ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ತುಳಸಿ ಗಿಡಕ್ಕೆ ಪೂಜೆಯ ಸ್ಥಾನ ಸಿಕ್ಕಿದೆ. ತುಳಸಿ ದೇವಿಯು ಲಕ್ಷ್ಮಿ ದೇವಿಯ ರೂಪ ಎಂದು ಹೇಳಲಾಗುತ್ತದೆ. ತುಳಸಿ ಗಿಡವನ್ನು ನಿತ್ಯ ಪೂಜಿಸಿದರೆ ಮರಣಾನಂತರ ಮೋಕ್ಷ ಪ್ರಾಪ್ತಿಯಗುತ್ತದೆ ಎಂಬ ನಂಬಿಕೆ ಇದೆ. ಇಷ್ಟೇ ಅಲ್ಲ, ವಿಷ್ಣುವಿನ ಪೂಜೆಯಲ್ಲಿ ತುಳಸಿ ಗಿಡವನ್ನು ಸೇರಿಸದಿದ್ದರೆ ಪೂಜೆ ಪೂರ್ಣವಾಗುವುದಿಲ್ಲ ಎಂಬ ನಂಬಿಕೆಯೂ ಇದೆ, ಆದರೆ ಕೆಲವೊಮ್ಮೆ ನಾವು ಈ ವಿಷಯಗಳನ್ನು ನಿರ್ಲಕ್ಷಿಸುತ್ತೇವೆ. ತುಳಸಿ ಗಿಡವು ಮುಂಬರುವ ಅಹಿತಕರ ಪತ್ತೆ ಮಾಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಯಾರು ಮನೆಯಲ್ಲಿ ಮುಂಜಾನೆ ಬಾಗಿಲಿಗೆ ರಂಗೋಲಿ ಹಾಕಿ ಹಾಗೂ ತುಳಸಿಗೆ ನೀರೇರೆಯುತ್ತಾರೋ ಆ ಮನೆಯಲ್ಲಿ ಸದಾ ಸುಖ ಶಾಂತಿ ನೆಲೆಸಿರುತ್ತದೆ ಎನ್ನುವ ನಂಬಿಕೆ ಇದೆ.ನಿತ್ಯವೂ ಮನೆಯ ಹೊರಗಿನಿಂದಲೇ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ, ಮನೆ ಮಂದಿಗೆ ನೆಮ್ಮದಿಯನ್ನು ನೀಡುವ ತಾಯಿ ತುಳಸಿ ದೇವಿ. ಶಕ್ತಿಯನ್ನು ಮತ್ತು ಪವಿತ್ರತೆಯನ್ನು ಸಂಕೇತಿಸುವ ತುಳಸಿ ದೇವಿ ಮನೆಗೆ ಸಮೃದ್ಧಿಯನ್ನು ತರುವ ತಾಯಿ. ಈ ತಾಯಿ ಭಗವಾನ್ ವಿಷ್ಣುವನ್ನು ವಿವಾಹವಾದ ದಿನವನ್ನು ತುಳಸಿ ಆಯನ ಎಂದು ಆಚರಿಸಲಾಗುವುದು.
ತುಳಸಿ ಎನ್ನುವುದು ಒಂದು ಪುಟ್ಟ ಔಷದಿಯ ಗುಣವನ್ನು ಹೊಂದಿರುವ ಸಸ್ಯ. ಇದಕ್ಕೆ ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ವಿಷ್ಣುವಿನ ಪತ್ನಿಯಾದ ತುಳಸಿ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯನ್ನು ಹೊಂದಿರುವ ದೇವಿ ಎಂದು ಹೇಳಲಾಗುವುದು. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುವ ತುಳಸಿ ದಳವನ್ನು ಬಳಸದೆ ದೇವತಾ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ ವಿಷ್ಣು ದೇವರ ಪತ್ನಿಯಾದ ತುಳಸಿಯು ಲಕ್ಷ್ಮೀಯ ಸಂಕೇತ ಎನ್ನುವ ನಂಬಿಕೆಯಿದೆ.
ತುಳಸಿ ಗಿಡವನ್ನು ಮನೆಯ ಮುಂದೆ, ದೇವ ಮೂಲೆಯಲ್ಲಿ ಇಡಬೇಕು. ಅಗ್ನಿ ಮೂಲೆಯ ಭಾಗದಲ್ಲಿ ತುಳಸಿ ಸಸ್ಯವನ್ನು ನೆಡುವುದು ಅಥವಾ ಕೂರಿಸುವ ಕಾರ್ಯ ಮಾಡಬಾರದು. ಮನೆಯ ಆವರಣದಲ್ಲಿ ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಡಬೇಕು. ಆಗ ಮಾತ್ರ ಮನೆಯಲ್ಲಿ ನೆಮ್ಮದಿ ಶಾಂತಿ ದೊರೆಯುವುದು.