tractor subsidy scheme 2024: ರೈತರಿಗೆ ಸಮಂಜಸವಾದ ಬೆಲೆಯಲ್ಲಿ ಟ್ರ್ಯಾಕ್ಟರ್ ಖರೀದಿಸಲು ಅನುಕೂಲವಾಗುವಂತೆ ಸರ್ಕಾರ ಸಬ್ಸಿಡಿ ವ್ಯವಸ್ಥೆಯನ್ನು ಸ್ಥಾಪಿಸಿದೆ ಮತ್ತು ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಖರೀದಿಸಲು ರೈತರಿಗೆ ಬೆಂಬಲ ನೀಡುತ್ತಿದೆ. ಕೇಂದ್ರ ಸರಕಾರ ಆರಂಭಿಸಿರುವ ಈ ಸಹಾಯಧನ ಯೋಜನೆಯ ಲಾಭವನ್ನು ರೈತರು ಪಡೆದು ಟ್ರ್ಯಾಕ್ಟರ್ ಖರೀದಿಸಿ ಸಹಾಯಧನ ಪಡೆಯಬಹುದು.
ಈ ಯೋಜನೆ ಪಡೆಯಲು ಏನೆಲ್ಲಾ ಅರ್ಹತೆ ಇರಬೇಕು?
ಈ ಯೋಜನೆಯಲ್ಲಿ ಭಾಗವಹಿಸುವ ರೈತರು ಭಾರತೀಯ ನಾಗರಿಕರಾಗಿರಬೇಕು.
ಈ ಯೋಜನೆಯಡಿ, ಪ್ರತಿಯೊಬ್ಬ ರೈತರು ಕೇವಲ ಒಂದು ಟ್ರ್ಯಾಕ್ಟರ್ ಖರೀದಿಸಬಹುದು.
ಯಾವ ದಾಖಲೆಗಳು ಅಗತ್ಯವಿದೆ?
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ಪುಸ್ತಕ
ಕೃಷಿ ಭೂಮಿಯ ದಾಖಲೆಗಳು
ಮೊಬೈಲ್ ಸಂಖ್ಯೆ
ಇತರೆ ದಾಖಲೆಗಳು
PM ಕಿಸಾನ್ ಟ್ರಾಕ್ಟರ್ ಯೋಜನೆಯಡಿ, ನೀವು 50% ಸಬ್ಸಿಡಿಯೊಂದಿಗೆ ಟ್ರ್ಯಾಕ್ಟರ್ ಅನ್ನು ಖರೀದಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಕೃಷಿ ಇಲಾಖೆ ಯಲ್ಲಿ ವಿಚಾರಿಸಿ