ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ವಿಶೇಷ ಸ್ಥಾನವಿದೆ. ಯಾವ ಮಹಿಳೆಯರು ತುಳಸಿ ಪೂಜೆ ಮಾಡಬಹುದು, ಯಾರು ತುಳಸಿ ಪೂಜೆ ಮಾಡಬಾರದು ಎಂದು ಈ ಲೇಖನದ ಮೂಲಕ ತಿಳಿಯೋಣ.
ಹಿಂದೂ ಧರ್ಮದಲ್ಲಿ ತುಳಸಿಯು ಸರ್ವಶ್ರೇಷ್ಟವಾಗಿದ್ದು ಎಲ್ಲರೂ ಇದನ್ನು ಪೂಜೆ ಮಾಡುತ್ತಾರೆ. ತುಳಸಿಯು ತಾಯಿ ಲಕ್ಷ್ಮೀ ದೇವಿಯ ಸ್ವರೂಪವಾಗಿದೆ. ಶಾಸ್ತ್ರದ ಪ್ರಕಾರ ಯಾವ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲವೋ ಅಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದು ಔಷಧಿ ಸಸ್ಯವಾಗಿದೆ. ತುಳಸಿಯಲ್ಲಿ ಹಲವು ಪ್ರಕಾರಗಳಿವೆ ಇವುಗಳಲ್ಲಿ ರಾಮ ತುಳಸಿ, ಶ್ಯಾಮ ತುಳಸಿ ಮೊದಲಾದ ಪ್ರಕಾರಗಳಿವೆ. ಮನೆಗಳಲ್ಲಿ ಸಾಮಾನ್ಯವಾಗಿ ರಾಮ ತುಳಸಿ, ಶ್ಯಾಮ ತುಳಸಿ ಗಿಡಗಳು ಕಂಡುಬರುತ್ತದೆ. ಏಕಾದಶಿ ದಿನದಂದು ತುಳಸಿ ಪೂಜೆ ಮಾಡುವುದರಿಂದ ಶುಭ ಫಲದ ಜೊತೆಗೆ ಕನ್ಯಾದಾನದ ಫಲ ಸಿಗುತ್ತದೆ. ಮಹಿಳೆಯರು ಋತುಮತಿಯಾದಾಗ ತುಳಸಿ ಪೂಜೆ ಮಾಡಬಾರದು.
ಚರಿತ್ರೆ ಹೀನ ವ್ಯಕ್ತಿಗಳು, ಮನದಲ್ಲಿ ಕೆಟ್ಟ ವಿಚಾರ ಇರುವ ವ್ಯಕ್ತಿಗಳು ತುಳಸಿ ಪೂಜೆ ಮಾಡಬಾರದು ಇಂತವರು ಪೂಜೆ ಮಾಡಿದರೆ ತಾಯಿ ಸಿಟ್ಟಾಗುತ್ತಾಳೆ. ತುಳಸಿ ಪೂಜೆ ಮಾಡುವಾಗ ಮನಸ್ಸು ಶುದ್ಧವಾಗಿರಬೇಕು. ಮದುವೆಯಾದ ಹೆಣ್ಣುಮಕ್ಕಳು ತುಳಸಿ ಪೂಜೆ ಮಾಡುವುದು ಒಳ್ಳೆಯದು ಆದರೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿಯದಿದ್ದರೆ ತುಳಸಿ ಪೂಜೆ ಮಾಡಲು ಸಾಧ್ಯವಿಲ್ಲ. ಕೋರ್ಟ್ ಮ್ಯಾರೇಜ್ ಆದರೂ ತುಳಸಿ ಪೂಜೆ ಮಾಡಲು ಸಾಧ್ಯವಿಲ್ಲ. ಶಾಸ್ತ್ರದ ವಿರುದ್ಧ ತುಳಸಿ ಪೂಜೆ ಮಾಡಿದರೆ ಪಾಪಕ್ಕೆ ಗುರಿಯಾಗಬೇಕಾಗುತ್ತದೆ ಮತ್ತು ತಾಯಿ ಕೋಪಗೊಳ್ಳುತ್ತಾಳೆ. ಹಿಂದೂ ಸಂಪ್ರದಾಯದ ಪ್ರಕಾರ ಕನ್ಯೆಯರು ತುಳಸಿ ಪೂಜೆ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಮಹಿಳೆಯರಿಗೆ ತಿಳಿಸಿ.
ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.