traffic Rules Bangalore: ಗಾರ್ಡನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅತಿಹೆಚ್ಚು ಟ್ರಾಫಿಕ್ ಕಾಣಿಸುವ ಊರು ಇದು, ಈ ಊರಿನಲ್ಲಿ ವಾಹನಗಳ ಸಂಖ್ಯೆ, ವಾಹನ ಓಡಿಸುವವರ ಸಂಖ್ಯೆ ಕೂಡ ಜಾಸ್ತಿಯೇ. ಇಲ್ಲಿ ರೂಲ್ಸ್ ಫಾಲೋ ಮಾಡದೆ ಬೇಕಾಬಿಟ್ಟಿ ಗಾಡಿ ಓಡಿಸುವವರ ಸಂಖ್ಯೆ ಕೂಡ ಹೆಚ್ಚು. ಇನ್ಮುಂದೆ ಈ ರೀತಿ ಆಗುವುದನ್ನು ತಡೆಯಲು ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಬೇಕಾಬಿಟ್ಟಿ ಗಾಡಿ ಓಡಿಸುವವರ ಆರ್ಭಟ ತಡೆಯಲು, ಸಾರಿಗೆ ಇಲಾಖೆ ಹೊಸ ಪ್ಲಾನ್ ಮಾಡಿದೆ. ಈ ರೀತಿ ಆಗುತ್ತಿರುವುದರಿಂದ ನಗರದಲ್ಲಿ ಅಪಘಾತಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ, ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ. ಹಾಗಾಗಿ ಇಂಥ ಸಮಸ್ಯೆ ಕಡಿಮೆ ಮಾಡಲು ಎಐ ಸಹಾಯ ಪಡೆಯಲಿದೆ, ಸಾರಿಗೆ ಇಲಾಖೆ. ಟ್ರಾಫಿಕ್ ರೂಲ್ಸ್ ಫಾಲೋ ಮಾಡದೆ ವಾಹನ ಚಲಿಸುವವರಿಗೆ ಎಐ ಕ್ಯಾಮೆರಾ ಪಾಠ ಕಲಿಸಲಿದೆ.

ಬೆಂಗಳೂರು ನಗರದ ಜನಸಂಖ್ಯೆ ಸುಮಾರು ಒಂದೂವರೆ ಕೋಟಿ, ಈ ಊರಿನಲ್ಲಿ ಒಂದು ಕೋಟಿಗಿಂತ ಹೆಚ್ಚು ವಾಹನಗಳು ಕೂಡ ಇದೆ. ಇಲ್ಲಿನ ರೋಡ್ ಗಳು ಚಿಕ್ಕದಾಗಿರುವ ಕಾರಣ ವಾಹನಗಳು ಓಡಾಡುವಾಗ ಟ್ರಾಫಿಕ್ ರೂಲ್ಸ್ ಬ್ರೇಕ್ ಆಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಕೂಡ ಜಾಸ್ತಿ ಆಗುತ್ತಿದ್ದು, ಇದನ್ನು ತಡೆಗಟ್ಟಲು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಕೂಡ ಜೊತೆ ಸೇರಿದ್ದಾರೆ.

traffic Rules Bangalore

ಹಾಗಾಗಿ ನಗರದ ಹಲವು ಕಡೆ ಎಐ ಕ್ಯಾಮೆರಾಗಳನ್ನು ಇನ್ಸ್ಟಾಲ್ ಮಾಡಲು ಇಲಾಖೆ ಮುಂದಾಗಿದೆ. ಈ ಮೊದಲು ಇದ್ದ ಕ್ಯಾಮೆರಾ ವಾಹನ ಚಲನೆ ಮಾಡುವವರ ಫೋಟೋ ಸೆರೆ ಹಿಡಿಯುತ್ತಿತ್ತು ಆದರೆ ಎಐ ಕ್ಯಾಮೆರಾ ವಾಹನದ ಸ್ಪೀಡ್, ಶಿಸ್ತು ಉಲ್ಲಂಘನೆ, ಕಾರ್ ನಲ್ಲಿ ಸೀಟ್ ಬೆಲ್ಟ್, ನಂಬರ್ ಪ್ಲೇಟ್ ಸೇರಿದಂತೆ ಎಲ್ಲವನ್ನು ಕ್ಯಾಪ್ಚರ್ ಮಾಡಲಿದೆ. ಎಐ ಕ್ಯಾಮೆರಾಗಳು ಸುಮಾತು 200 ರಿಂದ 250 ಮೀಟರ್ ಗಳಷ್ಟು ದೂರದವರೆಗು ಕ್ಯಾಪ್ಚರ್ ಮಾಡುತ್ತದೆ.

ಈ ಕ್ಯಾಮೆರಾಗಳನ್ನು ಸಾರಿಗೆ ಇಲಾಖೆಗೆ ಸೇರಿದ ವೆಬ್ ಸಾರಥಿ 3 ಮತ್ತು ವಾಹನ್ 4 ತಂತ್ರಾಂಶದ ಜೊತೆಗೆ ಕನೆಕ್ಟ್ ಮಾಡಿರಲಾಗುತ್ತದೆ. ಇದರಿಂದಾಗಿ ಎಐನಲ್ಲಿ ರೂಲ್ಸ್ ಬ್ರೇಕ್ ಮಾಡಿದವರ ಗಾಡಿ ನಂಬರ್ ಕ್ಲಿಕ್ ಆದರೆ ಸಾಕು, ಅವರ ಫುಲ್ ಡೀಟೇಲ್ಸ್ ಅಧಿಕಾರಿಗಳಿಗೆ ಸಿಗುತ್ತದೆ. ಅಷ್ಟೇ ಅಲ್ಲದೆ, ಇದರಿಂದಾಗಿ ವಾಹನ ಓಡಿಸುತ್ತಿರುವವರ ಡಿಎಲ್, ಇನ್ಷುರೆನ್ಸ್ ಡೀಟೇಲ್ಸ್, ಕಾರ್ಯಕ್ಷಮತೆ ಪ್ರಮಾಣಪತ್ರ ಇದೆಲ್ಲವೂ ಗೊತ್ತಾಗುವುದರ ಜೊತೆಗೆ, ಈ ಹಿಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರಾ ಎನ್ನುವುದು ಕೂಡ ಗೊತ್ತಾಗುತ್ತದೆ.

ಎಐ ಕ್ಯಾಮೆರಾಗಳನ್ನು ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ, ನ್ಯಾಷನಲ್ ಹೈವೇ 7 ದೇವನಹಳ್ಳಿ ಟೋಲ್ ಗೇಟ್, ತುಮಕೂರು ರೋಡ್, ನ್ಯಾಶನಲ್ ಹೈವೇ 4, ಹೊಸೂರು ಅತ್ತಿಬೆಲೆ ರೋಡ್, ಹಿಟ್ನಾಳ ಟೋಲ್ ಗೇಟ್ ಇಲ್ಲೆಲ್ಲಾ ಎಐ ಕ್ಯಾಮೆರಾ ಅಳವಡಿಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಒಟ್ಟಿನಲ್ಲಿ ಈ ನಿರ್ಧಾರ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಕಬ್ಬಿಣದ ಕಡಲೆ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ..

ಇದನ್ನೂ ಓದಿ Jio Petrol Pump: ಬಡವರಿಗೂ ಬ್ಯುಸಿನೆಸ್ ಆಫರ್ ನೀಡಿದ ಅಂಬಾನಿ, ಸುಲಭವಾಗಿ ತೆರೆಯಬಹುದು ಜಿಯೋ ಪೆಟ್ರೋಲ್ ಪಂಪ್

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!