನ್ನ ಕೈಯಲ್ಲಿ ಕಪಾಲ ತ್ರಿಶೂಲ ಖಡ್ಗ ಡಮರುಗ ಹಿಡಿದು ನಿಂತಿದ್ದಾಳೆ. ಆದಿಶಕ್ತಿ ದೇವತೆಯು ರಕ್ತಬೀಜಾಸುರ ಅಸುರನನ್ನು ಸಂಹಾರ ಮಾಡಲು ಮಹಾಕಾಳಿಯ ರೂಪ ಧರಿಸಿದ್ದಳು ಎಂದು ಐತಿಹ್ಯ ಇದೆ. ನಾವು ಬಹುತೇಕ ದೇವಸ್ಥಾನಗಳಲ್ಲಿ ಶಿವ-ಪಾರ್ವತಿ ಮತ್ತು ಕಾಳಿ ರುದ್ರ ದೇವತೆಗಳ ಸಂಗಮವನ್ನು ಕಾಣಬಹುದು. ಆದರೆ ಕಾಲಭೈರವನನ್ನು ಇಲ್ಲಿ ನೀವು ಕಾಣಬಹುದು ಕುಂಕುಮಾರ್ಚನೆ ಹಾಗೂ ತುಂಬಿದ ಸೇವೆ ಮಹಾಕಾಳಿಯ ಅರ್ಚನೆಯ ಪ್ರಿಯ ಸೇವೆಗಳಾಗಿವೆ.

ಸಾಂಕ್ರಾಮಿಕ ರೋಗಗಳು ಆಕ್ರಮಿಸಿದಾಗ ಜನರು ಇಲ್ಲಿ ಕಾಳಿ ದೇವಿಯನ್ನು ಪೂಜಿಸುತ್ತಾರೆ. ವಿಶ್ವಸುಂದರಿ ಐಶ್ವರ್ಯ ರೈ ಅವರ ಮನೆದೇವರು ಕೂಡಾ ಇದಾಗಿದೆ ಇದೇ ಕಾರಣದಿಂದ ಐಶ್ವರ್ಯ ರೈ ಹಾಗೂ ಅವರ ಕುಟುಂಬ ಪ್ರತಿವರ್ಷ ತಪ್ಪದೇ ಫೆಬ್ರುವರಿ ತಿಂಗಳಿನಲ್ಲಿ ಇಲ್ಲಿಗೆ ಭೇಟಿ ನೀಡುತ್ತದೆ. ಉಪ್ಪಿನಂಗಡಿಯ ಈ ಸಹಸ್ರಲಿಂಗ ದೇವಸ್ಥಾನ ತಾಲೂಕು ಕೇಂದ್ರವಾದ ಪುತ್ತೂರಿನಿಂದ ಕೇವಲ ಹನ್ನೊಂದು ಕಿಲೋಮೀಟರ್ ದೂರದಲ್ಲಿದ್ದರೆ ಧರ್ಮಸ್ಥಳದಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿದೆ ಹಾಗೆಯೇ ಮಂಗಳೂರಿನಿಂದ ಐವತ್ನಾಲ್ಕು ಕಿಲೋಮೀಟರ್ ದೂರದಲ್ಲಿದ್ದರೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಸುಮಾರು ಎರಡು ನೂರಾತೊಂಬತ್ತೆಂಟು ಕಿಲೋಮೀಟರ್ ದೂರದಲ್ಲಿದೆ. ನಿಮ್ಮ ಪಾಪಕರ್ಮಗಳನ್ನು ಪವಿತ್ರಗೊಳಿಸಲು ಇದೊಂದು ಅದ್ಭುತವಾದ ಸ್ಥಳವಾಗಿದೆ ನೀವು ಕೂಡ ಒಮ್ಮೆ ಇಲ್ಲಿಗೆ ಭೇಟಿ ನೀಡಿ ನಿಮ್ಮ ಜೀವನವನ್ನು ಪುನೀತವಾಗಿಸಿಕೊಳ್ಳಿ. ಈ ಮಾಹಿತಿಯನ್ನು ನೀವು ತಿಳಿಯುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರೊಂದಿಗೆ ಹಂಚಿಕೊಳ್ಳಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!