ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಯು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ವಿಭಿನ್ನವಾದ ರಾಶಿ ಭವಿಷ್ಯವನ್ನು ಹೊಂದಿರುತ್ತಾರೆ. ಪುಷ್ಯ ಮಾಸದ ಬಗ್ಗೆ ಹಾಗೂ ಈ ಮಾಸದಲ್ಲಿ ತುಲಾ ರಾಶಿಯವರ ರಾಶಿ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿಯೋಣ.
ಜನವರಿ ಮೂರರಿಂದ ಪುಷ್ಯ ಮಾಸ ಪ್ರಾರಂಭವಾಗಿದೆ ಈ ಮಾಸವನ್ನು ಶೂನ್ಯ ಮಾಸ ಎಂತಲೂ ಕರೆಯುತ್ತಾರೆ. ಈ ಸಮಯದಲ್ಲಿ ಮೇಷ ರಾಶಿಯಲ್ಲಿ ಯಾವುದೆ ಗ್ರಹಸ್ಥಿತಿ ಇರುವುದಿಲ್ಲ, ವೃಷಭ ರಾಶಿಯಲ್ಲಿ ರಾಹು ಸಂಚರಿಸುತ್ತಿದ್ದಾನೆ. ಮಿಥುನ ರಾಶಿಯಲ್ಲಿ ಯಾವ ಗ್ರಹ ಸ್ಥಿತಿ ಇಲ್ಲ, ಕರ್ಕಾಟಕ ರಾಶಿಯಲ್ಲಿ ಚಂದ್ರ ಸಂಚರಿಸುತ್ತಿದ್ದಾನೆ. ಸಿಂಹ, ಕನ್ಯಾ, ತುಲಾ ರಾಶಿಯಲ್ಲಿ ಯಾವ ಗ್ರಹ ಸ್ಥಿತಿ ಇರುವುದಿಲ್ಲ. ವೃಶ್ಚಿಕ ರಾಶಿಯಲ್ಲಿ ಕೇತು ಸಂಚರಿಸುತ್ತಿದ್ದಾನೆ. ಧನು ರಾಶಿಯಲ್ಲಿ ಜನವರಿ 16 ರಂದು ಕುಜ ಜೊತೆಗೆ ಶುಕ್ರ ಮತ್ತು ರವಿ ಸಂಚರಿಸುತ್ತಿದ್ದಾನೆ. ಮಕರ ರಾಶಿಯಲ್ಲಿ ಜನವರಿ 14 ರಂದು ರವಿ ಜೊತೆಗೆ ಬುಧ, ಶನಿ ಸಂಚಾರ ಇರುತ್ತದೆ. ಕುಂಭ ರಾಶಿಯಲ್ಲಿ ಗುರು ಸಂಚರಿಸುತ್ತಿದ್ದಾನೆ ಹಾಗೂ ಮೀನ ರಾಶಿಯಲ್ಲಿ ಯಾವ ಗ್ರಹ ಸ್ಥಿತಿ ಇರುವುದಿಲ್ಲ.
ತುಲಾ ರಾಶಿಯವರ ದೈಹಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಜನವರಿ 14 ರ ನಂತರ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ತುಲಾ ರಾಶಿಯವರು ಸೂರ್ಯ ನಮಸ್ಕಾರ, ಸೂರ್ಯ ಕವಚ ಪಠಣ ಮಾಡಬೇಕು ಹಾಗೂ ಒಳ್ಳೆಯ ನೀರನ್ನು ಕುಡಿಯಬೇಕು. ಈ ರಾಶಿಯವರ ಆರ್ಥಿಕ ವಿಚಾರದಲ್ಲಿ ಉನ್ನತಿ ಕಂಡುಬರುತ್ತದೆ. ಕೇತುವಿನ ಕಾರಣದಿಂದ ಹಣಕಾಸಿನ ವ್ಯವಹಾರದಲ್ಲಿ ಯೋಗವಿದ್ದರೂ ತೊಂದರೆಗಳು ಕಂಡುಬರುತ್ತದೆ. ತುಲಾ ರಾಶಿಯವರು ಧನ, ಮಿತ್ರ, ಕುಟುಂಬ ವಿಚಾರದಲ್ಲಿ ಗೊಂದಲ ಕಂಡುಬರುತ್ತದೆ ಇದಕ್ಕೆ ಗಣಪತಿ ಹಾಗೂ ನಾಗ ಆರಾಧನೆ ಮಾಡುವುದರಿಂದ ಪರಿಹಾರ ಪಡೆಯಬಹುದು.
ತುಲಾ ರಾಶಿಯವರು ಸಹೋದರನಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಪಿತೃ ವರ್ಗದ ಆಶೀರ್ವಾದದಿಂದ ತುಲಾ ರಾಶಿಯವರಿಗೆ ಅತ್ಯುತ್ತಮ ಫಲ ಸಿಗಲಿದೆ. ಮಕರ ಸಂಕ್ರಾಂತಿ ನಂತರ ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳಿದೆ. ತುಲಾ ರಾಶಿಯವರ ಜಾತಕದಲ್ಲಿ ಕೇತು ದೋಷವಿದ್ದು ವಿವಾಹ ಯೋಗ ಇರದೆ ಇದ್ದಲ್ಲಿ ವಿವಾಹದ ವಿಷಯದಲ್ಲಿ ವಿಘ್ನ ಬರುತ್ತದೆ. ಪುಷ್ಯ ಮಾಸ ಸಮಯದಲ್ಲಿ ತುಲಾ ರಾಶಿಯವರ ದೋಷ ನಿವಾರಣೆಯಾಗುತ್ತದೆ ಆದರೂ ಈ ರಾಶಿಯವರು ಉತ್ತಮ ಮಾತುಗಳನ್ನೆ ಆಡಬೇಕು. ಈ ರಾಶಿಭವಿಷ್ಯವನ್ನು ತುಲಾ ರಾಶಿಯವರಿಗೆ ತಿಳಿಸಿ.